ಬ್ರೇಕಿಂಗ್ ನ್ಯೂಸ್
11-05-21 10:35 am Mangalore Correspondent ಕರಾವಳಿ
ಪುತ್ತೂರು, ಮೇ 11: ಮಂಗಳೂರಿಗೆ ಕೆಲಸ ಅರಸಿಕೊಂಡು ಬಂದು ಲಾಕ್ಡೌನ್ ಕಾರಣ ಸಿಕ್ಕಿಬಿದ್ದು ಒದ್ದಾಡಿದ ಮಡಿಕೇರಿ ಸಮೀಪದ ರಾಣಿಪೇಟೆ ನಿವಾಸಿಯೊಬ್ಬರನ್ನು ಪುತ್ತೂರಿನ ಪೊಲೀಸ್ ಸಿಬಂದಿ ರಕ್ಷಿಸಿದ್ದಾರೆ.
ಐದು ದಿನಗಳ ಹಿಂದೆ ಮಂಗಳೂರಿಗೆ ಕೆಲಸಕ್ಕೆಂದು ಬಂದಿದ್ದು ಲಾಕ್ಡೌನ್ ಪರಿಣಾಮ ಸಿಕ್ಕಿಬಿದ್ದಿದ್ದರು. ಅವರಿಗೆ ಮರಳಿ ಹೋಗಲು ಬಸ್ ಸೌಲಭ್ಯ ಇಲ್ಲದೆ ಹಿಂತಿರುಗುವುದು ಕಷ್ಟವಾಗಿತ್ತು. ಅನಂತರ ಮಡಿಕೇರಿಗೆ ನಡೆದುಕೊಂಡೇ ತೆರಳುವುದಾಗಿ ಹೇಳಿ ಹೊರಟಿದ್ದು ಎರಡು ದಿನಗಳಿಂದ ಊಟ ಸಿಗದೆ ಪರದಾಡಿದ್ದಾರೆ. ಹಸಿವಿನಿಂದ ಬಳಲಿದ ವ್ಯಕ್ತಿ ಪುತ್ತೂರು ಗ್ರಾಮಾಂತರ ಠಾಣೆ ವ್ಯಾಪ್ತಿಯ ಸಂಟ್ಯಾರು ಎಂಬಲ್ಲಿ ಹಕ್ಕಿಗಳು ತಿಂದು ಬಿದ್ದಿರುವ ಹಣ್ಣುಗಳನ್ನು ಹೆಕ್ಕಿ ತಿನ್ನತೊಡಗಿದ್ದರು. ವಿಷಯ ತಿಳಿದ ಪತ್ರಕರ್ತರೊಬ್ಬರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.

ಪುತ್ತೂರು ಚೆಕ್ ಪಾಯಿಂಟ್ ನಲ್ಲಿ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ್ ಟೇಬಲ್ ದಯಾನಂದ ಹಾಗೂ ಕಿರಣ್ ಎಂಬ ಇಬ್ಬರು ಸಿಬಂದಿ ಕೂಡಲೇ ಸ್ಪಂದಿಸಿದ್ದು ಹಸಿವಿನಿಂದ ಕಂಗಾಲಾಗಿದ್ದ ಆತನಿಗೆ ತಾವು ಮನೆಯಿಂದ ಮಧ್ಯಾಹ್ನದ ಊಟಕ್ಕೆ ತಂದಿದ್ದ ಬುತ್ತಿಯನ್ನು ನೀಡಿದ್ದಾರೆ. ನಂತರ ಇನ್ನೊಂದು ವಾಹನದಲ್ಲಿ ವ್ಯಕ್ತಿಯನ್ನು ಮಡಿಕೇರಿಗೆ ಕಳುಹಿಸಿದ್ದಾರೆ.
ಲಾಕ್ಡೌನ್ ಸಂದರ್ಭದಲ್ಲಿ ತಮ್ಮ ಕರ್ತವ್ಯದ ಜೊತೆ ಮಾನವೀಯತೆ ಮೆರೆದ ಸಿಬಂದಿ ಆದರ್ಶನೀಯ ಎಂದು ಜಿಲ್ಲಾ ಎಸ್ಪಿ ಋಷಿಕುಮಾರ್ ಸೋನವಾನೆ ಶ್ಲಾಘಿಸಿದ್ದಾರೆ.
A youth from Ranipet in Madikeri had come to Mangaluru on May 1 in search of employment. Although he stayed in the city for five days, he neither found a job nor could go back to Madikeri due to the clampdown on transport facilities due to the Covid-induced lockdown.
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
11-07-26 09:29 pm
HK News Staffer
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
ಮತ್ತೆ ಗಲ್ಫ್ ಉದ್ವಿಗ್ನ ; ಇರಾನ್ ಮೇಲೆ ಮುಗಿಬಿದ್ದ ಅ...
09-07-26 03:40 pm
13-07-26 09:16 pm
HK News Staffer
ರಾಮನ ಹೆಸರಲ್ಲಿ ರಾಜಕೀಯ ಮಾಡಿದವರು ಈಗ ಯಾಕೆ ಮೌನಿ ಬಾ...
11-07-26 06:32 pm
ಬಾಂಗ್ಲಾನ್ನರ ಬಂಧನ ; ಇವರನ್ನು ಮತಪಟ್ಟಿಗೆ ಸೇರಿಸಲು...
11-07-26 04:26 pm
ಮಂಗಳೂರಿನಲ್ಲಿ ಜಾಂಡೀಸ್ ಆತಂಕ ; ಎರಡು ವಾರಗಳಲ್ಲಿ 19...
10-07-26 05:25 pm
ಬಾಲಕನಿಗೆ ಛಡಿಯೇಟು ; ಕಾಟಿಪಳ್ಳ ಮದ್ರಸಾ ಶಿಕ್ಷಕ ಉಸ್...
09-07-26 11:09 pm
13-07-26 10:57 pm
HK News Staffer
ಈ ನ್ಯಾಯಾಲಯದಲ್ಲಿ ಜೂಜಾಡಬೇಡಿ! ಸೌಜನ್ಯ ಪ್ರಕರಣ ಬಳಸಿ...
13-07-26 09:48 pm
ಮಂಜನಾಡಿ ಭೂಕುಸಿತ ದುರಂತ ; ಅವೈಜ್ಞಾನಿಕ ರಸ್ತೆ ನಿರ್...
13-07-26 08:31 pm
ಬಿಡದಿ ಟೌನ್ಶಿಪ್ ಜಟಾಪಟಿ ; ಸರ್ವೆಗೆ ಬಂದಿದ್ದ ಅಧಿ...
13-07-26 07:39 pm
ಸೋಶಿಯಲ್ ಮೀಡಿಯಾದಲ್ಲಿ ಶುರುವಾದ ಪ್ರೀತಿ, ಧರ್ಮಸ್ಥಳ...
13-07-26 02:54 pm