ಉಳ್ಳಾಲ: ಅಳಿವಿನಂಚಿನಲ್ಲಿ ನಾಟಿ ಕೇಪುಳ, ದೈವ ಸಾನಿಧ್ಯದಲ್ಲೇ ಕೇಪುಳ ತೋಟ ನಿರ್ಮಾಣಕ್ಕೆ ಪಣ 

19-07-21 11:22 pm       Mangaluru Correspondent   ಕರಾವಳಿ

ದೈವಾರಾಧನೆಗೆ ಅಗತ್ಯವುಳ್ಳ ಹೂವುಗಳಲ್ಲಿ ಅತ್ಯಂತ ಪ್ರಮುಖ ಸ್ಥಾನ ಹೊಂದಿರುವ ನಾಟಿ ಕೇಪುಳ ಅಳಿವಿನಂಚಿನಲ್ಲಿದೆ. ಕೇಪುಳ ಹೂವಿನ ವೃದ್ಧಿಗಾಗಿ ತೊಕ್ಕೊಟ್ಟಿನ ಸಾಯಿ ಪರಿವಾರ್ ಟ್ರಸ್ಟ್ ನಿಂದ ಉಳ್ಳಾಲದಲ್ಲಿ ಕೇಪುಳ ಹೂವಿನ ತೋಟ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. 

ಉಳ್ಳಾಲ, ಜು.18: ದೈವಾರಾಧನೆಗೆ ಅಗತ್ಯವುಳ್ಳ ಹೂವುಗಳಲ್ಲಿ ಅತ್ಯಂತ ಪ್ರಮುಖ ಸ್ಥಾನ ಹೊಂದಿರುವ ನಾಟಿ ಕೇಪುಳ ಅಳಿವಿನಂಚಿನಲ್ಲಿದೆ. ಕೇಪುಳ ಹೂವಿನ ವೃದ್ಧಿಗಾಗಿ ತೊಕ್ಕೊಟ್ಟಿನ ಸಾಯಿ ಪರಿವಾರ್ ಟ್ರಸ್ಟ್ ನಿಂದ ಉಳ್ಳಾಲದಲ್ಲಿ ಕೇಪುಳ ಹೂವಿನ ತೋಟ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. 

ಉಳ್ಳಾಲ ಬಂಡಿಕೊಟ್ಯದ ಮಲರಾಯ ದೈವಸ್ಥಾನದಲ್ಲಿ ತೊಕ್ಕೊಟ್ಟು ಸಾಯಿ ಪರಿವಾರ್ ಟ್ರಸ್ಟ್ ನಿಂದ ಕೇಪುಳ ತೋಟದ ನಿರ್ಮಾಣ ಯೋಜನೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ದಯಾನಂದ ಜಿ.ಕತ್ತಲ್ ಸಾರ್ ಚಾಲನೆ ನೀಡಿದರು. 

ಕಾರ್ಯಕ್ರಮ‌ ಉದ್ದೇಶಿಸಿ ಮಾತನಾಡಿದ ಅವರು ತುಳುನಾಡಿನ ದೈವಗಳಿಗೆ ನಾಟಿ ಕೇಪುಳ, ತೋಡಿನ ನೀರು, ತೋಟದ ಹಾಲೆ ಅತಿ ಪ್ರಾಮುಖ್ಯ. ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ತುಳುನಾಡಿನ ದೈವಾರಾಧನೆಯಲ್ಲಿ ಕೇಪುಳ ಮೇಲ್ಪಂಕ್ತಿ ಹೊಂದಿದೆ. ಕೇಪುಳ ಹೂವುಗಳ ಅಭಾವದಲ್ಲಿ ದೈವಾರಾಧನೆ ಕೈಂಕರ್ಯಗಳು  ಅಸಾಧ್ಯ. ಈಗಿನ‌ ಕಾಂಕ್ರೀಟ್ ಜಗತ್ತಿನಿಂದಾಗಿ ನಾಟಿ ಕೇಪುಳ ಹೂವಿನ ಗಿಡಗಳು ಅಳಿವಿನ ಅಂಚಿಗೆ ಸಾಗುತ್ತಿರುವ ಸಂದರ್ಭದಲ್ಲಿ ಅಂತಹ ಪಾವಿತ್ರ್ಯದ ಗಿಡಗಳನ್ನು  ದೈವಸ್ಥಾನಗಳಲ್ಲಿ ನೆಡುವ ಮೂಲಕ ದೈವೀ ಕಾರ್ಯವನ್ನು ಸಾಯಿ ಪರಿವಾರ್ ಟ್ರಸ್ಟ್ ಮಾಡಿದೆ ಎಂದರು. 

ಸಾಯಿ ಪರಿವಾರ್ ಟ್ರಸ್ಟ್ ನ ಮಾರ್ಗದರ್ಶಕ, ಚಂದ್ರಹಾಸ್ ಪಂಡಿತ್ ಹೌಸ್ ಶುಭ ಹಾರೈಸಿದರು. ಪರಿಸರವಾದಿ ಮಾಧವ ಉಳ್ಳಾಲ್, ಓವರ್ ಬ್ರಿಡ್ಜ್ ಕೊರಗಜ್ಜ ಸೇವಾ ಸಮಿತಿಯ ಸ್ಥಾಪಕರಾದ ರಾಜೇಶ್ ಕಾಪಿಕಾಡ್, ಬಂಡಿಕೊಟ್ಯ ಮಲರಾಯ ದೈವಸ್ಥಾನದ ಪ್ರಮುಖರಾದ ಲತೀಶ್ ಪೂಜಾರಿ, ಮುಖಂಡರಾದ ದಯಾನಂದ ತೊಕ್ಕೊಟ್ಟು, ಗೋಪಾಲ ಯು‌.ಕೆ, ಉಳ್ಳಾಲ, ದೇವಕಿ ಆರ್. ಉಳ್ಳಾಲ, ಉದಯ ಆರ್.ಕೆ, ಗಣೇಶ್ ಪೂಜಾರಿ, ಹರ್ಷರಾಜ್ ಕುಂಪಲ, ಹರ್ಷವರ್ಧನ, ಮೋಹಿತ್ ಉಳ್ಳಾಲ, ಸುನಿತ್ ಬಂಡಿಕೊಟ್ಯ, ಸಾಗರ್ ಬಂಡಿಕೊಟ್ಯ, ಪ್ರಶಾಂತ್ ಸುವರ್ಣ,  ಉಳ್ಳಾಲ ಕೊರಗಜ್ಜ ಸೇವಾ ಸಮಿತಿಯ ಲತೀಶ್ ಕೊಟ್ಟಾರ, ಶಾನ್ ಉಳ್ಳಾಲ, ಸಾಯಿ ಪರಿವಾರ್ ಟ್ರಸ್ಟಿನ ಪ್ರವೀಣ್ ಎಸ್ ಕುಂಪಲ, ಪುರುಷೋತ್ತಮ ಕಲ್ಲಾಪು, ಗಣೇಶ್ ಅಂಚನ್, ಗಣೇಶ್ ಪಂಡಿತ್ ಮುಳಿಹಿತ್ಲು, ದೀಕ್ಷಿತ್ ಪೂಜಾರಿ, ಸಂಪತ್ ಧರ್ಮನಗರ, ಸೂರ್ಯ ಕುಂಪಲ, ಸಂಪತ್ ಪಿಲಾರ್, ಕೌಶಿಕ್ ಸೇವಂತಿಗುಡ್ಡೆ, ಶೈಲೇಶ್ ಸೇವಂತಿಗುಡ್ಡೆ,  ಶವಿತ್ ಉಚ್ಚಿಲ್, ಸಂತೋಷ್ ಅಂಬ್ಲಮೊಗರು, ಕುಶಾಲ್ ರಾಜ್ ಮೊದಲಾದವರು‌ ಉಪಸ್ಥಿತರಿದ್ದರು.