ನಿರಂತರ ಮಳೆಗೆ ಕುಸಿದು ಬಿದ್ದ ಬೃಹತ್ ತಡೆಗೋಡೆ ; 13ಕ್ಕೂ ಹೆಚ್ಚು ವಾಹನ ಜಖಂ, ಮಣ್ಣಿನಲ್ಲಿ ಹೂತು ಹೋದ ವಾಹನಗಳು ! 

17-07-21 10:50 pm       Mangaluru Correspondent   ಕರಾವಳಿ

ನಿರಂತರ ಮಳೆಯಿಂದಾಗಿ ಎಪಿಎಂಸಿ ಯಾರ್ಡ್‌ ಕಟ್ಟಡದ ತಡೆಗೋಡೆ ಕುಸಿದು ಬಿದ್ದಿದ್ದು 13ಕ್ಕೂ ಹೆಚ್ಚು ವಾಹನಗಳು ಜಖಂಗೊಂಡ ಘಟನೆ ನಡೆದಿದೆ. 

ಮಂಗಳೂರು, ಜುಲೈ 17: ನಿರಂತರ ಮಳೆಯಿಂದಾಗಿ ನಗರದ ಬಂದರು ಬಳಿಯ ನಲಪಾಡ್ ಕುನಿಲ್ ಟವರ್ಸ್‌ ಕಟ್ಟಡಕ್ಕೆ ಹೊಂದಿಕೊಂಡಿರುವ ಎಪಿಎಂಸಿ ಯಾರ್ಡ್‌ ಕಟ್ಟಡದ ತಡೆಗೋಡೆ ಕುಸಿದು ಬಿದ್ದಿದ್ದು 13ಕ್ಕೂ ಹೆಚ್ಚು ವಾಹನಗಳು ಜಖಂಗೊಂಡ ಘಟನೆ ನಡೆದಿದೆ. 

ಸುಮಾರು ಒಂದೂವರೆ ಅಡಿ ಅಗಲವಿದ್ದ ಹತ್ತು ಮೀಟರ್ ಎತ್ತರಕ್ಕೆ ಕಟ್ಟಲಾಗಿದ್ದ ಬೃಹತ್ ತಡೆಗೋಡೆ ಕುಸಿದು ಬಿದ್ದಿದೆ. ಘಟನೆಯಲ್ಲಿ ಕುನಿಲ್ ಟವರ್ಸ್ ಮತ್ತು ಅಪಾರ್ಟ್ಮೆಂಟ್ ನಿವಾಸಿಗಳ ಕಾರು, ಬೈಕ್ ಸೇರಿ 13ಕ್ಕೂ ಹೆಚ್ಚು ವಾಹನಗಳು ಮಣ್ಣಿನಡಿ ಹೂತು ಹೋಗಿದೆ. ಕಟ್ಟಡದ ಆವರಣದಲ್ಲಿದ್ದ ಬಾವಿಯಲ್ಲೂ ಅರ್ಧದಷ್ಟು ತಡೆಗೋಡೆ ಬಿದ್ದು ಮಣ್ಣು, ಕಲ್ಲು ತುಂಬಿದ್ದು ಅರ್ಧಕ್ಕೆ ಮುಚ್ಚಿ ಹೋಗಿದೆ. 

ಅಪಾರ್ಟ್‌ಮೆಂಟ್‌ನಲ್ಲಿ ನೂರಕ್ಕೂ ಹೆಚ್ಚು ಮನೆಗಳಿದ್ದು, ಬಹುತೇಕ ಮಕ್ಕಳು ಕಟ್ಟಡದ ಆವರಣದಲ್ಲಿ ಆಟ ಆಡುತ್ತಿದ್ದರು. ಶನಿವಾರ ಸಂಜೆ ವೇಳೆ ಮಳೆ ಬರುತ್ತಿದ್ದರಿಂದ ಮಕ್ಕಳು ಹೊರಬಂದಿರಲಿಲ್ಲ. ಈ ಸಮಯದಲ್ಲಿ ತಡೆಗೋಡೆ ಕುಸಿದಿದ್ದು, ಮಕ್ಕಳು ಆಡಲು ಬಾರದ ಕಾರಣ ಭಾರಿ ದುರಂತ ತಪ್ಪಿದೆ.‌

Incessant rains have been lashing the district from the past five days. Due to heavy rain, the APMC yard wall which is attached to Nalapad Kunil Towers at Bunder, collapsed on Saturday July 17. The incident left over 13 vehicles completely damaged. A major tragedy was averted as usually children play in the flat premises. None of the children came out to the area due to rain. More than 13 vehicles were stuck underneath the debris.