ಬ್ರೇಕಿಂಗ್ ನ್ಯೂಸ್
03-06-21 01:21 pm Mangalore Correspondent ಕರಾವಳಿ
ಮಂಗಳೂರು, ಜೂನ್ 3: ಕೊರೊನಾ ಸೋಂಕನ್ನು ನಿಯಂತ್ರಿಸಲು ರಾಜ್ಯಾದ್ಯಂತ ಲಾಕ್ಡೌನ್ ಹೇರಿ ಜನರ ಸಂಚಾರಕ್ಕೇ ಬ್ರೇಕ್ ಹಾಕಲಾಗಿದೆ. ಆದರೆ, ತುಂಬಿ ತುಳುಕುವ ಜೈಲುಗಳಲ್ಲಿ ಸೋಂಕು ಹರಡದಂತೆ ನೋಡಿಕೊಳ್ಳುವುದು ಹೇಗೆ ? ಮಂಗಳೂರು ಸೇರಿ ರಾಜ್ಯದ ಬಹುತೇಕ ಜೈಲುಗಳಲ್ಲಿ ಅಲ್ಲಿನ ಕೈದಿಗಳನ್ನು ಕೊರೊನಾ ಸೋಂಕಿನಿಂದ ಪಾರು ಮಾಡುವುದೇ ದೊಡ್ಡ ಸವಾಲು. ಯಾಕಂದ್ರೆ, ದಿನವೂ ವಿವಿಧ ಅಪರಾಧ ಪ್ರಕರಣಗಳಲ್ಲಿ ಜೈಲು ಸೇರುತ್ತಿರುವ ಆರೋಪಿಗಳಿಂದಾಗಿ ಅಲ್ಲಿರುವ ಇತರ ಕೈದಿಗಳಿಗೂ ಸೋಂಕು ಹರಡುತ್ತಿದೆ. ಇದಕ್ಕಾಗಿ ಮಂಗಳೂರಿನ ಜೈಲಿನಲ್ಲಿ ಹಳೆ ಕೈದಿಗಳನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ನಗರದ ಕೊಡಿಯಾಲಬೈಲಿನ ಜಿಲ್ಲಾ ಕಾರಾಗೃಹದಲ್ಲಿ ಹಿಂದೆ 210 ಕೈದಿಗಳನ್ನು ಇಟ್ಟುಕೊಳ್ಳಲಷ್ಟೇ ಸಾಮರ್ಥ್ಯ ಇತ್ತು. ಎರಡು ವರ್ಷಗಳ ಹಿಂದೆ ಹೆಚ್ಚುವರಿ ಸೆಲ್ ನಿರ್ಮಿಸಿದ್ದು, ಇದರಿಂದಾಗಿ ಕೈದಿಗಳ ಸಾಮರ್ಥ್ಯ 250ಕ್ಕೆ ತಲುಪಿದೆ. ಆದರೆ, ಮಂಗಳೂರಿನ ಜೈಲಿನ ಸ್ಥಿತಿ ಯಾವತ್ತೂ ಹೌಸ್ ಫುಲ್. ಸದ್ಯ ಜೈಲಿನಲ್ಲೀಗ ಅಪರಾಧ ಸಾಬೀತಾದ ಮತ್ತು ವಿಚಾರಣಾಧೀನ ಕೈದಿಗಳು ಸೇರಿ 320 ಮಂದಿ ಇದ್ದಾರೆ. ಜೈಲಿನ ಸೆಲ್ ನಲ್ಲಿ ಸಾಮರ್ಥ್ಯಕ್ಕೆ ಮೀರಿ ಕೈದಿಗಳನ್ನು ತುಂಬಿಸುತ್ತಿರುವುದರಿಂದ ಕೊರೊನಾಗೆ ನಿಯಂತ್ರಣ ಕಷ್ಟವಾಗಿದೆ.
ಕಳೆದ ವರ್ಷ ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಮಂಗಳೂರು ಜೈಲಿನಲ್ಲಿ 39 ಮಂದಿ ಕೈದಿಗಳು ಮತ್ತು 14 ಮಂದಿ ಸಿಬಂದಿಗೆ ಸೋಂಕು ತಗಲಿತ್ತು. ಹೀಗಾಗಿ ಕೊರೊನಾ ಲಕ್ಷಣ ಕಂಡುಬಂದ ಕೂಡಲೇ ಕೈದಿಗಳನ್ನು ಪ್ರತ್ಯೇಕಿಸಿ ಕ್ವಾರಂಟೈನ್ ಮಾಡಲಾಗುತ್ತಿದೆ. ಕಳೆದ ವರ್ಷ ಜೈಲು ಭರ್ತಿಯಾಗಿದ್ದರಿಂದ 80ರಷ್ಟು ಕೈದಿಗಳನ್ನು ಬೆಳಗಾವಿ ಮತ್ತು ಬಳ್ಳಾರಿಯ ಜೈಲುಗಳಿಗೆ ಸ್ಥಳಾಂತರ ಮಾಡಲಾಗಿತ್ತು. ಆದರೆ, ಈ ಬಾರಿ ಮತ್ತೆ ಅಪರಾಧ ಪ್ರಕರಣಗಳು ಹೆಚ್ಚಿದ್ದರಿಂದ ನೂರಾರು ಮಂದಿ ಹೊಸತಾಗಿ ಜೈಲು ಸೇರಿದ್ದಾರೆ. ಇದರ ಜೊತೆ ಕೋರ್ಟ್ ಕಲಾಪವೂ ಇಲ್ಲದ ಕಾರಣ, ಜೈಲು ಸೇರಿದ ಕೈದಿಗಳು ಹೊರಬರಲಾಗದೆ, ಸಂಕಷ್ಟಕ್ಕೆ ಈಡಾಗುತ್ತಿದ್ದಾರೆ.
ಈ ರೀತಿ ಕೈದಿಗಳು ಸೋಂಕಿಗೆ ಒಳಗಾಗುವುದನ್ನು ತಪ್ಪಿಸಲು ಇದೀಗ ಹಲವಾರು ವರ್ಷಗಳಿಂದ ಜೈಲಿನಲ್ಲಿರುವ ಕೈದಿಗಳನ್ನು ಸನ್ನಡತೆ ಆಧಾರದಲ್ಲಿ ಪೆರೋಲ್ ಮೇಲೆ ಬಿಡುಗಡೆ ಮಾಡಲು ಜೈಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಇದಕ್ಕಾಗಿ ಮಂಗಳೂರು ಪೊಲೀಸ್ ಕಮಿಷನರ್, ಜಿಲ್ಲಾ ಎಸ್ಪಿ, ಜೈಲು ಸುಪರಿಡೆಂಟ್, ಪಬ್ಲಿಕ್ ಪ್ರಾಸಿಕ್ಯೂಟರ್ ಅವರನ್ನು ಒಳಗೊಂಡ ಜಿಲ್ಲಾ ಮಟ್ಟದ ಸಮಿತಿಯನ್ನು ಮಾಡಲಾಗಿದ್ದು, ಜಿಲ್ಲಾ ನ್ಯಾಯಾಧೀಶರ ಅನುಮತಿ ಪಡೆದು ಷರತ್ತು ಬದ್ಧ ಜಾಮೀನು ಅಥವಾ ಪೆರೋಲ್ ಮೂಲಕ ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಈಗಾಗ್ಲೇ 30ಕ್ಕೂ ಹೆಚ್ಚು ಮಂದಿಯನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಜೈಲು ಸುಪರಿಡೆಂಟ್ ಚಂದನ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ಹೀಗಿದ್ದರೂ, ಜೈಲಿನಲ್ಲೀಗ 329 ಮಂದಿ ಕೈದಿಗಳಿದ್ದು ಕೊರೊನಾ ಕಾರಣ ಒಂದಷ್ಟು ಮಂದಿಯನ್ನು ಖಾಲಿ ಇರುವ ಜೈಲುಗಳಿಗೆ ಸ್ಥಳಾಂತರಿಸಲು ಯೋಜಿಸಲಾಗಿದೆ. ಈಗ ಹೇಗಿದ್ದರೂ, ಕೈದಿಗಳನ್ನು ಕೋರ್ಟಿಗೆ ಹಾಜರುಪಡಿಸುವ ಅಗತ್ಯ ಇರುವುದಿಲ್ಲ. ವಿಡಿಯೋ ಕಾನ್ಫರೆನ್ಸ್ ಮೂಲಕ ಕೈದಿಗಳ ಹಾಜರಾತಿ ತೋರಿಸುವುದರಿಂದ ದೂರದ ಜೈಲಿನಲ್ಲಿದ್ದರೂ, ಕೋರ್ಟ್ ಕಲಾಪಕ್ಕೆ ತೊಂದರೆ ಆಗುವುದಿಲ್ಲ ಎನ್ನುತ್ತಾರೆ, ಅಲ್ಲಿನ ಸಿಬಂದಿ.
ಜೈಲಿಗೆ ಹೊಸತಾಗಿ ಬರುವ 95 ಶೇಕಡಾ ಮಂದಿಯಲ್ಲಿ ಸೋಂಕು ಇರುತ್ತದೆ. ಜೈಲಿಗೆi ಸೇರಿಸಿಕೊಳ್ಳುವಾಗಲೇ ಆರೋಪಿಗಳನ್ನು ರಾಪಿಡ್ ಟೆಸ್ಟ್ ಮೂಲಕ ಪರೀಕ್ಷೆ ಮಾಡಲಾಗುತ್ತದೆ. ಅದರಲ್ಲಿ ನೆಗೆಟಿವ್ ಬಂದರೂ, ಪ್ರತ್ಯೇಕ ಇರಿಸಲಾಗುತ್ತದೆ. ಸ್ವಾಬ್ ಪರೀಕ್ಷೆಯ ವರದಿ ಎರಡು ದಿನ ತಡವಾಗುವುದರಿಂದ ಈ ಸಂದರ್ಭದಲ್ಲಿ ಮತ್ತೊಬ್ಬರಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದಾಗಿ ಜೈಲಿನಲ್ಲಿ ಸೋಂಕು ಹರಡದಂತೆ ನೋಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಇದಲ್ಲದೆ, ಜೈಲಿನಲ್ಲಿ ಪ್ರತ್ಯೇಕ ಡಾಕ್ಟರ್ ಕೂಡ ಇದ್ದು ಸಕಾಲದಲ್ಲಿ ಚಿಕಿತ್ಸೆ ನೀಡುವುದರಿಂದ ಸೋಂಕಿನ ಬಗ್ಗೆ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ ಎಂದು ಚಂದನ್ ಪಾಟೀಲ್ ತಿಳಿಸಿದ್ದಾರೆ. ಈಗಾಗ್ಲೇ ಜಿಲ್ಲಾಡಳಿತದಿಂದ ಮಂಗಳೂರು ಜೈಲಿನ ಕೈದಿಗಳು ಮತ್ತು ಸಿಬಂದಿಗೆ ಕಳೆದ ವಾರ ಕೊರೊನಾ ಲಸಿಕೆ ನೀಡಲಾಗಿದೆ ಎನ್ನುವ ಮಾಹಿತಿಯನ್ನು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ನೀಡಿದ್ದಾರೆ.
Covid scare Mangalore Jail Authorities consider the transfer of inmates to other districts as the Jail is overcrowded and to control the spread of Covid-19. The authorities are planning to shift inmates on interim bail or parole after 50 jail inmates and staff tested covid positive.
18-01-25 05:05 pm
Bangalore Correspondent
ಗದಗ ; ಪ್ರೀತಿಸಲು ಪೀಡಿಸುತ್ತಿದ್ದ ಇಬ್ಬರು ಯುವಕರು,...
16-01-25 05:30 pm
Sp Belagavi, Minister Laxmi Hebbalkar car acc...
15-01-25 09:17 pm
ಮುಡಾ ಪ್ರಕರಣ ; ಸಿಬಿಐ ತನಿಖೆ ಕೋರಿದ್ದ ಅರ್ಜಿ ಜ.27ಕ...
15-01-25 08:22 pm
Dolly Chaiwala, Mangalore; ಅಮೆರಿಕದ ಬಿಲ್ ಗೇಟ್ಸ...
15-01-25 06:37 pm
18-01-25 06:20 pm
HK News Desk
Vijay Kiran Anand 2025: ಮಹಾ ಕುಂಭ ಮೇಳದ ಮುಖ್ಯ ಉ...
16-01-25 09:01 pm
Actor Saif Ali Khan attack stabbed: ಬಾಲಿವುಡ್...
16-01-25 04:24 pm
Bonnie Blue: 12 ಗಂಟೆಯಲ್ಲಿ 1,000ಕ್ಕೂ ಅಧಿಕ ಪುರು...
15-01-25 10:51 pm
Mallikarjun Kharges, L N T chairman: ಕಾಂಗ್ರೆಸ...
15-01-25 10:06 pm
18-01-25 09:27 pm
Mangalore Correspondent
Mangalore Dinesh Gundu Rao, belthandy: ತಾಲೂಕು...
18-01-25 06:16 pm
CM Siddaramaiah, multicultural fest, Mangalor...
17-01-25 11:10 pm
Mangalore court, Rape, Crime: ಇನ್ಸ್ಟಾಗ್ರಾಮ್ ನ...
17-01-25 10:58 pm
Ullal News, Mangalore: ಸೋಮೇಶ್ವರ ; ಬಾಡಿಗೆ ಮನೆಯ...
17-01-25 10:50 pm
19-01-25 12:13 pm
HK News Desk
Mangalore Kotekar bank robbery, Update, Crime...
18-01-25 10:47 pm
Sullia, Mangalore crime: ಸುಳ್ಯ ; ಕುಡಿದ ಅಮಲಿನಲ...
18-01-25 10:28 am
Kotekar Bank Robbery, Latest Update, Mangalor...
17-01-25 07:58 pm
Kotekar Bank Robbery, Mangalore Crime; ಬೀದರ್...
17-01-25 03:02 pm