ಬ್ರೇಕಿಂಗ್ ನ್ಯೂಸ್
11-07-21 07:54 pm Mangaluru Correspondent ಕರಾವಳಿ
ಮಂಗಳೂರು, ಜುಲೈ 11: ಅಟೋ ಚಾಲಕನನ್ನು ಅಡ್ಡಗಟ್ಟಿ ಬಸ್ ಚಾಲಕ ಸೇರಿ ರಸ್ತೆ ಮಧ್ಯದಲ್ಲೇ ಕಪಾಳಕ್ಕೆ ಹೊಡೆದು ಹಲ್ಲೆಗೈದ ಘಟನೆ ಸುರತ್ಕಲ್ ಬಳಿ ನಡೆದಿದೆ.
ಆಟೋ ಚಾಲಕ ಸುಧಾಕರ ಎಂಬವರು ಇಂದು ಬೆಳಗ್ಗೆ 8.30ರ ಸುಮಾರಿಗೆ ಸುರತ್ಕಲ್ ಮಾರಿಗುಡಿ ಬಳಿ ಕೈ ಅಡ್ಡಹಿಡಿ್ದದು ನಿಲ್ಲಿಸಿದ ಇಬ್ಬರನ್ನು ಕುಳ್ಳಿರಿಸಿಕೊಂಡು ತೆರಳಿದ್ದರು. ಇದನ್ನು ಗಮನಿಸಿದ ಉಡುಪಿಯಿಂದ ಮಂಗಳೂರಿನತ್ತ ಬರುತ್ತಿದ್ದ ಕೊಹಿನೂರ್ ಹೆಸರಿನ ಖಾಸಗಿ ಬಸ್ ಚಾಲಕ ನೇರವಾಗಿ ಮುನ್ನುಗ್ಗಿ ಬಂದು ಆಟೋವನ್ನು ಅಡ್ಡಹಾಕಿ ಚಾಲಕನ ಮೇಲೆ ಕೈಮಾಡಿದ್ದಾರೆ.
ನಮ್ಮ ಪ್ರಯಾಣಿಕರನ್ನು ನೀನು ಯಾಕೆ ಒಯ್ಯುತ್ತಿದ್ದೀಯಾ ಎಂದು ಪ್ರಶ್ನೆ ಮಾಡಿ್್ದದ್ದಲ್ಲದೆ, ಆಟೋ ಚಾಲಕ ಚೇಳ್ಯಾರ್ ಪದವು ನಿವಾಸಿ 55 ವರ್ಷದ ಸುಧಾಕರ್ ಮೇಲೆ ಬಸ್ ಚಾಲಕ ಕಪಾಳಕ್ಕೆ ಬಾರಿಸಿದ್ದಾನೆ. ಅಲ್ಲದೆ, ಬಸ್ ಕಂಡಕ್ಟರ್ ಕೂಡ ಸ್ಥಳಕ್ಕೆ ಬಂದು ಆಟೋ ಚಾಲಕನ ಮೇಲೆ ಹಲ್ಲೆ ಮಾಡಿದ್ದಾನೆ. ಪ್ರಯಾಣಿಕರನ್ನು ಆಸ್ಪತ್ರೆಗೆ ಒಯ್ಯುತ್ತಿರುವುದಾಗಿ ಹೇಳಿದರೂ, ಬಸ್ ಸಿಬಂದಿ ಕೇಳದೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ನೆಲಕ್ಕೆ ದೂಡಿ ಹಾಕಿ ಮೂರ್ನಾಲ್ಕು ಬಾರಿ ಕೆನ್ನೆಗೆ ಬಾರಿಸಿದ್ದು ರಸ್ತೆ ಬದಿಯ ಕಟ್ಟಡದ ಸಿಸಿಟಿವಿಯಲ್ಲಿ ದಾಖಲಾಗಿದೆ. ಹಲ್ಲೆ ಘಟನೆ ಬಗ್ಗೆ ರಿಕ್ಷಾ ಚಾಲಕರು ಸುರತ್ಕಲ್ ಪೊಲೀಸರಿಗೆ ದೂರು ನೀಡಿ, ಕೂಡಲೇ ಬಸ್ ಸೀಜ್ ಮಾಡುವಂತೆ ಒತ್ತಾಯಿಸಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಬಸ್ ಸಿಬಂದಿಯನ್ನು ಬಂಧಿಸುವುದಲ್ಲದೆ, ಬಸ್ಸನ್ನೂ ಸೀಜ್ ಮಾಡುವುದಾಗಿ ಹೇಳಿಕೊಂಡಿದ್ದರು. ಆದರೆ, ಬೆಳಗ್ಗೆ ದೂರು ದಾಖಲಾಗಿೂ ಸಂಜೆಯಾದ್ರೂ ಘಟನೆ ಬಗ್ಗೆ ಪೊಲೀಸರು ಕ್ರಮ ಜರುಗಿಸಿಲ್ಲ. ಬಸ್ಸನ್ನೂ ಸೀಜ್ ಮಾಡಿಲ್ಲ ಎಂದು ಸುರತ್ಕಲ್ ಪರಿಸರದ ಆಟೋ ಚಾಲಕರು ಹೆಡ್ ಲೈನ್ ಕರ್ನಾಟಕಕ್ಕೆ ಕರೆ ಮಾಡಿ ತಿಳಿಸಿದ್ದಾರೆ.
ಘಟನೆ ಬಗ್ಗೆ ಪೊಲೀಸರು ಕ್ರಮ ಜರುಗಿಸದಿದ್ದರೆ ನಾಳೆ ಬಸ್ ತಡೆದು ಪ್ರತಿಭಟನೆ ನಡೆಸುತ್ತೇವೆ ಎಂದು ಸುರತ್ಕಲ್ ಆಟೋ ಚಾಲಕರ ಸಂಘದ ಅಧ್ಯಕ್ಷ ಲತೀಫ್ ತಿಳಿಸಿದ್ದಾರೆ.
Mangalore Kohinoor Bus Driver Brutally attacks Auto Driver for Picking up Passenger. The driver along with Conductor pulled the auto driver on road and attacked him. A case has been registered at the Surathkal police station.
04-10-25 09:18 pm
HK News Desk
Belagavi Heart Attack, SSLC: ಬೆಳಗಾವಿ ; SSLC ಓ...
04-10-25 07:22 pm
ಐಟಿ ನಗರಿ ಬೆಂಗಳೂರು 'ಸೈಬರ್ ಕ್ರೈಮ್' ಕ್ಯಾಪಿಟಲ್...
03-10-25 06:08 pm
DK Shivakumar: ಪವರ್ ಷೇರಿಂಗ್ ಬಗ್ಗೆ ಮಾತಾಡಿದ್ರೆ...
02-10-25 03:50 pm
ಆರ್ ಸಿಬಿ ತಂಡ ಮಾರಾಟಕ್ಕಿಟ್ಟ ಯುನೈಟೆಡ್ ಸ್ಪಿರಿಟ್ಸ್...
02-10-25 02:28 pm
04-10-25 04:45 pm
HK Staffer
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ನಿಲ್ಲಿಸದಿದ್ದರೆ ಭ...
03-10-25 09:09 pm
ಮಕ್ಕಳ ವಿಡಿಯೋ ಗೇಮ್ ನಲ್ಲೂ ಸೈಬರ್ ಅಪರಾಧ ; ಶಾಲಾ ಹಂ...
03-10-25 04:50 pm
03-10-25 11:07 pm
Mangalore Correspondent
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
Illegal Slaughterhouse in Mangalore: ಬೆನ್ನು ಬ...
02-10-25 10:43 pm
04-10-25 02:57 pm
HK News Desk
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm