ಬ್ರೇಕಿಂಗ್ ನ್ಯೂಸ್
01-06-21 02:06 pm Mangalore Correspondent ಕರಾವಳಿ
Photo credits : Representative Image
ಮಂಗಳೂರು, ಜೂನ್ 1: ಕೊರೊನಾ ಅಟ್ಟಹಾಸ, ಬ್ಲಾಕ್ ಫಂಗಸ್ ಸಂಕಷ್ಟ ಎದುರಾಗಿರುವ ನಡುವೆಯೇ ಸೋಂಕು ಪೀಡಿತ ಮಕ್ಕಳಲ್ಲಿ ಹೊಸ ರೀತಿಯ ರೋಗ ಪರಿಣಾಮ ಕಾಣಿಸಿಕೊಂಡಿದೆ. ಕೊರೊನಾ ಸೋಂಕಿಗೆ ಒಳಗಾಗಿ ಗುಣಮುಖರಾದ ಮಕ್ಕಳಲ್ಲಿ ಕವಾಸಕಿ ಸಿಂಡ್ರೋಮ್ ಎನ್ನುವ ಲಕ್ಷಣಗಳು ಕಂಡುಬರುತ್ತಿರುವುದನ್ನು ವೈದ್ಯರು ಪತ್ತೆ ಮಾಡಿದ್ದಾರೆ.
ಸಾಮಾನ್ಯವಾಗಿ 12 ವರ್ಷದ ಒಳಗಿನ ಮಕ್ಕಳಲ್ಲಿ ಈ ರೀತಿಯ ಗುಣಲಕ್ಷಣ ರೋಗ ವಾಸಿಯಾದ ಐದಾರು ವಾರಗಳ ಬಳಿಕ ಕಾಣಿಸಿಕೊಳ್ಳುತ್ತಿದೆ. ಈ ರೀತಿಯ ಲಕ್ಷಣವನ್ನು ಮಕ್ಕಳಲ್ಲಿ ಆರಂಭದಲ್ಲೇ ಪತ್ತೆ ಹಚ್ಚದಿದ್ದರೆ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ವರಿಸಿದ್ದಾರೆ.
ಬ್ಲಾಕ್ ಫಂಗಸ್ ರೀತಿಯಲ್ಲೇ ರೋಗ ನಿರೋಧಕ ಶಕ್ತಿ ಕಡಿಮೆಯಾದ ಕಾರಣ ಕಾಣಿಸಿಕೊಳ್ಳುವ ಅಡ್ಡ ಪರಿಣಾಮ ಇದಾಗಿದ್ದು ಇದರಿಂದ ಮಕ್ಕಳಲ್ಲಿ ಬಹು ಅಂಗಾಂಗ ವೈಫಲ್ಯಕ್ಕೆ ಒಳಗಾಗುತ್ತಿರುವುದನ್ನು ಪತ್ತೆ ಮಾಡಲಾಗಿದೆ. ಇದನ್ನು ವೈದ್ಯರು ಕವಾಸಕಿ ಸಿಂಡ್ರೋಮ್ ಎಂದು ಹೆಸರಿಸುತ್ತಿದ್ದಾರೆ. ಸೋಂಕು ಆಗಿ ಕೊರೊನಾ ನೆಗೆಟಿವ್ ಬಂದ ಮಕ್ಕಳಲ್ಲೂ ಈ ರೀತಿಯ ಲಕ್ಷಣ ಕಂಡುಬಂದಿದೆ.
ಅತಿಯಾದ ಜ್ವರ, ಕಣ್ಣು ಕೆಂಪಾಗುವುದು, ತುಟಿ, ನಾಲಿಗೆ ಕೆಂಪಾಗುವುದು, ವಾಂತಿ ಭೇದಿ ಕವಾಸಕಿ ಸಿಂಡ್ರೋಮ್ ಗುಣ ಲಕ್ಷಣಗಳು ಎಂದು ವೈದ್ಯರು ಹೇಳುತ್ತಿದ್ದಾರೆ.
ಮಂಗಳೂರಲ್ಲೂ 4 ಮಕ್ಕಳಲ್ಲಿ ಕವಾಸಕಿ ಸಿಂಡ್ರೋಮ್ ಕಂಡುಬಂದಿದ್ದು ಚಿಕಿತ್ಸೆಯ ಬಳಿಕ ಸಂಪೂರ್ಣ ಗುಣಮುಖರಾಗಿ ತೆರಳಿದ್ದಾರೆ ಎನ್ನುವ ಮಾಹಿತಿ ಆರೋಗ್ಯ ಇಲಾಖೆಯಿಂದ ಸಿಕ್ಕಿದೆ.
ರೋಗ ಲಕ್ಷಣಗಳ ಬಗ್ಗೆ ಪೋಷಕರು ಜಾಗೃತರಾಗಿದ್ದು ಸಂಶಯ ಕಂಡುಬಂದ ಕೂಡಲೇ ಮಕ್ಕಳ ತಜ್ಞರನ್ನು ಸಂಪರ್ಕಿಸುವಂತೆ ಸೂಚನೆ ನೀಡಲಾಗಿದೆ.
Kawasaki Disease in Infants and Young Children found in Mangalore after Covid and Black fungus. The condition causes inflammation in the blood vessels, and the symptoms can be severe. In addition to several days of fever, children with Kawasaki disease may develop symptoms such as rash, swollen neck glands, swollen hands and feet, and red eyes, lips, and tongue.
21-07-25 05:56 pm
HK News Desk
SIT, Dharmasthala Case, Dk Shivakumar: ಧರ್ಮಸ್...
21-07-25 01:31 pm
Tulu Nadu High Court Advocates, Bangalore; ಯೇ...
21-07-25 04:16 am
ಅಣ್ಣಾಮಲೈಗೆ ಬಿಜೆಪಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಕ...
20-07-25 08:35 pm
ವಾಲ್ಮೀಕಿ ನಿಗಮ ಹಗರಣ ರೀತಿಯಲ್ಲೇ ಮತ್ತೊಂದು ಹಗರಣ ;...
20-07-25 07:55 pm
20-07-25 04:47 pm
HK News Desk
Kerala Nurse Yemen; ನರ್ಸ್ ನಿಮಿಷಾ ಉಳಿವಿಗೆ ಗಲ್ಫ...
16-07-25 09:58 pm
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
21-07-25 03:11 pm
Mangalore Correspondent
ತನಿಖೆ ಆಗೋ ಸಂದರ್ಭದಲ್ಲಿ ನಿರ್ಣಯಕ್ಕೆ ಬರೋದಲ್ಲ, ಪವಿ...
21-07-25 02:11 pm
Dharmasthala SIT, Parshwanath Jain; ಸರ್ಕಾರದ ಎ...
21-07-25 04:03 am
Mangalore Bantwal Rural PSI, Suicide: ಬಂಟ್ವಾಳ...
20-07-25 10:35 pm
Dharmasthala Case, SIT, Pronab Mohanty: ಧರ್ಮಸ...
20-07-25 03:06 pm
20-07-25 08:52 pm
HK News Desk
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm
Fraudster Roshan Saldanha, Fraud: ಬಹುಕೋಟಿ ವಂಚ...
19-07-25 09:25 pm
Mangalore Conman Roshan Saldanha Arrest: ಚಾಲಾ...
19-07-25 12:26 pm
Mangalore crime, cyber crime: ಮುಂಬೈ ಪೊಲೀಸ್ ಅಧ...
18-07-25 12:40 pm