ಬ್ರೇಕಿಂಗ್ ನ್ಯೂಸ್
02-07-21 10:32 pm Giridhar Shetty, Mangaluru ಕರಾವಳಿ
ಮಂಗಳೂರು, ಜುಲೈ 2: ಮರವೂರಿನ ಅಣೆಕಟ್ಟಿಗೆ ಪಚ್ಚನಾಡಿಯ ಡ್ರೈನೇಜ್ ನೀರು ಶುದ್ಧೀಕರಣ ಘಟಕದಿಂದ ನೇರವಾಗಿ ಮಲಿನ ನೀರನ್ನು ಬಿಡುತ್ತಿರುವ ಬಗ್ಗೆ ಸ್ಥಳೀಯರು ಸಿಎಂ ಕಚೇರಿಗೆ ದೂರು ನೀಡಿದ್ದರು. ಈ ಬಗ್ಗೆ ಮಹಾನಗರ ಪಾಲಿಕೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆಂಬ ದೂರನ್ನು ಗಂಭೀರವಾಗಿ ಪರಿಗಣಿಸಿದ್ದ ಸಿಎಂ ಕಚೇರಿ ಅಧಿಕಾರಿಗಳು ಕೂಡಲೇ, ಈ ಬಗ್ಗೆ ಗಮನ ಹರಿಸುವಂತೆ ಮತ್ತು ಈ ರೀತಿಯ ಲೋಪಕ್ಕೆ ಕಾರಣವಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಮಹಾನಗರ ಪಾಲಿಕೆಗೆ ಸೂಚನೆ ನೀಡಿದ್ದರು.
ಕಳೆದ ಜೂನ್ 18ರಂದು ಸಿಎಂ ಕಚೇರಿಯಿಂದ ಮಂಗಳೂರು ಮಹಾನಗರ ಪಾಲಿಕೆಗೆ ಛಾಟಿ ಬೀಸಿದ ಆದೇಶ ಪತ್ರ ಬಂದಿದ್ದರೂ, ಈ ಬಗ್ಗೆ ಇಲ್ಲಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇನ್ನೂ ಎಚ್ಚತ್ತುಕೊಂಡಿಲ್ಲ. ರಾಜ್ಯದ ಮುಖ್ಯಮಂತ್ರಿ ಕಚೇರಿಯಿಂದ ಆದೇಶ ಬಂದರೂ, ಬಿಜೆಪಿ ಆಡಳಿತದಲ್ಲಿರುವ ಮಂಗಳೂರಿನ ಮಹಾನಗರ ಪಾಲಿಕೆ ಕುಡಿಯುವ ನೀರಿನ ವಿಚಾರದಲ್ಲಿಯೂ ನಿರ್ಲಕ್ಷ್ಯ ವಹಿಸಿದೆಯೇ ಎನ್ನುವ ಅನುಮಾನ ಮೂಡುವಂತಾಗಿದೆ.
ಈ ಬಗ್ಗೆ ಮಂಗಳೂರು ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ ಬಳಿ ಕೇಳಿದಾಗ, ಸಿಎಂ ಕಚೇರಿಯಿಂದ ಪತ್ರ ಬಂದಿರುವುದು ಗಮನಕ್ಕೆ ಬಂದಿದೆ. ಅದರ ಬಗ್ಗೆ ಕಮಿಷನರ್ ಜೊತೆ ಚರ್ಚೆ ನಡೆಸಿದ್ದೇವೆ. ಆದರೆ, ಪಚ್ಚನಾಡಿಯ ಸ್ಥಾವರದಲ್ಲಿ ಈಗ ಸರಿಯಾಗಿದೆ, ಮಲಿನ ನೀರು ಬಿಡುತ್ತಿಲ್ಲ ಎಂದು ಅಲ್ಲಿನ ಕಾರ್ಪೊರೇಟರ್ ತಿಳಿಸಿದ್ದಾರೆ. ಆದರೂ ಮಲಿನ ನೀರನ್ನು ಅಣೆಕಟ್ಟು ಸೇರದಂತೆ ಮಾಡಲು ಯೋಜನೆ ಮಾಡಿದ್ದೇವೆ. ಏನಿದ್ದರೂ ನಾನು ಅಲ್ಲಿಗೆ ಖುದ್ದಾಗಿ ಭೇಟಿ ನೀಡಿ ವಾಸ್ತವ ತಿಳಿಯುತ್ತೇನೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಪಾಲಿಕೆ ಕಮಿಷನರ್ ಶ್ರೀಧರ್ ಬಳಿ ಕೇಳಿದಾಗ, ನಾವು ಅಲ್ಲಿ ಚೆಕ್ ಮಾಡಿದ್ದೇವೆ. ಆ ರೀತಿ ನೀರು ಬಿಡುತ್ತಾ ಇರುವುದು ಕಂಡುಬಂದಿಲ್ಲ. ಮಲಿನ ನೀರನ್ನು ನೇರವಾಗಿ ಬಿಡುತ್ತಿದ್ದರೆ, ಖಂಡಿತವಾಗಿ ಅದರ ಬಗ್ಗೆ ಕ್ರಮ ಕೈಗೊಳ್ತೇನೆ. ಈ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿ ಪಡೆದಿದ್ದೇನೆ ಎಂದು ಹೇಳಿದ್ದಾರೆ.
ಕೊನೆಗೆ, ಪಚ್ಚನಾಡಿ ಭಾಗದ ಕಾರ್ಪೊರೇಟರ್ ಸಂಗೀತಾ ನಾಯಕ್ ಬಳಿ ಮಾಹಿತಿ ಕೇಳಿದಾಗ, ಆ ರೀತಿಯ ಸಮಸ್ಯೆ ಇದ್ದುದು ಸತ್ಯ. ಆದರೆ ನಾನು ಆಯ್ಕೆಯಾಗಿ ಬಂದ ಬಳಿಕ ಸರಿ ಮಾಡಿದ್ದೇನೆ. ಎಸ್ ಟಿಪಿ ಘಟಕದ ಗುತ್ತಿಗೆಯನ್ನು ಬದಲಿಸಲಾಗಿದೆ. ಅಲ್ಲಿರುವ ಪಂಪ್ ಗಳನ್ನು ಸರಿ ಮಾಡಲಾಗಿದೆ. ಜನರೇಟರ್ ಪ್ರಾಬ್ಲಂ ಸರಿ ಮಾಡಿದ್ದೇವೆ. ಆ ರೀತಿ ಈಗ ನೀರು ಬಿಡುತ್ತಾ ಇಲ್ಲ ಎಂದಿದ್ದಾರೆ.
ಈ ಮೂವರೂ ತಮಗೆ ತೋಚಿದ ರೀತಿ ಹೇಳುತ್ತಿದ್ದಾರೆ ಎನ್ನೋದು ಇವರ ಹೇಳಿಕೆಯಿಂದಲೇ ತಿಳಿದುಬರುತ್ತಿದೆ. ಆದರೆ, ಅಲ್ಲಿನ ವಾಸ್ತವ ತಿಳಿದಿರುವ ಜನರು ಈ ಬಗ್ಗೆ ವರ್ಷಗಳಿಂದ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಪಾಲಿಕೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾತ್ರ ನಿರ್ಲಕ್ಷ್ಯವನ್ನೇ ತಮ್ಮ ಅಸ್ತ್ರವಾಗಿಟ್ಟುಕೊಂಡು ಜನರಲ್ಲಿ ವಾಸ್ತವ ಮರೆಮಾಚಿಕೊಂಡೇ ಬಂದಿದ್ದಾರೆ. ಮಂಗಳೂರಿನ 12 ಗ್ರಾಮಗಳ ಜನರು ಕುಡಿಯಲು ಬಳಸುವ ಮರವೂರಿನ ಫಲ್ಗುಣಿ ನದಿಯ ಅಣೆಕಟ್ಟಿಗೆ ಪಚ್ಚನಾಡಿಯಲ್ಲಿ ಡ್ರೈನೇಜಿನ ಟಾಯ್ಲೆಟ್ ನೀರು ಸೇರುತ್ತಿರುವುದು ಅಲ್ಲಿನ ಎಲ್ಲ ಪಕ್ಷಗಳವರಿಗೂ ಗೊತ್ತು.
ಮಾಹಿತಿ ಪ್ರಕಾರ, ಮೇಯರ್ ಮತ್ತು ಪಾಲಿಕೆ ಕಮಿಷನರ್ ಅಲ್ಲಿನ ವಾಸ್ತವ ತಿಳಿಯಲು ಮತ್ತೊಮ್ಮೆ ಭೇಟಿ ನೀಡುತ್ತಿದ್ದಾರೆಂಬ ಮಾಹಿತಿ ತಿಳಿದುಬಂದಿದೆ. ಆದರೆ, ನಾಳೆ ನೀವು ಅಲ್ಲಿಗೆ ಹೋಗಿ ಪರಿಶೀಲನೆ ಮಾಡುವ ವೇಳೆಗೆ ಅಲ್ಲಿ ಯಾವುದೇ ಮಲಿನ ನೀರು ನದಿಗೆ ಸೇರುವುದು ನೇರವಾಗಿ ಕಂಡುಬರಲಿಕ್ಕಿಲ್ಲ. ಯಾಕಂದ್ರೆ, ಜನರ ಕಣ್ಣಿಗೆ ಮಣ್ಣೆರಚುತ್ತಾ ಬಂದಿರುವ ಖದೀಮರು ತುಂಬಿಕೊಂಡಿರುವ ಹೊತ್ತಲ್ಲಿ ಅಲ್ಲಿನ ವಾಸ್ತವ ಕಣ್ಣಿಗೆ ರಾಚುವಂತೆ ಕಂಡುಬರುವುದೂ ಕಷ್ಟ. ಆದರೆ, ಒಳಗಣ್ಣು ತೆರೆದು ನೋಡಿದರೆ, ಅಲ್ಲಿನ ಸ್ಥಳೀಯರಲ್ಲಿ ಕೇಳಿದರೆ ಮಲಿನ ನೀರನ್ನು ನೇರವಾಗಿ ಬಿಡಲಾಗುತ್ತದೆ ಎನ್ನುವ ಮಾತು ಮಾತ್ರ ಅನುರಣಿಸುತ್ತಿದೆ. ಅದು ರಾತ್ರಿ ವೇಳೆಯೋ, ಮಳೆಯ ಸಂದರ್ಭದಲ್ಲೋ ನೀರು ಮಾತ್ರ ನದಿ ಸೇರುತ್ತಲೇ ಇದೆಯಂತೆ. ಸಾಬೂನು ನೊರೆಯಂತೆ ಒಸರುತ್ತಾ ಸಾಗುವ ಮಲಿನ ನೀರು ಮಂಜಲ್ಪಾದೆಯ ಮಳೆನೀರಿನಲ್ಲೂ ಅಲ್ಲಿನ ಮಾಲಿನ್ಯ ಕಂಡುಬರುತ್ತದೆ. ಇದನ್ನು ಕಂಡುಕೊಳ್ಳಲು ಅಲ್ಲಿ ಹೋದವರಿಗೆ ವಾಸ್ತವ ಅರಿಯುವ ಹೃದಯ ಇದ್ದರಷ್ಟೇ ಸಾಕಾಗುತ್ತದೆ.
In a shocking incident, Seepage water is been continuously released into Maravoor Dam where people of 12 Gram Panchayat Consume dirty water every day. The Issue has reached Karnataka CM and a letter of immediate inquiry and action has been ordered against MCC officials but the MCC officials haven't visited the spot for inspection nor take any action.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm