ಬ್ರೇಕಿಂಗ್ ನ್ಯೂಸ್
15-05-21 12:53 pm Udupi Correspondent ಕರಾವಳಿ
ಉಡುಪಿ, ಮೇ 15: ಇಲ್ಲಿನ ಹಿರಿಯಡ್ಕದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳೇ ಸೇರಿ ಜೈಲಿನ ಸುಪರಿಡೆಂಟ್ ವಿರುದ್ಧ ಒಂದು ದಿನದ ಉಪವಾಸ ನಡೆಸಿದ್ದಾರೆ. ಜೈಲಿನ ಸುಪರಿಡೆಂಟ್ ಶ್ರೀನಿವಾಸ ಗೌಡ, ಯಾವುದೇ ಸೌಲಭ್ಯಗಳನ್ನು ನೀಡುತ್ತಿಲ್ಲ. ನಮ್ಮನ್ನು ಶೋಷಣೆ ಮಾಡುತ್ತಿದ್ದಾರೆಂದು ಆರೋಪಿಸಿ ಕೈದಿಗಳು ಉಪವಾಸ ನಡೆಸಿ ಜಿಲ್ಲಾಡಳಿತದ ಗಮನ ಸೆಳೆದಿದ್ದಾರೆ.
ಸರಕಾರದಿಂದ ಕೈದಿಗಳಿಗೆ ಏನೆಲ್ಲಾ ಸೌಲಭ್ಯಗಳನ್ನು ಕೊಡುತ್ತಾರೋ, ಅವನ್ನು ಜೈಲು ಸುಪರಿಡೆಂಟ್ ಕೊಡುತ್ತಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಕೈದಿಗಳು ಸೇರಿಕೊಂಡು ಶುಕ್ರವಾರ ಇಡೀ ದಿನ ಆಹಾರ ಸ್ವೀಕರಿಸದೆ ನಿರಶನ ನಡೆಸಿದ್ದಾರೆ. ಜೈಲು ಸುಪರಿಡೆಂಟ್ ಮತ್ತು ಮತ್ತೊಬ್ಬ ಅಧಿಕಾರಿ ಸೇರಿ ಕೈದಿಗಳಿಗೆ ಕಿರುಕುಳ ನೀಡುತ್ತಿದ್ದು, ಆಹಾರ ಇನ್ನಿತರ ಸೌಲಭ್ಯ ನೀಡಬೇಕಿದ್ದರೆ ಲಂಚ ಕೇಳುತ್ತಿದ್ದರು ಎಂದು ಆರೋಪ ಕೇಳಿಬಂದಿದೆ.
ಅಲ್ಲದೆ, ಕೈದಿಗಳಿಗೆ ಕಳಪೆ ಆಹಾರವನ್ನು ಪೂರೈಸಲಾಗುತ್ತಿದೆ. ಕಾನೂನು ಪ್ರಕಾರ, ವಾರದಲ್ಲಿ ಒಮ್ಮೆಯಾದರೂ ಮಾಂಸ, ಮೀನಿನ ಪದಾರ್ಥ ಕೊಡಬೇಕೆಂದಿದೆ. ಆದರೆ, ಇಲ್ಲಿ ಕೋಳಿಯ ಕಾಲುಗಳನ್ನು ಹಾಕಿ ಸಾರು ಮಾಡಿ ಕೊಡುತ್ತಿದ್ದಾರೆ. ಜೈಲಿನ ಕೈದಿಗಳಿಗೆ ಸಿಗುತ್ತಿದ್ದ ಸೌಲಭ್ಯ, ಇನ್ನಿತರ ರೇಷನ್ ವಸ್ತುಗಳನ್ನು ಜೈಲಿನ ಅಧಿಕಾರಿಗಳು ತಮ್ಮ ಮನೆಗೆ ಒಯ್ಯುತ್ತಿದ್ದಾರೆ. ಪ್ರತಿಯೊಂದಕ್ಕೂ ಶ್ರೀನಿವಾಸ ಗೌಡ ಸೇರಿ ಜೈಲಿನ ಅಧಿಕಾರಿಗಳು ಕೈದಿಗಳ ಬಳಿಯಿಂದಲೇ ಹಣ ಕೇಳುತ್ತಿದ್ದಾರೆ ಎಂದು ಕೈದಿಯೊಬ್ಬ ಅಲ್ಲಿನ ಪರಿಸ್ಥಿತಿ ಹೇಳಿಕೊಂಡಿದ್ದಾನೆ.
ಜೈಲಿನ ಸ್ಥಿತಿಯ ಬಗ್ಗೆ ಕೈದಿಗಳು ಸೇರಿ ಜಿಲ್ಲಾ ನ್ಯಾಯಾಧೀಶರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಆಬಳಿಕ ಜಿಲ್ಲಾ ನ್ಯಾಯಾಧೀಶರು ಮತ್ತು ಕಾಪು ಶಾಸಕ ಲಾಲಾಜಿ ಮೆಂಡನ್ ಜೈಲಿಗೆ ಭೇಟಿ ನೀಡಿದ್ದು, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದರಿಂದ ಕೈದಿಗಳು ತಮ್ಮ ನಿರಶನ ಅಂತ್ಯಗೊಳಿಸಿದ್ದಾರೆ.
Inmates at Kajaraguthu district prison at Hiriadka, Udupi here held a hunger strike accusing the jail superintendent Srinivas Gowda of misusing the facilities given to the prisoners.
18-12-25 11:05 pm
HK News Desk
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
ಹೃದಯಾಘಾತ ; ರಸ್ತೆ ಮೇಲೆ ಬಿದ್ದುಕೊಂಡ ಪತಿಯನ್ನು ರಕ್...
18-12-25 02:09 pm
18-12-25 04:34 pm
HK News Desk
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm