ಬ್ರೇಕಿಂಗ್ ನ್ಯೂಸ್
22-07-21 01:46 pm Mangalore Correspondent ಕರಾವಳಿ
ಮಂಗಳೂರು, ಜುಲೈ 22: ಕಿಕ್ಕಿರಿದು ತುಂಬಿದ್ದ ಬಸ್ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಬಸ್ ಚಾಲಕ ಲೋ ಬಿಪಿಯಿಂದಾಗಿ ಸ್ಟೇರಿಂಗ್ ಮೇಲ್ಗಡೆಯೇ ಕುಸಿದು ಬಿದ್ದ ಘಟನೆ ನಗರ ಹೊರವಲಯದ ಅಡ್ಯಾರ್ ನಲ್ಲಿ ನಡೆದಿದ್ದು ಪ್ರಯಾಣಿಕರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
ಪುತ್ತೂರಿನಿಂದ ಮಂಗಳೂರಿನ ಸ್ಟೇಟ್ ಬ್ಯಾಂಕಿಗೆ ಬರುತ್ತಿದ್ದ ಸೇಫ್ ವೇ ಟ್ರಾವೆಲ್ಸ್ ಹೆಸರಿನ ಖಾಸಗಿ ಬಸ್ ಅಡ್ಯಾರ್ ಸಮೀಪಿಸುತ್ತಿದ್ದಂತೆ ಚಾಲಕನಿಗೆ ಕಣ್ಣು ಮಂಜಾಗಿದ್ದು ತಕ್ಷಣ ಬಸ್ ನಿಲ್ಲಿಸಿದ್ದಾನೆ. ಚಾಲಕನಿಗೆ ಕಣ್ಣು ಮಂಜಾಗುತ್ತಲೇ ಬಸ್ ಹೆದ್ದಾರಿ ಬದಿಯ ಸಹ್ಯಾದ್ರಿ ಕಾಲೇಜಿನ ಗೇಟ್ ಮುಂಭಾಗದಲ್ಲಿ ನಿಂತಿರುವುದು ಸೋಜಿಗ ಎನಿಸಿದೆ.
ಬಸ್ಸಿನಲ್ಲಿ ಬಾಗಿಲಲ್ಲಿ ನೇತಾಡುವಷ್ಟು ಫುಲ್ ಜನರಿದ್ದುದಲ್ಲದೆ ಅರೆಕ್ಷಣ ಚಾಲಕನ ನಿಯಂತ್ರಣ ತಪ್ಪುತ್ತಿದ್ದರೂ ದುರಂತವೇ ನಡೆದುಹೋಗುತ್ತಿತ್ತು. ಬಸ್ ಚಾಲಕ ಪುತ್ತೂರು ಮೂಲದ ಸಂತೋಷ್ ಎಂಬಾತನಾಗಿದ್ದು ಕೂಡಲೇ ಸ್ಥಳೀಯರು ಮತ್ತು ಇತರೇ ಪ್ರಯಾಣಿಕರು ಸೇರಿ ಚಾಲಕನನ್ನು ಸ್ಟೇರಿಂಗ್ ಎಡೆಯಿಂದ ಹೊರಗೆ ಎಳೆದಿದ್ದಾರೆ. ಬಳಿಕ ಪಡೀಲಿನ ನ್ಯೂರೋ ಫಸ್ಟ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆರಂಭದಲ್ಲಿ ಫಿಟ್ಸ್ ಬಂದಿದೆ ಎನ್ನಲಾಗಿತ್ತು. ಪ್ರಯಾಣಿಕರು ಮತ್ತು ಸಿಬಂದಿಯೂ ಅದನ್ನೇ ಹೇಳಿದ್ದರು. ವೈದ್ಯರು ಪರಿಶೀಲಿಸಿ, ಲೋ ಬಿಪಿಯಿಂದಾಗಿ ಕುಸಿದು ಬಿದ್ದಿರುವುದಾಗಿ ತಿಳಿಸಿದ್ದಾರೆ.
ಜೀವ ಉಳಿದಿದ್ದೇ ಸೋಜಿಗ !
ಬಸ್ಸಿನಲ್ಲಿ ಕಿಕ್ಕಿರಿದು ತುಂಬಿದಷ್ಟು ಜನರು ಇದ್ದರು. ಚಾಲಕ ಹಠಾತ್ತಾಗಿ ಫಿಟ್ಸ್ ಬಂದು ನೆಲಕ್ಕುರುಳಿದ್ದರಿಂದ ಜನರಲ್ಲಿ ದುರಂತದ ಭಯ ಆವರಿಸಿತ್ತು. ಸ್ವಲ್ಪ ತಪ್ಪಿದ್ದರೂ ಬಸ್ ಉರುಳಿ ಬಿದ್ದು ಅಥವಾ ಬೇರೆ ವಾಹನಕ್ಕೆ ಡಿಕ್ಕಿಯಾಗಿ ಅಪಘಾತ ನಡೆಯುವ ಸಾಧ್ಯತೆ ಇತ್ತು. ಆದರೆ, ಚಾಲಕ ತನಗೆ ಕಣ್ಣು ಮಂಜು ಆವರಿಸುತ್ತಲೇ ಬಸ್ಸಿನ ಬ್ರೇಕ್ ಅದುಮಿದ್ದು ಸ್ಟಾಪ್ ಬಟನ್ ಒತ್ತಿದ್ದಾನೆ. ಬಸ್ಸಿನಲ್ಲಿದ್ದ ಹಲವಾರು ಜನ ಪ್ರಾಣ ಕಳಕೊಳ್ಳುವ ಸಾಧ್ಯತೆ ಇತ್ತು. ಯಬ್ಬಾ ಜೀವ ಉಳಿದಿದ್ದೇ ಹೆಚ್ಚು ಅಂತಾ ಪ್ರಯಾಣಿಕರು ಚಾಲಕನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಚಾಲಕ ಸಂತೋಷ್ ಒಂದು ವರ್ಷದಿಂದ ಇದೇ ಬಸ್ಸಿನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಬಸ್ ಕೂಡ ವೇಗವಾಗಿಯೇ ಬರ್ತಾ ಇತ್ತು. ಆದರೆ, ಚಾಲಕನ ಚಾಕಚಕ್ಯತೆಯಿಂದ ದುರಂತ ತಪ್ಪಿ ಹೋಗಿದೆ ಎಂದು ಬಸ್ಸಿನ ನಿರ್ವಾಹಕ ಶೇಖರ್ ಹೇಳಿದ್ದಾರೆ.
Video:
Mangalore Bus Driver Unconscious while driving stops bus on time major accident averted at Adyar in Valachil. The driver is said to be Santosh from Puttur a employee of Safeway travels. The driver is admitted to hospital.
12-09-25 03:04 pm
HK News Desk
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 05:34 pm
Mangalore Correspondent
Mangalore Police, Sudheer Reddy: ಶಾಂತಿ ಕಾಪಾಡಲ...
12-09-25 12:58 pm
ಗುಂಡಿ ಬಿದ್ದ ಹೆದ್ದಾರಿ ತಕ್ಷಣ ದುರಸ್ತಿ ; ಸುರತ್ಕಲ್...
12-09-25 11:32 am
ಬಂಗ್ಲೆಗುಡ್ಡೆ ಕಾಡಿನಲ್ಲಿ ರಾಶಿ ರಾಶಿ ಹೆಣಗಳ ಅವಶೇಷ,...
11-09-25 10:42 pm
Mangalore, Harish Kumar: ಎರಡು ನಿಮಿಷದ ಆಜಾನ್ ನಿ...
11-09-25 09:38 pm
12-09-25 05:31 pm
Udupi Correspondent
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm