ಬ್ರೇಕಿಂಗ್ ನ್ಯೂಸ್
10-06-21 05:51 pm Udupi Correspondent ಕರಾವಳಿ
ಉಡುಪಿ, ಜೂನ್ 10: ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ, ಉಡುಪಿ ಮೂಲದ ಶೇಖರ್ ಪದ್ದು ಬಂಗೇರಾ (74) ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ.
ಮುಂಬೈನಲ್ಲಿ ನೆಲೆಸಿದ್ದ ಶೇಖರ್ ಬಂಗೇರ ಇತ್ತೀಚೆಗೆ ತಮ್ಮ ಊರಿಗೆ ಬಂದಿದ್ದರು. ಉಡುಪಿ ತಾಲೂಕಿನ ಬಡಾನಿಡಿಯೂರು ಮೂಲದ ಬಂಗೇರ ಅವರಿಗೆ ಕೋವಿಡ್ ಸೋಂಕು ತಗಲಿ ಬ್ರಹ್ಮಾವರದ ಮಹೇಶ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಸಾವು ಕಂಡಿದ್ದಾರೆ.


ಚಿಕ್ಕಂದಿನಲ್ಲೇ ಮುಂಬೈಗೆ ತೆರಳಿ ಜೀವನ ರೂಪಿಸಿದ್ದ ಶೇಖರ್ ಬಂಗೇರ ಫುಟ್ಬಾಲ್ ಆಟದಲ್ಲಿ ಮಿಂಚು ಹರಿಸಿದ್ದರು. ಎಂಬತ್ತರ ದಶಕದಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದರಲ್ಲದೆ, ಗೋಲ್ ಕೀಪರ್ ಮತ್ತು ನಾಯಕನಾಗಿಯೂ ಗಮನ ಸೆಳೆದಿದ್ದರು. ನಿವೃತ್ತಿ ಬಳಿಕ ಮುಂಬೈನಲ್ಲಿ ನೆಲೆಸಿ ಹಲವು ಫುಟ್ಬಾಲ್ ಕ್ಲಬ್ ಗಳಿಗೆ ಕೋಚ್ ಆಗಿದ್ದರು.
ಮುಂಬೈನಲ್ಲಿ ಇದ್ದಾಗಲೇ ಶೇಖರ್ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು. ಕೆಲ ತಿಂಗಳ ಹಿಂದೆ ಮುಂಬೈನಿಂದ ಉಡುಪಿಗೆ ಆಗಮಿಸಿದ್ದರು. ಬಳಿಕ ಇಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿ ಬ್ರಹ್ಮಾವರದ ಮಹೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಶೇಖರ್ ಮೃತಪಟ್ಟಿದ್ದಾರೆ. ಉಡುಪಿ ನಗರದ ಮದರ್ ಆಫ್ ಸಾರೋಸ್ ಚರ್ಚ್ ನಲ್ಲಿ ಧರ್ಮಗುರುಗಳ ನೇತೃತ್ವದಲ್ಲಿ ವಿಧಿವತ್ತಾಗಿ ಅಂತಿಮ ಸಂಸ್ಕಾರ ಪ್ರಕ್ರಿಯೆ ನಡೆಯಿತು.
ವಿಕ್ಟೋರಿಯಾ ಫುಟ್ಬಾಲ್ ಅಕಾಡೆಮಿಯ ಟ್ರಸ್ಟಿ ಕ್ಲೈವ್ ನೋಲನ್ ಮಸ್ಕರೇನಸ್ ಮತ್ತು ತರಬೇತುದಾರ ಮಿಲನ್ ಸೇರಿದಂತೆ ಸಂಬಂಧಿಕರು ಮತ್ತು ಸೀಮಿತ ಸಂಖ್ಯೆಯ ಅಭಿಮಾನಿಗಳು ಅಂತ್ಯದ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.
Shekhar Paddu Bangera (74), former captain of the Indian football team, fell victim to a coronavirus infection on Thursday, June 10. Bangera had recently been infected with the disease. He was admitted into Mahesh Hospital Brahmavar for treatment. But the treatments failed to save his life.
08-09-26 02:24 pm
HK News Staffer
ಐಪಿಎಸ್ ಅಧಿಕಾರಿಗಳ ಭರ್ಜರಿ ವರ್ಗಾವಣೆ: ಮಂಗಳೂರು ಡಿಸ...
07-09-26 01:33 pm
ಜೆನ್ ಜೀಗಳಿಗೆ ಕಾಂಗ್ರೆಸ್ ಸಿದ್ಧಾಂತ, ಜಾತ್ಯತೀತ ಭಾವ...
05-09-26 04:53 pm
400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ; ಪ್ರತಿ ಹ...
02-09-26 05:06 pm
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
05-09-26 11:55 am
HK News Staffer
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
08-09-26 03:50 pm
HK News Staffer
Mangalore Jail Raid: ಮಂಗಳೂರು ಜೈಲಿಗೆ ತಡರಾತ್ರಿ...
08-09-26 09:50 am
ಪುತ್ತೂರು ಮಹಾಲಿಂಗೇಶ್ವರನ ಹೆಸರಲ್ಲಿ ಅವ್ಯವಹಾರ ; ಸಣ...
08-09-26 08:27 am
ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಎಸ್ಐ ಆರ್ ನೋಟಿಸ್ ! ಬ...
07-09-26 09:57 pm
ಬಿಜೆಪಿಯವರೇ ಭ್ರಷ್ಟಾಚಾರದಲ್ಲಿ ಕಂಠಪೂರ್ತಿ ಮುಳುಗಿದ್...
07-09-26 01:22 pm
08-09-26 02:26 pm
HK News Staffer
ಅಪಘಾತದಲ್ಲಿ ಗಾಯಗೊಂಡ ಚಿರತೆಯನ್ನು ರಕ್ಷಣೆ ಮಾಡಲು ಹೋ...
08-09-26 01:11 pm
ಅಪ್ರಾಪ್ತ ಬಾಲಕನ ಮೇಲೆ ಸರಣಿ ಲೈಂಗಿಕ ದೌರ್ಜನ್ಯ ; ವಿ...
08-09-26 11:17 am
ಆಸ್ಪತ್ರೆ ಸಿಬ್ಬಂದಿಗೆ ಪ್ರಜ್ಞೆ ತಪ್ಪಿಸಿ ಲೈಂಗಿಕ ದೌ...
07-09-26 08:56 pm
ದೆಹಲಿಯಲ್ಲಿ ಕಟ್ಟಡ ಕುಸಿತಕ್ಕೆ ಏಳು ಬಲಿ ; ನೆಲಮಹಡಿಯ...
07-09-26 07:44 pm