ಬ್ರೇಕಿಂಗ್ ನ್ಯೂಸ್
21-05-21 06:54 pm Mangaluru Correspondent ಕರಾವಳಿ
Photo credits : Rptnl Image
ಮಂಗಳೂರು, ಮೇ 21: ರಾಜ್ಯದಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿರುವ ಬ್ಲಾಕ್ ಫಂಗಸ್ ರೋಗಸ್ಥಿತಿ ಮಂಗಳೂರಿನಲ್ಲೂ ಪತ್ತೆಯಾಗಿದ್ದು ನಗರದ ಆಸ್ಪತ್ರೆಗಳಲ್ಲಿ ಏಳು ಪ್ರಕರಣ ಇರುವ ಬಗ್ಗೆ ಜಿಲ್ಲಾ ಆರೋಗ್ಯಧಿಕಾರಿ ಡಾ.ಕಿಶೋರ್ ಕುಮಾರ್ ದೃಢಪಡಿಸಿದ್ದಾರೆ. ಬ್ಲಾಕ್ ಫಂಗಸ್ ರೋಗಕ್ಕೆ ಒಳಗಾದ ಚಿತ್ರದುರ್ಗ ಮೂಲದ ಒಬ್ಬ ರೋಗಿ ಸಾವು ಕಂಡಿದ್ದಾನೆ.
ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಇಬ್ಬರಿಗೆ, ಯೇನಪೋಯ ಆಸ್ಪತ್ರೆಯಲ್ಲಿ ಎರಡು, ಕೆ.ಎಸ್. ಹೆಗ್ಡೆ ಮತ್ತು ಫಾದರ್ ಮುಲ್ಲರ್ ಆಸ್ಪತ್ರೆಗಳಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದೆ. ಚಿತ್ರದುರ್ಗ, ದಾವಣಗೆರೆ, ಬೆಂಗಳೂರು, ಚಿಕ್ಕಮಗಳೂರು ಮತ್ತು ಮಂಗಳೂರಿನ ಇಬ್ಬರಲ್ಲಿ ಈ ಸೋಂಕು ಕಂಡುಬಂದಿದೆ.
ಕೊರೊನಾ ಸೋಂಕು ಅತಿರೇಕಕ್ಕೆ ಹೋದ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತಗೊಂಡು ಈ ಸ್ಥಿತಿ ಕಂಡುಬರುತ್ತದೆ. ಇದು ಯಾವುದೇ ರೀತಿಯಲ್ಲಿ ಹರಡುವ ರೋಗ ಅಲ್ಲ. ವೆಂಟಿಲೇಟರ್ ನಲ್ಲಿ ದೀರ್ಘಾವಧಿಯಿಂದ ಇರುವ ವ್ಯಕ್ತಿಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಶಿಲೀಂಧ್ರಗಳು ದಾಳಿ ಮಾಡಿ ರೋಗಿಯಲ್ಲಿ ಈ ಸ್ಥಿತಿ ಕಂಡುಬರುತ್ತದೆ. ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ದೇಹದಲ್ಲಿ ಈ ರೀತಿ ಕಂಡುಬರುತ್ತದೆ ಎಂದು ಡಿಎಚ್ಓ ತಿಳಿಸಿದ್ದಾರೆ.
ಹಿಂದೆಲ್ಲಾ ಲಕ್ಷಕ್ಕೆ ಒಂದು ಪ್ರಕರಣ ಪತ್ತೆಯಾಗುತ್ತಿದ್ದುದರಿಂದ ಇದಕ್ಕೆ ಮೆಡಿಸಿನ್ ಕೂಡ ಅತ್ಯಂತ ಕಡಿಮೆ ಪೂರೈಕೆ ಇತ್ತು. ಇದೀಗ ಕೊರೊನಾ ಅತಿರೇಕಕ್ಕೆ ಹೋದ ಸಂದರ್ಭದಲ್ಲಿ ಅದರಲ್ಲೂ ಮಧುಮೇಹಿಗಳಾಗಿದ್ದವರಲ್ಲಿ ಬ್ಲಾಕ್ ಫಂಗಸ್ ಸ್ಥಿತಿ ಕಂಡು ಬರುತ್ತಿದೆ. ಇದಕ್ಕೆ ಕೊಡಲಾಗುವ ಔಷಧಿಗೆ ಒಮ್ಮೆಲೇ ಬೇಡಿಕೆ ಬಂದಿದ್ದು ಇಂಜೆಕ್ಷನ್ ಲಭ್ಯತೆಯೇ ಇಲ್ಲವಾಗಿದೆ. ದ.ಕ. ಜಿಲ್ಲೆಯಲ್ಲಿ ಸೇರಿದಂತೆ ರಾಜ್ಯದಲ್ಲಿ ಶಿಲೀಂಧ್ರ ಸೋಂಕಿಗೆ ಒಳಗಾದವರಿಗೆ ನೀಡಲಾಗುತ್ತಿದ್ದ ಇಂಜೆಕ್ಷನ್ ಕೊರತೆ ಉಂಟಾಗಿದೆ. ಆದರೆ, ಸಾಕಷ್ಟು ರೋಗ ನಿರೋಧಕ ಶಕ್ತಿ, ದೈಹಿಕ ವ್ಯಾಯಾಮಗಳಲ್ಲಿ ತೊಡಗಿಸಿಕೊಳ್ಳುವ ಮಂದಿಗೆ ಈ ಶಿಲೀಂಧ್ರ ಸೋಂಕು ಕಂಡಬರುವ ಸಾಧ್ಯತೆಯೇ ಇಲ್ಲ ಎಂದು ಹೇಳುತ್ತಾರೆ, ಡಿಎಚ್ಓ.
ಶಿಲೀಂಧ್ರ, ಬ್ಯಾಕ್ಟೀರಿಯಾ, ವೈರಸ್ ನಮ್ಮ ಪರಿಸರದಲ್ಲಿ ಸಾಮಾನ್ಯ ಆಗಿರುತ್ತದೆ. ಆದರೆ, ಅವೇನೂ ನಮ್ಮ ದೇಹಕ್ಕೆ ಹಾನಿ ಮಾಡುವುದಿಲ್ಲ. ಯಾವಾಗ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಇಲ್ಲವಾಗುತ್ತದೋ, ಎಚ್ಐವಿ, ಟಿಬಿ ರೋಗ ಬಾಧಿಸಿ ವ್ಯಕ್ತಿ ನಿಶ್ಶಕ್ತನಾಗುತ್ತಾನೋ ಅಂಥ ಸಂದರ್ಭದಲ್ಲಿ ಶಿಲೀಂಧ್ರಗಳು ಅವಕಾಶವಾದಿಯಂತೆ ದೇಹಕ್ಕೆ ದಾಳಿ ಮಾಡುತ್ತದೆ. ದೇಹದ ಯಾವುದೇ ಭಾಗ ಬಾತುಕೊಳ್ಳುವುದು, ಕಣ್ಣು ಗುಡ್ಡೆ ಅಥವಾ ಮುಖದ ಒಂದು ಬದಿ ಬಾತುಕೊಳ್ಳುವುದು, ಒಂದು ಕಣ್ಣು ಕಾಣದಾಗುವುದು ಈ ರೀತಿಯ ಲಕ್ಷಣ ಕಂಡುಬರುತ್ತದೆ ಎಂದು ಹೇಳಿದರು, ಕಿಶೋರ್ ಕುಮಾರ್.
For the first time Seven patients being treated for Covid-19 at the Various Hospitals in Mangalore have been infected with black fungus (mucormycosis), Mangalore district health officer (DHO)Dr Kishor Kumar has said. One Death of a Man from Chitradurga has been reported through Black Fungus in Mangalore.
21-07-25 01:31 pm
Bangalore Correspondent
Tulu Nadu High Court Advocates, Bangalore; ಯೇ...
21-07-25 04:16 am
ಅಣ್ಣಾಮಲೈಗೆ ಬಿಜೆಪಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಕ...
20-07-25 08:35 pm
ವಾಲ್ಮೀಕಿ ನಿಗಮ ಹಗರಣ ರೀತಿಯಲ್ಲೇ ಮತ್ತೊಂದು ಹಗರಣ ;...
20-07-25 07:55 pm
Dharmasthala SIT Case, Parameshwar: ಎಸ್ಐಟಿ ರ...
20-07-25 04:24 pm
20-07-25 04:47 pm
HK News Desk
Kerala Nurse Yemen; ನರ್ಸ್ ನಿಮಿಷಾ ಉಳಿವಿಗೆ ಗಲ್ಫ...
16-07-25 09:58 pm
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
21-07-25 03:11 pm
Mangalore Correspondent
ತನಿಖೆ ಆಗೋ ಸಂದರ್ಭದಲ್ಲಿ ನಿರ್ಣಯಕ್ಕೆ ಬರೋದಲ್ಲ, ಪವಿ...
21-07-25 02:11 pm
Dharmasthala SIT, Parshwanath Jain; ಸರ್ಕಾರದ ಎ...
21-07-25 04:03 am
Mangalore Bantwal Rural PSI, Suicide: ಬಂಟ್ವಾಳ...
20-07-25 10:35 pm
Dharmasthala Case, SIT, Pronab Mohanty: ಧರ್ಮಸ...
20-07-25 03:06 pm
20-07-25 08:52 pm
HK News Desk
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm
Fraudster Roshan Saldanha, Fraud: ಬಹುಕೋಟಿ ವಂಚ...
19-07-25 09:25 pm
Mangalore Conman Roshan Saldanha Arrest: ಚಾಲಾ...
19-07-25 12:26 pm
Mangalore crime, cyber crime: ಮುಂಬೈ ಪೊಲೀಸ್ ಅಧ...
18-07-25 12:40 pm