ಕೋವಿಡ್ ಸೋಂಕು ; ಮೂರೇ ಗಂಟೆ ಅಂತರದಲ್ಲಿ ಉಸಿರು ನಿಲ್ಲಿಸಿದ್ರು ನೆಲ್ಯಾಡಿಯ ದಂಪತಿ  

16-07-21 10:24 pm       Mangaluru Correspondent   ಕರಾವಳಿ

ಕೊರೊನಾ ಸೋಂಕು ತಗುಲಿ, 12 ದಿನಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಂಪತಿ ಒಂದೇ ದಿನ ಕೇವಲ ಮೂರು ಗಂಟೆ ಅಂತರದಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. 

ಬೆಳ್ತಂಗಡಿ, ಜುಲೈ 16 : ಕೊರೊನಾ ಸೋಂಕು ತಗುಲಿ, 12 ದಿನಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಂಪತಿ ಒಂದೇ ದಿನ ಕೇವಲ ಮೂರು ಗಂಟೆ ಅಂತರದಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. 

ಬೆಳ್ತಂಗಡಿ ತಾಲೂಕಿನ ಮುಂಡಾಜೆ ಸೈಂಟ್ ಮೇರಿಸ್ ಚರ್ಚ್‌ನಲ್ಲಿ ಧರ್ಮಗುರು ಆಗಿರುವ ಸೆಬಾಸ್ಟಿಯನ್ ಪುನ್ನತ್ತಾನತ್ತ್ ಅವರ ತಾಯಿ ಮೇರಿ ಪುನ್ನತ್ತಾನತ್ತ್ ಮತ್ತು ಅವರ ತಂದೆ ವರ್ಗೀಸ್ ಪುನ್ನತ್ತಾನತ್ತ್ ಮೃತ ದಂಪತಿ. ಇವರು ಗುರುವಾರ ಚಿಕಿತ್ಸೆ ಫಲಿಸದೆ ಕೇವಲ ಮೂರುವರೆ ಗಂಟೆ ಅಂತರದಲ್ಲಿ ಕೊನೆಯುಸಿರೆಳೆದಿದ್ದಾರೆ.

ದಂಪತಿಯನ್ನು ಜುಲೈ 4 ರಂದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಾಂಪತ್ಯ ಜೀವನದುದ್ದಕ್ಕೂ ಪರಸ್ಪರ ಅನ್ಯೋನ್ಯವಾಗಿದ್ದ ಇವರು ಸಾವಿನಲ್ಲೂ ಒಂದಾಗಿದ್ದಾರೆ. ಮೃತರು ಓರ್ವ ಧರ್ಮಗುರು ಸಹಿತ ಇಬ್ಬರು ಗಂಡು ಮತ್ತು ಇಬ್ಬರು‌ ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಇವರ ಅಂತ್ಯಸಂಸ್ಕಾರವನ್ನು ನೆಲ್ಯಾಡಿಯ ಸೈಂಟ್ ಅಲ್ಫೋನ್ಸ್ ಚರ್ಚ್‌ನ ದಫನ ಭೂಮಿಯಲ್ಲಿ ಇಂದು ಬೆಳಗ್ಗೆ ನೆರವೇರಿಸಲಾಗಿದೆ.

Mangalore Nelyadi Husband wife die of coronavirus in three hours gap. The deceased have been identied as Vargies Punnattanathat and Mary Punnattanathat