ಬ್ರೇಕಿಂಗ್ ನ್ಯೂಸ್
15-07-21 05:49 pm Mangalore Correspondent ಕರಾವಳಿ
ಸುಳ್ಯ, ಜುಲೈ 15: ಅದು ಮೊನ್ನೆ ಮೊನ್ನೆ ವರೆಗೂ ಕೇಂದ್ರ ಸಚಿವರಾಗಿದ್ದ ಡಿ.ವಿ.ಸದಾನಂದ ಗೌಡರ ಹುಟ್ಟೂರು ದೇವರಗುಂಡದಿಂದ ಕೂಗಳತೆಯ ದೂರದಲ್ಲಿರುವ ಊರು. ಹತ್ತು ವರ್ಷಗಳ ಹಿಂದೆ ಈ ರಾಜ್ಯದ ಮುಖ್ಯಮಂತ್ರಿ ಪದವಿಯನ್ನೂ ಅಲಂಕರಿಸಿದ್ದರು ಇದೇ ಸದಾನಂದ ಗೌಡರು. ಅವರು ಹುಟ್ಟಿ ಬೆಳೆದ ಮಂಡೆಕೋಲಿನ ದೇವರಗುಂಡ ಪ್ರದೇಶಕ್ಕಿಂತ ಕೇವಲ ಮೂರು ಕಿಮೀ ಅಂತರದಲ್ಲಿರುವ ಜಾಲ್ಸೂರಿನ ಮರಸಂಕ ಎನ್ನುವ ಊರಿನ ಜನರ ಗೋಳಿನ ಕತೆ ಎಲ್ಲಿ ಮುಟ್ಟಿದೆ ಅಂದರೆ, ಅಲ್ಲಿನ ಜನ ಅಸೌಖ್ಯ ಪೀಡಿತ ಮಹಿಳೆಯೊಬ್ಬರನ್ನು ಸ್ಚ್ರಚರ್ ನಲ್ಲಿ ಹಾಕಿ ಹೊತ್ತುಕೊಂಡು ಸಾಗುವ ಸ್ಥಿತಿ ಎದುರಾಗಿದೆ.
ಹೌದು.. ಸುಳ್ಯದ ಶಾಸಕ ಎಸ್.ಅಂಗಾರ ಈಗ ಸಚಿವರಾಗಿದ್ದಾರೆ. ಮೀನುಗಾರಿಕೆ, ಬಂದರು ಇಲಾಖೆಯ ಸಚಿವರೂ ಹೌದು.. ಕಳೆದ ಆರು ಬಾರಿ ಶಾಸಕರಾಗಿರುವ ಅಂಗಾರ ಅವರ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರೇ ಹೆಚ್ಚು. ಆದರೆ, ತಮ್ಮದೇ ಜಾತಿಯವರೊಬ್ಬರು ಶಾಸಕರಾಗಿದ್ದರೂ ಎಸ್ಸಿ- ಎಸ್ಟಿ ಕಾಲನಿಯ ಜನರ ಗೋಳಿಗೆ ಕಿವಿ ಕೊಡುವವರೇ ಇಲ್ಲ ಎನ್ನುವಂತಾಗಿದೆ.
ಜಾಲ್ಸೂರು ಪಂಚಾಯತ್ ವ್ಯಾಪ್ತಿಯ ಮರಸಂಕ ಎನ್ನುವ ಊರು ಜಾಲ್ಸೂರು ಪೇಟೆಯಿಂದ ಕೇವಲ ಅರ್ಧ ಕಿಮೀ ದೂರದಲ್ಲಿರುವ ಗ್ರಾಮ. ಅತ್ತ ಒಂದೂವರೆ ಕಿಮೀ ಸಾಗಿದರೆ ಕೇರಳ ಗಡಿ. ನಡುವೆ ಇರುವ ಮರಸಂಕ ಎನ್ನುವ ಗ್ರಾಮದಲ್ಲಿ ಕೇವಲ 9 ಮನೆಗಳಿದ್ದು, 40 ಮಂದಿ ನಿವಾಸಿಗಳಿದ್ದಾರೆ. ಇಲ್ಲಿನ ಜನರ ಗೋಳು ಏನಂದ್ರೆ, ನಡುವೆ ಇರುವ ಹೊಳೆ ದಾಟಿ ಹೋಗುವುದು. ಮಳೆಗಾಲ ಅಂದ್ರೆ, ಜನರಿಗೆ ಹೊಳೆ ದಾಟಿ ಹೋಗುವುದೇ ಸಂಕಷ್ಟ ಎನ್ನುವಂತಾಗಿದೆ.
ಎರಡು ದಿನಗಳ ಹಿಂದೆ ಅಲ್ಲಿನ ಮಹಿಳೆಯೊಬ್ಬರು ಬಿದ್ದು ಕಾಲು ಮುರಿತಕ್ಕೊಳಗಾಗಿದ್ದರು. ರಸ್ತೆ ಇಲ್ಲದ ಕಾರಣ ವಾಹನ ಸೌಕರ್ಯ ಇಲ್ಲದೆ, ಆ ಮಹಿಳೆಯನ್ನು ಸ್ಥಳೀಯರು ಸ್ಟ್ರಚರ್ ನಲ್ಲಿ ಹೊತ್ತುಕೊಂಡು ಸಾಗಿದ್ದರು. ನಡುವೆ ಹರಿಯುವ ಹೊಳೆಯನ್ನು ಸ್ಟ್ರಚರ್ ಹೊತ್ತುಕೊಂಡು ಸಾಗಿದ ದೃಶ್ಯ ಜಾಲತಾಣದಲ್ಲಿ ವೈರಲ್ ಆಗಿದ್ದು, ಸುಳ್ಯದ ಜನರ ದುಸ್ಥಿತಿಯನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ. ಈ ಬಗ್ಗೆ ಅಲ್ಲಿನ ಸ್ಥಳೀಯರಲ್ಲಿ ಕೇಳಿದರೆ, ನಾವು ಇದರ ಬಗ್ಗೆ ಇಲ್ಲಿನ ಶಾಸಕರಿಗೆ, ಎಲ್ಲ ಜನಪ್ರತಿನಿಧಿಗಳಿಗೂ ಮನವಿ ಮಾಡಿದ್ದೇವೆ. ಆದರೆ ಪ್ರಯೋಜನ ಆಗಿಲ್ಲ. ನಮ್ಮದು ದುರಂತ ಸ್ಥಿತಿ. ಮಳೆ ಇರಲಿ, ಇಲ್ಲದಿರಲಿ. ನಮ್ಮ ಗ್ರಾಮಕ್ಕೆ ರಸ್ತೆಯೇ ಇಲ್ಲ. ಮಳೆಗಾಲದಲ್ಲಿ ನಡೆದು ಹೋಗುವುದಕ್ಕೂ ಸಾಧ್ಯವಾಗದ ಸ್ಥಿತಿ ಇದೆ. ಜನಪ್ರತಿನಿಧಿಗಳು ಚುನಾವಣೆ ಬಂದಾಗಲಷ್ಟೇ ಬರುತ್ತಾರೆ. ಎಲ್ಲವನ್ನೂ ಮಾಡಿಕೊಡುವುದಾಗಿ ಹೇಳಿ ಹೋಗುತ್ತಾರೆ ಎಂದು ಅಲವತ್ತು ಕೊಂಡಿದ್ದಾರೆ.
ಮರಸಂಕ ಊರಿನವರೇ ಆಗಿರುವ ಬಾಬು ಕೆ.ಎಂ. ಎಂಬವರು ಈಗ ಜಾಲ್ಸೂರು ಪಂಚಾಯತ್ ಅಧ್ಯಕ್ಷರಾಗಿದ್ದಾರೆ. ಅವರಲ್ಲಿ ಈ ಬಗ್ಗೆ ಕೇಳಿದಾಗ, ಇಂದು ವೈರಲ್ ಆಗಿರುವ ವಿಡಿಯೋ ನಮ್ಮ ಗೋಳಿನ ಕತೆಯನ್ನು ತೆರೆದಿಟ್ಟಿದೆ. ನಾವು ಈ ಬಗ್ಗೆ ಯಾರಿಗೆ ಹೇಳೋದು.. ಕಳೆದ ಬಾರಿ ನಾವು ಒಂದು ಸಂಕ ಮಾಡಬೇಕು ಎಂದು ಪಂಚಾಯತ್ ನಲ್ಲಿ ನಿರ್ಣಯಿಸಿ, ಬಹಳಷ್ಟು ಪ್ರಯತ್ನ ಪಟ್ಟೆವು. ಆದರೆ, ಒಂದೆರಡು ಲಕ್ಷದಲ್ಲಿ ಸಾಧ್ಯವಾಗಲ್ಲ ಎಂದು ಕೈಚೆಲ್ಲಿದ್ದೆವು.
ಇವತ್ತು ಅಲ್ಲಿನ ವಿಡಿಯೋ ವೈರಲ್ ಆದಾಗ ತಹಸೀಲ್ದಾರ್ ನಿಂದ ಹಿಡಿದು ಎಲ್ಲ ಅಧಿಕಾರಿಗಳೂ ಅಲ್ಲಿಗೆ ಭೇಟಿ ಕೊಟ್ಟಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು, ವಿಎ, ರೆವಿನ್ಯೂ, ಪಂಚಾಯತ್ ಅಧಿಕಾರಿಗಳು ಬಂದಿದ್ದಾರೆ. ಮಧ್ಯಾಹ್ನ ಬಂದ ತಹಸೀಲ್ದಾರ್ ಅನಿತಾ ಲಕ್ಷ್ಮಿಯವರು, ಇಲ್ಲಿ ಸೇತುವೆ ಆಗುವುದಕ್ಕೆ ಅಕ್ಕಪಕ್ಕದವರ ಜಮೀನು ಇದ್ದವರಲ್ಲಿ ಮಾತನಾಡಿ. ಇಲ್ಲಿ ಕೇವಲ ಸೇತುವೆ ಮಾತ್ರ ಅಲ್ಲ, ರಸ್ತೆಯೂ ಆಗಬೇಕು. ನಾಡಿದ್ದು ಕೆಡಿಪಿ ಮೀಟಿಂಗಲ್ಲಿ ಸಚಿವರಿಗೆ ಈ ಬಗ್ಗೆ ಮನವಿ ಕೊಡಿ ಎಂದು ಹೇಳಿದರು. ಸ್ಥಳಕ್ಕೆ ಬಂದಿದ್ದ ಎಕ್ಸಿಕ್ಯೂಟಿವ್ ಇಂಜಿನಿಯರ್, ಸಾಧಾರಣ ಸೇತುವೆ ಮತ್ತು ರಸ್ತೆ ಮಾಡುವುದಕ್ಕೆ 35ರಿಂದ 40 ಲಕ್ಷ ಬೇಕು ಎಂದು ಎಸ್ಟಿಮೇಟ್ ಹೇಳಿದ್ರು ಎನ್ನುವ ಮಾಹಿತಿ ನೀಡಿದ್ರು ಬಾಬು ಕೆ.ಎಂ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಈ ಜಿಲ್ಲೆಗೆ ಕೇಂದ್ರದಿಂದ 16 ಸಾವಿರ ಕೋಟಿ ಅನುದಾನ ಬಂದಿರುವುದಾಗಿ ಪತ್ರಿಕೆಗೆ ಜಾಹೀರಾತು ಕೊಡುತ್ತಾರೆ. ಗ್ರಾಪಂನಿಂದ ಹಿಡಿದು ಜಿಲ್ಲೆ, ಮಂಗಳೂರು ನಗರಕ್ಕೆ ಬಂದ ಅನುದಾನ, ಕಾಮಗಾರಿಯ ವಿವರಗಳನ್ನೆಲ್ಲ ಸೇರಿಸಿ 16 ಸಾವಿರ ಕೋಟಿಯ ಬಗ್ಗೆ ಕೊಚ್ಚಿಕೊಳ್ಳುತ್ತಾರೆ. ಆದರೆ, ಇವರದೇ ಕ್ಷೇತ್ರದ ಕುಗ್ರಾಮದಲ್ಲಿ ಜನರು ರೋಗಿಯನ್ನು ಹೊತ್ತುಕೊಂಡು ಸಾಗುವ ಸ್ಥಿತಿಯಿದೆ ಎನ್ನುವ ಗೊಡವೆ ಇಲ್ಲದೇ ಭಾಷಣ ಬಿಗಿಯುತ್ತಾರೆ. ಯಾರು ಶಾಸಕ, ಯಾರು ಎಂಪಿ ಎನ್ನೋದು ಮುಖ್ಯ ಅಲ್ಲ. ಇಂಥ ಊರುಗಳಲ್ಲಿ ಜನರ ಮೂಲಸೌಕರ್ಯ ಏನಿದೆ ಅನ್ನುವುದು ಅಲ್ಲಿನ ಕ್ಷೇತ್ರದ ಸ್ಥಿತಿಗತಿಗೆ ಕನ್ನಡಿ ಹಿಡಿಯುತ್ತದೆ.
ಬೆಂಗಳೂರಿಗೆ ತೆರಳಿದ ಬಳಿಕ ಸದಾನಂದ ಗೌಡ ತನ್ನ ಊರಿನ ಉಸಾಬರಿ ಮರೆತಿರಬಹುದು. ಅಲ್ಲಿನ ಜನರು ಮರೆತಿರಲ್ಲ. ಈ ಊರಿನ ಒಬ್ಬಾತ ಮುಖ್ಯಮಂತ್ರಿಯಾದರು. ಕೇಂದ್ರದಲ್ಲಿ ಸಚಿವರೂ ಆದರು. ಆದರೆ, ತನ್ನ ಹುಟ್ಟೂರ ಜನರ ಗೋಳನ್ನು ಕೇಳಲು ಬರಲಿಲ್ಲ ಎನ್ನುವ ಕೊರಗಿನೊಂದಿಗೆ ಹಾಕುವ ಜನರ ಶಾಪ ತಟ್ಟದೇ ಇರುವುದಿಲ್ಲ.
Video:
Sullia Locals carry injured woman on stretcher crossing the river no road connectivity since 80 years.
04-10-25 09:18 pm
HK News Desk
Belagavi Heart Attack, SSLC: ಬೆಳಗಾವಿ ; SSLC ಓ...
04-10-25 07:22 pm
ಐಟಿ ನಗರಿ ಬೆಂಗಳೂರು 'ಸೈಬರ್ ಕ್ರೈಮ್' ಕ್ಯಾಪಿಟಲ್...
03-10-25 06:08 pm
DK Shivakumar: ಪವರ್ ಷೇರಿಂಗ್ ಬಗ್ಗೆ ಮಾತಾಡಿದ್ರೆ...
02-10-25 03:50 pm
ಆರ್ ಸಿಬಿ ತಂಡ ಮಾರಾಟಕ್ಕಿಟ್ಟ ಯುನೈಟೆಡ್ ಸ್ಪಿರಿಟ್ಸ್...
02-10-25 02:28 pm
04-10-25 04:45 pm
HK Staffer
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ನಿಲ್ಲಿಸದಿದ್ದರೆ ಭ...
03-10-25 09:09 pm
ಮಕ್ಕಳ ವಿಡಿಯೋ ಗೇಮ್ ನಲ್ಲೂ ಸೈಬರ್ ಅಪರಾಧ ; ಶಾಲಾ ಹಂ...
03-10-25 04:50 pm
03-10-25 11:07 pm
Mangalore Correspondent
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
Illegal Slaughterhouse in Mangalore: ಬೆನ್ನು ಬ...
02-10-25 10:43 pm
04-10-25 02:57 pm
HK News Desk
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm