ಬ್ರೇಕಿಂಗ್ ನ್ಯೂಸ್
17-07-21 02:55 pm Giridhar Shetty, Mangaluru ಕರಾವಳಿ
ಮಂಗಳೂರು, ಜುಲೈ 17: ಕುಡಿಯಲು ಬಳಸುವ ಮರವೂರು ಅಣೆಕಟ್ಟಿಗೆ ತ್ಯಾಜ್ಯ ನೀರು ಸೇರುತ್ತಿದೆ ಎಂಬ ಸ್ಥಳೀಯರು ಹೇಳುತ್ತಿದ್ದ ಮಾತುಗಳು ಕೊನೆಗೂ ನಿಜವಾಗಿವೆ. ಪಚ್ಚನಾಡಿ ಮತ್ತು ಮಂದಾರ ಪ್ರದೇಶದಲ್ಲಿ ರಾಶಿಬಿದ್ದಿರುವ ಘನತ್ಯಾಜ್ಯದಿಂದ ಹೊರಸೂಸುವ ವಿಷಕಾರಿ ನೀರು ಫಲ್ಗುಣಿ ನದಿ ಮತ್ತು ಅಣೆಕಟ್ಟಿಗೆ ಸೇರುತ್ತಿರುವುದನ್ನು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳೇ ಖಚಿತಪಡಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಅಧಿಕೃತವಾಗಿ ಹೈಕೋರ್ಟಿಗೆ ವರದಿ ಸಲ್ಲಿಸಿದ್ದಾರೆ.
ಪಚ್ಚನಾಡಿಯ ಘನತ್ಯಾಜ್ಯ ಪ್ರದೇಶದಿಂದ ಮಲಿನ ನೀರು ಫಲ್ಗುಣಿ ನದಿ ಸೇರುತ್ತಿರುವ ಬಗ್ಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಹೈಕೋರ್ಟ್ ಗಮನಕ್ಕೆ ತರಲಾಗಿತ್ತು. ಜೂನ್ 23ರಂದು ಸಲ್ಲಿಕೆಯಾಗಿದ್ದ ಅರ್ಜಿಯನ್ನು ಪರಿಗಣಿಸಿದ್ದ ಹೈಕೋರ್ಟ್ ವಿಭಾಗೀಯ ಪೀಠ, ಮಲಿನ ನೀರಿನ ಬಗ್ಗೆ ಪರೀಕ್ಷೆ ನಡೆಸಿ ವಾರದೊಳಗೆ ವರದಿ ನೀಡುವಂತೆ ರಾಜ್ಯ ಪರಿಸರ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿತ್ತು.
ಅಣೆಕಟ್ಟಿನಲ್ಲೇ ವಿಷದ ನೀರು ; ಅಧಿಕಾರಿಗಳ ವರದಿ
ನೀರಿನ ಪರೀಕ್ಷೆ ನಡೆಸಿ ಪರಿಸರ ಅಧಿಕಾರಿಗಳು ಹೈಕೋರ್ಟಿಗೆ ವರದಿ ನೀಡಿದ್ದು, ಪಚ್ಚನಾಡಿ ಘನತ್ಯಾಜ್ಯ ಭೂಭರ್ತಿ ಘಟಕದಿಂದ ಕಲುಷಿತ ನೀರು ಫಲ್ಗುಣಿ ನದಿ ಹಾಗೂ ಮರವೂರು ಅಣೆಕಟ್ಟಿಗೆ ಸೇರುತ್ತಿದೆ. ನದಿಯ ನೀರಿನ ಮಾದರಿಯನ್ನು ಪರೀಕ್ಷೆ ನಡೆಸಿದಾಗ ವಿಷಕಾರಿ ಅಂಶ ಪತ್ತೆಯಾಗಿದೆ. ಇದೇ ನೀರನ್ನು ಸುತ್ತಮುತ್ತಲಿನ 12 ಗ್ರಾಮ ಪಂಚಾಯತ್ ವ್ಯಾಪ್ತಿಯ ಜನರು ಕುಡಿಯಲು ಬಳಸುತ್ತಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಪರಿಸರ ನಿಯಂತ್ರಣ ಮಂಡಳಿಯ ವರದಿಯನ್ನು ನೋಡಿ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ಆಘಾತ ವ್ಯಕ್ತಪಡಿಸಿದ್ದು, ಮಂಗಳೂರು ಮಹಾನಗರ ಪಾಲಿಕೆಯ ನಿರ್ಲಕ್ಷ್ಯದ ಬಗ್ಗೆ ಕಿಡಿಕಾರಿದ್ದಾರೆ. ವರದಿಯ ಅಂಶಗಳು ಆಘಾತಕಾರಿಯಾಗಿವೆ. ಕುಡಿಯುವ ನೀರು ಮಲಿನಗೊಂಡಿರುವುದಕ್ಕೆ ಪಾಲಿಕೆಯ ನಿರ್ಲಕ್ಷ್ಯವೇ ಕಾರಣ. ಪಾಲಿಕೆಯನ್ನು ಸೂಪರ್ ಸೀಡ್ ಮಾಡದ ಹೊರತು ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಕಟುವಾಗಿ ಟೀಕಿಸಿದ್ದಾರೆ. ಅಲ್ಲದೆ, ಪಚ್ಚನಾಡಿ ಘನತ್ಯಾಜ್ಯ ಘಟಕದಿಂದ ಬಿಡುಗಡೆಯಾಗುವ ಮಲಿನ ನೀರನ್ನು ಫಲ್ಗುಣಿ ನದಿ ಸೇರದಂತೆ ತಡೆಯಲು ಯಾವ ಕ್ರಮ ಕೈಗೊಳ್ಳುತ್ತೀರಿ ಎಂಬ ಬಗ್ಗೆ ಜು.26ರ ಒಳಗೆ ವಿವರಣೆ ನೀಡುವಂತೆ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಕೋರ್ಟ್ ನಿರ್ದೇಶನ ನೀಡಿದೆ.
ಸಿಎಂ ಕಚೇರಿಯ ಸೂಚನೆಗೂ ನಿರ್ಲಕ್ಷ್ಯ
ಇತ್ತೀಚೆಗೆ, ಪಚ್ಚನಾಡಿ ಎಸ್ ಟಿಪಿ ಘಟಕದಿಂದ ಮಲಿನ ನೀರನ್ನು ಫಲ್ಗುಣಿ ನದಿ ಬಿಡುತ್ತಿರುವ ಬಗ್ಗೆ ದೂರಿನಂತೆ ಸಿಎಂ ಕಚೇರಿಯಿಂದಲೂ ಮಹಾನಗರ ಪಾಲಿಕೆಗೆ ಸೂಚನೆ ಬಂದಿತ್ತು. ಕೂಡಲೇ ಈ ಬಗ್ಗೆ ಕ್ರಮ ಕೈಗೊಂಡು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಸೂಚನೆ ನೀಡಲಾಗಿತ್ತು. ಸಿಎಂ ಕಚೇರಿಯ ಸೂಚನೆಯಂತೆ, ಮಹಾನಗರ ಪಾಲಿಕೆಯ ಆಯುಕ್ತರು ಮತ್ತು ಮೇಯರ್ ಸ್ಥಳಕ್ಕೆ ಭೇಟಿ ಪರಿಶೀಲನೆ ಕೈಗೊಂಡಿದ್ದರು. ಈ ವೇಳೆ, ಸ್ಥಳೀಯ ಕಾರ್ಪೊರೇಟರು ಮತ್ತು ಅಧಿಕಾರಿಗಳು ಮಲಿನ ನೀರನ್ನು ಬಿಡುವುದಿಲ್ಲ. ಶುದ್ಧೀಕರಿಸಿದ ನೀರನ್ನೇ ನದಿಗೆ ಬಿಡುತ್ತಿರುವುದಾಗಿ ಹೇಳಿ ಮೇಯರ್ ಮತ್ತು ಆಯುಕ್ತರನ್ನು ನಂಬಿಸಿದ್ದರು. ಆದರೆ, ಸ್ಥಳೀಯರು ಮಾತ್ರ ಎಸ್ ಟಿಪಿ ಘಟಕದಿಂದ ರಾತ್ರಿ ವೇಳೆ ಮಲಿನ ನೀರನ್ನು ನೇರವಾಗಿ ಬಿಡುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಈ ವಿಚಾರದಲ್ಲಿ ಇನ್ನೂ ಪಾಲಿಕೆಯ ಆಡಳಿತ ಸೂಕ್ತ ಕ್ರಮ ಕೈಗೊಂಡಿಲ್ಲ. ಬದಲಿಗೆ, ಅಣೆಕಟ್ಟಿಗಿಂತ ಮುಂದೆ ನೀರನ್ನು ಬಿಡಲು ಪೈಪ್ ಲೈನ್ ಮಾಡಲು ಎರಡೂವರೆ ಕೋಟಿ ಯೋಜನೆ ಮಾಡುತ್ತಿದ್ದೇವೆ ಎಂದು ಹೇಳಿ ಮತ್ತೊಂದು ದುಡ್ಡು ಹೊಡೆಯುವ ಕೆಲಸಕ್ಕೆ ಮುಂದಾಗಿದ್ದಾರೆ.
ನಿಜಕ್ಕಾದರೆ, ಎಸ್ ಟಿಪಿ ಘಟಕದಲ್ಲಿ ಶುದ್ಧೀಕರಣಗೊಂಡು ಹೊರಗೆ ಬರುವ ನೀರು ಶುದ್ಧವಾಗಿರಬೇಕು. ಕುಡಿಯಲು ಯೋಗ್ಯವಾಗಿರಬೇಕು. ಹತ್ತು ವರ್ಷಗಳ ಹಿಂದೆ ಎಲ್ ಅಂಡ್ ಟಿ ಕಂಪನಿಯವರು ಈ ಘಟಕದ ಸ್ಥಾಪನೆ ಮಾಡಿ, ಮಲಿನ ನೀರನ್ನು ಶುದ್ಧಗೊಳಿಸಿ ಸ್ಥಳದಲ್ಲೇ ಕುಡಿದು ತೋರಿಸಿದ್ದರು ಎಂದು ಸ್ಥಳೀಯರು ಹೇಳುತ್ತಾರೆ. ಆದರೆ, ಈಗ ಅದನ್ನು ನಿರ್ವಹಣೆ ಮಾಡುವ ಮಂದಿ ಟಾಯ್ಲೆಟ್ ತ್ಯಾಜ್ಯದ ನೀರನ್ನು ಶುದ್ಧೀಕರಣಗೊಳಿಸದೇ ನೇರವಾಗಿ ಬಿಡುತ್ತಿದ್ದಾರೆ. ಇದರ ಬಗ್ಗೆ ಮೊನ್ನೆ ಸ್ಥಳಕ್ಕೆ ಭೇಟಿ ನೀಡಿದ್ದ ಆಯುಕ್ತರು ಘಟಕದ ಅಧಿಕಾರಿಗಳಲ್ಲಿ ಅದನ್ನು ಕುಡಿದು ತೋರಿಸುವಂತೆ ಹೇಳಿದಾಗ, ನಿರಾಕರಿಸಿದ್ದರು !
ಇದೀಗ ಪಚ್ಚನಾಡಿಯಲ್ಲಿ ಘನತ್ಯಾಜ್ಯ ರಾಶಿ ಹಾಕಿದ ಜಾಗದಿಂದಲೂ ವಿಷಕಾರಿ ನೀರು ಫಲ್ಗುಣಿ ನದಿ ಸೇರುತ್ತಿರುವ ಬಗ್ಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹೈಕೋರ್ಟಿಗೆ ದೂರು ನೀಡಿದ್ದು, ಮಹಾನಗರ ಪಾಲಿಕೆಯ ನಿರ್ಲಕ್ಷ್ಯದ ಬಗ್ಗೆ ಕೋರ್ಟ್ ಮತ್ತೆ ಮಂಗಳಾರತಿ ಮಾಡಿದೆ. ಇನ್ನಾದರೂ ಪಾಲಿಕೆಯ ಅಧಿಕಾರಸ್ಥರು ಎಚ್ಚತ್ತುಕೊಳ್ಳುತ್ತಾರಾ ನೋಡಬೇಕು.
Mangalore State Environmental Pollution Control Board has confirmed that Marvoor dam is getting poisonous sewage water where more than 12 villages of Mangalore are drinking the same. In a shocking incident, Seepage water is been continuously released into Maravoor Dam where people of 12 Gram Panchayat Consume dirty water every day. The Issue has reached Karnataka CM and a letter of immediate inquiry and action has been ordered against MCC officials.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm