ಬ್ರೇಕಿಂಗ್ ನ್ಯೂಸ್
24-05-21 05:30 pm Mangalore Correspondent ಕರಾವಳಿ
ಮಂಗಳೂರು, ಮೇ 24: ಕೊರೊನಾ ಲಾಕ್ಡೌನಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡೋರಂದ್ರೆ ಪೊಲೀಸರು. ಎಲ್ಲ ಜನ ಮನೆಯಲ್ಲಿ ಕುಳಿತರೂ, ಪೊಲೀಸರು ಮಾತ್ರ ಬೀದಿ ಕಾಯಲೇಬೇಕು ಎನ್ನುವ ಸ್ಥಿತಿ. ಹೀಗಾಗಿ ವಿವಿಧ ಸಂಸ್ಥೆಗಳು ಪೊಲೀಸರಿಗೆ ಊಟ, ಚಹಾ, ತಿಂಡಿ ಕೊಡಲು ಮುಂದೆ ಬಂದಿದ್ದಾರೆ. ಆದರೆ, ಮಂಗಳೂರು ಪೊಲೀಸ್ ಕಮಿಷನರ್ ಅಗತ್ಯವಿದ್ದುದನ್ನು ಮಾತ್ರ ಸ್ವೀಕರಿಸುತ್ತಿದ್ದಾರೆ. ಪೊಲೀಸರಿಗೆ ಬೇರೆ ಯಾವ ವಿಧದಲ್ಲಿ ನೆರವಾಗಬಹುದು ಎಂದು ಯೋಚನೆ ಮಾಡಿದ ಮಂಗಳೂರಿನ ಟಿವಿಎಸ್ ಟು - ವೀಲರ್ ಶೋರೂಮ್ ಸಂಸ್ಥೆಯವರು ವಿಭಿನ್ನ ರೀತಿಯ ಸೇವೆ ನೀಡಿದ್ದಾರೆ.
ಪೊಲೀಸರ ಸೇವೆಗಾಗಿ ನೂರಾರು ವಾಹನಗಳಿರುತ್ತವೆ. ಲಾಕ್ಡೌನಲ್ಲಿ ಗ್ಯಾರೇಜ್, ಶೋರೂಮ್ ಬಂದ್ ಆಗಿರುವ ಮಧ್ಯೆ ತುರ್ತಾಗಿ ವಾಹನಗಳನ್ನು ಸರ್ವಿಸ್ ಮಾಡುವುದಾಗಲೀ, ರಿಪೇರಿ ಮಾಡುವುದಾಗಲೀ ಸಾಧ್ಯವಾಗಲ್ಲ. ಪೊಲೀಸರಿಗೆ ಇದರಿಂದ ತೊಂದರೆ ಆಗಬಾರದೆಂಬ ನೆಲೆಯಲ್ಲಿ ಮಂಗಳೂರಿನ ಹೆಸರಾಂತ ಸಾಯಿರಾಧಾ ಟಿವಿಎಸ್ ಶೋರೂಂ ಸಂಸ್ಥೆಯವರು ಪೊಲೀಸರ ವಾಹನಗಳನ್ನು ಉಚಿತವಾಗಿ ಸರ್ವಿಸ್ ಮಾಡಿಕೊಡಲು ಮುಂದೆ ಬಂದಿದ್ದಾರೆ.
ಟಿವಿಎಸ್ ಕಂಪನಿಯ ವಾಹನಗಳನ್ನು ಉಚಿತವಾಗಿ ಆಯಿಲ್ ಚೇಂಜ್ ಸೇರಿ ಎಲ್ಲ ರೀತಿಯ ರಿಪೇರಿಯನ್ನೂ ಕಂಪನಿ ಮೆಕ್ಯಾನಿಕ್ ಗಳೇ ಮಾಡಿಕೊಡುತ್ತಿದ್ದಾರೆ. ಸಾಧಾರಣವಾಗಿ ಒಂದು ಬೈಕಿಗೆ 800 – 1000 ರೂ. ಖರ್ಚು ಬರುತ್ತಿದ್ದರೆ, ಅವನ್ನು ಸಾಯಿರಾಧಾ ಸಂಸ್ಥೆಯವರೇ ಭರಿಸಿದ್ದಾರೆ. ಪೊಲೀಸರ ವಾಹನಗಳ ಸರ್ವಿಸ್ ಮಾಡುವ ಮೂಲಕ ಸಾಯಿರಾಧಾ ಸಂಸ್ಥೆಯವರು ಹೊಸ ರೀತಿಯಲ್ಲಿ ಪೊಲೀಸರ ಕಾರ್ಯಕ್ಕೆ ಸಾಥ್ ನೀಡಿದ್ದಾರೆ.
ಇಂದು ಬೆಳಗ್ಗೆ ಕಮಿಷನರ್ ಕಚೇರಿಗೆ ಆಗಮಿಸಿದ್ದ ಟಿವಿಎಸ್ ಸಾಯಿರಾಧಾ ಸಂಸ್ಥೆಯ ಪಾಲುದಾರ ಸಿದ್ದಾರ್ಥ ಶೆಟ್ಟಿ, ಈ ರೀತಿಯ ಅವಕಾಶ ಕೊಟ್ಟಿದ್ದಕ್ಕೆ ಕಮಿಷನರ್ ಶಶಿಕುಮಾರ್ ಅವರಿಗೆ ಧನ್ಯವಾದ ಹೇಳಿದರು. ಮೇ 20ರಿಂದ 25ರ ವರೆಗೆ ಪೊಲೀಸ್ ಗ್ರೌಂಡಿಗೇ ಬಂದು ನಮ್ಮ ಮೆಕ್ಯಾನಿಕ್ ಗಳು ರಿಪೇರಿ ಕೆಲಸ ಮಾಡುತ್ತಿದ್ದಾರೆ. ಪೊಲೀಸರು ವಾಹನಗಳನ್ನು ಶೋರೂಮಿಗೆ ತಂದು ಕೊಟ್ಟರೂ ಸರ್ವಿಸ್ ಮಾಡಿಕೊಡುತ್ತೇವೆ ಎಂದು ಸಿದ್ದಾರ್ಥ ಶೆಟ್ಟಿ ಹೇಳಿದ್ದಾರೆ.
ಸಿದ್ದಾರ್ಥ ಶೆಟ್ಟಿ ಮತ್ತು ಅವರ ತಂದೆ ಮನೋಹರ್ ಶೆಟ್ಟಿ ಸಾಯಿರಾಧಾ ಬ್ರಾಂಡ್ ಹೆಸರಲ್ಲಿ ಮಂಗಳೂರು ಮತ್ತು ಉಡುಪಿಯಲ್ಲಿ ಮೆಡಿಕಲ್ಸ್, ಹೊಟೇಲ್, ಹೆರಿಟೇಜ್ ರೆಸಾರ್ಟ್, ಟಿವಿಎಸ್ ಶೋರೂಂ ಹೀಗೆ ವಿವಿಧ ರೀತಿಯ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.
Video:
Sai Radha TVS Offer Free Check-Up and Service of 48 TVS Apache Bikes of Mangalore Police. This project is initiated under the leadership of Manohar Shetty and Siddarth Shetty-Managing Partners of Sai Radha TVS.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm