ತೊಕ್ಕೊಟ್ಟು : ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯುಟ್, ಅಪಾಯದಿಂದ ಮಕ್ಕಳು ಪಾರು  

19-07-21 01:24 pm       Mangaluru Correspondent   ಕರಾವಳಿ

ಮೆಸ್ಕಾಂ ವಿದ್ಯುತ್ ಸರಬರಾಜಲ್ಲಿ ಏರಿಳಿತ ಉಂಟಾಗಿ ಬಬ್ಬುಕಟ್ಟೆಯ ಹೀರಾ ವಿದ್ಯಾಸಂಸ್ಥೆಯ SSLC ಪರೀಕ್ಷಾ ಕೇಂದ್ರದ ಬಯಾಲಜಿ ಲ್ಯಾಬಲ್ಲಿ ಶಾರ್ಟ್ ಸರ್ಕ್ಯುಟ್..

ಉಳ್ಳಾಲ, ಜು.19: ಮೆಸ್ಕಾಂ ವಿದ್ಯುತ್ ಸರಬರಾಜಲ್ಲಿ ಏರಿಳಿತ ಉಂಟಾಗಿ ಬಬ್ಬುಕಟ್ಟೆಯ ಹೀರಾ ವಿದ್ಯಾಸಂಸ್ಥೆಯ SSLC ಪರೀಕ್ಷಾ ಕೇಂದ್ರದ ಬಯಾಲಜಿ ಲ್ಯಾಬಲ್ಲಿ ಶಾರ್ಟ್ ಸರ್ಕ್ಯುಟ್ ಉಂಟಾಗಿದ್ದು ಪರೀಕ್ಷೆಗೆ ಬಂದ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಇಂದು ಬೆಳಗ್ಗೆ ಹೀರಾ ವಿದ್ಯಾಸಂಸ್ಥೆಯ ಬಯಾಲಜಿ ಲ್ಯಾಬಲ್ಲಿ ಶಾರ್ಟ್ ಸರ್ಕ್ಯುಟ್ ಸಂಭವಿಸಿ ಬೆಂಕಿ ಅನಾಹುತ ಸಂಭವಿಸಿದೆ. ಘಟನೆಯಲ್ಲಿ ಲ್ಯಾಬ್ ಒಳಗಿದ್ದ 10 ಲಕ್ಷಕ್ಕೂ ಹೆಚ್ಚು ಮೌಲ್ಯದ ಉಪಕರಣಗಳು ಸುಟ್ಟು ಕರಕಲಾಗಿವೆ. ಆಡಳಿತ ಸಂಸ್ಥೆಯವರು ಕೂಡಲೇ ಪರೀಕ್ಷೆಗೆ ಬಂದಿದ್ದ 208 ವಿದ್ಯಾರ್ಥಿಗಳನ್ನು ಪಕ್ಕದ ಡಿಗ್ರಿ ಕಾಲೇಜಿನ ಕಟ್ಟಡಕ್ಕೆ ಸ್ಥಳಾಂತರಿಸಿದ್ದು ಬೆಂಕಿ ನಂದಿಸಿದ್ದಾರೆ. 


ಸ್ಥಳಕ್ಕೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ನಿನ್ನೆ ರಾತ್ರಿಯಿಂದಲೇ ಪ್ರದೇಶದಲ್ಲಿ ವಿದ್ಯುತ್ ಸರಬರಾಜಲ್ಲಿ ಏರಿಳಿತ ಉಂಟಾಗಿದ್ದು ಹಿರಾ ಕಾಲೇಜು ಆಡಳಿತ ಮಂಡಳಿ ಮೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದಿತ್ತು. ಮೆಸ್ಕಾಂ ಅಧಿಕಾರಿಗಳು ಸದ್ಯ ಸಂಸ್ಥೆಯಲ್ಲಿ SSLC ಪರೀಕ್ಷೆ ನಡೆಯುತ್ತಿರುವುದರಿಂದ ಇಂದು ಮಧ್ಯಾಹ್ನ ಪರಿಶೀಲಿಸುವುದಾಗಿ ಹೇಳಿದ್ದರಂತೆ. ಸಂಸ್ಥೆಯ ಪಕ್ಕದ ಮನೆಗಳಿಗೂ ಇದೇ ರೀತಿ ವಿದ್ಯುತ್ ಪೂರೈಕೆಯಲ್ಲಿ ಏರಿಳಿತ ಉಂಟಾಗಿತ್ತೆಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.

Fire Accident in SSLC exam hall in Babbukatte Hira College at Ullal, Mangalore. The fire service and Ullal Police reached the spot. No casualties were reported.