ಬ್ರೇಕಿಂಗ್ ನ್ಯೂಸ್
14-07-21 05:36 pm Mangalore Correspondent ಕರಾವಳಿ
ಮಂಗಳೂರು, ಜುಲೈ 14: ಒಂದು ಕಡೆ ಕೋವಿಡ್ ಮೂರನೇ ಅಲೆಯ ಭೀತಿಯಲ್ಲಿ ಗಡಿಗಳಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ. ಕೇರಳ- ಮಹಾರಾಷ್ಟ್ರದಿಂದ ಆಗಮಿಸುವ ಮಂದಿಗೆ ಕಟ್ಟುನಿಟ್ಟು ನಿಯಮವನ್ನೂ ಹೇರಲಾಗಿದೆ. ಇನ್ನೊಂದೆಡೆ ಸಭೆ, ಸಮಾರಂಭಗಳನ್ನು ನಡೆಸದೆ, ಜನರು ಗುಂಪು ಸೇರದೆ ಕೋವಿಡ್ ನಿಯಮ ಕಡ್ಡಾಯ ಪಾಲನೆ ಮಾಡಬೇಕು ಎಂದು ಸರಕಾರದಿಂದ ಆಯಾ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಆದರೆ, ಮಂಗಳೂರಿನಲ್ಲಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಲ್ಲಿ ಮಾತ್ರ ತಮಗೂ ಕೋವಿಡ್ ಮಾರ್ಗಸೂಚಿಯ ನಿರ್ಬಂಧಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ಇಡೀ ಸರಕಾರವೇ ಪಾಲ್ಗೊಂಡು ಬೃಹತ್ ಸಮಾರಂಭ ನಡೆಸಿದ್ದು, ಅಧಿಕಾರಿಗಳು ಕಣ್ಣು ಬಿಡುವಂತಾಗಿದೆ.
ರಾಜ್ಯ ಸರಕಾರ ಕೋವಿಡ್ ನಲ್ಲಿ ಮೃತಪಟ್ಟವರು ಸಹಕಾರಿ ಬ್ಯಾಂಕುಗಳಲ್ಲಿ ಒಂದು ಲಕ್ಷದ ವರೆಗೆ ಸಾಲ ಹೊಂದಿದ್ದರೆ, ಅದನ್ನು ಮನ್ನಾ ಮಾಡುವುದಾಗಿ ಘೋಷಣೆ ಮಾಡಿದೆ. ಅದರಂತೆ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟ 152 ಮಂದಿ ಸಹಕಾರಿ ಬ್ಯಾಂಕಿನಲ್ಲಿ ಸಾಲ ಹೊಂದಿರುವುದನ್ನು ಪತ್ತೆ ಮಾಡಲಾಗಿದೆ. ಇದರ ಘೋಷಣೆ ಸೇರಿದಂತೆ, ರೈತರಿಗೆ ವಿವಿಧ ರೀತಿಯ ಸಾಲ ವಿತರಣೆ ಮಾಡುವ ನೆಪದಲ್ಲಿ ರೈತ ಸ್ಪಂದನ ಎನ್ನುವ ಬೃಹತ್ ಕಾರ್ಯಕ್ರಮವನ್ನು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವತಿಯಿಂದ ನಡೆಲಾಗಿದ್ದು, ಮಂಗಳೂರಿನ ಕೆ.ಎಸ್.ರಾವ್ ರಸ್ತೆಯಲ್ಲಿರುವ ಪ್ರಧಾನ ಕಚೇರಿಯ ಕಟ್ಟಡದಲ್ಲಿ ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿತ್ತು.
ಅಗತ್ಯ ಮದುವೆ ಕಾರ್ಯಕ್ರಮಗಳಿದ್ದೆರ ನೂರು ಜನಕ್ಕೆ ಸೀಮಿತಗೊಳಿಸಿ ನಡೆಸಬಹುದು ಎಂದು ರಾಜ್ಯ ಸರಕಾರದ ಮಾರ್ಗಸೂಚಿಯಿದೆ. ಉಳಿದಂತೆ, ಸೀಮಿತ ಸಂಖ್ಯೆಯಲ್ಲಿ (ನೂರಕ್ಕೆ ಮೀರದಂತೆ) ಒಳಾಂಗಣದಲ್ಲಿ ಸಭೆ ನಡೆಸುವುದಕ್ಕೂ ಅವಕಾಶ ನೀಡಲಾಗಿದೆ. ಆದರೆ, ಮಂಗಳೂರಿನ ಜಿಲ್ಲಾ ಕೇಂದ್ರ ಸಕಹಕಾರಿ ಬ್ಯಾಂಕಿನ ಕಟ್ಟಡದ ಪ್ರಧಾನ ಕಚೇರಿಯ ಆರನೇ ಮಹಡಿಯಲ್ಲಿ ದೊಡ್ಡ ಹಾಲ್ ನಲ್ಲಿ ಸರಕಾರದ ಸಚಿವರು, ಶಾಸಕರನ್ನು ಒಳಗೊಳ್ಳಿಸಿಯೇ ಸಮಾರಂಭ ನಡೆಸಲಾಗಿದ್ದು ಕೋವಿಡ್ ನಿಯಮಗಳು ಬಡ ಜನಸಾಮಾನ್ಯರಿಗೆ ಮಾತ್ರವೇ ಎನ್ನುವ ಪ್ರಶ್ನೆ ಎದ್ದಿದೆ.
ಕಾರ್ಯಕ್ರಮದಲ್ಲಿ ಕಡಿಮೆ ಎಂದರೂ 450ಕ್ಕೂ ಹೆಚ್ಚು ಜನರು ಸೇರಿದ್ದರು. ಅಲ್ಲದೆ, ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಶಾಸಕ ಬೆಳ್ಳಿಪ್ರಕಾಶ್, ಮಂಗಳೂರಿನ ಶಾಸಕ ವೇದವ್ಯಾಸ ಕಾಮತ್, ಮೂಡುಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ರಾಜೇಂದ್ರ ಕುಮಾರ್ ಸೇರಿದಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಹಕಾರಿ ವಲಯದ ಮುಖಂಡರು ಪಾಲ್ಗೊಂಡಿದ್ದರು.
ಬಡವರ ಮನೆಯ ಮದುವೆ ಕಾರ್ಯಗಳಿಗೆ ಅವಕಾಶ ಇಲ್ಲ. ಇತರೇ ರಾಜಕೀಯ, ಇನ್ನಿತರ ಸಭೆ, ಸಮಾರಂಭಗಳಿಗೂ ಅವಕಾಶ ಇಲ್ಲ. ಶಾಲೆ, ಕಾಲೇಜುಗಳನ್ನು ಜುಲೈ 19ರ ವರೆಗೆ ತೆರೆಯಲೇ ಬಾರದು ಎಂಬ ಮಾರ್ಗಸೂಚಿ ಇದೆ. ಅತ್ತ ಕೇರಳದಲ್ಲಿ ಜುಲೈ 16, 17ಕ್ಕೆ ಪೂರ್ತಿ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಆದರೆ, ಇಷ್ಟೆಲ್ಲ ಕಟ್ಟುನಿಟ್ಟು ನಿಯಮಗಳು, ಅದರ ಮೇಲೆ ಮೂರನೇ ಅಲೆಯ ಹೆಸರಲ್ಲಿ ಗಡಿ ನಿರ್ಬಂಧಿಸುವುದು, ಗಡಿಯಲ್ಲಿ ತಪಾಸಣೆ ನಡೆಸುವುದು ಇತ್ಯಾದಿಗಳ ಮಧ್ಯೆ ರಾಜಕೀಯ ನಾಯಕರು, ಸಹಕಾರಿ ವಲಯದ ಪ್ರಮುಖರು ಸೇರಿ ತಾವಾಗೇ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸುವುದನ್ನು ನೋಡಿದರೆ, ಈ ಕೋವಿಡ್ ನಿಯಮಗಳೆಲ್ಲ ಬಡವರಿಗೆ ಮಾತ್ರನಾ ಎಂಬ ಮಾತು ಕೇಳಿಬರದೇ ಇರುವುದಿಲ್ಲ.
ಸಭೆಯಲ್ಲಿ ಸಹಕಾರಿ ಇಲಾಖೆಯ ಜಿಲ್ಲೆ ಮತ್ತು ರಾಜ್ಯ ಮಟ್ಟದ ಅಧಿಕಾರಿಗಳೂ ಇದ್ದರು. ಕೋವಿಡ್ ಮಾರ್ಗಸೂಚಿ ನೆಪದಲ್ಲಿ ಬ್ಯಾಂಕಿನ ಒಳಭಾಗದಲ್ಲಿ ಗ್ಲಾಸ್ ಮುಚ್ಚಿಕೊಂಡು ಒಳಗೆ ಕೂರುವ ಬ್ಯಾಂಕ್ ಅಧಿಕಾರಿಗಳೂ ಇದ್ದರು. ನೂರಾರು ಮಂದಿ ಬ್ಯಾಂಕಿನ ಗ್ರಾಹಕರು, ಠೇವಣಿದಾರರು, ಸಾಲದ ಆಸೆ ಇಟ್ಟುಕೊಂಡು ಬಂದ ಬಡ ವರ್ಗದ ಮಂದಿಯೂ ಇದ್ದರು. ಕಾರ್ಯಕ್ರಮದ ಆಶಯ ಒಳ್ಳೆಯದೇ ಆಗಿದ್ದರೂ, ಕೋವಿಡ್ ನಿರ್ಬಂಧಗಳ ಮಧ್ಯೆ ಅದ್ದೂರಿ ಸಮಾರಂಭ ಏರ್ಪಡಿಸಿ, ಜನರ ಕಣ್ಣಲ್ಲಿ ವಿಲನ್ ಆಗುವ ಕಾರ್ಯಕ್ರಮ ಅಗತ್ಯ ಇರಲಿಲ್ಲ.
Amid Rising Covid-19 cases SCDCC Bank authorities break Covid-19 rules by organising mass function at their building in K S Rao Road, Kodialbail. People have taken social media to slam the administration for not taking any action or conducting a raid for breaking rules.
18-07-25 08:01 pm
HK News Desk
ಸಿಎಂ ಸಿದ್ದರಾಮಯ್ಯ ನಿಧನ ; ಫೇಸ್ಬುಕ್ ಅವಾಂತರಕ್ಕೆ...
18-07-25 07:11 pm
Dharmasthala Case, SIT, CM Siddaramaiah: ಧರ್ಮ...
18-07-25 04:48 pm
Mangalore South ACP Vijayakranti: ಮಂಗಳೂರು ದಕ್...
18-07-25 03:38 pm
Minister Dinesh Gundu Rao, Dharmasthala: ಧರ್ಮ...
17-07-25 07:45 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
18-07-25 03:19 pm
Mangalore Correspondent
Mangalore Rain, Thokottu: ಧಾರಕಾರ ಮಳೆ ; ತೊಕ್ಕೊ...
18-07-25 02:36 pm
"Celebrating Excellence: 37 Achievers Felicit...
17-07-25 06:30 pm
Wild Elephant Attack, Dharmasthala: ಧರ್ಮಸ್ಥಳ...
17-07-25 04:14 pm
Minister Priyank Kharge, Drug Trafficking: ಡ್...
17-07-25 01:51 pm
18-07-25 12:40 pm
Mangalore Correspondent
Mangalore Fraud, WhatsApp, crime: ಕಂಪನಿಯ ಎಂಡಿ...
18-07-25 12:01 pm
Mangalore Kadri Police, Crime, Snake; ಹೆಬ್ಬಾವ...
18-07-25 11:36 am
Crore Fraud, Roshan Saldanha Arrest, Mangalor...
17-07-25 10:42 pm
Uppinangady Murder: ಕೌಟುಂಬಿಕ ಕಲಹ ; ಮಾತಿಗೆ ಮಾತ...
17-07-25 02:30 pm