ಬ್ರೇಕಿಂಗ್ ನ್ಯೂಸ್
24-05-21 09:17 pm Mangaluru Correspondent ಕರಾವಳಿ
ಮಂಗಳೂರು, ಮೇ 24: ಎಂಆರ್‌ಪಿಎಲ್ ಸಂಸ್ಥೆಯವರು ನಮ್ಮದೇ ನೆಲದಲ್ಲಿ ಕಾಲೂರಿ ನಮ್ಮದೇ ಜನರಿಗೇ ಅನ್ಯಾಯ ಮಾಡುತ್ತಿದೆ. ನಮ್ಮ ನಾಡಿನ ಜನರಿಗೆ ಘೋರ ಅನ್ಯಾಯ ಆಗುತ್ತಿದ್ದರೂ, ಈ ಭಾಗದ ಶಾಸಕರು, ಸಂಸದರು ಏನು ಮಾಡುತ್ತಿದ್ದಾರೆ. ನಳಿನ್ ಕುಮಾರ್, ಶೋಭಾ ಎಲ್ಲಿ ಅವಿತಿದ್ದಾರೆ..?
ಎಂಆರ್ ಪಿಎಲ್ ಉದ್ಯೋಗ ನೇಮಕಾತಿಯಲ್ಲಿ ಮಾಡಿರುವ ವಂಚನೆಯ ಬಗ್ಗೆ ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಜೆ.ಆರ್.ಲೋಬೋ ಕಿಡಿಕಾರಿದ್ದು ಶಾಸಕರು ಮತ್ತು ಸಂಸದರ ನೈತಿಕತೆಯನ್ನು ಪ್ರಶ್ನೆ ಮಾಡಿದ್ದಾರೆ.
ಎಂಆರ್ ಪಿಎಲ್ ಮಂಗಳೂರಿಗೆ ಬಂದಾಗ ಆರಂಭದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಆದರೆ ಊರು ಒಳ್ಳೆಯದಾಗುತ್ತದೆ, ಉದ್ಯೋಗ ಸಿಗುತ್ತದೆ ಎಂಬ ನೆಲೆಯಲ್ಲಿ ಜನರನ್ನು ಮನವೊಲಿಸಲಾಗಿತ್ತು. ಆದರೆ, ಜನರ ನಿರೀಕ್ಷೆಗೆ ಮೋಸವಾಗಿದೆ, ಉದ್ಯೋಗವೂ ಇಲ್ಲ. ಭೂಮಿಯೂ ಇಲ್ಲ ಎಂಬಂತಾಗಿದೆ ಎಂದರು.
ಇತ್ತೀಚೆಗೆ ನಡೆದಿರುವ 233 ಹುದ್ದೆಗಳ ನೇಮಕಾತಿಯಲ್ಲಿ ಕೇವಲ 13 ಮಂದಿ ಮಾತ್ರ ಕರ್ನಾಟಕದವರು ಇದ್ದಾರೆ. ಅದ್ರಲ್ಲಿ ನಾಲ್ಕು ಮಂದಿಗಷ್ಟೇ ಕರಾವಳಿಗೆ ಸಿಕ್ಕಿದೆ. ಹಾಗಾದರೆ ಇಲ್ಲಿ ವಿದ್ಯಾವಂತರಿಲ್ಲವೇ ? ಸ್ಥಳೀಯರಿಗೆ ಯಾಕೆ ಆದ್ಯತೆ ಕೊಟ್ಟಿಲ್ಲ. ಸರೋಜಿನಿ ಮಹಿಷಿ ವರದಿಗೆ ಯಾಕೆ ಮಾನ್ಯತೆ ನೀಡಿಲ್ಲ ಎಂದು ಪ್ರಶ್ನಿಸಿದರು.
ಎಂಆರ್ ಪಿಎಲ್ ಯೂನಿಯನ್ ನವರು ಕರ್ನಾಟಕದವರಿಗೆ ಆದ್ಯತೆ ಕೊಡಿ ಎಂದು ಹೇಳಿದರೂ ಸಂಸ್ಥೆ ಕ್ಯಾರೇ ಮಾಡಿಲ್ಲ. ಸಂಸದರು, ಶಾಸಕರು ಕೊನೆಕ್ಷಣದಲ್ಲಿ ಸಭೆ ಕರೆದು ನೇಮಕಾತಿಗೆ ತಡೆ ಎಂದು ಹೇಳಿರುವುದು ರಾಜಕೀಯ ಪ್ರೇರಿತ. ಆಕ್ರೋಶಿತ ಜನರನ್ನು ದಿಕ್ಕು ತಪ್ಪಿಸುವ ಹೇಳಿಕೆ. ಎಂಆರ್‌ಪಿಎಲ್ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ ಎಂದು ಲೋಬೋ ಹೇಳಿದರು.
ನಮ್ಮದೇ ನೆಲದಲ್ಲಿ ನಮ್ಮದೇ ಜನರಿಗೆ ಅನ್ಯಾಯ ಆಗುತ್ತಿದ್ದರೆ, ಈ ಭಾಗದ ಸಂಸದರಾದ ನಳಿನ್, ಶೋಭಾ ಏನ್ ಮಾಡುತ್ತಿದ್ದಾರೆ ? ನಮ್ಮ ಯುವಜನರು ಉದ್ಯೋಗಕ್ಕಾಗಿ ಬೇರೆ ಕಡೆ ಹೋಗಬೇಕಾದ ಪರಿಸ್ಥಿತಿ ಇದೆ. ಅಂದು ಎಂಆರ್ ಪಿಎಲ್ ಗೆ ಜಾಗ ಕೊಡಲು ಹೋಗಿದ್ದ ಅಧಿಕಾರಿಯಲ್ಲಿ ನಾನು ಕೂಡ ಒಬ್ಬ. ಅಂದು ಅಜ್ಜಿ ಕಣ್ಣೀರು ಹಾಕುತ್ತಿದ್ದ ದೃಶ್ಯ ಈಗಲೂ ಕಣ್ಮುಂದೆ ಬರ್ತಿದೆ. ಅಂತಹ ಕಣ್ಣೀರ ಮಧ್ಯೆ ನಾವು ನಮ್ಮ ಯುವಕರಿಗೆ ಉದ್ಯೋಗ ಸಿಗುತ್ತದೆ ಎಂಬ ನೆಲೆಯಲ್ಲಿ ಜಾಗ ಕೊಡಿಸಿದ್ದೇವೆ. ಈಗ ಕಂಪನಿಯವರೇ ಮೋಸ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ನಗರ ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಪಾಲಿಕೆಯ ಪ್ರತಿಪಕ್ಷ ನಾಯಕ ವಿನಯರಾಜ್, ಮಾಜಿ ಮೇಯರ್ ಮಹಾಬಲ ಮಾರ್ಲ, ವಿಶ್ವಾಸ್ ದಾಸ್, ಸಂತೋಷ್ ಶೆಟ್ಟಿ, ಟಿ.ಕೆ. ಸುಧೀರ್, ನೀರಜ್ ಪಾಲ್, ಶುಭೋದಯ ಆಳ್ವ, ರಮಾನಂದ ಪೂಜಾರಿ, ಸವಾನ್ ಜೆಪ್ಪು ಉಪಸ್ಥಿತರಿದ್ದರು.
Job Cheating by MRPL for youngsters of Mangalore J R Lobo Slams BJP leaders. He also questioned where are Naleen Kumar Kateel and MP Shobha Karandlaje hiding.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm