ಬ್ರೇಕಿಂಗ್ ನ್ಯೂಸ್
18-07-21 01:16 pm Mangaluru Correspondent ಕರಾವಳಿ
ಮಂಗಳೂರು, ಜುಲೈ 18: ತಾಯಿ ಜೊತೆಗಿದ್ದ ಆರು ತಿಂಗಳ ಮಗುವಿನ ಪ್ರಯಾಣವನ್ನು ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಇಲ್ಲದ ಕಾರಣಕ್ಕೆ ಕುವೈಟ್ ವಿಮಾನ ನಿಲ್ದಾಣದಲ್ಲಿ ಕೊನೆಕ್ಷಣದಲ್ಲಿ ತಡೆಹಿಡಿಯಲಾಗಿತ್ತು. ಮಗು ಜೊತೆಗಿದ್ದ ತಾಯಿ ಗಾಬರಿ ಬಿದ್ದು ಏನು ಮಾಡುವುದೆಂದು ತೋಚದೆ ಗಲಿಬಿಲಿಗೆ ಒಳಗಾಗಿದ್ದರು. ಆದರೆ, ಇನ್ನೇನು ವಿಮಾನ ಹೊರಡುತ್ತೆ ಎನ್ನುವಾಗ ನೂತನ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮೂಲಕ ವಿದೇಶಾಂಗ ಇಲಾಖೆಯ ನೆರವು ಕೇಳಿದ್ದು ಹತ್ತೇ ನಿಮಿಷದಲ್ಲಿ ಸಮಸ್ಯೆ ಬಗೆಹರಿಯುವಂತಾದ ವಿದ್ಯಮಾನ ಶನಿವಾರ ರಾತ್ರಿ ನಡೆದಿದೆ.
ಕುವೈಟಿನಲ್ಲಿ ನೆಲೆಸಿರುವ ಬಂಟ್ವಾಳ ತಾಲೂಕಿನ ಕರೋಪಾಡಿ ಮೂಲದ ಅದಿತಿ ಸುರೇಶ್ ಎಂಬವರು ಶನಿವಾರ ಅಪರಾಹ್ನ ಕುವೈಟ್ ಕಾಲಮಾನ 3.30ಕ್ಕೆ ಮಂಗಳೂರಿಗೆ ಬರಲು ಅಲ್ಲಿನ ನಿಲ್ದಾಣಕ್ಕೆ ಬಂದಿದ್ದರು. ಆದರೆ, ವಿಮಾನ ನಿಲ್ದಾಣದ ಬೋರ್ಡಿಂಗ್ ನಲ್ಲಿರುವ ಸಿಬಂದಿ ಮಗುವಿನ ಆರ್ ಟಿಪಿಸಿಆರ್ ವರದಿ ಕೇಳಿದರು. ಅದಿತಿ, ಟ್ರಾವೆಲ್ ಏಜನ್ಸಿ ಸೂಚನೆಯಂತೆ ತನ್ನ ವರದಿಯನ್ನು ಮಾತ್ರ ರೆಡಿ ಮಾಡಿಕೊಂಡಿದ್ದರು. ಮಗುವಿನ ನೆಗೆಟಿವ್ ವರದಿ ಇಲ್ಲದೆ ಪ್ರಯಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಿಬಂದಿ ಹೇಳಿದ್ದು ಸಮಸ್ಯೆಗೆ ಕಾರಣವಾಗಿತ್ತು. ಗಾಬರಿ ಬಿದ್ದ ತಾಯಿ, ಮಗುವನ್ನು ಬಿಟ್ಟು ಹೇಗೆ ಪ್ರಯಾಣ ಮಾಡುವುದೆಂದು ತೋಚದಾಗಿದ್ದರು. ಆರು ತಿಂಗಳ ಮಗುವಿನ ಪ್ರಯಾಣಕ್ಕೆ ಆರ್ ಟಿಪಿಸಿಆರ್ ಟೆಸ್ಟ್ ಅಗತ್ಯವಿಲ್ಲ ಎಂದಿದ್ದರೂ, ಅಲ್ಲಿನ ಅಧಿಕಾರಿಗಳು ವರದಿ ಇಲ್ಲದೆ ಪ್ರಯಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ನಿರಾಕರಿಸಿದ್ದರು.
ಇದರಿಂದ ಒಂದೋ ಟಿಕೆಟ್ ರದ್ದುಪಡಿಸಿ ಹಣ ಕಳಕೊಳ್ಳಬೇಕು, ಮಗುವನ್ನು ಬಿಟ್ಟು ಹೋಗುವಂತೆಯೂ ಇಲ್ಲ ಎಂದು ಕೂಡಲೇ ಭಾರತೀಯ ವಿದೇಶಾಂಗ ಇಲಾಖೆಯ ಗಮನಕ್ಕೆ ತರುವ ಪ್ರಯತ್ನ ಮಾಡಿದರು. ಅದಕ್ಕಾಗಿ ಕುವೈಟಿನ ಅನಿವಾಸಿ ಉದ್ಯಮಿ ಮೋಹನದಾಸ್ ಕಾಮತ್ ಗಮನಕ್ಕೆ ತಂದರು. ಕೂಡಲೇ ಕಾರ್ಯ ಪ್ರವೃತ್ತರಾದ ಕಾಮತ್, ಪ್ರಧಾನ ಮಂತ್ರಿಗಳ ಟ್ವಿಟರ್ ಖಾತೆ ಪಿಎಂಓ ಮತ್ತು ವಿದೇಶಾಂಗ ಇಲಾಖೆಯ ರಾಜ್ಯ ಸಚಿವ ಕೇರಳದ ಮುರಲೀಧರನ್ ಟ್ವಿಟರ್ ಖಾತೆಗೆ ನೆರವು ಕೋರಿ ಸಂದೇಶ ಕಳುಹಿಸಿದರು. ಅಷ್ಟರಲ್ಲಿ ಸಮಯ 4.15 ಆಗಿತ್ತು. ಅಲ್ಲದೆ, ಇತ್ತೀಚೆಗೆ ಕೇಂದ್ರದಲ್ಲಿ ಸಚಿವರಾಗಿರುವ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಸಂಪರ್ಕಿಸಿ, ಸಮಸ್ಯೆ ಬಗ್ಗೆ ಗಮನಕ್ಕೆ ತರಲಾಯ್ತು. ಅವರ ಪಿಎಗೆ ಫೋನ್ ಮಾಡಿ, ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದರು ಕಾಮತ್. ಸಚಿವೆ ಶೋಭಾ ಕೂಡಲೇ ವಿದೇಶಾಂಗ ಇಲಾಖೆಯನ್ನು ಸಂಪರ್ಕಿಸಿ, ತುರ್ತು ಸ್ಪಂದಿಸುವಂತೆ ಸೂಚನೆ ನೀಡಿದ್ದರು.
ವಿದೇಶಾಂಗ ಇಲಾಖೆಯ ಮೂಲಕ ಏರ್ ಇಂಡಿಯಾ ವಿಮಾನ ಸಿಬಂದಿಗೆ ಎಲ್ಲಿಂದ ಸೂಚನೆ ಬಂತೋ ಗೊತ್ತಿಲ್ಲ. ಬೋರ್ಡಿಂಗ್ ವಿಭಾಗದಲ್ಲಿ ಕಾಯುತ್ತಿದ್ದ ತಾಯಿ, ಮಗುವನ್ನು 4.30 ರ ಸುಮಾರಿಗೆ ಏರ್ ಇಂಡಿಯಾ ಸಿಬಂದಿಯೇ ಬಂದು ವಿಮಾನದತ್ತ ಕರೆದೊಯ್ದಿದ್ದರು. 5 ಗಂಟೆ ಒಳಗೆ ಕುವೈಟಿನಿಂದ ವಿಮಾನ ಮಂಗಳೂರಿಗೆ ಹೊರಟಿತ್ತು. ಕೇವಲ ಹತ್ತು ನಿಮಿಷದಲ್ಲಿ ವಿದೇಶಾಂಗ ಇಲಾಖೆಯ ಸ್ಪಂದನೆ ಅದಿತಿ ಕುಟುಂಬಸ್ಥರ ಶ್ಲಾಘನೆಗೆ ಪಾತ್ರವಾಗಿದೆ. ಅಲ್ಲದೆ, ಸಚಿವೆ ಶೋಭಾ ಕರಂದ್ಲಾಜೆ ತುರ್ತಾಗಿ ಸ್ಪಂದಿಸಿ, ವಿದೇಶಾಂಗ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿರುವುದು ಸಮಸ್ಯೆಗೊಳಗಾಗಿ ಸಿಕ್ಕಿಬಿದ್ದ ತಾಯಿ, ಮಗುವನ್ನು ಮರಳಿ ತಾಯ್ನಾಡಿಗೆ ಕರೆಸಿಕೊಳ್ಳಲು ನೆರವಾಗಿದೆ.
Air India officials allegedly stopped a woman of Mangaluru origin and her six-month-old baby from boarding a flight to Mangaluru at Kuwait International Airport for want of the baby's RTPCR test certificate. Union minister Shobha Karandlaje intervened in the matter, and together with the Indian foreign ministry, was able to resolve the matter in 10 minutes and the mother and baby were later allowed to board.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm