ಬ್ರೇಕಿಂಗ್ ನ್ಯೂಸ್
11-05-21 04:51 pm Mangalore Correspondent ಕರಾವಳಿ
ಮಂಗಳೂರು, ಮೇ 11: ಕೋವಿಡ್ ಸೋಂಕು ಎಲ್ಲ ಕಡೆಯೂ ಹಬ್ಬುತ್ತಿದ್ದು, ಇದರಿಂದ ಗರ್ಭಿಣಿಯರು ಕೂಡ ಹೊರತಾಗಿಲ್ಲ. ಲೇಡಿಗೋಷನ್ ಸರಕಾರಿ ಆಸ್ಪತ್ರೆಯಲ್ಲಿ ಮೇ ತಿಂಗಳ ಮೊದಲ ವಾರದಲ್ಲೇ 23 ಮಂದಿ ಕೋವಿಡ್ ಸೋಂಕಿತ ಗರ್ಭಿಣಿಯರು ದಾಖಲಾಗಿದ್ದಾಗಿ ಮಾಹಿತಿ ಲಭಿಸಿದೆ.
ಈ ಬಗ್ಗೆ ಲೇಡಿಗೋಷನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾಪ್ರಸಾದ್ ಅವರಲ್ಲಿ ಕೇಳಿದಾಗ, ಕಳೆದ ಒಂದು ವಾರದಲ್ಲಿ ಸೋಂಕಿತರ ಪೈಕಿ 17 ಮಂದಿ ಹೆರಿಗೆ ಆಗಿದ್ದಾರೆ. ಒಂಬತ್ತು ಸಿಸೇರಿಯನ್ ಆಗಿದ್ದರೆ, ನಾಲ್ಕು ಮಂದಿ ನಾರ್ಮಲ್ ಡೆಲಿವರಿ ಆಗಿದ್ದಾರೆ. ಒಂದು ಆಂಬುಲೆನ್ಸಿನಲ್ಲೇ ಡೆಲಿವರಿ ಆಗಿತ್ತು. ಮೂವರಿಗೆ ಅಬಾರ್ಷನ್ ಆಗಿತ್ತು. ಇದಕ್ಕೆ ಬೇರೆ ಕಾರಣಗಳೂ ಪರಿಣಾಮ ಬೀರಿದ್ದವು. ಆದರೆ, ಕೋವಿಡ್ ಪಾಸಿಟಿವ್ ಇದ್ದವರು ಡೆಲಿವರಿಯಾಗಿ ಸುರಕ್ಷಿತವಾಗಿ ಬಿಡುಗಡೆಯಾದ್ರೂ ಅವರನ್ನು ಕ್ವಾರಂಟೈನಲ್ಲಿ ಇರಿಸುವುದು ಕಡ್ಡಾಯ ಮಾಡಿದ್ದೇವೆ ಎಂದಿದ್ದಾರೆ.
ಕಳೆದ ಸೆಪ್ಟಂಬರ್ ತಿಂಗಳಿಂದ 24 ಬೆಡ್ ಸಾಮರ್ಥ್ಯದ ಕೋವಿಡ್ ಮೆಟರ್ನಿಟಿ ಬ್ಲಾಕ್ ಮಾಡಿದ್ದೇವೆ. ಕೋವಿಡ್ ಪಾಸಿಟಿವ್ ಇದ್ದವರನ್ನು ಅದರಲ್ಲಿ ದಾಖಲು ಮಾಡಿಕೊಳ್ಳಲಾಗುತ್ತದೆ. ಆದರೆ, ಕಳೆದ ಫೆಬ್ರವರಿಯಲ್ಲಿ ಯಾವುದೇ ಪಾಸಿಟಿವ್ ಸೋಂಕಿತರು ದಾಖಲಾಗಿರಲಿಲ್ಲ. ಮಾರ್ಚ್ ಮತ್ತು ಎಪ್ರಿಲ್ ತಿಂಗಳಲ್ಲಿ ತಲಾ ಒಂದು ಪೇಶಂಟ್ ದಾಖಲು ಆಗಿತ್ತು. ಕೋವಿಡ್ ಸೋಂಕಿತರಿಗೆ ಪ್ರತ್ಯೇಕ ಆಪರೇಶನ್ ಥಿಯೇಟರ್ ಮಾಡಲಾಗಿದೆ. ಸೋಂಕು ಇದ್ದರೂ, 99 ಶೇ. ಮಂದಿ ಯಾವುದೇ ಲಕ್ಷಣಗಳನ್ನು ಹೊಂದಿರುವುದಿಲ್ಲ. ಈವರೆಗಿನ ಪಾಸಿಟಿವ್ ಪ್ರಕರಣದ ಡೆಲಿವರಿಯಲ್ಲಿ ಒಂದು ಮಗುವಿಗೆ ಮಾತ್ರ ಸೋಂಕು ಕಾಣಿಸಿತ್ತು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಯಾವುದೇ ಕೋವಿಡ್ ಸೋಂಕಿತ ಗರ್ಭಿಣಿ ಹೆರಿಗೆಯಾದ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗಿ ಕ್ವಾರಂಟೈನ್ ಮುಗಿಸೋ ವರೆಗೂ ನಿಗಾ ಇಡಲಾಗುತ್ತದೆ. ಇದಕ್ಕಾಗಿ ತಾಲೂಕು ಆರೋಗ್ಯ ಕೇಂದ್ರಗಳ ವೈದ್ಯರು, ನರ್ಸ್ ಗಳನ್ನು ಸೇರಿಸಿ ವಾಟ್ಸಪ್ ಗ್ರೂಪ್ ರಚಿಸಿದ್ದು ಲೇಡಿಗೋಷನ್ ಆಸ್ಪತ್ರೆಯಲ್ಲಿ ಯಾವುದೇ ಸೋಂಕಿತ ಮಹಿಳೆ ಡಿಸ್ಚಾರ್ಜ್ ಆದಕೂಡಲೇ ಆಯಾ ಭಾಗದವರಿಗೆ ಮಾಹಿತಿ ನೀಡಲಾಗುತ್ತದೆ. ಮಹಿಳೆಯ ಹೆಸರು, ವಿಳಾಸ, ಮೊಬೈಲ್ ಸಂಖ್ಯೆಯನ್ನು ನೀಡಿ, ಆಯಾ ಭಾಗದ ತಾಲೂಕು ಆರೋಗ್ಯ ಕೇಂದ್ರದವರಲ್ಲಿ ನಿಗಾ ಇಡಲು ಸೂಚಿಸಲಾಗುತ್ತದೆ. ರೋಗಿಯ ಸ್ಥಿತಿಗತಿ ಬಗ್ಗೆ ಆಯಾ ಭಾಗದ ಸಿಬಂದಿ ಗ್ರೂಪಲ್ಲಿ ಮಾಹಿತಿ ಹಂಚಿಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಹೊರಭಾಗದ ರೋಗಿಗಳಿಗೂ ಇದೇ ನಿಯಮ ಅನ್ವಯ ಮಾಡಲಾಗಿದೆ ಎಂದು ಡಾ. ದುರ್ಗಾಪ್ರಸಾದ್ ಎಂ.ಆರ್. ಮಾಹಿತಿ ನೀಡಿದ್ದಾರೆ.
ಸಾಮಾನ್ಯವಾಗಿ 50 ಶೇ.ಕ್ಕಿಂತ ಹೆಚ್ಚು ಮಂದಿ ಜಿಲ್ಲೆಯ ಹೊರಗಿನವರೇ ಆಸ್ಪತ್ರೆಗೆ ದಾಖಲಾಗುತ್ತಾರೆ. ಸರಾಸರಿ 450-500 ರಷ್ಟು ಡೆಲಿವರಿಗಳು ಪ್ರತಿ ತಿಂಗಳು ಲೇಡಿಗೋಷನಲ್ಲಿ ನಡೆಯುತ್ತದೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ಅತಿ ಹೆಚ್ಚು 800 ಹೆರಿಗೆ ಆಗಿದ್ದು ದಾಖಲೆಯಾಗಿತ್ತು ಎಂದಿದ್ದಾರೆ, ವೈದ್ಯರು.
Mangalore Lady Goschen Hospital reports 23 covid positive cases in Pregnant women in the last one week said Dr Durgprasad the Medial superintendent.
05-10-25 09:41 pm
HK News Desk
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಕ್ರಾಂತಿ...
05-10-25 07:38 pm
ಜಾತಿ ಗಣತಿ ತೆರಳಿದ್ದ ಶಿಕ್ಷಕಿ ಮತ್ತು ಪತಿಗೆ ಅಟ್ಟಾಡ...
05-10-25 07:18 pm
05-10-25 11:07 pm
HK News Desk
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
04-10-25 10:29 pm
Mangalore Correspondent
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm