ಬ್ರೇಕಿಂಗ್ ನ್ಯೂಸ್
09-07-21 07:03 pm Mangalore Correspondent ಕರಾವಳಿ
ಮಂಗಳೂರು, ಜುಲೈ 9: ರಾಜ್ಯದಲ್ಲಿ ಮತ್ತೆ ಸ್ಯಾಟಲೈಟ್ ಫೋನ್ ರಿಂಗಣಿಸುತ್ತಿರುವುದನ್ನು ಗುಪ್ತಚರ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಕಳೆದ 15 ದಿನಗಳಲ್ಲಿ ರಾಜ್ಯದ ಒಂಬತ್ತು ಕಡೆ ಸ್ಯಾಟಲೈಟ್ ಫೋನ್ ರಿಂಗ್ ಆಗಿದ್ದು, ನಿಗೂಢ ವ್ಯಕ್ತಿಗಳು ಕಾರ್ಯಾಚರಣೆ ನಡೆಸುತ್ತಿರುವ ಬಗ್ಗೆ ಕೇಂದ್ರ ಗುಪ್ತಚರ ಅಧಿಕಾರಿಗಳು ದೃಢಪಡಿಸಿದ್ದಾರೆ.
ಈ ಬಾರಿ ಮಲೆನಾಡು ಮತ್ತು ಕರಾವಳಿಯ ಬೇರೆ ಬೇರೆ ಜಿಲ್ಲೆಗಳಲ್ಲಿ ಲೊಕೇಶನ್ ಪತ್ತೆಯಾಗಿದೆ. ಉಡುಪಿ ಜಿಲ್ಲೆಯ ಶಂಕರಪುರದ ಬಳಿಯ ಬಿಳಿಯಾರು, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕನಕಮಜಲು, ಶಿವಮೊಗ್ಗ ಜಿಲ್ಲೆಯ ಕೊಲ್ಲೂರು ದಟ್ಟಾರಣ್ಯದಲ್ಲಿ, ಬೆಳಗಾವಿಯ ಅಥಣಿ, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ರಾಯಚೂರಿನ ದೇವದುರ್ಗ, ಚಿಕ್ಕಮಗಳೂರು ಜಿಲ್ಲೆಯ ನಗರಮಕ್ಕಿ, ಕಡೂರು ಬಳಿಯ ಅರಣ್ಯ ಪ್ರದೇಶದಲ್ಲಿ ಲೊಕೇಶನ್ ಟ್ರೇಸ್ ಮಾಡಲಾಗಿದೆ. ಕೇವಲ 15 ದಿನಗಳಲ್ಲಿ ಏಳು ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಮ್ಮಿಂದೊಮ್ಮೆಲೇ ಸ್ಯಾಟಲೈಟ್ ಫೋನ್ ಸದ್ದು ಮಾಡಿದ್ದು, ಗುಪ್ತಚರ ಅಧಿಕಾರಿಗಳ ಆತಂಕಕ್ಕೂ ಕಾರಣವಾಗಿದೆ. ಹೀಗಾಗಿ ರಾಜ್ಯ ಇಲಾಖೆಯ ಅಧಿಕಾರಿಗಳು ಸ್ಯಾಟಲೈಟ್ ಫೋನ್ ಬಳಕೆ ಮಾಡುತ್ತಿರುವುದು ಯಾರು ಎಂಬುದನ್ನು ಪತ್ತೆ ಮಾಡಲು ಕಾರ್ಯಾಚರಣೆ ಆರಂಭಿಸಿದ್ದಾರೆ.
ಹಾಗೆ ನೋಡಿದರೆ, ಕರಾವಳಿ ಜಿಲ್ಲೆಗಳಲ್ಲಿ ಸ್ಯಾಟಲೈಟ್ ಫೋನ್ ರಿಂಗಣಿಸುತ್ತಿರುವುದು ಮಾಮೂಲಿಯೋ ಅನ್ನುವಂತಿದೆ. ಯಾಕಂದ್ರೆ, ಸುಳ್ಯ ಕನಕಮಜಲು ಎಂಬಲ್ಲಿ ಮೂರು ತಿಂಗಳ ಅವಧಿಯಲ್ಲಿ ಮೂರನೇ ಬಾರಿ ಫೋನ್ ಲೊಕೇಶನ್ ಪತ್ತೆಯಾಗಿದೆ. ಮೂರು ತಿಂಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಮುಂಡಗೋಡ ಪ್ರದೇಶಗಳಲ್ಲಿಯೂ ಲೊಕೇಶನ್ ಟ್ರೇಸ್ ಆಗಿತ್ತು. ಅದಕ್ಕೂ ಹಿಂದೆ ಜನವರಿಯಲ್ಲಿ ಮಂಗಳೂರಿನ ಪಚ್ಚನಾಡಿ, ಬೆಳ್ತಂಗಡಿ, ಬಂಟ್ವಾಳ ತಾಲೂಕಿನ ಕೆಲವು ಪ್ರದೇಶಗಳಲ್ಲಿ ಸ್ಯಾಟಲೈಟ್ ಫೋನ್ ಸದ್ದು ಮಾಡಿತ್ತು. ಆದರೆ, ಫೋನ್ ಕನೆಕ್ಟ್ ಆಗಿರುವ ಪ್ರದೇಶಗಳೆಲ್ಲ ನಿರ್ಜನ ಮತ್ತು ಅರಣ್ಯ ಪ್ರದೇಶಗಳೇ ಆಗಿರುವುದು ಅಧಿಕಾರಿಗಳ ತಲೆನೋವು ಮತ್ತು ಆತಂಕಕ್ಕೂ ಕಾರಣವಾಗಿದೆ.
ಸ್ಯಾಟಲೈಟ್ ಲೊಕೇಶನ್ ಅಷ್ಟೇ, ಪತ್ತೆ ಆಗಲ್ಲ !
ಈಗ ಪತ್ತೆಯಾಗಿರುವುದೆಲ್ಲ ತುರಾಯಾ ಸ್ಯಾಟಲೈಟ್ ಫೋನ್ ಸಿಗ್ನಲ್ಗಳು. ತುರಾಯಾ ಫೋನನ್ನು ಕಳೆದ ಹತ್ತು ವರ್ಷಗಳ ಹಿಂದೆಯೇ ದೇಶದಲ್ಲಿ ನಿಷೇಧ ಮಾಡಲಾಗಿದೆ. ಹಾಗಿದ್ದರೂ, ನಿಷೇಧಿತ ಚಟುವಟಿಕೆಗಳಲ್ಲಿ ತುರಾಯಾ ಫೋನ್ ಬಳಕೆ ಆಗ್ತಿರುವುದರ ಬಗ್ಗೆ ಗುಪ್ತಚರ ಇಲಾಖೆಯೇ ಪತ್ತೆ ಮಾಡಿತ್ತು. ಆದರೆ, ಈ ಫೋನ್ ಒಂದ್ವೇಳೆ ಬಳಕೆಯಾದರೂ, ಅದರ ಲೊಕೇಶನ್ ಟ್ರೇಸ್ ಆಗುವುದೇ 24 ಗಂಟೆಗಳ ನಂತರ. ಅದರಲ್ಲೂ ಫೋನ್ ಸಿಗ್ನಲ್ ಎಲ್ಲಿಂದ ಎಲ್ಲಿಗೆ ಕನೆಕ್ಟ್ ಆಗಿದೆ ಎನ್ನೋದನ್ನಷ್ಟೇ ಇದು ತೋರಿಸುತ್ತದೆ. ಆದರೆ, ಬಳಕೆದಾರರ ನಂಬರ್ ಆಗಲೀ, ಯಾರು ಬಳಕೆ ಮಾಡಿದ್ದಾರೆ ಅನ್ನೋದನ್ನಾಗಲೀ ಪತ್ತೆ ಮಾಡುವುದು ಕಷ್ಟಕರ ಎನ್ನುತ್ತಾರೆ, ಇದರ ಬಗ್ಗೆ ತಿಳಿದವರು.
ಈ ರೀತಿ ಆಂತರಿಕ ಭದ್ರತೆಗೆ ಸವಾಲಾಗಬಲ್ಲ ಫೆಸಿಲಿಟಿ ಇರುವ ಕಾರಣಕ್ಕಾಗಿಯೇ ನಿಷೇಧಿತ ಚಟುವಟಿಕೆಯಲ್ಲಿ ನಿರತರಾಗಿರುವ ಮಂದಿ ಇಂತಹ ಫೋನ್ ಗಳನ್ನು ಬಳಕೆ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ ಕರ್ನಾಟಕ ಸೇರಿ ದೇಶಾದ್ಯಂತ ವಿವಿಧೆಡೆಗಳಿಂದ ಸ್ಯಾಟಲೈಟ್ ಫೋನ್ ಲೊಕೇಶನ್ ಪತ್ತೆಯಾಗಿರುವುದನ್ನು ಕೇಂದ್ರ ಗುಪ್ತಚರ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಕರ್ನಾಟಕದಲ್ಲಿಯೇ ಐದಾರು ಜಿಲ್ಲೆಗಳಲ್ಲಿ ನಿರಂತರವಾಗಿ ಲೊಕೇಶನ್ ಪತ್ತೆ ಮಾಡಲಾಗಿದೆ.
ಮೂರು ತಿಂಗಳ ಹಿಂದೆ ಶಿರಸಿ, ಮುಂಡಗೋಡ ಮತ್ತು ಬೆಂಗಳೂರು ಉತ್ತರದಲ್ಲಿ ಲೊಕೇಶನ್ ಟ್ರೇಸ್ ಆಗಿದ್ದಾಗ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದರು. ಆದರೆ, ಯಾವುದೇ ಸುಳಿವು ಸಿಕ್ಕಿರಲಿಲ್ಲ. ಹೀಗಾಗಿ ಸ್ಯಾಟಲೈಟ್ ಫೋನ್ ಬಳಕೆಯ ಹಿಂದೆ ವ್ಯವಸ್ಥಿತ ಷಡ್ಯಂತ್ರ ಕೆಲಸ ಮಾಡುತ್ತಿರುವ ಬಗ್ಗೆ ಅನುಮಾನಗಳಿವೆ. ದಟ್ಟಾರಣ್ಯಗಳಲ್ಲಿ ಲೊಕೇಶನ್ ಪತ್ತೆಯಾಗಿರುವ ಕಾರಣ ನಕ್ಸಲರು ಬಳಸುತ್ತಿರಬಹುದೇ ಅನ್ನುವ ಸಂಶಯವೂ ಎದ್ದಿದೆ. ಆದರೆ, ನಕ್ಸಲರಲ್ಲಿ ಇಷ್ಟೊಂದು ಆಧುನಿಕ ಮಾದರಿಯ ಪೋನ್ ಗಳು ಲಭ್ಯ ಇರಲಿಕ್ಕಿಲ್ಲ ಅನ್ನುವ ಮಾತೂ ಕೇಳಿಬರುತ್ತಿದೆ.
ಉಗ್ರರದ್ದೇ ಕಾರುಬಾರು ಸಾಧ್ಯತೆ
ಕರಾವಳಿಯಲ್ಲಿ ಹಿಂದಿನಿಂದಲೂ ಉಗ್ರರ ಸ್ಲೀಪರ್ ಸೆಲ್ ಇರುವುದರಿಂದ ಐಸಿಸ್ ಅಥವಾ ಉಗ್ರ ಚಟುವಟಿಕೆಯಲ್ಲಿ ನಿರತರಾಗಿರುವವರು ಸ್ಯಾಟಲೈಟ್ ಫೋನ್ ಬಳಕೆ ಮಾಡುತ್ತಿರುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಪಾಕಿಸ್ತಾನ ಅಥವಾ ಗಲ್ಫ್ ರಾಷ್ಟ್ರಗಳಿಗೆ ಕರೆ ಮಾಡಲು ಸ್ಯಾಟಲೈಟ್ ಫೋನ್ ಬಳಸುತ್ತಿರುವ ಸಾಧ್ಯತೆಯಿದೆ. ಇತರ ಎಲ್ಲ ರೀತಿಯ ಅಂತಾರಾಷ್ಟ್ರೀಯ ಕರೆಗಳು ಟ್ರೇಸ್ ಆಗುವುದು ಮತ್ತು ರೆಕಾರ್ಡ್ ಆಗುತ್ತಿರುವುದರಿಂದ ಸುಲಭದಲ್ಲಿ ಪತ್ತೆ ಮಾಡಲು ಸಾಧ್ಯವಾಗದ ಈ ಮಾದರಿಯ ಫೋನ್ ಗಳನ್ನು ಉಗ್ರರು ಬಳಸುತ್ತಿದ್ದಾರೆಯೇ ಎನ್ನುವ ಅನುಮಾನಗಳಿವೆ.
ಕರಾವಳಿಯಲ್ಲಿ ಮತ್ತೆ ರಿಂಗಣಿಸ್ತಿದೆ ಸ್ಯಾಟಲೈಟ್ ಫೋನ್ !! ಉಗ್ರರ ಸ್ಲೀಪರ್ ಸೆಲ್ ನಂಟಿನ ಬಗ್ಗೆ ಶಂಕೆ !
Satellite phone signals detected in Mangalore and seven other districts of Karnataka, ISIS link suspected. Dakshina Kannada, Udupi, Shivamogga, Chikmagalur, Belgaum, Chamrajnagara, and Raichur. The Signals were detected from June 24th to 7th of July constantly in Karnataka.
04-10-25 09:18 pm
HK News Desk
Belagavi Heart Attack, SSLC: ಬೆಳಗಾವಿ ; SSLC ಓ...
04-10-25 07:22 pm
ಐಟಿ ನಗರಿ ಬೆಂಗಳೂರು 'ಸೈಬರ್ ಕ್ರೈಮ್' ಕ್ಯಾಪಿಟಲ್...
03-10-25 06:08 pm
DK Shivakumar: ಪವರ್ ಷೇರಿಂಗ್ ಬಗ್ಗೆ ಮಾತಾಡಿದ್ರೆ...
02-10-25 03:50 pm
ಆರ್ ಸಿಬಿ ತಂಡ ಮಾರಾಟಕ್ಕಿಟ್ಟ ಯುನೈಟೆಡ್ ಸ್ಪಿರಿಟ್ಸ್...
02-10-25 02:28 pm
04-10-25 04:45 pm
HK Staffer
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ನಿಲ್ಲಿಸದಿದ್ದರೆ ಭ...
03-10-25 09:09 pm
ಮಕ್ಕಳ ವಿಡಿಯೋ ಗೇಮ್ ನಲ್ಲೂ ಸೈಬರ್ ಅಪರಾಧ ; ಶಾಲಾ ಹಂ...
03-10-25 04:50 pm
03-10-25 11:07 pm
Mangalore Correspondent
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
Illegal Slaughterhouse in Mangalore: ಬೆನ್ನು ಬ...
02-10-25 10:43 pm
04-10-25 02:57 pm
HK News Desk
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm