ಬ್ರೇಕಿಂಗ್ ನ್ಯೂಸ್
28-05-21 09:04 pm Mangaluru Correspondent ಕರಾವಳಿ
ಮಂಗಳೂರು, ಮೇ 28: ಮಂಗಳೂರು ನಗರ ಪೊಲೀಸರು ಆರಂಭಿಸಿರುವ ಕೋವಿಡ್ ಸಮನ್ವಯ ಹೆಲ್ಪ್ ಲೈನ್ ಮೂಲಕ 80 ಮಂಗಳಮುಖಿಯರಿಗೆ ಕೋವಿಡ್ ದಿನಸಿ ಕಿಟ್ ವಿತರಿಸಲಾಗಿದೆ. ರಥಬೀದಿಯ ಉದ್ಯಮಿ ವಿಜಯೇಂದ್ರ ಭಟ್ ಕೊಡಮಾಡಿರುವ ಕಿಟ್ ಗಳನ್ನು ಇಂದು ಕಮಿಷನರ್ ಕಚೇರಿಯಲ್ಲಿ ಮಂಗಳಮುಖಿಯರಿಗೆ ವಿತರಣೆ ಮಾಡಲಾಯಿತು.
ತಲಾ ಹತ್ತು ಕೇಜಿ ದಿನಸಿ ಕಿಟ್ ಪ್ರಾಯೋಜಿಸಿದ ವಿಜಯೇಂದ್ರ ಭಟ್ ಅವರನ್ನು ಪೊಲೀಸ್ ಕಮಿಷನರ್ ಶಶಿಕುಮಾರ್ ಅಭಿನಂದಿಸಿದರು. ಮೇ 21ರಂದು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವತಿಯಿಂದ ಕೋವಿಡ್ ಸಮನ್ವಯ ಎಂಬ ಹೊಸ ಪರಿಕಲ್ಪನೆಯಡಿ ಸಹಾಯವಾಣಿ ಆರಂಭಿಸಲಾಗಿತ್ತು. ಕೋವಿಡ್ ಸಂಕಷ್ಟದಿಂದ ಕಷ್ಟಕ್ಕೆ ಒಳಗಾದವರು, ವಿದೇಶದಲ್ಲಿದ್ದು ಊರಲ್ಲಿ ಕುಟುಂಬಸ್ಥರಿಗೆ ತೊಂದರೆ ಎದುರಾದರೆ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ ಸ್ಪಂದಿಸಲಾಗುವುದು ಎಂದು ಕಮಿಷನರ್ ತಿಳಿಸಿದ್ದರು.
ಅದರಂತೆ, ವಿವಿಧ ಕಡೆಗಳಿಂದ ಕರೆಗಳು ಬಂದಿದ್ದು ಈವರೆಗೆ 24 ಕರೆಗಳಿಗೆ ಸ್ಪಂದಿಸಲಾಗಿದೆ. ಮಂಗಳಮುಖಿಯರ ಸಂಘದ ರಾಜ್ಯ ಘಟಕದಿಂದ ಕರೆ ಮಾಡಿ, ಮಂಗಳೂರಿನಲ್ಲಿರುವ ಮಂಗಳಮುಖಿ ಸದಸ್ಯರು ಕಷ್ಟದಲ್ಲಿರುವ ಬಗ್ಗೆ ಹೇಳಿಕೊಂಡಿದ್ದರು. ಹೀಗಾಗಿ ಉದ್ಯಮಿಗಳ ಮೂಲಕ ಆಹಾರದ ಕಿಟ್ ವಿತರಿಸುವ ಕೆಲಸ ಮಾಡಲಾಗಿದೆ. ವಿಜಯೇಂದ್ರ ಭಟ್ ದಿನಸಿ ಕಿಟ್ ಪ್ರಾಯೋಜಿಸಿದ್ದಾರೆ ಎಂದು ಕಮಿಷನರ್ ಇದೇ ವೇಳೆ ತಿಳಿಸಿದರು.
ಲಾಕ್ಡೌನ್ ಕಾರಣದಿಂದ ಬಹಳಷ್ಟು ಕಷ್ಟದಲ್ಲಿದ್ದೇವೆ. ರಾಜ್ಯ ಸರಕಾರದಿಂದಲೂ ನಮಗೆ ಯಾವುದೇ ಪರಿಹಾರ, ಸೌಲಭ್ಯ ದೊರಕಿಲ್ಲ. ನಮ್ಮ ಕಷ್ಟದ ಬಗ್ಗೆ ತಿಳಿದು ಸ್ಪಂದಿಸಿದ ಮಂಗಳೂರಿನ ಪೊಲೀಸರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಮಂಗಳಮುಖಿ ಹೇಮಾ ತಿಳಿಸಿದರು.
ಈ ಸಂದರ್ಭ ಡಿಸಿಪಿಗಳಾದ ಹರಿರಾಮ್ ಶಂಕರ್, ವಿನಯ ಗಾಂವ್ಕರ್, ಎಸಿಪಿಗಳಾದ ಮಹೇಶ್ ಕುಮಾರ್, ನಟರಾಜ್, ಸಿಸಿಬಿ ಇನ್ ಸ್ಪೆಕ್ಟರ್ ಮಹೇಶ್ ಪ್ರಸಾದ್, ಪಿಎಸ್ಐ ರಾಜೇಂದ್ರ ಉಪಸ್ಥಿತರಿದ್ದರು.
Mangaluru city police commissioner N Shashi Kumar along with DCP (Law and Order) Hariram Shankar, DCP (Crime and Traffic) Vinay A Gaonkar distributed grocery kits to over 80 transgenders in the city on Friday, May 28. The grocery kits were distributed on the premises of the police commissioner's office.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm