ಬ್ರೇಕಿಂಗ್ ನ್ಯೂಸ್
15-06-21 05:52 pm Mangalore Correspondent ಕರಾವಳಿ
ಉಳ್ಳಾಲ, ಜೂ.15: ಪೆಟ್ರೋಲ್ ಬೆಲೆ 100ರ ಗಡಿ ದಾಟುತ್ತಿದ್ದರೂ ಮೋದಿಯ ಅಂಧ ಭಕ್ತರು ಮಾತ್ರ ಪೆಟ್ರೋಲಿಗೆ 1000 ರೂಪಾಯಿ ಆದರೂ ಪೆಟ್ರೋಲ್ ಹಾಕಿಸುತ್ತೇವೆ. ಬಂಗುಡೆ, ಬೂತಾಯಿಗೆ ದುಬಾರಿ ಬೆಲೆ ತೆತ್ತು ಖರೀದಿಸುವವರಿಗೆ ಪೆಟ್ರೋಲ್ ಖರೀದಿ ಯಾಕೆ ಕಷ್ಟ ಎಂದು ಸಮರ್ಥಿಸುತ್ತಿದ್ದಾರೆ. ಇಂತವರಿಗೆ ಜನರು ತಕ್ಕ ಪಾಠ ಕಲಿಸಬೇಕೆಂದು ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಪೆಟ್ರೋಲ್, ಡೀಸೆಲ್ , ಗ್ಯಾಸ್ ಬೆಲೆಯೇರಿಕೆ ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರದ ಆಡಳಿತ ವೈಫಲ್ಯ ವಿರೋಧಿಸಿ ಮುಡಿಪು ಬ್ಲಾಕ್ ಕಾಂಗ್ರೆಸ್ ಮತ್ತು ಮುಡಿಪು ವಲಯ ಯುವ ಕಾಂಗ್ರೆಸ್ 100 ನಾಟೌಟ್ ಎಂಬ ಹೆಸರಲ್ಲಿ ಇಂದು ಮುಡಿಪು ಮತ್ತು ಸಾಂಬಾರ್ ತೋಟದ ಪೆಟ್ರೋಲ್ ಬಂಕ್ ಎದುರುಗಡೆ ನಡೆದ ವಿಭಿನ್ನ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರಗಳು ಯಾರಿಗೂ ಕಿವಿ ಕೊಡದೆ ಕೆಲವೇ ಕೆಲವರ ಹಿತದೃಷ್ಟಿ ಕಾಯುವ ಕೆಲಸ ನಡೆಸುತ್ತಿದೆ. ಇಂದು ನಾವು ಸರಕಾರದ ವಿರುದ್ಧ ಸಾಂಕೇತಿಕ ಪ್ರತಿಭಟನೆ ನಡೆಸಿದ್ದು ಮುಂದಿನ ದಿವಸಗಳಲ್ಲಿ ಉಗ್ರ ಪ್ರತಿಭಟನೆ ನಡೆಸುತ್ತೇವೆ. ಕೆಲವು ಅಂಧ ಭಕ್ತರು ಪೆಟ್ರೋಲ್ಗೆ 1000 ಆದರೂ ಖರೀದಿಸುತ್ತೇವೆ. ಪೆಟ್ರೋಲನ್ನ ಬಂಗುಡೆ ಭೂತಾಯಿಗೆ ಹೋಲಿಸಿ ಬಿಜೆಪಿ ಸರಕಾರದ ಧೋರಣೆಗಳನ್ನ ಸಮರ್ಥಿಸುವ ಕಾರ್ಯ ನಡೆಸುತ್ತಿದ್ದಾರೆ. ಕೊರೊನಾ ಸಂದಿಗ್ದ ಕಾಲದಲ್ಲಿಂದು ಮಕ್ಕಳ ವಿಧ್ಯಾಭ್ಯಾಸವೂ ಡೋಲಾಯಮಾನವಾಗಿದ್ದರೂ ರಾಜ್ಯ ಸರಕಾರವು ಮಾತ್ರ ನಾಯಕತ್ವ ಬದಲಾವಣೆಯ ದೊಂಬರಾಟದಲ್ಲಿ ಮುಳುಗಿದೆ. ಸರಕಾರದ ಜನವಿರೋಧಿ ಧೋರಣೆಗಳನ್ನು ಸಮರ್ಥಿಸುವ ಮೋದಿಯ ಅಂಧ ಭಕ್ತರಿಗೊಂದು ಜನಸಾಮಾನ್ಯರು ತಕ್ಕ ಪಾಠ ಕಲಿಸಬೇಕು. ನೋಟ್ ಅಮಾನ್ಯಗೊಂಡ ನಂತರ ದೇಶದ ಜನರು ಸಂಕಷ್ಟದ ಸರಮಾಲೆಯಲ್ಲೇ ಬದುಕುವಂತಾಗಿದೆ. ಗ್ಯಾಸ್ಗೆ 425 ರೂಪಾಯಿ ಇದ್ದದ್ದು 850 ಆಗಿದ್ದು, ಪೆಟ್ರೋಲ್ 100 ಗಡಿ ದಾಟಿದೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಡಿ.ಎಸ್ ಗಟ್ಟಿ ಮಾತನಾಡಿ ಬಡವರಿಗೊಂದು ಬೇರೆಯೇ ಪೆಟ್ರೋಲ್ ಬಂಕ್ ಮಾಡಿ ಕೊಡಿ. ಅಂಧ ಭಕ್ತರು ಶ್ರೀಮಂತರು ಅವರು 1000 ಕೊಟ್ಟು ಲೀಟರ್ ಪೆಟ್ರೋಲ್ ಹಾಕಿಸಲಿ ಎಂದು ಸರಕಾರವನ್ನ ಒತ್ತಾಯಿಸಿದರು. ಮಕ್ಕಳ ಶೈಕ್ಷಣಿಕ ಬದುಕಿನ ಬಗ್ಗೆಯೂ ಸರಕಾರಕ್ಕೆ ಚಿಂತನೆ ಇಲ್ಲ. ಅದೇ ಈ ಸ್ಥಿತಿಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ದೇಶಕ್ಕೆ ಬಿಜೆಪಿಯವರು ಬೆಂಕಿ ಹಾಕುತ್ತಿದ್ದರು. ಜನಸಾಮಾನ್ಯರಿಗೆ ಇವತ್ತು ತಾವುಗಳು ನೆಮ್ಮದಿಯಿಂದ ಬದುಕಲು ಯಾವ ಪಕ್ಷ ಅಧಿಕಾರಕ್ಕೆ ಬರಬೇಕೆಂದು ಮನವರಿಕೆಯಾಗಿದೆ. ಬಿಜೆಪಿ ನಾಯಕರು ಮನಮೋಹನ್ ಸಿಂಗ್ ನೇತೃತ್ವದ ಸರಕಾರವನ್ನು ಹೋಲಿಸಿ ನೋಡಿ ಎಂದು ಹೇಳಿದರು.
ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ಮುಡಿಪು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಮುಖಂಡರಾದ ನಾಸಿರ್ ನಡುಪದವು,ಪದ್ಮನಾಭ ನರಿಂಗಾನ, ಹೈದರ್ ಕೈರಂಗಳ, ಮುರಲೀಧರ ಶೆಟ್ಟಿ ಮೋರ್ಲ, ಸಿದ್ದಿಕ್ ಪಾರೆ, ಸೇವಾದಳದ ಸಮೀರ್,ಕುರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಣೇಶ್ ನಾಯಕ್, ಉಪಾಧ್ಯಕ್ಷೆ ಪ್ರೇಮಾ ಗಟ್ಟಿ, ನರಿಂಗಾನ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಜಿ. ಶೆಟ್ಟಿ, ಅರುಣ್ ಡಿಸೋಜ, ಮುಡಿಪು ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ನವಾಝ್ ನಡುಪದವು ಮೊದಲಾದವರು ಉಪಸ್ಥಿತರಿದ್ದರು.
Mangalore Fuel hike Ullal Block Congress protest at Mudipu as 100 knockout. The protest was held against the rising fuel prices that have crossed the ₹100-mark in Karnataka.
14-05-25 05:16 pm
Bangalore Correspondent
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
14-05-25 08:05 pm
Mangalore Correspondent
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
14-05-25 10:22 pm
HK News Desk
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm