ಬ್ರೇಕಿಂಗ್ ನ್ಯೂಸ್
17-07-21 03:51 pm Udupi Correspondent ಕರಾವಳಿ
ಉಡುಪಿ, ಜುಲೈ 17: ತನ್ನದಲ್ಲದ ತಪ್ಪಿಗೆ ಮೂರು ವರ್ಷ ಕಾಲ ಸೌದಿ ಅರೇಬಿಯಾದ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ ಕುಂದಾಪುರ ಮೂಲದ ಹರೀಶ್ ಬಂಗೇರ ಸೌದಿ ಜೈಲಿನಿಂದ ಕೊನೆಗೂ ಬಿಡುಗಡೆಯಾಗಿದ್ದಾರೆ. ಫೇಸ್‌ಬುಕ್‌ನಲ್ಲಿ ಮೆಕ್ಕಾ ಹಾಗೂ ಸೌದಿ ದೊರೆಯ ಬಗ್ಗೆ ಅವಹೇಳನಕಾರಿ ಬರೆದಿದ್ದಾರೆ ಎಂಬ ಆರೋಪದಲ್ಲಿ ಹರೀಶ್ ಬಂಧನಕ್ಕೀಡಾಗಿದ್ದರು.
ಕೋಟೇಶ್ವರ ನಿವಾಸಿ ಹರೀಶ್ ಬಂಗೇರ, 2019ರಲ್ಲಿ ಮಂಗಳೂರಿನಲ್ಲಿ ನಡೆದ ಸಿಎಎ ಪ್ರತಿಭಟನೆ ಮತ್ತು ಆನಂತರದ ಗಲಭೆಯ ಕುರಿತ ವಿಡಿಯೋವನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಶೇರ್ ಮಾಡಿದ್ದರು. 2019ರ ಡಿ.19ರಂದು ವಿಡಿಯೋ ಶೇರ್ ಮಾಡಿದ್ದು ಮುಸ್ಲಿಂ ಯುವಕರ ಆಕ್ರೋಶಕ್ಕೆ ಕಾರಣವಾಗಿತ್ತು. ಸೌದಿ ಅರೇಬಿಯಾದ ಕಂಪೆನಿಯಲ್ಲಿ ಕೆಲಸಕ್ಕಿದ್ದ ಹರೀಶ್, ಸೌದಿಯಲ್ಲಿದ್ದೇ ಮುಸ್ಲಿಂ ವಿರೋಧಿಯಾಗಿ ವರ್ತಿಸಿದ್ದಾನೆಂದು ಅಲ್ಲಿ ನೆಲೆಸಿರುವ ಮಂಗಳೂರಿನ ಮುಸ್ಲಿಂ ಯುವಕರು ಹರೀಶ್ ಬಂಗೇರ ಕೆಲಸ ಮಾಡುವ ಕಂಪನಿಗೆ ತೆರಳಿ ಬೆದರಿಕೆ ಹಾಕಿದ್ದರು. ಬಳಿಕ ಹರೀಶ್ ಬಂಗೇರ ಸದರಿ ವಿಡಿಯೋವನ್ನು ಡಿಲೀಟ್ ಮಾಡಿ, ಆ ಬಗ್ಗೆ ಕ್ಷಮೆಯನ್ನೂ ಯಾಚಿಸಿದ್ದರು. ಅಲ್ಲದೆ, ಬಳಿಕ ತಮ್ಮ ಫೇಸ್‌ಬುಕ್ ಖಾತೆಯನ್ನೂ ಡಿಲೀಟ್ ಮಾಡಿದ್ದರು.
ಆದರೆ, 2019ರ ಡಿ.20ರಂದು ಯಾರೋ ಕಿಡಿಗೇಡಿಗಳು ಹರೀಶ್ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದಿದ್ದು, ಅದರಲ್ಲಿ ಮೆಕ್ಕಾ ಮತ್ತು ಸೌದಿ ದೊರೆಯ ಬಗ್ಗೆ ಅವಹೇಳನಕಾರಿಯಾಗಿ ಬರೆದು ಪೋಸ್ಟ್ ಮಾಡಿದ್ದರು. ಹರೀಶ್ ಬಂಗೇರ ವಿರುದ್ಧ ಕೇಸು ದಾಖಲಾಗುವ ಉದ್ದೇಶದಿಂದಲೇ ಕಿಡಿಗೇಡಿ ಯುವಕರು ಈ ಕೃತ್ಯ ಎಸಗಿದ್ದರು. ಹರೀಶ್ ಬಂಗೇರ ಹೆಸರಲ್ಲಿ ಹಾಕಿದ್ದ ಪೋಸ್ಟ್ ಸೌದಿಯಲ್ಲಿ ವೈರಲ್ ಆಗಿದ್ದು, ಅಲ್ಲಿನ ಪ್ರಜೆಗಳಿಂದ ಆಕ್ರೋಶವೂ ವ್ಯಕ್ತವಾಗಿತ್ತು. ಪ್ರಚೋದನಕಾರಿ ಸಂದೇಶ ಮತ್ತು ಅಲ್ಲಿಯ ದೊರೆಯನ್ನು ಅವಹೇಳನಗೈದ ಬರಹವಾಗಿದ್ದರಿಂದ ಸಹಜವಾಗೇ ಸೌದಿ ಪೊಲೀಸರು ಹರೀಶ್ ಬಂಗೇರನನ್ನು ಬಂಧಿಸಿದ್ದರು.
ಸೌದಿಯಲ್ಲಿ ಪತಿಯನ್ನು ಬಂಧಿಸಿದ್ದು ತಿಳಿಯುತ್ತಿದ್ದಂತೆ ಊರಲ್ಲಿದ್ದ ಪತ್ನಿ, ನಿಜ ವಿಚಾರ ತಿಳಿದು ಪತಿಯ ಹೆಸರಿನಲ್ಲಿ ನಕಲಿ ಅಕೌಂಟ್ ಓಪನ್ ಮಾಡಿದ ವಿಚಾರಕ್ಕೆ ಸಂಬಂಧಿಸಿ ಉಡುಪಿಯ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರ ವಿಚಾರಣೆ ವೇಳೆ, ಹರೀಶ್ ಬಂಗೇರ ಹೆಸರಿನಲ್ಲಿ ಮೂಡುಬಿದ್ರೆಯ ಅಬ್ದುಲ್ ಹುಯೇಸ್ ಮತ್ತು ಅಬ್ದುಲ್ ತುವೇಸ್ ಎಂಬವರು ಸೇರಿ ನಕಲಿ ಖಾತೆ ತೆರೆದಿದ್ದು ತನಿಖೆಯಲ್ಲಿ ಕಂಡುಬಂದಿತ್ತು.
ಒಂದು ವರ್ಷದ ನಂತರ, 2020ರ ಜೂನ್ ತಿಂಗಳಿನಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ ಉಡುಪಿ ಪೊಲೀಸರು, ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ವರದಿ ಅತ್ತ ಸೌದಿ ಅರೇಬಿಯಾದ ಅಧಿಕಾರಿಗಳಿಗೂ ಸಲ್ಲಿಕೆಯಾಗಿತ್ತು. ಅದರಂತೆ, ಹರೀಶ್ ಬಂಗೇರ ಪ್ರಕರಣದಲ್ಲಿ ಅಮಾಯಕ ಎಂಬುದನ್ನು ತಿಳಿದು ಸೌದಿ ಪೊಲೀಸರು ಇದೀಗ ಅವರನ್ನು ಜೈಲಿನಿಂದ ಬಿಡುಗಡೆ ಮಾಡಿದ್ದಾರೆ.
ಸೌದಿ ಅರೇಬಿಯಾದಲ್ಲಿ ಹರೀಶ್ ಬಂಗೇರ ಬಿಡುಗಡೆಗೆ ಬೇಕಾದ ಅಗತ್ಯ ಕಾರ್ಯವನ್ನು ಸೌದಿಯಲ್ಲಿರುವ ಮಂಗಳೂರು ಮೂಲದ ಸಂಘಟನೆ ಸೌದಿ ಅರೇಬಿಯಾ ಮಂಗಳೂರು ಅಸೋಸಿಯೇಶನ್ ಮಾಡಿದ್ದು, ತನ್ನದಲ್ಲದ ತಪ್ಪಿಗೆ ಜೈಲಿನಲ್ಲಿ ಕೊಳೆಯುವಂತಾದ ಯುವಕನನ್ನು ಆಪತ್ತಿನಿಂದ ಪಾರು ಮಾಡಿದೆ. ಇದಕ್ಕಾಗಿ ಹರೀಶ್ ಬಂಗೇರ ಕುಟುಂಬಸ್ಥರು ಸಂಘಟನೆಯ ಪದಾಧಿಕಾರಿಗಳನ್ನು ಅಭಿನಂದಿಸಿದ್ದಾರೆ.
Harish Bangera from kundapura who was arrested and imprisoned by the Saudi authorities for making blasphemous comments on the Saudi Crown Prince and Mecca, the holy site of Muslims across the world, is released from Jail and will be arriving at his native soon.
07-08-25 10:18 pm
Bangalore Correspondent
ಧರ್ಮಸ್ಥಳ ಘರ್ಷಣೆ ಬಗ್ಗೆ ತನಿಖೆಗೆ ಸೂಚಿಸಿದ್ದೇನೆ, ಎ...
07-08-25 05:50 pm
Dharmasthala burial case, Gag Order: ಮಾಧ್ಯಮ ನ...
06-08-25 10:51 pm
ಅಶೋಕನ ಕಾಲದ ಮೌರ್ಯರ ರಾಜಧಾನಿ ರಾಯಚೂರಿನ ಮಸ್ಕಿ ಆಗಿತ...
05-08-25 01:45 pm
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
07-08-25 10:02 pm
HK News Desk
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
ಕೇರಳ ಚರ್ಚ್ ಪ್ರತಿಭಟನೆಯಲ್ಲಿ ಇಸ್ಲಾಮಿಕ್ ಮೂಲಭೂತವಾದ...
06-08-25 12:15 pm
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
07-08-25 11:01 pm
Mangalore Correspondent
ಉಳ್ಳಾಲದಲ್ಲಿ ನಿಯಂತ್ರಣ ತಪ್ಪಿ ಆವರಣ ಗೋಡೆಗೆ ಬಡಿದ ಸ...
07-08-25 10:45 pm
ಧರ್ಮಸ್ಥಳ ; 13ನೇ ಪಾಯಿಂಟ್ ಬಗ್ಗೆ ಕುತೂಹಲ, ಅಸ್ಥಿ ಪ...
07-08-25 10:29 pm
Surathkal-Nanthoor highway: ಇಂದಿನಿಂದ ಆ.13ರ ವರ...
07-08-25 07:55 pm
Dharmasthala, Attack on YouTubers: ಯೂಟ್ಯೂಬರ್...
07-08-25 03:26 pm
07-08-25 08:59 pm
Bangalore Correspondent
Kudla Rampage Attack, Ajay Anchan, Dharmastha...
06-08-25 08:02 pm
Bangalore Kidnap, Nischith Murder: ಬೆಂಗಳೂರು ನ...
06-08-25 05:43 pm
Cybercrime, New Fraud, Mobile Hacking: ಅಪರಿಚಿ...
06-08-25 11:23 am
Udupi Gold, Theft: ಕದ್ದ ಚಿನ್ನವನ್ನು ಕರಗಿಸಿ ಗಟ್...
06-08-25 11:04 am