ಬ್ರೇಕಿಂಗ್ ನ್ಯೂಸ್
06-06-21 09:17 pm Mangaluru Correspondent ಕರಾವಳಿ
ಉಳ್ಳಾಲ, ಜೂ.6: ಹಳೆ ದ್ವೇಷದಲ್ಲಿ ಉಳ್ಳಾಲ ಪೊಲೀಸರು ತನಗೆ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿ ಉಳ್ಳಾಲದ ಯುವಕನೋರ್ವ ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾನೆ.
ಉಳ್ಳಾಲದ ಮುಕ್ಕಚ್ಚೇರಿ ನಿವಾಸಿ ಶವ್ವನ್ (25) ತನಗೆ ಉಳ್ಳಾಲ ಪೊಲೀಸರಿಂದ ದೌರ್ಜನ್ಯ ನಡೆದಿದೆ ಎಂದು ದೂರಿದ ಯುವಕ. ಶವ್ವಾನ್ ಸಹೋದರ ಸಫ್ವಾನ್ ವಿಚಾರದಲ್ಲಿ ಮಾಹಿತಿ ಪಡೆಯಲೆಂದು ಉಳ್ಳಾಲದ ಇನ್ ಲ್ಯಾಂಡ್ ಪ್ಲಾಟಿನ ಆರನೇ ಮಹಡಿಗೆ ಕರೆಸಿಕೊಂಡಿದ್ದ ಪೊಲೀಸ್ ಸಿಬಂದಿ ರಂಜಿತ್ ಹಾಗೂ ಮತ್ತೊಬ್ಬ ಪೊಲೀಸ್ ಕಾನ್ ಸ್ಟೇಬಲ್ ಏಕಾಏಕಿ ನನ್ನನ್ನು ಹಿಡಿದು ಥಳಿಸಿದ್ದಾರೆ. ಬಳಿಕ ಅಲ್ಲಿಗೆ ಉಳ್ಳಾಲ ಠಾಣೆ ಎಸ್ಸೈ ಪ್ರದೀಪ್ ಅವರನ್ನು ಕರೆಸಿಕೊಂಡಿದ್ದು ಅವರು ಕೂಡಾ ನನಗೆ ಥಳಿಸಿದ್ದು ಬಳಿಕ ನನ್ನ ಮೊಬೈಲ್ ಫೋನ್ ಕಿತ್ತುಕೊಂಡು ವಿಚಾರಣೆಗೆಂದು ಠಾಣೆಗೆ ಕರೆದುಕೊಂಡು ಬಂದಿದ್ದಾರೆ.
ನಿನ್ನ ತಮ್ಮ ಸಫ್ವಾನ್ ಎಲ್ಲಿದ್ದಾನೆ, ಅವನನ್ನು ಕೂಡಲೇ ಠಾಣೆಗೆ ಕರೆದುಕೊಂಡು ಬರಬೇಕು, ನೀವು ಇಬ್ಬರು ಸೇರಿ, ನಮ್ಮ ಪೊಲೀಸ್ ಜೀಪಿಗೆ ಕಲ್ಲು ಎಸೆದಿದ್ದೀರಿ ಎಂದು ನನಗೆ ಬೂಟು ಕಾಲಿನಿಂದ ಹೊಡೆದಿದ್ದಾರೆ ಎಂದು ಶವ್ವನ್ ಆರೋಪಿಸಿದ್ದಾರೆ. ಪೊಲೀಸ್ ಜೀಪಿಗೆ ಕಲ್ಲು ಎಸೆದ ಕುರಿತು ನನಗೆ ಮಾಹಿತಿ ಇಲ್ಲವೆಂದು ಪೊಲೀಸರಲ್ಲಿ ಪರಿಪರಿಯಾಗಿ ಬೇಡಿಕೊಂಡಿದ್ದೆ. ನಾನು ನಿರಪರಾಧಿ ಎಂದು ಅವರಿಗೆ ಗೊತ್ತಿದ್ದರೂ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ನನಗೆ ಹಲ್ಲೆ ನಡೆಸಿದವರಲ್ಲಿ ಎಸ್ಐ ಪ್ರದೀಪ್, ಸಿಬಂದಿ ಆಗಿರುವ ಅಕ್ಬರ್, ಸಾಗರ್, ರಂಜಿತ್, ರವಿ, ಮತ್ತೊಬ್ಬರು ಎಸ್ಐ ಹಾಗೂ ಇಬ್ಬರು ಪೊಲೀಸರಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನನ್ನನ್ನು ವಶಕ್ಕೆ ತೆಗೆದುಕೊಂಡ ದಿನ ಎಸ್ಐ ಪ್ರದೀಪ್ ನೇತೃತ್ವದ ಆರು ಮಂದಿ ಪೊಲೀಸರು ನಮ್ಮ ಮನೆಗೆ ನುಗ್ಗಿ ನನ್ನ ತಂದೆ, ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನನ್ನ ತಮ್ಮನನ್ನು ಬೆಳಗ್ಗೆ ಠಾಣೆಗೆ ಕರೆದುಕೊಂಡು ಬರುತ್ತೇನೆ ಎಂದು ತಂದೆ ಹೇಳಿದಾಗ ವಾಪಸ್ ಮರಳಿದ್ದಾರೆ. ನನ್ನ ತಮ್ಮ ಸಫ್ವಾನ್ ನನ್ನು ತಂದೆಯೇ ಮರುದಿವಸ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಒಪ್ಪಿಸಿದ್ದು ಬಳಿಕ ರಾತ್ರಿ 10.30 ಗಂಟೆಗೆ ನನ್ನನ್ನ ಬಿಟ್ಟಿರುತ್ತಾರೆ.
ಏನು ತಪ್ಪು ಮಾಡದ ನನಗೆ ಪೊಲೀಸರು ಹಲ್ಲೆ ನಡೆಸಿದ್ದಾರೆ. ನನ್ನ ಮೇಲೆ ನಡೆದ ಹಲ್ಲೆಯಿಂದಾಗಿ ನನಗೆ ಮಲಮೂತ್ರ ವಿಸರ್ಜನೆ ಕಷ್ಟವಾಗಿ ನೇತಾಜಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತೇನೆ. ಈ ಹಿಂದೆ ನನ್ನ ಮತ್ತೊಬ್ಬ ತಮ್ಮ ಸಾದಿನ್ ನನ್ನು ಪಾಸ್ಪೋರ್ಟ್ ವಿಚಾರದಲ್ಲಿ ಪೊಲೀಸರು ಅನ್ಯಾಯವೆಸಗಿದ್ದು ಹಳೆಯ ದ್ವೇಷವನ್ನು ಇಟ್ಟುಕೊಂಡು ನನ್ನ ಮೇಲೆ ಹಲ್ಲೆ ನಡೆಸಿರುತ್ತಾರೆ.
ಆತನಿಂದ ಪಾಸ್ಪೋರ್ಟ್ ಕಿತ್ತುಕೊಂಡಿದ್ದ ಪೊಲೀಸರು ಮತ್ತೆ ಕಮಿಷನರ್ ಮೂಲಕ ಪಾಸ್ಪೋರ್ಟ್ ಪಡೆದುಕೊಂಡಾಗ ನಿನ್ನನ್ನು ಎನ್ ಕೌಂಟರಲ್ಲಿ ಮುಗಿಸುತ್ತೇನೆ ಎಂದು ತಮ್ಮನನ್ನು ಬೆದರಿಸಿದ್ದರು. ನನ್ನ ಕುಟುಂಬದ ಮೇಲಿನ ಹಳೆಯ ದ್ವೇಷದಿಂದ ನಮ್ಮ ಮೇಲೆ ಇಂತಹ ಕೃತ್ಯ ನಡೆಸುತ್ತಿದ್ದು ಕಮಿಷನರ್ ಅವರು ಹಲ್ಲೆಗೈದ ಪೊಲೀಸರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸುತ್ತಿದ್ದೇವೆ ಎಂದು ಶವ್ವನ್ ವಿನಂತಿಸಿದ್ದಾರೆ.
25-year-old Youth has approached the Mangalore Commissioner of Police Shashi Kumar and filed a complaint alleging Police Atrocity by Ullal Police.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 06:14 pm
Mangalore Correspondent
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
Headline Karnataka, Social Campaigning, Manga...
11-09-25 11:34 am
ಧರ್ಮಸ್ಥಳ ಕೇಸ್ ; ವಿಚಾರಣೆ ಮುಗಿಸಿ ಸತ್ಯಕ್ಕೆ ಜಯ ಎನ...
10-09-25 10:50 pm
11-09-25 02:25 pm
HK STAFF
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm