ಪಚ್ಚನಾಡಿ ತ್ಯಾಜ್ಯ ಶುದ್ದೀಕರಣ ಘಟಕಕ್ಕೆ ಮೇಯರ್ ಭೇಟಿ ; ಹೆಚ್ಚುವರಿ ನೀರನ್ನು ಫಲ್ಗುಣಿ ನದಿಗೆ ಬಿಡುತ್ತಿರುವ ಬಗ್ಗೆ ಅಧಿಕೃತ ಒಪ್ಪಿಗೆ !! 

07-07-21 10:04 pm       Mangaluru Correspondent   ಕರಾವಳಿ

ಮಹಾನಗರಪಾಲಿಕೆ ವ್ಯಾಪ್ತಿಯ ಪಚ್ಚನಾಡಿಯಲ್ಲಿರುವ ಒಳಚರಂಡಿಯ ತ್ಯಾಜ್ಯ ನೀರು ಶುದ್ಧೀಕರಣ ಘಟಕ (ಸೆಕೆಂಡರಿ ಟ್ರೀಟ್ ಮೆಂಟ್ ಪ್ಲಾಂಟ್- ಎಸ್.ಟಿ.ಪಿ.) ಮತ್ತು ಪಿಲಿಕುಳದಲ್ಲಿರುವ ಟಶಿ೯ಯರಿ ಟ್ರೀಟ್ ಮೆಂಟ್ ಪ್ಲಾಂಟ್ (ಟಿ.ಟಿ.ಪಿ.) ಗೆ ಬುಧವಾರ ಮೇಯರ್ ಪ್ರೇಮಾನಂದ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಮಂಗಳೂರು, ಜುಲೈ 7: ಮಹಾನಗರಪಾಲಿಕೆ ವ್ಯಾಪ್ತಿಯ ಪಚ್ಚನಾಡಿಯಲ್ಲಿರುವ ಒಳಚರಂಡಿಯ ತ್ಯಾಜ್ಯ ನೀರು ಶುದ್ಧೀಕರಣ ಘಟಕ (ಸೆಕೆಂಡರಿ ಟ್ರೀಟ್ ಮೆಂಟ್ ಪ್ಲಾಂಟ್- ಎಸ್.ಟಿ.ಪಿ.) ಮತ್ತು ಪಿಲಿಕುಳದಲ್ಲಿರುವ ಟಶಿ೯ಯರಿ ಟ್ರೀಟ್ ಮೆಂಟ್ ಪ್ಲಾಂಟ್ (ಟಿ.ಟಿ.ಪಿ.) ಗೆ ಬುಧವಾರ ಮೇಯರ್ ಪ್ರೇಮಾನಂದ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಮೇಯರ್ ಪ್ರೇಮಾನಂದ ಶೆಟ್ಟಿ , ಒಳಚರಂಡಿಯ ತ್ಯಾಜ್ಯ ನೀರನ್ನು ಎಸ್ ಟಿಪಿ ಘಟಕದಲ್ಲಿ ಶುದ್ಧೀಕರಿಸುತ್ತಿದ್ದು ಈ ಶುದ್ಧೀಕೃತ ನೀರನ್ನು ಪಿಲಿಕುಳದಲ್ಲಿರುವ ಟಿ.ಟಿ.ಪಿ.ಗೆ ಬಿಡಲಾಗುತ್ತದೆ. ಅಲ್ಲಿ ಮತ್ತೆ ತ್ಯಾಜ್ಯ ನೀರನ್ನು ಸ್ವಚ್ಚ ನೀರನ್ನಾಗಿ ಪರಿವತಿ೯ಸಿ ಪಿಲಿಕುಳ ನಿಸಗ೯ಧಾಮದಲ್ಲಿ ಗಿಡಗಳಿಗೆ ನೀಡಲು ಬಳಸಲಾಗುತ್ತದೆ. ಪ್ರತಿ ದಿನ ಹೀಗೆ ಬರುವ 6.5 ಎಂ.ಎಲ್.ಡಿ ತ್ಯಾಜ್ಯ ನೀರನ್ನು ಪಿಲಿಕುಳಕ್ಕೆ ಪ್ರತಿ ನಿತ್ಯ ನೀಡಲಾಗುತ್ತಿದ್ದು, ಉಳಿದ ಎಸ್.ಟಿ.ಪಿ. ಯಿಂದ ಹರಿದ 2.2 ಎಂ.ಎಲ್.ಡಿ ಹೆಚ್ಚುವರಿ ನೀರನ್ನು ಪಾಲಿಕೆಯ ಸ್ವಾಭಾವಿಕ ನಾಲೆಯ ಮುಖಾಂತರ ಫಲ್ಗುಣಿ ನದಿಗೆ  ಬಿಡಲಾಗುತ್ತದೆ ಎಂದು ತಿಳಿಸಿದ್ದಾರೆ. ಈ ಮೂಲಕ ತ್ಯಾಜ್ಯ ನೀರನ್ನು ಫಲ್ಗುಣಿ ನದಿಗೆ ಬಿಡುತ್ತಿರುವುದಾಗಿ ಸ್ವತಃ ಮೇಯರ್ ಹೇಳಿಕೊಂಡಂತಾಗಿದೆ. 

ಹೆಡ್ಲೈನ್ ಕರ್ನಾಟಕ ಇತ್ತೀಚೆಗೆ, ಪಚ್ಚನಾಡಿ ಘಟಕದಿಂದ ತ್ಯಾಜ್ಯ ನೀರನ್ನು ನೇರವಾಗಿ ಫಲ್ಗುಣಿ ನದಿಗೆ ಬಿಡಲಾಗುತ್ತಿದೆ ಎಂದು ವಿಡಿಯೋ ಸಹಿತ ವರದಿ ಮಾಡಿ, ಮಹಾನಗರ ಪಾಲಿಕೆಯ ಅಧಿಕಾರಿಗಳ ಬೇಜವಾಬ್ದಾರಿಯನ್ನು ಹೊರಗೆಳೆದಿತ್ತು. ಇದರ ಬಗ್ಗೆ ಸ್ಥಳೀಯ ಸಾರ್ವಜನಿಕರು ಹೋರಾಟ ನಡೆಸಿಕೊಂಡು ಬಂದರೂ, ಪಾಲಿಕೆಯಿಂದ ನಿರ್ಲಕ್ಷ್ಯವೇ ಉತ್ತರವಾಗಿತ್ತು. ಈ ಬಗ್ಗೆ ಸಿಎಂ ಕಚೇರಿಗೆ ಸ್ಥಳೀಯರು ಪತ್ರ ಬರೆದು, ಕುಡಿಯುವ ನೀರು ಬಳಸುವ ಅಣೆಕಟ್ಟಿಗೆ ತ್ಯಾಜ್ಯ ನೀರು ಸೇರುತ್ತಿರುವ ಬಗ್ಗೆ ಗಮನ ಸೆಳೆದಿದ್ದರು. ಸಿಎಂ ಕಚೇರಿಯಿಂದ ಮಂಗಳೂರು ಮಹಾನಗರ ಪಾಲಿಕೆಗೆ ಶಿಸ್ತು ಕ್ರಮ ಜರಗಿಸಲು ಸೂಚನೆ ಬಂದಿತ್ತು. ಸಿಎಂ ಕಚೇರಿಯ ಚಾಟಿಯಿಂದ ಎಚ್ಚೆತ್ತ ಪಾಲಿಕೆಯ ಅಧಿಕಾರಸ್ಥರು 15 ದಿನಗಳ ಬಳಿಕ ಪಚ್ಚನಾಡಿ ಘಟಕಕ್ಕೆ ಭೇಟಿ ನೀಡಿದ್ದಾರೆ. 

ನೀವೇ ಕುಡಿದು ತೋರಿಸಿ ಎಂದ ಕಮಿಷನರ್ ! 

ಎರಡು ದಿನಗಳ ಹಿಂದೆ ಪಾಲಿಕೆ ಕಮಿಷನರ್ ಅಕ್ಷಯ್ ಶ್ರೀಧರ್ ಸ್ಥಳಕ್ಕೆ ತೆರಳಿ, ಅಧಿಕಾರಿಗಳ ವಿರುದ್ಧ ಗರಂ ಆಗಿದ್ದರು. ನೀರನ್ನು ಶುದ್ಧೀಕರಿಸಿಯೇ ನದಿಗೆ ಬಿಡುತ್ತಾ ಇದ್ದೇವೆ ಎಂದ ಅಲ್ಲಿನ ಸಿಬಂದಿಯಲ್ಲಿ ಹಾಗಾದ್ರೆ ನೀವೇ ಇದನ್ನು ಕುಡಿದು ತೋರಿಸಿ ಎಂದು ಕಮಿಷನರ್ ಸವಾಲೆಸೆದಿದ್ದರು. ಇದರಿಂದ ಪೆಚ್ಚು ಮೋರೆ ಹಾಕಿದ್ದರು ಅಲ್ಲಿನ ಗುತ್ತಿಗೆ ಸಿಬಂದಿ ಮತ್ತು ಕಾರ್ಪೊರೇಟರ್.‌ 

ಇದೀಗ ಸ್ವತಃ ಮೇಯರ್ ಕೂಡ ಸ್ಥಳಕ್ಕೆ ತೆರಳಿ, ಅಲ್ಲಿನ ವಾಸ್ತವ ಸ್ಥಿತಿಯನ್ನು ಅರಿಯುವ ಪ್ರಯತ್ನ ಮಾಡಿದ್ದಾರೆ. ಶುದ್ಧೀಕರಣಗೊಳಿಸಿದ ನೀರನ್ನು ಎಷ್ಟರ ಮಟ್ಟಿಗೆ ಶುದ್ಧ ಆಗಿದೆ ಎಂದು ಅಧಿಕಾರಿಗಳಿಂದಲೇ ಪರೀಕ್ಷೆಗೆ ನಡೆಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆ. 

ಇದೇ ವೇಳೆ, ತಮ್ಮ ಹೇಳಿಕೆಯಲ್ಲಿ ಎಸ್.ಟಿ.ಪಿಯಿಂದ ಹೊರಗಡೆ ಹರಿದ ನೀರನ್ನು ಮರವೂರು ಸೇತುವೆಯ ಮೇಲ್ಭಾಗಕ್ಕೆ ಬಿಡದಂತೆ ಸಾವ೯ಜನಿಕರು ಮನವಿ ಮಾಡಿದ ಹಿನ್ನೆಲೆಯಲ್ಲಿ ಅದನ್ನು ಕೆಳಭಾಗಕ್ಕೆ ಬಿಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಜೂನ್ 22 ರಂದು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ತೀಮಾ೯ನಿಸಿದಂತೆ ಸುಮಾರು ರೂ. 2.5 ಕೋಟಿ ವೆಚ್ಚದ ಕಾಮಗಾರಿಯ ಪ್ರಸ್ತಾವನೆಯನ್ನು ಪಾಲಿಕೆಯಿಂದ ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. 

ಮೇಯರ್ ಭೇಟಿ ವೇಳೆ ಪಚ್ಚನಾಡಿ ಕಾರ್ಪೊರೇಟರ್ ಸಂಗೀತ ನಾಯಕ್ ಮತ್ತು ಕಾಯ೯ಪಾಲಕ ಅಭಿಯಂತರ ಗುರುಪ್ರಸಾದ್ ಉಪಸ್ಥಿತರಿದ್ದರು.

ಮರವೂರು ಡ್ಯಾಮಿಗೆ ಟಾಯ್ಲೆಟ್ ನೀರು ; 12 ಗ್ರಾಪಂಗಳಿಗೆ ಕುಡಿಯೋಕೂ ಅದೇ ನೀರು ! ನಿರ್ಲಜ್ಜ ಪಾಲಿಕೆ ಆಡಳಿತಕ್ಕೆ ಚಾಟಿ ಬೀಸಿದ ಸಿಎಂ ಕಚೇರಿ

Follow up: ಮರವೂರು ಅಣೆಕಟ್ಟಿಗೆ ಮಲಿನ ನೀರು ; ಸಿಎಂ ಕಚೇರಿ ಆದೇಶಕ್ಕೂ ಸಿಗದ ಕಿಮ್ಮತ್ತು !ಇನ್ನೂ ವಾಸ್ತವ ಅರಿಯದ ಪಾಲಿಕೆ ಆಡಳಿತ !

Sewage drain mixes with Maravoor Dam Water Complaint Mayor visits Spot for inspection. In a shocking incident, Sewage water is been continuously released into Maravoor Dam where people of 12 Gram Panchayat Consume dirty water every day. The Issue has reached Karnataka CM and a letter of immediate inquiry and action has been ordered against MCC officials but the MCC officials haven't visited the spot for inspection nor take any action.