ಬ್ರೇಕಿಂಗ್ ನ್ಯೂಸ್
05-06-21 08:08 pm Mangaluru Correspondent ಕರಾವಳಿ
ಮಂಗಳೂರು, ಜೂನ್ 5: ನಗರದ ಸಿಟಿ ಸೆಂಟರ್ ಮಾಲ್ ಹಿಂಭಾಗದ ಕ್ಲಾಸಿಕ್ ಆರ್ಕೇಡ್ ಕಟ್ಟಡದ ಬಳಿ ಧರೆ ಕುಸಿದು ಬಿದ್ದಿದ್ದು, ಮೇಲ್ಭಾಗದಲ್ಲಿರುವ ಬೃಹತ್ ಅಪಾರ್ಟ್ಮೆಂಟ್ ಕಟ್ಟಡದ ಬಗ್ಗೆ ಆತಂಕ ವ್ಯಕ್ತವಾಗಿದೆ.
ಬಾವುಟ ಗುಡ್ಡೆಯ ಟಾಗೋರ್ ಪಾರ್ಕನ್ನು ಒತ್ತುವರಿ ಮಾಡಿಕೊಂಡು ಕಟ್ಟಲಾಗಿರುವ ಬೃಹತ್ ಅಪಾರ್ಟ್ಮೆಂಟ್ ಕಟ್ಟಡದ ಅಡಿಭಾಗದಲ್ಲಿ ಧರೆ ಕುಸಿದು ಬಿದ್ದಿದೆ. ಟಾಗೋರ್ ಪಾರ್ಕಿನ ಸುತ್ತುವರಿದು ಎದ್ದಿರುವ ಬಹುಮಹಡಿ ಕಟ್ಟಡ ಮಹಾನಗರ ಪಾಲಿಕೆಯ ನಿಯಮವನ್ನು ಉಲ್ಲಂಘಿಸಿ ಕಟ್ಟಿರುವ ಕಟ್ಟಡವಾಗಿದ್ದು, ಅದರ ಬುಡದಲ್ಲೇ ಧರೆ ಕುಸಿದಿರುವ ಘಟನೆ ನಡೆದಿದೆ.
ಧರೆ ಕುಸಿದು ಬಿದ್ದಿದ್ದರಿಂದ ಕೆಳಭಾಗದ ಕ್ಲಾಸಿಕ್ ಆರ್ಕೇಡ್ ಕಟ್ಟಡದ ಗ್ರಾಹಕರು ಮತ್ತು ಮಾಲಕರಿಗೆ ಸೇರಿದ ವಾಹನಗಳು ಜಖಂ ಗೊಂಡಿವೆ. ಸ್ಥಳಕ್ಕೆ ಮೇಯರ್ ಪ್ರೇಮಾನಂದ ಶೆಟ್ಟಿ, ಮೂಡಾ ಅಧ್ಯಕ್ಷ ರವಿಶಂಕರ ಮಿಜಾರ್ ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಆರು ವರ್ಷಗಳ ಹಿಂದೆ, ಕ್ಲಾಸಿಕ್ ಆರ್ಕೇಡ್ ಮೇಲ್ಭಾಗದಲ್ಲಿ ಬಹುಮಹಡಿಯ ಕಟ್ಟಡವನ್ನು ಕಟ್ಟಲಾಗಿದ್ದು, ಅದೊಂದು ವೇಳೆ ಕುಸಿದು ಬಿದ್ದರೆ ಅಡಿಭಾಗದಲ್ಲಿರುವ ಕ್ಲಾಸಿಕ್ ಆರ್ಕೇಡ್ ನಿವಾಸಿಗಳು ಅಪಾಯಕ್ಕೀಡಾಗಲಿದ್ದಾರೆ.
ಯಾವುದೇ ರೀತಿಯಲ್ಲೂ ಸೆಟ್ ಬ್ಯಾಕ್ ಇಲ್ಲದೆ, ಟಾಗೋರ್ ಪಾರ್ಕ್ ಜಾಗವನ್ನು ಒತ್ತುವರಿ ಮಾಡಿಕೊಂಡು ಕಟ್ಟಡವನ್ನು ಕಟ್ಟಲಾಗಿದ್ದು, ಒಂದು ಪಾರ್ಶ್ವದಲ್ಲಿ ಮಣ್ಣು ಕುಸಿದು ಬಿದ್ದಿದೆ. ಅಪಾಯ ಎದುರಿಸುತ್ತಿರುವ ಬಹುಮಹಡಿ ಕಟ್ಟಡದ ಅಪಾರ್ಟ್ಮೆಂಟ್ ನಲ್ಲಿ ಜನರ ವಸತಿ ಇಲ್ಲ. ವಿದೇಶದಲ್ಲಿರುವ ಮಂದಿ ಈ ಕಟ್ಟಡದಲ್ಲಿ ಮನೆಗಳನ್ನು ಖರೀದಿಸಿ ಇಟ್ಟುಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದು ಏನಿದ್ದರೂ, ಅಪಾಯಕಾರಿ ಎನ್ನುವ ಮಾತು ಸ್ಥಳೀಯರಿಂದ ಕೇಳಿಬಂದಿದೆ.
ಬೃಹತ್ ಕಟ್ಟಡದ ಸುತ್ತ ಸಾಕಷ್ಟು ಸ್ಥಳಾವಕಾಶ ಇರಬೇಕು ಮತ್ತು ಅನಾಹುತ ಎದುರಾದ ಸಂದರ್ಭದಲ್ಲಿ ಅಗ್ನಿಶಾಮಕ ವಾಹನಗಳು ತೆರಳುವಷ್ಟು ಸುತ್ತಲೂ ಸೆಟ್ ಬ್ಯಾಕ್ ಜಾಗ ಇರಬೇಕೆಂದು ನಿಯಮ ಇದೆ. ಆದರೆ, ಟಾಗೋರ್ ಪಾರ್ಕಿನ ಮುಂದಿನ ಬಹುಮಹಡಿಯ ಕಟ್ಟಡ ಎಲ್ಲ ನಿಮಯಗಳನ್ನು ಮುರಿದು ಮಹಾನಗರ ಪಾಲಿಕೆಯ ಭ್ರಷ್ಟ ಅಧಿಕಾರಿಗಳ ಕೃಪೆಯಿಂದಾಗಿ ನಿರ್ಮಾಣ ಆಗಿತ್ತು. ಇದೀಗ ಯಾವಾಗ ಬೀಳುತ್ತೋ ಅನ್ನುವ ಆತಂಕ ಎದುರಾಗಿದೆ.
The compound wall of the huge apartment building which is built unscientifically near Classique Arcade on K S Rao road in the city collapsed due to heavy rain of overnight on Saturday June 5. Many vehicles that were parked on the basement were badly damaged. Five vehicles owned by a TV channel were completely damaged. Huge LED screens, computers, laptops and other costly electronics goods were kept inside these vehicles. They are also damaged beyond recovery. The loss is estimated to run into several lac.
20-07-25 08:35 pm
Bangalore Correspondent
ವಾಲ್ಮೀಕಿ ನಿಗಮ ಹಗರಣ ರೀತಿಯಲ್ಲೇ ಮತ್ತೊಂದು ಹಗರಣ ;...
20-07-25 07:55 pm
Dharmasthala SIT Case, Parameshwar: ಎಸ್ಐಟಿ ರ...
20-07-25 04:24 pm
Rcb, Bangalore: ಪೊಲೀಸರು 'ಆರ್ಸಿಬಿ ಸೇವಕರು' ಎಂಬ...
19-07-25 03:05 pm
ಎಲ್ಲ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ತಲಾ 50 ಕೋಟಿ ಅ...
18-07-25 10:59 pm
20-07-25 04:47 pm
HK News Desk
Kerala Nurse Yemen; ನರ್ಸ್ ನಿಮಿಷಾ ಉಳಿವಿಗೆ ಗಲ್ಫ...
16-07-25 09:58 pm
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
21-07-25 04:03 am
Mangaluru Correspondent
Mangalore Bantwal Rural PSI, Suicide: ಬಂಟ್ವಾಳ...
20-07-25 10:35 pm
Dharmasthala Case, SIT, Pronab Mohanty: ಧರ್ಮಸ...
20-07-25 03:06 pm
MRPL, MP Brijesh Chowta, Mangalore: MRPL ಹಸಿರ...
19-07-25 10:01 pm
Mangalore, Derlakatte Raid: ನಿಯಮ ಉಲ್ಲಂಘಿಸಿ ಕಾ...
19-07-25 07:18 pm
20-07-25 08:52 pm
HK News Desk
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm
Fraudster Roshan Saldanha, Fraud: ಬಹುಕೋಟಿ ವಂಚ...
19-07-25 09:25 pm
Mangalore Conman Roshan Saldanha Arrest: ಚಾಲಾ...
19-07-25 12:26 pm
Mangalore crime, cyber crime: ಮುಂಬೈ ಪೊಲೀಸ್ ಅಧ...
18-07-25 12:40 pm