ಬ್ರೇಕಿಂಗ್ ನ್ಯೂಸ್
31-05-21 11:29 am Mangalore Correspondent ಕರಾವಳಿ
ಮಂಗಳೂರು, ಮೇ 31: ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೇಶದ ಅತಿ ದೊಡ್ಡದು ಎನ್ನಲಾದ ಕಾರ್ಗೋ ವಿಮಾನ ಲ್ಯಾಂಡ್ ಆಗಿದೆ. ಭಾರತೀಯ ವಾಯುಪಡೆಗೆ ಸೇರಿದ ಮಿಲಿಟರಿ ಸಾರಿಗೆ ವಿಮಾನ ಸಿ- 17 ಗ್ಲೋಬ್ ಮಾಸ್ಟರ್ ಲ್ಯಾಂಡ್ ಆಗಿದ್ದು ಗಮನ ಸೆಳೆದಿದೆ.
ಗ್ಲೋಬ್ ಮಾಸ್ಟರ್ ಭಾರತದ ವಿಶಿಷ್ಟ ಮಿಲಿಟರಿ ಸಾರಿಗೆ ವಿಮಾನವಾಗಿದ್ದು, ನಾಲ್ಕು ಎಂಜಿನ್‌ಗಳನ್ನು ಹೊಂದಿದ್ದು ದೇಶದ ಅತಿದೊಡ್ಡ ಕಾರ್ಗೋ ವಿಮಾನಗಳಲ್ಲಿ ಒಂದಾಗಿದೆ. ನವ ಮಂಗಳೂರು ಬಂದರಿಗೆ ಇತ್ತೀಚೆಗೆ ಕುವೈಟ್‌ನಿಂದ ಬಂದಿದ್ದ ಆಕ್ಸಿಜನ್ ಟ್ಯಾಂಕರ್‌ಗಳನ್ನು ಖಾಲಿ ಮಾಡಿದ ಬಳಿಕ ಮರಳಿ ವಿಮಾನದ ಮೂಲಕ ಮಂಗಳೂರಿಗೆ ಕರೆತಂದಿದೆ. ಟ್ಯಾಂಕರನ್ನು ಮರಳಿ ಕುವೈಟ್‌ಗೆ ಕೊಂಡೊಯ್ಯುವುದಕ್ಕಾಗಿ ಭಾನುವಾರ ಮಂಗಳೂರು ಏರ್‌ಪೋರ್ಟಿಗೆ ತರಲಾಗಿದೆ.
ಈ ಹಿಂದೆ ಮಂಗಳೂರು ಬಂದರಿಗೆ ಕುವೈಟ್‌ನಿಂದ ಬಂದಿದ್ದ ಆಕ್ಸಿಜನ್ ಟ್ಯಾಂಕರ್‌ಗಳನ್ನು ಕೂಡ ಇದೇ ರೀತಿ ಏರ್‌ಫೋರ್ಸ್ ವಿಮಾನದಲ್ಲಿ ಬೇರೆಡೆಗೆ ಕಳುಹಿಸಲಾಗಿತ್ತು.
ಮಿಲಿಟರಿಗೆ ಬಳಸುವ ಸಿ-17 ಗ್ಲೋಬ್‌ಮಾಸ್ಟರ್ ವಿಮಾನವನ್ನು ಬೃಹತ್ ಪ್ರಮಾಣದ ಸರಕುಗಳನ್ನು ಸಾಗಿಸಲು ಬಳಸಲಾಗುತ್ತಿದೆ. ಟ್ಯಾಂಕರ್ ಹಾಗೂ ಇತರ ಘನ ವಾಹನಗಳನ್ನು ಕೂಡ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸುಲಭದಲ್ಲಿ ಹೊತ್ತೊಯ್ಯಲಿದೆ. ವಿಶ್ವದ ನಾನಾ ಭಾಗಗಳಿಗೆ ತುರ್ತು ಸಂದರ್ಭಗಳಲ್ಲಿ ಸರಕುಗಳನ್ನು ಸರಬರಾಜು ಮಾಡುವ ಕೆಲಸವನ್ನು ಈ ವಿಮಾನ ಮಾಡುತ್ತಿದೆ.
ಕಠಿಣ ಭೂ ಪ್ರದೇಶಗಳ ವಾಯುನೆಲೆಗಳಲ್ಲೂ ಈ ವಿಮಾನ ಸುಲಭದಲ್ಲಿ ಲ್ಯಾಂಡ್ ಆಗುವ ಸಾಮರ್ಥ್ಯ ಹೊಂದಿದೆ.
Boeing C 17 Globemaster flight lands in Mangalore airport to return oxygen cylinders to Kuwait. The oxygen cylinders had come Via INS Ship from Kuwait to New Mangaluru Port Trust.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 02:45 pm
Mangalore Correspondent
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
Headline Karnataka, Social Campaigning, Manga...
11-09-25 11:34 am
ಧರ್ಮಸ್ಥಳ ಕೇಸ್ ; ವಿಚಾರಣೆ ಮುಗಿಸಿ ಸತ್ಯಕ್ಕೆ ಜಯ ಎನ...
10-09-25 10:50 pm
Yenepoya Hospital, Mangalore: ಯೆನಪೋಯ ಆಸ್ಪತ್ರೆ...
10-09-25 08:46 pm
11-09-25 02:25 pm
HK STAFF
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm