ಬ್ರೇಕಿಂಗ್ ನ್ಯೂಸ್
06-06-21 04:55 pm Sandesh, Puttur ಕರಾವಳಿ
Photo credits : Oneindia Kannada
ಮಂಗಳೂರು, ಜೂ.6: ಲಾಕ್ಡೌನ್ ಬಿಸಿ ಕೂಲಿ ಮಾಡಿ ಬದುಕುವ ಜನಸಾಮಾನ್ಯರಿಗೆ ಮಾತ್ರ ತಟ್ಟಿದ್ದಲ್ಲ. ಬೀದಿಯಲ್ಲಿ ಅಲೆಯುವ ನಾಯಿಗಳಿಗೂ ತಟ್ಟಿದೆ. ನಗರ ಭಾಗದಲ್ಲಿ ಅದೆಷ್ಟೋ ನಾಯಿಗಳು ಆಹಾರ ಇಲ್ಲದೆ ಬಸವಳಿಯುವ ಸನ್ನಿವೇಶ ನಿರ್ಮಾಣವಾಗಿದೆ. ಆದರೆ, ಪುತ್ತೂರು ಪೇಟೆಯಲ್ಲಿ ಮಾತ್ರ ಬೀದಿ ನಾಯಿಗಳಿಗೆ ಈ ಬಾರಿ ಲಾಕ್ಡೌನ್ ಬಿಸಿಯೇ ತಟ್ಟಿಲ್ಲ.
ಪುತ್ತೂರು ನಗರದಲ್ಲಿ 150ಕ್ಕೂ ಹೆಚ್ಚು ಬೀದಿ ನಾಯಿಗಳಿದ್ದು ಎಲ್ಲದಕ್ಕೂ ಸಮಯಕ್ಕೆ ಸರಿಯಾಗಿ ಆಹಾರ ಪೂರೈಕೆಯಾಗುತ್ತಿದೆ. ಹೌದು, ನಾಯಿಗಳಿಗೂ ಜೀವ ಇದೆ ಎಂದು ಕಾಲ ಕಾಲಕ್ಕೆ ಆಹಾರ ಪೂರೈಕೆ ಮಾಡುತ್ತಾ ಸುದ್ದಿಯಾದವರು ಪುತ್ತೂರು ನಗರಸಭೆಯ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು.
ಇವರು ತಮ್ಮ ಮನೆಯಲ್ಲೇ ನಾಯಿಗಳಿಗೆ ಆಹಾರವನ್ನು ತಯಾರಿಸುತ್ತಾರೆ. ದ್ವಿಚಕ್ರ ವಾಹನದಲ್ಲಿ ನಗರದ ತುಂಬೆಲ್ಲಾ ಓಡಾಡಿ ನಾಯಿಗಳಿಗೆ ಆಹಾರ ಪೂರೈಕೆಯನ್ನು ಮಾಡುತ್ತಿದ್ದಾರೆ. ಕಳೆದ 15 ವರ್ಷಗಳಿಂದ ಈ ಕಾಯಕವನ್ನು ರಾತ್ರಿ ಸಮಯದಲ್ಲಿ ಮಾಡುತ್ತಾ ಬಂದಿದ್ದ ರಾಜೇಶ್ ಬನ್ನೂರು ಲಾಕ್‌ಡೌನ್ ಕಾರಣದಿಂದಾಗಿ ನಾಯಿಗಳಿಗೆ ಆಹಾರ ನೀಡಲು ಸಂಜೆಯೇ ಹೊರಡುತ್ತಾರೆ. ರಾತ್ರಿ 11 ಗಂಟೆಯ ವರೆಗೆ ಆಹಾರ ನೀಡುತ್ತಾ ಮುಂದುವರಿಯುವ ಇವರ ದಾರಿಯನ್ನೇ ಕಾಯುವ ನೂರಾರು ನಾಯಿಗಳು ಪುತ್ತೂರಿನಲ್ಲಿವೆ.
ಬೀದಿ ನಾಯಿಗಳನ್ನು ಒಂದು ಕಡೆ ಸೇರಿಸಿ ಅವುಗಳಿಗೆ ಸರಿಯಾದ ವ್ಯವಸ್ಥೆಯನ್ನು ಕಲ್ಪಿಸಬೇಕೆಂಬ ಆಶಯವೂ ರಾಜೇಶ್ ಬನ್ನೂರು ಅವರದ್ದಾಗಿದೆ. ಅದಕ್ಕಾಗಿ ಸರಕಾರವೇನಾದರೂ ಭೂಮಿಗ ನೀಡಿದಲ್ಲಿ ಸಣ್ಣ ಮಟ್ಟಿನ ಶೆಡ್ ನಿರ್ಮಿಸಿ ಬೀದಿ ನಾಯಿಗಳನ್ನು ಸಾಕಬೇಕೆನ್ನುವ ಇವರ ಆಶಯವೂ ಇವರದ್ದಿದೆ.
ನಗರಸಭೆಯ ಸದಸ್ಯತ್ವದ ಜೊತೆಗೆ ಪತ್ರಿಕಾ ಏಜೆಂಟ್ ಆಗಿಯೂ ಕಾರ್ಯ ನಿರ್ವಹಿಸುತ್ತಿರುವ ರಾಜೇಶ್ ಬನ್ನೂರು ಅವರ ಶ್ವಾನ ಪ್ರೇಮಕ್ಕೆ ಪುತ್ತೂರಿನ ಎರಡು ಹೊಟೇಲ್ ಗಳು ಹಾಗೂ ಇಬ್ಬರು ಮುಸ್ಲಿಂ ಬಂಧುಗಳು ತಿಂಡಿ ಮತ್ತು ಇತರ ರೂಪದಲ್ಲಿ ಸಹಕಾರ ನೀಡುತ್ತಿದ್ದಾರೆ.
Luckily more than 150 street dogs of the town have a human being who takes care of them. They get food on time. The person who loves these street canines is none other than Rajesh Bannur, former president of Puttur town municipality. He was the member of town municipality for 20 long years.
26-11-24 10:46 pm
Bangalore Correspondent
Shivamogga, Monkey fever, Dinesh Gundu Rao: ಮ...
26-11-24 10:23 pm
BJP, Vijayendra: ಉಪ ಚುನಾವಣೆ ಸೋಲು ; ಪಕ್ಷದ ಕಾರ್...
26-11-24 06:56 pm
MLA Gaviyappa, Congress: ಗ್ಯಾರಂಟಿ ಸ್ಕೀಂನಿಂದಾಗ...
26-11-24 06:11 pm
Davanagere News, Heart Attack: ಗಂಡ ಹೃದಯಾಘಾತಕ್...
26-11-24 11:52 am
27-11-24 02:00 pm
HK News Desk
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
27-11-24 11:04 pm
Mangalore Correspondent
Muneer Katipalla, Mangalore, Anupam Agarwal;...
27-11-24 09:36 pm
Dr Chinnappa Gowda, Mangalore: 25 ಕೋಟಿ ವ್ಯಯಿಸ...
27-11-24 08:50 pm
Mangalore MP Captain Brijesh Chowta, Chouhan...
27-11-24 08:39 pm
Mangalore News: ಬ್ರಿಟಿಷರ ಕಾಲದ ಜಿಲ್ಲಾಧಿಕಾರಿ ಕಚ...
27-11-24 08:28 pm
27-11-24 03:36 pm
HK News Desk
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm