16 ವರ್ಷಗಳಿಂದ ಮುಂಬೈನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

15-07-21 02:41 pm       Mangalore Correspondent   ಕರಾವಳಿ

ಹಲ್ಲೆ , ಜೀವ ಬೆದರಿಕೆ ಪ್ರಕರಣದಲ್ಲಿ 16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಜ್ಪೆ ಪೊಲೀಸರು ಮುಂಬೈನಲ್ಲಿ ಬಂಧಿಸಿ ಕರೆ ತಂದಿದ್ದಾರೆ.

ಮಂಗಳೂರು, ಜುಲೈ 15 : ಹಲ್ಲೆ , ಜೀವ ಬೆದರಿಕೆ ಪ್ರಕರಣದಲ್ಲಿ 16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಜ್ಪೆ ಪೊಲೀಸರು ಮುಂಬೈನಲ್ಲಿ ಬಂಧಿಸಿ ಕರೆ ತಂದಿದ್ದಾರೆ.

ಮೂಲತಃ ಮುಲ್ಕಿ‌ ನಿವಾಸಿ, ಬಳಿಕ ಮುಂಬೈನ ಸಾಕಿನಾಕಾ ಎಂಬಲ್ಲಿ ವಾಸವಿದ್ದ ಚಂದ್ರಕಾಂತ ಪೂಜಾರಿ ಯಾನೆ ಅಣ್ಣು (55) ಬಂಧಿತ ಆರೋಪಿ.

ಬಜ್ಪೆ ವ್ಯಾಪ್ತಿಯ ಪೆರ್ಮುದೆ ಗ್ರಾಮದಲ್ಲಿ 2005ರ ಜನವರಿ 10ರಂದು ರಾತ್ರಿ ವಿಶ್ವನಾಥ ಅಮೀನ್ ಎಂಬವರ ಮನೆಗೆ ನುಗ್ಗಿದ್ದ ಆರೋಪಿಗಳು, ಮನೆಯವರಿಗೆ ನಿಂದಿಸಿ, ಬಾಟ್ಲಿಯಿಂದ ಹಲ್ಲೆ ನಡೆಸಿದ್ದರು. ಈ ಬಗ್ಗೆ ಬಜ್ಪೆ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿತ್ತು. 

ಪ್ರಕರಣದ ತನಿಖೆ ನಡೆಸಿದ ಅಂದಿನ ಪಿಎಸ್‌ಐ ಧರ್ಮೇಂದ್ರ ಆರೋಪಿ ಯೋಗೀಶ್ ಎಂಬಾತನನ್ನು ಬಂಧಿಸಿದ್ದರೆ, ಇನ್ನೊಬ್ಬ ಆರೋಪಿ ಚಂದ್ರಕಾಂತ ತಪ್ಪಿಸಿಕೊಂಡಿದ್ದ. 16 ವರ್ಷಗಳ ಬಳಿಕ ಆರೋಪಿ ಚಂದ್ರಕಾಂತ್ ಮುಂಬೈನಲ್ಲಿ ನೆಲೆಸಿರುವ ಮಾಹಿತಿ ಪಡೆದು, ಪೊಲೀಸರಿಗೆ ಬಂಧನಕ್ಕೆ ತೆರಳಿದ್ದರು. ಮುಂಬೈನ ಅಂಧೇರಿಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ ವೇಳೆ ಆರೋಪಿಯನ್ನು ಬಂಧಿಸಿದ್ದಾರೆ.

Man absconding for 16 years now arrested in Mangalore. The arrested has been identified as Chandrakanth (55).