ಬ್ರೇಕಿಂಗ್ ನ್ಯೂಸ್
27-05-21 09:32 pm Mangaluru Correspondent ಕರಾವಳಿ
ಕುಂದಾಪುರ, ಮೇ 27: ಎಂಬಿಬಿಎಸ್ ಕಲಿತು ಪಿಜಿ- ನೀಟ್ ಎಕ್ಸಾಂ ಬರೆಯಲು ರೆಡಿಯಾಗುತ್ತಿದ್ದವರು ಅತ್ತ ಪರೀಕ್ಷೆ ಮುಂದೂಡಿಕೆ ಆಗುತ್ತಲೇ ಮತ್ತೆ ನಿರಾಸೆಯಾಗಿದ್ದಾರೆ. ಆದರೆ, ಕುಂದಾಪುರದಲ್ಲಿ ನೀಟ್ ಪರೀಕ್ಷೆಗೆ ಸಿದ್ಧತೆ ನಡೆಸಿದ್ದವರು ತಮ್ಮ ಖಾಲಿ ಅವಧಿಯನ್ನು ಆಸ್ಪತ್ರೆಯಲ್ಲಿ ಕಳೆಯಲು ನಿರ್ಧರಿಸಿದ್ದಾರೆ. ಕೋವಿಡ್ ರೋಗಿಗಳು ಕಷ್ಟಪಡುತ್ತಿರುವ ಸಂದರ್ಭದಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಕೈಲಾದ ಸೇವೆ ನೀಡಲು ಮುಂದಾಗಿದ್ದಾರೆ.
ಮುಂಬೈನಲ್ಲಿ ಎಂಬಿಬಿಎಸ್ ಮುಗಿಸಿದ್ದ ಡಾ.ರಚನಾ ಶೆಟ್ಟಿ ಸ್ನಾತಕೋತ್ತರ ಪದವಿಗಾಗಿ ನೀಟ್ ಎಕ್ಸಾಂ ಬರೆಯಲು ರೆಡಿ ಮಾಡಿಕೊಂಡಿದ್ದರು. ಮುಂಬೈನಲ್ಲಿ ಹೊಟೇಲ್ ಉದ್ಯಮಿಯಾಗಿದ್ದ ಅವರ ತಂದೆ ಸುರೇಶ್ ಶೆಟ್ಟಿ ಕಳೆದ ಪೆಬ್ರವರಿಯಲ್ಲಿ ನಿಧನರಾದ ಹಿನ್ನೆಲೆ ರಚನಾ ಊರಿಗೆ ಮರಳಿದ್ದರು. ಊರಲ್ಲೇ ಇದ್ದುಕೊಂಡು ಮುಂದಿನ ಪರೀಕ್ಷೆಗಾಗಿ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಈ ವೇಳೆ ತಾಯಿ ಮಾತ್ರ, ಮಗಳಲ್ಲಿ ನೀನು ಇಲ್ಲೇ ಇರು ಎಂದು ಒತ್ತಾಯಿಸುತ್ತಿದ್ದರು.

ನಮ್ಮ ಕುಟುಂಬವೂ ತಂದೆಯ ಸಾವಿನಿಂದಾಗಿ ಚಿಂತೆಯಲ್ಲಿತ್ತು. ಹೀಗಾಗಿ ಸ್ಥಳೀಯ ಆಸ್ಪತ್ರೆ ಒಂದರಲ್ಲಿ ಹುದ್ದೆ ಖಾಲಿ ಇರುವುದನ್ನು ತಿಳಿದು ಅಪ್ಲೈ ಮಾಡಿದ್ದೆ. ಕೋವಿಡ್ ಸೋಂಕಿತರು ಒಂದೇ ಸಮನೆ ಹೆಚ್ಚುತ್ತಿರುವುದರಿಂದ ವರ್ಕ್ ಲೋಡ್ ಕೂಡ ಜಾಸ್ತಿಯಾಯ್ತು. ಆದರೂ ವರ್ಕ್ ಮತ್ತು ಸ್ಟಡಿಯನ್ನೂ ಒಟ್ಟಿಗೇ ಮಾಡುತ್ತಿದ್ದೇನೆ ಎಂದು ಹೇಳಿದರು.
ಕುಂದಾಪುರ ಮೂಲದವರೇ ಆಗಿರುವ ಡಾ.ರಜತ್ ಶೆಟ್ಟಿ ಮತ್ತು ಸೋದರ ಡಾ.ಆಶಿತ್ ಶೆಟ್ಟಿ ಕೂಡ ಎಂಬಿಬಿಎಸ್ ಮುಗಿಸಿ ನೀಟ್ ಎಕ್ಸಾಂ ಬರೆಯಲು ರೆಡಿಯಾಗಿದ್ದರು. ಕಳೆದ ವರ್ಷವೂ ಅವರು ಊರಿಗೆ ಬಂದಿದ್ದ ವೇಳೆ ಕೊರೊನಾ ಸೋಂಕು ಆವರಿಸಿದ್ದರಿಂದ ತಾಲೂಕು ಆಸ್ಪತ್ರೆಯಲ್ಲಿ ಸೇವೆಯಲ್ಲಿ ತೊಡಗಿದ್ದರು. ಈ ಬಾರಿಯೂ ಕೊರೊನಾ ಎರಡನೇ ಅಲೆ ಆವರಿಸಿದ್ದು ವೈದ್ಯ ಸೋದರರಿಬ್ಬರು ಮತ್ತೆ ಅದೇ ಆಸ್ಪತ್ರೆಯಲ್ಲಿ ರೋಗಿಗಳ ಸೇವೆಯಲ್ಲಿ ನಿರತರಾಗಿದ್ದಾರೆ.

ಕೊರೊನಾ ಎರಡನೇ ಅಲೆ ತುಂಬ ಸೀರಿಯಸ್ ಆಗಿದ್ದರೂ ವಿಭಿನ್ನ ಅನುಭವಗಳಿಗೆ ಸಾಕ್ಷಿಯಾಗುತ್ತಿದ್ದೇವೆ. ಪ್ರಾಕ್ಟೀಸ್ ಮಾಡುತ್ತಾ ಪರೀಕ್ಷೆಗೆ ಸಿದ್ಧತೆ ನಡೆಸುವುದು ಕಷ್ಟ. ಆದರೆ, ಎಕ್ಸಾಂ ಯಾವಾಗ ಆಗುತ್ತೆ ಅನ್ನೋದು ಸ್ಪಷ್ಟವಾಗಿಲ್ಲ. ನಾವು ಈ ವರ್ಷವೇ ಬರೆಯಬೇಕು ಎಂದುಕೊಂಡಿದ್ದೆವು. ಮುಂದಿನ ವರ್ಷಕ್ಕೆ ಮತ್ತೆ ಸಿಲೆಬಸ್ ಬದಲಾಗಲೂಬಹುದು ಎಂದು ಹೇಳಿದ್ರು ಡಾ. ರಜತ್ ಶೆಟ್ಟಿ.
ಆಸ್ಪತ್ರೆಯಲ್ಲಿ ಕೆಲಸದಲ್ಲಿ ತೊಡಗಿದ್ದ ಡಾ.ನಮೃತಾ ಕೂಡ ಇಂಥದ್ದೇ ಅಭಿಪ್ರಾಯ ಪಟ್ಟರು. ಕೆಲವೊಮ್ಮೆ ದಿನದ ಸೇವೆ ಮುಗಿಸುವಷ್ಟರಲ್ಲಿ ತುಂಬಾನೇ ದಣಿದು ಬಿಡುತ್ತೇವೆ. ಆದರೆ, ದುರಂತದ ಸಂದರ್ಭದಲ್ಲಿ ಸಮಾಜಕ್ಕಾಗಿ ಸೇವೆ ಮಾಡುತ್ತಿದ್ದೇವೆ ಎಂಬ ಸಂತಸ ನಮಗಿದೆ ಎಂದು ಹೇಳುತ್ತಾರೆ. ಈ ರೀತಿ ಕೆಲಸದಲ್ಲಿ ತೊಡಗಿರುವುದು ನಮಗೆ ವಿಶೇಷ ಅನುಭವಗಳನ್ನು ನೀಡುತ್ತಿದೆ. ಇದರಿಂದ ನಾವು ಬಹಳಷ್ಟು ಕಲಿಯಲು ಸಾಧ್ಯವಾಗುತ್ತಿದೆ ಎಂದರು ಡಾ.ನಿವೇದಿತಾ. ಎಲ್ಲ ಸಿಬಂದಿ, ಹಿರಿಯ ವೈದ್ಯರು, ನೋಡಲ್ ಅಧಿಕಾರಿಗಳು ತಮ್ಮ ಕರ್ತವ್ಯದ ಮಧ್ಯೆಯೂ ಗೈಡ್ ಮಾಡುತ್ತಾರೆ ಎಂದರು.
ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ ಈ ಬಾರಿ ಕೊರೊನಾ ಎರಡನೇ ಅಲೆಗೆ ಸುಮಾರು 700 ಮಂದಿ ಸೋಂಕಿತರು ಅಡ್ಮಿಟ್ ಆಗಿದ್ದಾರೆ. 40 ಮಂದಿ ಕೋವಿಡ್ ಸೋಂಕಿತ ಮಹಿಳೆಯರು ಮೆಟರ್ನಿಟಿ ವಾರ್ಡಿಗೆ ದಾಖಲಾಗಿದ್ದು ಸುರಕ್ಷಿತವಾಗಿ ಹೆರಿಗೆ ಆಗಿದ್ದಾರೆ ಎಂದು ತಾಲೂಕು ನೋಡಲ್ ಅಧಿಕಾರಿ ಡಾ. ನಾಗೇಶ್ ಮಾಹಿತಿ ನೀಡಿದರು.
With the exam entrance postponed, a group of fresh MBBS graduates from Kundapur in Udpui district, who have been prepUdupi for the PG-NEET for almost
08-09-26 02:24 pm
HK News Staffer
ಐಪಿಎಸ್ ಅಧಿಕಾರಿಗಳ ಭರ್ಜರಿ ವರ್ಗಾವಣೆ: ಮಂಗಳೂರು ಡಿಸ...
07-09-26 01:33 pm
ಜೆನ್ ಜೀಗಳಿಗೆ ಕಾಂಗ್ರೆಸ್ ಸಿದ್ಧಾಂತ, ಜಾತ್ಯತೀತ ಭಾವ...
05-09-26 04:53 pm
400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ; ಪ್ರತಿ ಹ...
02-09-26 05:06 pm
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
05-09-26 11:55 am
HK News Staffer
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
08-09-26 05:20 pm
HK News Staffer
ದಕ್ಷಿಣ ಕನ್ನಡದಲ್ಲಿ ದಿಢೀರ್ ಲೋಕಾಯುಕ್ತ ದಾಳಿ: ಬಂಟ್...
08-09-26 03:50 pm
Mangalore Jail Raid: ಮಂಗಳೂರು ಜೈಲಿಗೆ ತಡರಾತ್ರಿ...
08-09-26 09:50 am
ಪುತ್ತೂರು ಮಹಾಲಿಂಗೇಶ್ವರನ ಹೆಸರಲ್ಲಿ ಅವ್ಯವಹಾರ ; ಸಣ...
08-09-26 08:27 am
ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಎಸ್ಐ ಆರ್ ನೋಟಿಸ್ ! ಬ...
07-09-26 09:57 pm
08-09-26 02:26 pm
HK News Staffer
ಅಪಘಾತದಲ್ಲಿ ಗಾಯಗೊಂಡ ಚಿರತೆಯನ್ನು ರಕ್ಷಣೆ ಮಾಡಲು ಹೋ...
08-09-26 01:11 pm
ಅಪ್ರಾಪ್ತ ಬಾಲಕನ ಮೇಲೆ ಸರಣಿ ಲೈಂಗಿಕ ದೌರ್ಜನ್ಯ ; ವಿ...
08-09-26 11:17 am
ಆಸ್ಪತ್ರೆ ಸಿಬ್ಬಂದಿಗೆ ಪ್ರಜ್ಞೆ ತಪ್ಪಿಸಿ ಲೈಂಗಿಕ ದೌ...
07-09-26 08:56 pm
ದೆಹಲಿಯಲ್ಲಿ ಕಟ್ಟಡ ಕುಸಿತಕ್ಕೆ ಏಳು ಬಲಿ ; ನೆಲಮಹಡಿಯ...
07-09-26 07:44 pm