ಬ್ರೇಕಿಂಗ್ ನ್ಯೂಸ್
16-05-21 08:41 pm Mangaluru Correspondent ಕರಾವಳಿ
ಮಂಗಳೂರು, ಮೇ 16: ಎಂಆರ್ ಪಿಎಲ್ ಗೆ ಸೇರಿದ ಮತ್ತೊಂದು ಟಗ್ ನಲ್ಲಿರುವ ಕಾರ್ಮಿಕರ ರಕ್ಷಣೆಗೆ ಭಾರತೀಯ ನೌಕಾಪಡೆಯಿಂದ ಹೆಲಿಕಾಪ್ಟರ್ ಬಳಸಲು ಜಿಲ್ಲಾಡಳಿತ ಮುಂದಾಗಿದೆ. ರಾಜ್ಯ ಸರಕಾರದ ಮೂಲಕ ನೌಕಾಪಡೆಯ ನೆರವು ಪಡೆಯಲಾಗಿದ್ದು, ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯ ನಡೆಸಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮಾಹಿತಿ ನೀಡಿದ್ದಾರೆ.
ಕೋರಮಂಡಲ್ ಹೆಸರಿನ ಟಗ್ ಎನ್ಎಂಪಿಟಿ ಬಂದರು ವ್ಯಾಪ್ತಿಯಲ್ಲಿ ಎಂಆರ್ ಪಿಎಲ್ ನಿಂದ ಕಚ್ಚಾ ತೈಲ ಸಾಗಾಟದ ಕೆಲಸ ಮಾಡಲು ಗುತ್ತಿಗೆ ಪಡೆದಿತ್ತು. ಆದರೆ, ಇದರ ಗುತ್ತಿಗೆ ಕಾರ್ಯ ಮುಗಿದಿದ್ದರೂ ಸಮುದ್ರ ಮಧ್ಯೆ ಲಂಗರು ಹಾಕಿದ್ದರಿಂದ ಚಂಡಮಾರುತಕ್ಕೆ ಸಿಲುಕಿತ್ತು. ಒಂಬತ್ತು ಸಿಬಂದಿಗಳಿದ್ದ ಕೋರಮಂಡಲ್ ಟಗ್ ನೀರಿನಲ್ಲಿ ಗಾಳಿಯೊಂದಿಗೆ ಚಲಿಸುತ್ತಿದ್ದು ಶನಿವಾರ ರಾತ್ರಿಯಿಂದ ಒಂದೂವರೆ ಮೈಲ್ ದೂರಕ್ಕೆ ಚಲಿಸಿದೆ. ಸದ್ಯ ಪಡುಬಿದ್ರಿ ಬಳಿಯಿಂದ 5 ಮೈಲ್ ದೂರದಲ್ಲಿರುವ ಸಮುದ್ರ ಮಧ್ಯದ ಮೂಲ್ಕಿ ರಾಕ್ ಎಂಬ ಜಾಗದಲ್ಲಿ ಟಗ್ ಸಿಲುಕಿದೆ ಎನ್ನುವ ಮಾಹಿತಿಗಳಿವೆ.


ಕೋಸ್ಟ್ ಗಾರ್ಡ್ ನವರು ಅರ್ಧ ಕಿಮೀ ಅಂತರದಲ್ಲಿ ಟಗ್ ಮತ್ತು ಕಾರ್ಮಿಕರ ಬಗ್ಗೆ ನಿಗಾ ಇಟ್ಟಿದ್ದಾರೆ. ಆದರೆ, ಭಾರೀ ಗಾಳಿ ಬೀಸುತ್ತಿರುವುದು ಮತ್ತು ಐದಾರು ಮೀಟರ್ ಎತ್ತರಕ್ಕೆ ಅಲೆಗಳು ಏಳುತ್ತಿರುವುದರಿಂದ ಟಗ್ ಬಳಿ ಹೋಗುವುದು ಸಾಧ್ಯವಾಗದೆ ಹವಾಮಾನ ಸರಿಯಾಗಲು ಕಾಯುತ್ತಿದ್ದಾರೆ. ಹವಾಮಾನ ಸರಿಯಾದ ಕೂಡಲೇ ಗೋವಾದಿಂದ ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗುವುದು. ಈ ಬಗ್ಗೆ ಈಗಾಗ್ಲೇ ರಾಜ್ಯದ ಮುಖ್ಯಮಂತ್ರಿ ಕಚೇರಿಯಿಂದ ಅನುಮತಿ ಪಡೆದು, ನೌಕಾಪಡೆಯಿಂದ ನೆರವು ಕೇಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮೂಲ್ಕಿ ರಾಕ್ ನಲ್ಲಿ ಇರುವ ಬಂಡೆಕಲ್ಲಿಗೆ ಏಂಕರ್ ಹಾಕಿ ಟಗ್ ಅನ್ನು ನಿಯಂತ್ರಣಕ್ಕೆ ತರಲಾಗಿದೆ. ಅದರಲ್ಲಿರುವ ಒಂಬತ್ತು ಮಂದಿ ಕಾರ್ಮಿಕರನ್ನು ಕೂಡಲೇ ರಕ್ಷಣೆ ಮಾಡಲು ಆದ್ಯತೆ ನೀಡಲಾಗಿದೆ. ಇದೇ ವೇಳೆ, ಎನ್ಎಂಪಿಟಿ ಬಂದರು ಅಥವಾ ಎಂಆರ್ ಪಿಎಲ್ ಅಧಿಕಾರಿಗಳ ಜೊತೆ ಜಿಲ್ಲಾಡಳಿತದಿಂದ ಸಭೆ ನಡೆಸಲಾಗಿದೆ. ಯಾಕಾಗಿ ಟಗ್ ಸಮುದ್ರ ಮಧ್ಯೆ ಉಳಿದುಕೊಂಡಿತ್ತು ಎನ್ನುವುದರ ಬಗ್ಗೆ ವರದಿ ಕೇಳಿದ್ದೇವೆ. ಆ ಬಗ್ಗೆ ಮಾಹಿತಿ ಪಡೆದು ಸರಕಾರಕ್ಕೆ ವರದಿ ನೀಡುವುದರ ಜೊತೆಗೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ರಾಜೇಂದ್ರ ತಿಳಿಸಿದ್ದಾರೆ.
ಪಡುಬಿದ್ರಿ ಬಳಿ ಅಪಾಯಕ್ಕೀಡಾದ ಮತ್ತೊಂದು ಟಗ್ ; ಎನ್ಎಂಪಿಟಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾರ್ಮಿಕರಿಗೆ ಆಪತ್ತು !
ಎಂಆರ್ ಪಿಎಲ್ ಟಗ್ ಬೋಟ್ ಸಮುದ್ರ ಮಧ್ಯೆ ಪಲ್ಟಿ ; ಆರು ಮಂದಿ ನಾಪತ್ತೆ , ಒಬ್ಬನ ಶವ ಪತ್ತೆ , ಇಬ್ಬರು ಪವಾಡಸದೃಶ ಪಾರು !
Mangalore MRPL Stranded tugboat found near Mulki Rock helicopter rescue operation to be done if weather conditions are clear said Mangalore DC DR Rajendra Kumar.
18-12-25 11:05 pm
HK News Desk
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
ಹೃದಯಾಘಾತ ; ರಸ್ತೆ ಮೇಲೆ ಬಿದ್ದುಕೊಂಡ ಪತಿಯನ್ನು ರಕ್...
18-12-25 02:09 pm
18-12-25 04:34 pm
HK News Desk
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm