ಬ್ರೇಕಿಂಗ್ ನ್ಯೂಸ್
15-06-21 07:13 am Mangaluru Correspondent ಕರಾವಳಿ
ಮಂಗಳೂರು, ಜೂನ್ 15: ನಗರ ಹೊರವಲಯದ ಕಾವೂರು ಬಳಿಯ ಮರವೂರು ಸೇತುವೆ ಬಿರುಕು ಬಿಟ್ಟಿದೆ. ನಿರಂತರ ಮತ್ತು ಅವೈಜ್ಞಾನಿಕ ರೀತಿಯ ಮರಳುಗಾರಿಕೆಯಿಂದಾಗಿ ಮತ್ತೊಂದು ಸೇತುವೆ ಬಲಿಯಾಗಿದೆ.
ಮರವೂರಿನ ಫಲ್ಗುಣಿ ನದಿಯ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದನ್ನು ತಿಳಿದ ಕಾವೂರು ಪೊಲೀಸರು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಡೆ ಹಾಕಿದ್ದಾರೆ. ನಿನ್ನೆ ರಾತ್ರಿಯೇ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು ಬ್ಯಾರಿಕೇಡ್ ಹಾಕಿ, ರಸ್ತೆಯನ್ನು ಬಂದ್ ಮಾಡಲು ಸೂಚಿಸಿದ್ದಾರೆ. ಇದರಿಂದಾಗಿ ಮಂಗಳೂರು ನಗರದಿಂದ ಬಜ್ಪೆ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯ ಸಂಪರ್ಕ ಕಡಿತಗೊಂಡಿದೆ.
ಬಜ್ಪೆ ಏರ್ಪೋರ್ಟ್ ತೆರಳುವ ವಾಹನಗಳನ್ನು ಕಾವೂರು ಮೂಲಕ ಡೈವರ್ಟ್ ಮಾಡಲಾಗುತ್ತಿದೆ. ಕಾವೂರು ಕಡೆಯಿಂದ ಕಟೀಲು, ಬಜ್ಪೆಗೆ ತೆರಳುವ ವಾಹನಗಳಿಗೂ ಸಂಚಾರಕ್ಕೆ ಅವಕಾಶ ಇಲ್ಲ. ಮಂಗಳೂರು ನಗರ ಭಾಗದಿಂದ ಬಜ್ಪೆಗೆ ತೆರಳಬೇಕಿದ್ದರೆ ಇನ್ನು ಗುರುಪುರ ಸೇತುವೆಯ ಮೂಲಕ ಸುತ್ತು ಬಳಸಿ ತೆರಳಬೇಕಾಗಿದೆ. ನಗರದಿಂದ ಕೇವಲ ಹತ್ತು ನಿಮಿಷದಲ್ಲಿ ಏರ್ಪೋರ್ಟ್ ತಲುಪುತ್ತಿದ್ದ ಸಾವಿರಾರು ವಾಹನಗಳ ಸಂಚಾರಕ್ಕೆ ದೊಡ್ಡ ಬ್ರೇಕ್ ಬಿದ್ದಿದೆ.
ಅಕ್ರಮ ಮರಳುಗಾರಿಕೆಗೆ ಬಲಿ
ಮರವೂರು ಸೇತುವೆಯ ಪಕ್ಕದಲ್ಲಿ ನಿರಂತರವಾಗಿ ಮರಳುಗಾರಿಕೆ ನಡೆಸಲಾಗುತ್ತಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ ಡ್ಯಾಮ್ ಮತ್ತು ಸೇತುವೆಯ ಮಧ್ಯೆ ಡ್ರೆಜ್ಜರ್ ಇಟ್ಟು ಮರಳು ತೆಗೆಯುವ ಕಾರ್ಯ ನಡೆಯುತ್ತಿತ್ತು. ಸೇತುವೆಯ ಇಕ್ಕೆಲಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಸಿದ್ದು ಈಗ ಸೇತುವೆಯನ್ನೇ ಬಲಿಕೊಟ್ಟಿದೆ. ತುಂಬ ಗಟ್ಟಿಮುಟ್ಟಾಗಿದ್ದ ಸೇತುವೆಯ ಒಂದು ಪಾರ್ಶ್ವದಲ್ಲಿ ಬಿರುಕು ಕಾಣಿಸಿಕೊಂಡಿದ್ದು ತುಂಡಾಗಿ ಬೀಳಬಹುದೆಂಬ ಆತಂಕ ಎದುರಾಗಿದೆ. ಮರವೂರಿನಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿರುವುದು ಕಾವೂರು ಪೊಲೀಸರಿಗೂ ಗೊತ್ತಿತ್ತು. ಆದರೆ, ಆಡಳಿತ ಪಕ್ಷ ಬಿಜೆಪಿ ಮತ್ತು ಕಾಂಗ್ರೆಸಿನ ಪ್ರಭಾವಿಗಳೇ ಶಾಮೀಲಾಗಿದ್ದರಿಂದ ಯಾವುದೇ ಕ್ರಮ ಆಗಿರಲಿಲ್ಲ. ಎರಡು ವರ್ಷಗಳ ಹಿಂದೆ ಬಂಟ್ವಾಳ ತಾಲೂಕಿನ ಮುಲ್ಲರಪಟ್ಣ ಸೇತುವೆಯೂ ಮರಳುಗಾರಿಕೆಯ ಕಾರಣದಿಂದಾಗಿಯೇ ಕುಸಿದು ಬಿದ್ದಿತ್ತು.
ನದಿಗೆ ಸೇತುವೆ ಇರುವ 500 ಮೀಟರ್ ಅಂತರದಲ್ಲಿ ಮರಳು ತೆಗೆಯುವಂತಿಲ್ಲ ಎಂಬ ನಿಯಮ ಇದೆ. ಆದರೆ, ಮರವೂರು ಸೇತುವೆಯ ಬಳಿ ಈ ನಿಯಮಗಳನ್ನೇ ಗಾಳಿಗೆ ತೂರಲಾಗಿತ್ತು. ಈಗ ಮಳೆಗಾಲದ ಆರಂಭದಲ್ಲೇ ಸೇತುವೆಯಲ್ಲಿ ಬಿರುಕು ಕಾಣಿಸಿದ್ದು ಈ ಬಾರಿ ಲಾಕ್ಡೌನ್ ಮಧ್ಯೆಯೂ ಮೆಷಿನ್ ಮೂಲಕ ಮರಳು ಎತ್ತಿದ್ದರ ಪರಿಣಾಮ ಎನ್ನುವುದನ್ನು ಸ್ಥಳೀಯರೇ ಹೇಳುತ್ತಾರೆ. ಜಿಲ್ಲಾಧಿಕಾರಿಗಳೇ, ಬಿರುಕು ಬಿದ್ದ ಸೇತುವೆಯನ್ನು ದುರಸ್ತಿ ಪಡಿಸುವ ಕೆಲಸವನ್ನು ಸ್ಥಳೀಯ ಮರಳು ಕುಳಗಳಿಂದಲೇ ಮಾಡಿಸ್ತೀರಾ..?
Video:
Major Crack found in Maravoor Bridge in Mangalore. Airport Road has been closed and diverted. Illegal Sand Mining is the reason for the crack in the bridge.
26-11-24 10:46 pm
Bangalore Correspondent
Shivamogga, Monkey fever, Dinesh Gundu Rao: ಮ...
26-11-24 10:23 pm
BJP, Vijayendra: ಉಪ ಚುನಾವಣೆ ಸೋಲು ; ಪಕ್ಷದ ಕಾರ್...
26-11-24 06:56 pm
MLA Gaviyappa, Congress: ಗ್ಯಾರಂಟಿ ಸ್ಕೀಂನಿಂದಾಗ...
26-11-24 06:11 pm
Davanagere News, Heart Attack: ಗಂಡ ಹೃದಯಾಘಾತಕ್...
26-11-24 11:52 am
27-11-24 02:00 pm
HK News Desk
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
27-11-24 11:04 pm
Mangalore Correspondent
Muneer Katipalla, Mangalore, Anupam Agarwal;...
27-11-24 09:36 pm
Dr Chinnappa Gowda, Mangalore: 25 ಕೋಟಿ ವ್ಯಯಿಸ...
27-11-24 08:50 pm
Mangalore MP Captain Brijesh Chowta, Chouhan...
27-11-24 08:39 pm
Mangalore News: ಬ್ರಿಟಿಷರ ಕಾಲದ ಜಿಲ್ಲಾಧಿಕಾರಿ ಕಚ...
27-11-24 08:28 pm
27-11-24 03:36 pm
HK News Desk
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm