ಬ್ರೇಕಿಂಗ್ ನ್ಯೂಸ್
13-07-21 04:16 pm Mangalore Correspondent ಕರಾವಳಿ
ಮಂಗಳೂರು, ಜುಲೈ 13: ಹಲಸಿನ ಹಣ್ಣಿನಲ್ಲಿ ಕೆಲವು ಕಡೆ ಏನೆಲ್ಲಾ ವೆರೈಟಿ ಮಾಡಲಾಗುತ್ತದೆ. ಕೇರಳದಲ್ಲಿ ಈ ಹಣ್ಣಿನಿಂದ ಭರಪೂರ ಉಪ ಉತ್ಪನ್ನಗಳನ್ನು ತಯಾರಿಸುತ್ತಾರೆ. ಕೇರಳಕ್ಕೆ ಹೋಲಿಸಿದಲ್ಲಿ ಕರ್ನಾಟಕದಲ್ಲಿ ಹಲಸಿನ ಉತ್ಪನ್ನಗಳು ಬಂದಿರುವುದು ಕಡಿಮೆ. ಆದರೆ, ಈಗ ಸಹಕಾರಿ ಮಾರುಕಟ್ಟೆ ಸಂಸ್ಥೆ ಕ್ಯಾಂಪ್ಕೋ ಮೊದಲ ಬಾರಿಗೆ ಹಲಸಿನ ಹಣ್ಣಿನಲ್ಲಿ ವೆರೈಟಿ ತಯಾರಿಸಲು ಮುಂದಾಗಿದ್ದು, ದೇಶದಲ್ಲೇ ಮೊದಲ ಬಾರಿಗೆ ಹಲಸಿನ ಹಣ್ಣಿನಿಂದ ಚಾಕ್ಲೇಟ್ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಕರಾವಳಿಯಲ್ಲಿ ಹಲಸಿನ ಹಣ್ಣು ಅಂದ್ರೆ ಹೆಚ್ಚಿನ ಕಡೆ ಹಾಳಾಗಿ ಹೋಗುವ ವಸ್ತು. ಅದರಿಂದ ಥರಾವರಿ ಉತ್ಪನ್ನಗಳನ್ನು ತಯಾರಿಸಲು ಸಾಧ್ಯವಿದ್ದರೂ, ಸರಕಾರ ಮತ್ತು ಸಹಕಾರಿ ಸಂಸ್ಥೆಗಳ ಪ್ರೋತ್ಸಾಹ ಸಿಗದೆ ಹಲಸಿನ ಹಣ್ಣು ಮಾರುಕಟ್ಟೆ ಬೆಳೆಯಾಗಿ ಇನ್ನೂ ಬೆಳೆದಿಲ್ಲ. ಹಾಗಿದ್ದರೂ, ಹಲಸಿನ ಹಣ್ಣಿನ ವೆರೈಟಿಗಳು ಭಾರೀ ಡಿಮಾಂಡ್ ಪಡೆಯುತ್ತಿರುವುದರಿಂದ ನಿಧಾನಕ್ಕೆ ಅದರ ಬಗ್ಗೆ ಸಂಶೋಧನೆಗಳು, ಉಪ ಉತ್ಪನ್ನಗಳ ತಯಾರಿಕೆಗೆ ಒತ್ತು ನೀಡಲಾಗಿದೆ.
ಕ್ಯಾಂಪ್ಕೋ ಸಂಸ್ಥೆಯಿಂದ ಈಗ ಜಾಕ್ ಫ್ರುಟ್ ಎಕ್ಲೇರ್ಸ್ ಹೆಸರಿನಲ್ಲಿ ಚಾಕ್ಲೇಟ್ ತಯಾರಿಸಲಾಗಿದ್ದು, ಕರ್ನಾಟಕ ರಾಜ್ಯದಾದ್ಯಂತ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಕಳೆದ ಎಂಟು ತಿಂಗಳಿಂದ ಪುತ್ತೂರಿನ ಕ್ಯಾಂಪ್ಕೋ ಕಾರ್ಖಾನೆಯಲ್ಲಿ ಇದರ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿ, ಹಲಸಿನ ಹಣ್ಣಿನ ಪರಿಮಳ ಬರುವ ರೀತಿ ಚಾಕಲೇಟ್ ರೆಡಿ ಮಾಡಲಾಗಿದೆ ಎಂದು ಕ್ಯಾಂಪ್ಕೋ ಸಂಸ್ಥೆಯ ಎಂಡಿ ಕೃಷ್ಣಕುಮಾರ್ ತಿಳಿಸಿದ್ದಾರೆ.
ಅಂದಹಾಗೆ, ಒಂದು ಟನ್ ಚಾಕಲೇಟ್ ಉತ್ಪಾದನೆಗೆ 500 ಕೇಜಿ ಹಲಸಿನ ಹಣ್ಣು ಬೇಕಾಗುವುದಂತೆ. ಇದಕ್ಕಾಗಿ ಕೇರಳ ಮತ್ತು ಕರ್ನಾಟಕದ ಉತ್ತಮ ತಳಿಯ ಹಲಸಿನ ಹಣ್ಣನ್ನು ಪಡೆಯಲಾಗಿದ್ದು, ಅವನ್ನು ಬಳಸಿ ಚಾಕಲೇಟ್ ತಯಾರಿಸಲಾಗಿದೆ. ಮೊದಲಿಗೆ, ಎರಡು ರೂ. ಬೆಲೆಯ ಸಣ್ಣ ಚಾಕ್ಲೇಟ್ ಮಾರುಕಟ್ಟೆಗೆ ತರಲಾಗಿದೆ. ಒಂದು ಚಾಕ್ಲೇಟಿನಲ್ಲಿ ಶೇ.12ರಷ್ಟು ಹಲಸಿನ ಅಂಶ, ಸಕ್ಕರೆ, ಹಾಲು ಮತ್ತು ಒಂದಷ್ಟು ಫ್ಯಾಟ್ ಬಳಸಲಾಗಿದೆ. ಗರಿಷ್ಠ 9 ತಿಂಗಳ ವರೆಗೆ ಇಟ್ಟುಕೊಳ್ಳಬಹುದು ಎಂದು ಕೃಷ್ಣಕುಮಾರ್ ಹೇಳಿದ್ದಾರೆ.
ಕ್ಯಾಂಪ್ಕೋ ಕಾರ್ಖಾನೆಯಲ್ಲಿ ಅಡಿಕೆ ಮತ್ತು ಕೋಕೋ ಬಳಸಿ ಚಾಕ್ಲೇಟ್ ಇನ್ನಿತರ ಉತ್ಪನ್ನಗಳ ತಯಾರಿಕೆ ನಡೆಯುತ್ತಿದೆ. ಆದರೆ, ಮೊದಲ ಬಾರಿಗೆ ಹಲಸಿನ ಹಣ್ಣಿನಿಂದ ಚಾಕಲೇಟ್ ತಯಾರಿಸಲು ಆರಂಭಿಸಲಾಗಿದೆ. ಭವಿಷ್ಯದಲ್ಲಿ ಹಾಗಲಕಾಯಿ ರೀತಿಯ ತರಕಾರಿಗಳನ್ನೂ ಬಳಸಿ ಚಾಕಲೇಟ್ ತಯಾರಿಸಲು ಸಂಶೋಧನೆ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ.
Mangalore Campco releases India's first Jackfruit Eclairs and Campco Hazelnut Chocolate. The main ingredients in Jackfruit Eclairs is vacuum-fried natural jackfruit pieces and powder without using any artificial flavours. The Hazelnut Choco spread is a combination used as a spread on bread, toast, chapathi, and even on the dosa.
18-04-25 03:38 pm
HK News Desk
Grace Ministry Bangalore, Budigere, Ark of th...
17-04-25 05:01 pm
Chennaiyya Swamiji, Caste census: ಪರಿಶಿಷ್ಟ ಜಾ...
17-04-25 11:41 am
Shamanur, CM Siddaramaiah: ರಾಜ್ಯದಲ್ಲಿ ಲಿಂಗಾಯತ...
16-04-25 11:03 pm
ಒಂದನೇ ತರಗತಿಗೆ ಪ್ರವೇಶ ; ಈ ವರ್ಷಕ್ಕೆ ಮಾತ್ರ ಮಕ್ಕಳ...
16-04-25 09:07 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
18-04-25 12:54 pm
Mangalore Correspondent
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
Karnataka High Court, Waqf protest Mangalore...
17-04-25 10:27 pm
ಸುರತ್ಕಲ್ ಎನ್ಐಟಿಕೆ ಸಂಸ್ಥೆಯಲ್ಲಿ ಮಹತ್ತರ ಫೈಲ್ ಡಿಲ...
17-04-25 04:39 pm
Mangalore, Bantwal Accident, Melroy D’Sa: ಬಂಟ...
16-04-25 10:58 pm
18-04-25 03:41 pm
Bangalore Correspondent
Ullal Gang rape, Mangalore, Arrest: ಪಶ್ಚಿಮ ಬಂ...
17-04-25 09:56 pm
Gang Rape, Mangalore, Ullal, Crime: ಪಶ್ಚಿಮ ಬಂ...
17-04-25 03:19 pm
Sullia, Drugs, Mangalore, Ccb Police; ದೆಹಲಿಯಿ...
17-04-25 11:39 am
Air Hostess, ICU, Sexual Harrasment: ICU ನಲ್ಲ...
15-04-25 10:24 pm