ಬ್ರೇಕಿಂಗ್ ನ್ಯೂಸ್
17-05-21 10:20 pm Mangaluru Correspondent ಕರಾವಳಿ
ಮಂಗಳೂರು, ಮೇ 17: ರಾಜ್ಯದಲ್ಲಿ ಕೊರೊನಾ ಸ್ಥಿತಿ ವಿಪರೀತಕ್ಕೆ ಹೋಗುತ್ತಿದ್ದು ರಾಷ್ಟ್ರೀಯ ವಿಪತ್ತಾಗಿ ದೇಶಕ್ಕೆ ಬೆದರಿಕೆಯಾಗಿ ಪರಿಣಮಿಸಿದೆ. ಆದರೆ, ಇದನ್ನು ನಿರ್ವಹಿಸಲು ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯ ಸರ್ಕಾರ ಕೂಡ ಕೇಂದ್ರದಿಂದ ಪರಿಹಾರ ಪಡೆದುಕೊಳ್ಳುವಲ್ಲಿ ವಿಫಲವಾಗಿದ್ದು ಸಾಮಾನ್ಯ ಜನರ ಸ್ಥಿತಿ ಶೋಚನೀಯವಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ಮಂಗಳೂರಿನ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜನರಿಗೆ ಇವತ್ತು ಲಸಿಕೆಯೂ ಸಿಗುತ್ತಿಲ್ಲ. ಔಷಧಿಯೂ ಸಿಗುತ್ತಿಲ್ಲ. ಕಳೆದ ಬಾರಿಗೆ ಕೊರೊನಾ ಹೊಸತಾಗಿತ್ತು. ಆದರೆ, ಒಂದು ವರ್ಷ ಕಳೆದರೂ, ನಿರ್ವಹಣೆ ಮಾಡಲು ಸಾಧ್ಯವಾಗಿಲ್ಲ ಅಂದ್ರೆ ಇವರ ವೈಫಲ್ಯ ಅಲ್ಲದೆ ಮತ್ತೇನು ? ಇಲ್ಲೊಬ್ಬರು ಲೋಕಸಭಾ ಸದಸ್ಯರಿದ್ದಾರೆ. ಬಾಲಿಶವಾಗಿ ಹೇಳಿಕೆ ನೀಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಕೊರೊನಾ ಹೆಚ್ಚಲು ಕಾಂಗ್ರೆಸ್ ಕಾರಣವಂತೆ. ಲಸಿಕೆಯನ್ನು ಜನರಿಗೆ ಕೊಡುವಂತದ್ದು ಅಧಿಕಾರದಲ್ಲಿ ಯಾರಿದ್ದಾರೆ ಅವರ ಕೆಲಸ. ಈಗ ಲಸಿಕೆಯೇ ಸಿಗಲ್ಲ. ಮತ್ತೊಂದೆಡೆ ಮೊದಲ ಡೋಸ್ ಕೊಟ್ಟವರಿಗೆ ಎರಡನೇ ಡೋಸ್ ಪಡೆಯಲು ಸಮಯ ಬಂದಿದ್ದರೆ, ಯಾವಾಗ ಸಿಗಲಿದೆ ಎಂದು ಸಿಎಂಗೇ ಗೊತ್ತಿಲ್ಲದಾಗಿದೆ. ಆಕ್ಸಿಜನ್, ಐಸಿಯು, ಚಿಕಿತ್ಸೆ ಇಲ್ಲದೇ ಜನರು ಸಾಯುತ್ತಿದ್ದಾರೆ. ಬಿಜೆಪಿ ಸರಕಾರ ರಾಜ್ಯದಲ್ಲಿ ಕೆಟ್ಟ ಸ್ಥಿತಿಯನ್ನು ತಂದಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕೊರೊನಾ ಪೀಡಿತರಾಗಿ ಮನೆ, ಆಸ್ತಿ ಕಳಕೊಂಡವರಿಗೆ ಪ್ಯಾಕೇಜ್ ಕೊಡಬೇಕು. ಅದರಲ್ಲೂ ಇಂತಹ ಮಂದಿಗೆ ಪ್ಯಾಕೇಜ್ ಕೊಡಲೇಬೇಕು ಎಂದು ಆಗ್ರಹಿಸಿದ ರಮಾನಾಥ ರೈ, ಇವತ್ತು ಕಾಂಗ್ರೆಸ್ ಇದ್ದಿದ್ದರೆ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಇರುತ್ತಿತ್ತು. ಮನೆ ಮನೆಗೆ ಕೊರೊನಾ ಕಿಟ್ ಹೋಗುತ್ತಿತ್ತು ಎಂದು ಸವಾಲೆಸೆದರು.
ಕೊರೊನಾ ನಿರ್ವಹಣೆಯಿಂದ ವೈಫಲ್ಯಕ್ಕೀಡಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿ ಮುಜುಗರಕ್ಕೀಡಾಗಿದ್ದಾರೆ. ಪ್ರಧಾನಿಯವರ ಇಮೇಜನ್ನು ಹೇಗೆ ಸೇವ್ ಮಾಡುವುದು ಅಂತಾ ಬಿಜೆಪಿಯವರು ಯೋಚಿಸುತ್ತಿದ್ದಾರೆಯೇ ವಿನಾ ಜನರ ಪ್ರಾಣ ಕಾಪಾಡುವ ಬಗ್ಗೆ ಯಾವುದೇ ಯೋಚನೆ ಅವರಿಗಿಲ್ಲ. ಜನರ ಬಗ್ಗೆ ಕನಿಷ್ಠ ಕಾಳಜಿ ಇರುತ್ತಿದ್ದರೆ ಇಷ್ಟು ನಿರ್ಲಕ್ಷ್ಯ ಮಾಡುತ್ತಿರಲಿಲ್ಲ ಎಂದು ಕಿಡಿಕಾರಿದರು.
The state and union government have completely failed in handling the pandemic, said district Congress president Harish Kumar.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
26-08-26 02:05 pm
HK News Staffer
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
26-08-26 11:26 am
HK News Staffer
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm