ಬ್ರೇಕಿಂಗ್ ನ್ಯೂಸ್
03-06-21 04:19 pm Mangalore Correspondent ಕರಾವಳಿ
ಮಂಗಳೂರು, ಜೂನ್ 3: ಬಾಲಿವುಡ್ ನಟ ಸೋನು ಸೂದ್ ತಮ್ಮ ಚಾರಿಟಿಯಿಂದ ಕೊರೊನಾ ಸೋಂಕಿತರ ನೆರವಿಗೆ ಮುಂದಾಗಿದ್ದಾರೆ. ಕಳೆದ ಬಾರಿ ವಲಸೆ ಕಾರ್ಮಿಕರು ನಡೆದುಕೊಂಡೇ ಉತ್ತರ ಭಾರತಕ್ಕೆ ಹೊರಟು ನಿಂತಾಗ, ದಾರಿಮಧ್ಯೆ ಊಟ, ವಸತಿಯ ವ್ಯವಸ್ಥೆ ಮಾಡಿ ಗಮನಸೆಳೆದಿದ್ದರು. ಈ ಬಾರಿ ಸೋಂಕಿತರಿಗೆ ಆಮ್ಲಜನಕದ ಅಗತ್ಯ ಕಂಡುಬಂದಿದ್ದರಿಂದ ಸೋನು ಸೂದ್ ಮಹಾರಾಷ್ಟ್ರ, ಕರ್ನಾಟಕ ಸೇರಿ ದೇಶದ ವಿವಿಧ ಕಡೆ ಆಮ್ಲಜನಕದ ಪೂರೈಕೆಗೆ ಮುಂದಾಗಿದ್ದಾರೆ.
ಕರ್ನಾಟಕದಲ್ಲಿ ರೈಲ್ವೇ ಪೊಲೀಸರ ನೆರವಿನಲ್ಲಿ ಸೋನು ಸೂದ್ ಫೌಂಡೇಶನ್ನಿಂದ ಆಮ್ಲಜನಕದ ಸಿಲಿಂಡರ್ ಪೂರೈಕೆ ಮಾಡಲಾಗುತ್ತಿದೆ. ರೈಲ್ವೇ ಪೊಲೀಸ್ ಎಡಿಜಿಪಿ ಭಾಸ್ಕರ ರಾವ್ ಸಹಕಾರದಲ್ಲಿ ರಾಜ್ಯದ 18 ಕಡೆ ಆಮ್ಲಜನಕದ ವಿತರಣೆಗೆ ಸ್ಟೇಶನ್ ಮಾಡಲಾಗಿದೆ. ಮಂಗಳೂರು ಸೆಂಟ್ರಲ್ ರೈಲ್ವೇ ಸ್ಟೇಶನ್ನಲ್ಲಿರುವ ರೈಲ್ವೇ ಪೊಲೀಸ್ ಠಾಣೆಗೆ ಇಂದು ಸೋನು ಸೂದ್ ಫೌಂಡೇಶನ್ ವತಿಯಿಂದ 20 ಸಿಲಿಂಡರ್ ಗಳನ್ನು ಪೂರೈಕೆ ಮಾಡಲಾಗಿದೆ. ಏಳು ಸಾವಿರ ಲೀಟರ್ ಸಾಮರ್ಥ್ಯದ ಹತ್ತು ಸಿಲಿಂಡರ್ ಮತ್ತು ಒಂದು ಸಾವಿರ ಲೀಟರಿನ ಹತ್ತು ಸಿಲಿಂಡರ್ ಒಟ್ಟು 80 ಸಾವಿರ ಲೀಟರ್ ಆಮ್ಲಜನಕವನ್ನು ಸಂಗ್ರಹ ಮಾಡಲಾಗಿದೆ.



ಕರ್ನಾಟಕದಲ್ಲಿ ಆಕ್ಸಿಜನ್ ಸಿಲಿಂಡರ್ ವಿತರಣೆಯ ಹೊಣೆಯನ್ನು ಬೆಂಗಳೂರಿನ ಸ್ವಾಗ್ ಬೈಕರ್ಸ್(Swag Bykers) ಸಂಸ್ಥೆ ಹೊತ್ತುಕೊಂಡಿದೆ. ಸೋನು ಸೂದ್ ಫೌಂಡೇಶನ್ ಜೊತೆಗೆ ಒಪ್ಪಂದ ಮಾಡಿಕೊಂಡಿರುವ ಸ್ವಾಗ್ ಸಂಸ್ಥೆಯವರು, ಆಯಾ ಕೇಂದ್ರಗಳಿಂದ ತುರ್ತು ಪರಿಸ್ಥಿತಿಯಲ್ಲಿ ತಮ್ಮದೇ ಸಿಬಂದಿ ಮೂಲಕ ಸಿಲಿಂಡರ್ ಪೂರೈಕೆ ಮಾಡಲಿದ್ದಾರೆ. ವಿಶೇಷ ಅಂದ್ರೆ, ಸೋನು ಸೂದ್ ಫೌಂಡೇಶನ್ ವತಿಯಿಂದ ಕೊಡಮಾಡುವ ಆಮ್ಲಜನಕವನ್ನು ನೇರವಾಗಿ ಜಾಲತಾಣದಲ್ಲಿಯೇ ಪಡೆಯಬಹುದು. ಟ್ವಿಟರ್, ಫೇಸ್ಬುಕ್ ಅಥವಾ ಫೌಂಡೇಶನ್ನಿನ ಸಹಾಯವಾಣಿ ಸಂಖ್ಯೆಗೆ ಫೋನ್ ಮಾಡಿದರೆ, ತುರ್ತಾಗಿ ಸ್ಪಂದಿಸಿ ಆಮ್ಲಜನಕದ ಪೂರೈಕೆ ಮಾಡಲಾಗುವುದು ಎಂದು ಸಂಸ್ಥೆಯ ಸಿಬಂದಿ ಹೇಳಿಕೊಂಡಿದ್ದಾರೆ.




ಮಂಗಳೂರಿನ ಆಮ್ಲಜನಕ ಸ್ಟೇಶನ್ನಿಂದ 80 ಕಿಮೀ ವ್ಯಾಪ್ತಿಯಲ್ಲಿ ಯಾವುದೇ ಕುಗ್ರಾಮಕ್ಕೆ ಬೇಕಾದ್ರೂ ಆಮ್ಲಜನಕ ಪೂರೈಕೆ ಮಾಡುತ್ತೇವೆ. ಆಮ್ಲಜನಕದ ಅಗತ್ಯ ಇರುವ ಬಗ್ಗೆ ಫೋನ್ ಮಾಡಿದ ಕೂಡಲೇ ನಮ್ಮ ತಜ್ಞರ ತಂಡ, ಆ ವ್ಯಕ್ತಿಯ ಬಗ್ಗೆ ಮಾಹಿತಿ ಪಡೆದು ಆಮ್ಲಜನಕದ ಅಗತ್ಯ ಇದೆಯೇ ಎನ್ನುವ ಬಗ್ಗೆ ದೃಢಪಡಿಸುತ್ತದೆ. ಅಲ್ಲದೆ, ಎಷ್ಟು ಕೇಜಿ ಆಮ್ಲಜನಕ ಬೇಕು ಎನ್ನುವ ಬಗ್ಗೆಯೂ ಸ್ಟೇಶನ್ನಿಗೆ ಮಾಹಿತಿ ನೀಡುತ್ತದೆ. ಆಕ್ಸಿಜನ್ ಸಿಲಿಂಡರನ್ನು ಹೇಗೆ ಬಳಕೆ ಮಾಡಬೇಕು ಎನ್ನುವುದರ ಬಗ್ಗೆ ಪೊಲೀಸರಿಗೆ ಮತ್ತು ಸಿಬಂದಿಗೆ ತರಬೇತಿ ನೀಡಿದ್ದೇವೆ ಎಂದು ಸ್ವಾಗ್ ಸಂಸ್ಥೆಯ ಅಮಿತ್ ಪುರೋಹಿತ್ ಹೇಳಿದ್ದಾರೆ.


ಸ್ವಾಗ್ ಸಂಸ್ಥೆಯ ಪಾಲುದಾರರಾದ ಅಮಿತ್ ಪುರೋಹಿತ್ ಮತ್ತು ಅಜಯ್ ಪ್ರತಾಪ್ ಸಿಂಗ್ ಮಂಗಳೂರಿನ ಸೆಂಟ್ರಲ್ ರೈಲ್ವೇ ಸ್ಟೇಶನ್ನಿಗೆ ಆಗಮಿಸಿ ಆಮ್ಲಜನಕದ ಪೂರೈಕೆ ಮತ್ತು ವಿತರಣಾ ಜಾಲ ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದ್ದಾರೆ. ಪೊಲೀಸರಿಗೂ ಪ್ರಾತ್ಯಕ್ಷಿಕೆ ನೀಡಿದ್ದು, ಆಮ್ಲಜನಕ ಅಗತ್ಯ ಕಂಡುಬಂದರೇ ವ್ಯಕ್ತಿಯೇ ಸಿಲಿಂಡರಿನಿಂದ ನೇರವಾಗಿ ಹೇಗೆ ಪಡೆಯಬಹುದು ಎನ್ನುವ ಬಗ್ಗೆ ಮಾಹಿತಿ ನೀಡಿದರು. ಆಮ್ಲಜನಕದ ಅಗತ್ಯ ಇದ್ದವರು ಕರ್ನಾಟಕದಲ್ಲಿ ಸೋನು ಫೌಂಡೇಶನ್ನಿನ ಸಹಾಯವಾಣಿ ಸಂಖ್ಯೆ (7069999916) ಕರೆ ಮಾಡಬಹುದು.
ಇನ್ನು ಹತ್ತು ದಿನದಲ್ಲಿ ಮತ್ತಷ್ಟು ಆಕ್ಸಿಜನ್ ಸಿಲಿಂಡರ್ ಮುಂಬೈನಿಂದ ಮಂಗಳೂರಿಗೆ ಬರಲಿದ್ದು ಸ್ವಾಗ್ ಸಂಸ್ಥೆಯಿಂದ ಬೈಕಿನಿಂದಲೇ ವಿವಿಧ ಕಡೆಗಳಿಗೆ ಆಕ್ಸಿಜನ್ ತಲುಪಿಸುವ ಕಾರ್ಯ ಮಾಡಲಾಗುವುದು ಎಂದು ಅಮಿತ್ ಪುರೋಹಿತ್ ಹೇಳಿದರು.
Real Hero Sonu Sood Provides free 20 Oxygen Cylinders to Mangalore in partnership with Swag Bikes. 7000 litres of 10 cylinders and 1000 litres of 10 Cylinders are been sent to Railway Police station. Anyone in need of oxygen can dail to 7069999916.
18-12-25 12:37 pm
HK News Desk
ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು ; ಸದನಕ್ಕ...
17-12-25 10:30 pm
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
18-12-25 10:52 am
Mangalore Correspondent
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm