ಬ್ರೇಕಿಂಗ್ ನ್ಯೂಸ್
08-07-21 12:05 pm Richard, Mangaluru Correspondent ಕರಾವಳಿ
ಮಂಗಳೂರು, ಜುಲೈ 7: ಹಳ್ಳಿ ಕಡೆ ಹೃದ್ರೋಗ ಕಾಯಿಲೆಗೆ ತುತ್ತಾದರೆ, ಫಕ್ಕನೆ ಚಿಕಿತ್ಸೆಯಾಗಲೀ, ಜೀವ ಉಳಿಸುವ ಇತರೇ ಪರ್ಯಾಯ ಆಗಲೀ ಇರುವುದಿಲ್ಲ. ನಗರ ಭಾಗದಲ್ಲಿ ಇರುವಂತೆ ಹೃದಯ ತಜ್ಞರು ಇಲ್ಲದೇ ಇರುವುದು ಮತ್ತು ಆಧುನಿಕ ಚಿಕಿತ್ಸೆ ಕೊಡಲು ಮೆಷಿನರಿ ಇಲ್ಲದಿರುವುದು ದೊಡ್ಡ ಕೊರತೆಯಾಗಿತ್ತು. ಇಂಥ ದುಸ್ಥಿತಿಯನ್ನು ಮನಗಂಡು ಮಂಗಳೂರಿನ ಹೃದ್ರೋಗ ತಜ್ಞ ಪದ್ಮನಾಭ ಕಾಮತ್ ತಮ್ಮ ಕ್ಯಾಡ್ಸ್ ತಂಡದ ಮೂಲಕ ಹಳ್ಳಿಗಳಲ್ಲಿ ಹೃದ್ರೋಗದ ಬಗ್ಗೆ ಜಾಗೃತಿ ಮೂಡಿಸಲು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಪ್ರತೀ ಗ್ರಾಮ ಪಂಚಾಯ್ತಿಗೂ ಉಚಿತವಾಗಿ ಇಸಿಜಿ ಯಂತ್ರ ಕೊಟ್ಟು ಹೃದ್ರೋಗದ ಬಗ್ಗೆ ಎಚ್ಚರ ಮೂಡಿಸುವ ಯತ್ನ ಆರಂಭಿಸಿದ್ದಾರೆ.
ಆಧುನಿಕ ಜಗತ್ತಿನಲ್ಲಿ ಮನುಷ್ಯನಿಗೆ ಅತಿ ಹೆಚ್ಚು ಕಾಡುವ ಕಾಯಿಲೆ ಹೃದ್ರೋಗ. ನಗರ ಭಾಗದಲ್ಲಿ ಈ ಕಾಯಿಲೆ ಶೇಕಡವಾರು ಹೆಚ್ಚಿದ್ದರೂ, ಈಗೀಗ ಹಳ್ಳಿಗಳಲ್ಲೂ ಭಾರೀ ಪ್ರಮಾಣದಲ್ಲಿ ಕಂಡುಬರುತ್ತಿದೆ. ಇದಕ್ಕಾಗಿ ಆಯಾ ಭಾಗದಲ್ಲಿ ಹೃದ್ರೋಗ ಕಾಯಿಲೆ ಬಗ್ಗೆ ತಾವಾಗೇ ಪರೀಕ್ಷೆ ನಡೆಸಲು ಸಹಕಾರಿಯಾಗುವಂತೆ ಹಳ್ಳಿಗಳಿಗೇ ನೇರವಾಗಿ ಇಸಿಜಿ ಯಂತ್ರ ನೀಡಲಾಗುತ್ತಿದೆ. ಪದ್ಮನಾಭ ಕಾಮತ್ ಅವರ ಕ್ಯಾಡ್ಸ್ ಸಂಸ್ಥೆಯ ಮೂಲಕ ಗ್ರಾಪಂ ಕಚೇರಿಗಳಿಗೆ ಇಸಿಜಿ ಯಂತ್ರವನ್ನು ವಿತರಿಸಲಾಗುತ್ತಿದ್ದು, ಈವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 22 ಗ್ರಾಮ ಪಂಚಾಯ್ತಿ ಕಚೇರಿಗಳಿಗೆ ನೀಡಲಾಗಿದೆ. ಜೊತೆಗೆ, ಯಂತ್ರವನ್ನು ಆಪರೇಟ್ ಮಾಡುವ ಬಗ್ಗೆಯೂ ಆಯಾ ಭಾಗದ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ಗ್ರಾಪಂ ಸಿಬಂದಿಗಳಿಗೆ ತರಬೇತಿ ನೀಡಲಾಗುತ್ತದೆ.
ಬುಧವಾರ ಕಿನ್ನಿಗೋಳಿಯ ಕೆಮ್ರಾಲ್ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ದಕ್ಷಿಣ ಕನ್ನಡ ಜಿಪಂ ಸಿಇಓ ಡಾ. ಕುಮಾರ್ ನೇತೃತ್ವದಲ್ಲಿ ಇಸಿಜಿ ಯಂತ್ರವನ್ನು ಹಸ್ತಾಂತರ ಮಾಡಲಾಯ್ತು. ಇದೇ ವೇಳೆ, ಅಲ್ಲಿನ ಆಶಾ ಕಾರ್ಯಕರ್ತೆಯರಿಗೆ ವೈದ್ಯರ ತಂಡ ಸ್ಥಳದಲ್ಲೇ ತರಬೇತಿಯನ್ನೂ ನೀಡಿದ್ದು ವಿಶೇಷವಾಗಿತ್ತು.
ಹೇಗಿರುತ್ತೆ ಕಾರ್ಯ ನಿರ್ವಹಣೆ ?
ಹೃದಯದಲ್ಲಿ ಯಾವುದೇ ನರಗಳು ಅಥವಾ ಕವಾಟಗಳು ಬ್ಲಾಕ್ ಇದ್ದಲ್ಲಿ ಹೃದಯಾಘಾತಕ್ಕೆ ಕಾರಣವಾಗುತ್ತದೆ. ಇದನ್ನು ಪತ್ತೆಹಚ್ಚಲು ಇಸಿಜಿ ಯಂತ್ರದಿಂದ ಸಾಧ್ಯ. ಆಧುನಿಕ ರೀತಿಯ ಇಸಿಜಿ ಯಂತ್ರಗಳು ಗಾತ್ರದಲ್ಲಿ ಕಿರಿದಾಗಿದ್ದು, ಅವುಗಳ ಜೊತೆಗೆ ಪ್ರಿಂಟರ್ ಸೇರಿ ಒಟ್ಟು 70 ಸಾವಿರದಿಂದ ಒಂದು ಲಕ್ಷ ಖರ್ಚಿನಲ್ಲಿ ರೆಡಿಯಾಗುತ್ತದೆ. ಗ್ರಾಪಂ ಕಚೇರಿಯಲ್ಲಿ ಆಯಾ ಭಾಗದವರು ಸ್ವಯಂಪ್ರೇರಿತವಾಗಿ ಹೃದಯದ ಆರೋಗ್ಯವನ್ನು ಪರೀಕ್ಷಿಸಿಕೊಳ್ಳಬಹುದು. ಪರೀಕ್ಷೆ ನಡೆದು, ಬರುವ ರಿಪೋರ್ಟ್ ಗಳನ್ನು ವೈದ್ಯರ ವಾಟ್ಸಪ್ ಗ್ರೂಪಿಗೆ ಹಾಕಲಾಗುತ್ತದೆ. ವೈದ್ಯರು ವಾಟ್ಸಪ್ ಗ್ರೂಪಿನಲ್ಲಿಯೇ ತುರ್ತಾಗಿ ಸ್ಪಂದಿಸಲಿದ್ದು, ಚಿಕಿತ್ಸೆ ಅಗತ್ಯವಿದೆಯೇ, ಇದ್ದರೆ ಆಯಾ ಭಾಗದಲ್ಲಿ ಎಲ್ಲಿ ಅಡ್ಮಿಟ್ ಆಗಬೇಕು, ಯಾವ ರೀತಿಯ ಚಿಕಿತ್ಸೆ ಪಡೆಯಬೇಕೆಂದು ಉಚಿತ ಸಲಹೆ ನೀಡಲಿದ್ದಾರೆ.
ಡಾ.ಪದ್ಮನಾಭ ಕಾಮತ್ ಅವರ ಈ ರೀತಿಯ ಚಿಂತನೆಗೆ ಭಾರೀ ಪ್ರಶಂಸೆ ವ್ಯಕ್ತವಾಗಿದ್ದು, ಸ್ಪತಃ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ವೈದ್ಯರಿಂದ ಮಾಹಿತಿ ಪಡೆದಿದ್ದಾರೆ. ಅಲ್ಲದೆ, ಇಡೀ ರಾಜ್ಯದಲ್ಲಿ ಎಲ್ಲ ಗ್ರಾಪಂ ಕಚೇರಿಗಳಲ್ಲೂ ಇಸಿಜಿ ಯಂತ್ರ ಜಾರಿಗೆ ತರುವ ಬಗ್ಗೆ ಮುಂದಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 234 ಗ್ರಾಪಂ ಇದ್ದು, ಎಲ್ಲ ಕಡೆಗೂ ಕ್ಯಾಡ್ಸ್ ಸಂಸ್ಥೆಯಿಂದ ಕೊಡಲಾಗುವುದು. ಆರಂಭದಲ್ಲಿ ಹತ್ತು ಸಾವಿರ ಜನಸಂಖ್ಯೆಯಿರುವ ಗ್ರಾಪಂ ಕಚೇರಿಗಳನ್ನು ಆಯ್ದು ಮೊದಲಿಗೆ ಇಸಿಜಿ ವಿತರಣೆ ನಡೆಸಲಾಗುವುದು. ಆನಂತರ 5 ಸಾವಿರ ಜನಸಂಖ್ಯೆ ಇರುವ ಗ್ರಾಪಂ ಕಚೇರಿಗಳಿಗೆ ತಲುಪಲಿದೆ. ಈಮೂಲಕ ಹಳ್ಳಿಗಳಲ್ಲಿ ಹೃದ್ರೋಗದ ಬಗ್ಗೆ ಜಾಗೃತಿ ಮತ್ತು ಎಚ್ಚರ ಮೂಡಿಸಲಾಗುವುದು ಎಂದು ಪದ್ಮನಾಭ ಕಾಮತ್ ಹೆಡ್ ಲೈನ್ ಕರ್ನಾಟಕಕ್ಕೆ ತಿಳಿಸಿದ್ದಾರೆ.
ಅದಹಾಗೆ, ಹೃದ್ರೋಗದ ಬಗ್ಗೆ ಹಳ್ಳಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಇದೇ ಮೊದಲ ಬಾರಿಗೆ ದೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿದೆ. ದೇಶದಲ್ಲೇ ವೈದ್ಯಕೀಯ ಶಿಕ್ಷಣಕ್ಕೆ ಖ್ಯಾತಿ ಹೊಂದಿರುವ ಮಂಗಳೂರಿನಲ್ಲಿ ಈ ರೀತಿಯ ವಿಭಿನ್ನ ಕಾರ್ಯದ ಮೂಲಕ ವೈದ್ಯರು ಗಮನ ಸೆಳೆದಿದ್ದಾರೆ. ಹಳ್ಳಿ ಮಟ್ಟದಲ್ಲೇ ಹೃದ್ರೋಗದ ಬಗ್ಗೆ ಎಚ್ಚರ ಮೂಡಬೇಕು ಎನ್ನುವ ನೆಲೆಯಲ್ಲಿ ಮುಂದಡಿ ಇಟ್ಟಿದ್ದಾರೆ.
Video:
Mangalore Cardiologist Dr Padmanabh Kamath provides free ECG devices to Gram Panchayaths to save hearts. CAD Trust lead by a team of Doctors in Mangalore is now reaching villages of Dakshina Kannada and Uttar Karnataka by offering free ECG devices where an immediate report is delivered on the spot to ensure good heart function.
04-10-25 10:54 pm
Bangalore Correspondent
ಸ್ವತಃ ಕಾಂಗ್ರೆಸ್ ನಾಯಕರೇ ಸಿದ್ದು ಯಾವಾಗ ಸಿಎಂ ಪಟ್ಟ...
04-10-25 10:16 pm
ಮಹಾರಾಷ್ಟ್ರದ ಸಮುದ್ರದಲ್ಲಿ ಘೋರ ದುರಂತ ; ಬೆಳಗಾವಿಯ...
04-10-25 09:18 pm
Belagavi Heart Attack, SSLC: ಬೆಳಗಾವಿ ; SSLC ಓ...
04-10-25 07:22 pm
ಐಟಿ ನಗರಿ ಬೆಂಗಳೂರು 'ಸೈಬರ್ ಕ್ರೈಮ್' ಕ್ಯಾಪಿಟಲ್...
03-10-25 06:08 pm
04-10-25 04:45 pm
HK Staffer
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ನಿಲ್ಲಿಸದಿದ್ದರೆ ಭ...
03-10-25 09:09 pm
ಮಕ್ಕಳ ವಿಡಿಯೋ ಗೇಮ್ ನಲ್ಲೂ ಸೈಬರ್ ಅಪರಾಧ ; ಶಾಲಾ ಹಂ...
03-10-25 04:50 pm
04-10-25 10:29 pm
Mangalore Correspondent
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
04-10-25 02:57 pm
HK News Desk
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm