ಬ್ರೇಕಿಂಗ್ ನ್ಯೂಸ್
20-06-21 04:58 pm Mangaluru Correspondent ಕರಾವಳಿ
ಮಂಗಳೂರು, ಜೂನ್ 20: ಸುಬ್ರಹ್ಮಣ್ಯ, ಧರ್ಮಸ್ಥಳ ದೇವಸ್ಥಾನಗಳಿಗೆ ಹೊರಜಿಲ್ಲೆಗಳಿಂದ ಜನರು ಬರುತ್ತಿರುವುದನ್ನು ನಿರ್ಬಂಧಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ. ಗಡಿ ಭಾಗದಲ್ಲಿ ಹೆಚ್ಚುವರಿ ಚೆಕ್ ಪೋಸ್ಟ್ ಸ್ಥಾಪಿಸುವ ಮೂಲಕ ಕಾರ್ಯಾಚರಣೆ ಆರಂಭಿಸಿದ್ದಾರೆ.
ಜೂನ್ 19ರ ಶನಿವಾರ ರಾತ್ರಿ ಒಂದರಲ್ಲೇ ಗುಂಡ್ಯ ಚೆಕ್ ಪೋಸ್ಟ್ ನಲ್ಲಿ 69 ವಾಹನಗಳನ್ನು ಪೊಲೀಸರು ಹಿಡಿದು ಹಿಂದಕ್ಕೆ ಕಳುಹಿಸಿದ್ದಾರೆ. ಕಾರಿನಲ್ಲಿ ಬರುತ್ತಿದ್ದ ಪ್ರಯಾಣಿಕರು ತಾವು ಮಂಗಳೂರಿಗೆ ವೈದ್ಯಕೀಯ ಕಾರಣಕ್ಕಾಗಿ ತೆರಳುತ್ತಿರುವುದಾಗಿ ಪೊಲೀಸರಲ್ಲಿ ನೆಪ ಹೇಳಿದ್ದಾರೆ. ಈ ಪೈಕಿ ಹೆಚ್ಚಿನ ವಾಹನಗಳು ಧರ್ಮಸ್ಥಳ, ಸುಬ್ರಹ್ಮಣ್ಯ ಕ್ಷೇತ್ರಗಳಿಗೆ ಬರುತ್ತಿದ್ದವು.
ರಾತ್ರಿ 10ರಿಂದ ನಸುಕಿನ ಮೂರು ಗಂಟೆಯ ನಡುವೆ ಪೊಲೀಸರು ಗುಂಡ್ಯ ಚೆಕ್ ಪೋಸ್ಟ್ ಒಂದರಲ್ಲೇ 69 ವಾಹನಗಳನ್ನು ಅಡ್ಡಗಟ್ಟಿದ್ದು ಅಲ್ಲಿಂದಲೇ ಹಿಂದಕ್ಕೆ ಕಳುಹಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರವೇಶ ಮಾಡುವ ಗಡಿಭಾಗದ ಎಲ್ಲ ಚೆಕ್ ಪೋಸ್ಟ್ ಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಚಾರ್ಮಾಡಿ, ಉಜಿರೆಯಲ್ಲೂ ಹೆಚ್ಚುವರಿ ಪೊಲೀಸರು ತಪಾಸಣೆ ನಡೆಸಲು ಆರಂಭಿಸಿದ್ದಾರೆ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಸೂಚನೆಯ ಮೇರೆಗೆ ಪೊಲೀಸರ ನಿಯೋಜನೆ ಮಾಡಲಾಗಿದೆ.
ಇತರ ಜಿಲ್ಲೆಗಳಲ್ಲಿ ಲಾಕ್ಡೌನ್ ಸಡಿಲಿಕೆ ಆಗಿರುವುದರಿಂದ ಕಳೆದ ಒಂದು ವಾರದಲ್ಲಿ ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದರು. ಹೀಗಾಗಿ ಜಿಲ್ಲಾಧಿಕಾರಿ ಈ ಬಗ್ಗೆ ಹೆಚ್ಚುವರಿ ಆದೇಶ ಹೊರಡಿಸಿದ್ದಾರೆ.
ವಾಹನ ಮುಟ್ಟುಗೋಲಿಗೆ ಕ್ರಮ
ಸುಬ್ರಹ್ಮಣ್ಯ, ಧರ್ಮಸ್ಥಳ ಸೇರಿದಂತೆ ಯಾವುದೇ ದೇವಸ್ಥಾನಗಳಿಗೂ ಭಕ್ತರಿಗೆ ಪ್ರವೇಶ ಇರುವುದಿಲ್ಲ. ಹೊರ ಜಿಲ್ಲೆಗಳಿಂದ ಭಕ್ತರು ವಾಹನಗಳಲ್ಲಿ ಬಂದರೆ ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕಲಾಗುವುದು. ಅಲ್ಲದೆ, ಭಕ್ತರ ಪ್ರವೇಶಕ್ಕೆ ಅನುಮತಿ ನೀಡಿರುವುದು ಕಂಡುಬಂದರೆ ಆಯಾ ದೇವಸ್ಥಾನಗಳ ಆಡಳಿತ ಸಮಿತಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮಸೀದಿ, ಚರ್ಚ್ ಗಳಿಗೂ ಇದೇ ನೀತಿ ಅನ್ವಯ ಆಗಲಿದೆ ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
With lockdown still in place and weekend curfew on, police have increased inspection of vehicles at district borders and other places to ensure that people do not travel unnecessarily. On an intervening night between Saturday, June 19 and Sunday, June 20, police inspected several vehicles at the Gundya check-post amidst reports that many tourists from other districts were arriving in Dakshina Kannada without a valid reason.
04-10-25 10:54 pm
Bangalore Correspondent
ಸ್ವತಃ ಕಾಂಗ್ರೆಸ್ ನಾಯಕರೇ ಸಿದ್ದು ಯಾವಾಗ ಸಿಎಂ ಪಟ್ಟ...
04-10-25 10:16 pm
ಮಹಾರಾಷ್ಟ್ರದ ಸಮುದ್ರದಲ್ಲಿ ಘೋರ ದುರಂತ ; ಬೆಳಗಾವಿಯ...
04-10-25 09:18 pm
Belagavi Heart Attack, SSLC: ಬೆಳಗಾವಿ ; SSLC ಓ...
04-10-25 07:22 pm
ಐಟಿ ನಗರಿ ಬೆಂಗಳೂರು 'ಸೈಬರ್ ಕ್ರೈಮ್' ಕ್ಯಾಪಿಟಲ್...
03-10-25 06:08 pm
04-10-25 04:45 pm
HK Staffer
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ನಿಲ್ಲಿಸದಿದ್ದರೆ ಭ...
03-10-25 09:09 pm
ಮಕ್ಕಳ ವಿಡಿಯೋ ಗೇಮ್ ನಲ್ಲೂ ಸೈಬರ್ ಅಪರಾಧ ; ಶಾಲಾ ಹಂ...
03-10-25 04:50 pm
04-10-25 10:29 pm
Mangalore Correspondent
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
04-10-25 02:57 pm
HK News Desk
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm