ಬ್ರೇಕಿಂಗ್ ನ್ಯೂಸ್
24-07-21 10:59 am Mangalore Correspondent ಕರಾವಳಿ
ಉಳ್ಳಾಲ, ಜು.24:ಉಳ್ಳಾಲ ನಗರಸಭಾ ಕಚೇರಿಯಲ್ಲಿ ಪೌರ ಕಾರ್ಮಿಕರಾಗಿದ್ದರೂ ಅಧಿಕಾರಿಯಂತೆ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಪ್ಪ ಅಟ್ಟೋಲೆಯವರು ಕ್ಯಾನ್ಸರ್ ಮಹಾಮಾರಿಯಿಂದ ಶುಕ್ರವಾರ ಸಾವನ್ನಪ್ಪಿದ್ದಾರೆ.
ಸುಮಾರು 17 ವರ್ಷಗಳಿಂದ ಉಳ್ಳಾಲ ನಗರಸಭೆಯಲ್ಲಿ ಪೌರ ಕಾರ್ಮಿಕರಾಗಿದ್ದ ಶಿವಪ್ಪ ಅಟ್ಟೋಲೆ(51) ಅವರು ಕ್ಯಾನ್ಸರ್ ಮಹಾಮಾರಿಯಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ದಲಿತ ಹೋರಾಟಗಾರರಾಗಿದ್ದ ಶಿವಪ್ಪ ಅವರು ಅಂಬೇಡ್ಕರ್ ವಾದವನ್ನ ಪ್ರತಿಪಾದಿಸಿದವರು. ಬಹುಜನ ಸಮಾಜ ಪರಿವರ್ತನಾ ವೇದಿಕೆಯ ಜಿಲ್ಲಾ ಉಸ್ತುವಾರಿಯಾಗಿದ್ದ ಅವರು ಎಲ್ಲರಿಗೂ ಅಂಗಾರ ಎಂದೇ ಪರಿಚಿತರು.
ಮೂಲತಃ ಪುತ್ತೂರು ತಾಲೂಕಿನ ಸವಣೂರು ಮೂಲದ ಶಿವಪ್ಪ ಅವರು ಕಳೆದ 17 ವರ್ಷದಿಂದ ಹಿಂದೆ ಉಳ್ಳಾಲ ಪಟ್ಟಣ ಪಂಚಾಯತ್ಗೆ ಪೌರ ಕಾರ್ಮಿಕರಾಗಿ ವರ್ಗಾವಣೆಯಾಗಿ ಬಂದಿದ್ದರು. ಪೌರ ಕಾರ್ಮಿಕರಾಗಿದ್ದ ಶಿವಪ್ಪ ಅವರಿಗೆ ಉಳ್ಳಾಲದ ಇಂದಿನ ನಗರಸಭೆ ಈ ಹಿಂದೆ ಪುರಸಭೆ ಆಗಿದ್ದಾಗಲೇ ಬಿಲ್ ಕಲೆಕ್ಟರ್ ಆಗಿ ಹೆಚ್ಚುವರಿ ಜವಾಬ್ದಾರಿ ನೀಡಲಾಗಿತ್ತು. ಅಟ್ಟೋಲೆಯವರು ಖಡಕ್ ಅಧಿಕಾರಿಯಾಗಿ ವಸ್ತ್ರ ಧರಿಸಿ ಕಣ್ಣಿಗೆ ಕೂಲಿಂಗ್ ಗ್ಲಾಸ್ ಏರಿಸಿ ಬೈಕಲ್ಲಿ ಬಿಲ್ ಕಲೆಕ್ಷನ್ ಹೆ ಹೋದರೆ ಸ್ಥಳೀಯಾಡಳಿತಕ್ಕೆ ಬರೋ ಆದಾಯ ಪಕ್ಕಾ. ಅಂತಹ ವ್ಯಕ್ತಿತ್ವವನ್ನ ಹೊಂದಿದ್ದ ಅಟ್ಟೋಲೆಯವರು ಮೂಳೆ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ. ಕಳೆದ ಕೆಲ ವರ್ಷಗಳ ಹಿಂದೆ ಅಪಘಾತವೊಂದರಲ್ಲಿ ಶಿವಪ್ಪ ಅವರ ಬೆನ್ನು ಮೂಲೆಗೆ ಏಟು ತಗಲಿತ್ತು. ಕರ್ತವ್ಯದ ಒತ್ತಡದಿಂದ ಅವರು ಸರಿಯಾದ ಚಿಕಿತ್ಸೆ ಪಡೆಯದ ಕಾರಣ ಕ್ಯಾನ್ಸರ್ ಉಲ್ಬಣಿಸಿ ಸಾವನ್ನಪ್ಪಿರುವುದಾಗಿ ಅವರ ಆಪ್ತ ವಲಯದವರು ತಿಳಿಸಿದ್ದಾರೆ.
ಶಿವಪ್ಪ ಅವರು ಮಂಗಳೂರಿನ ವಾಮಂಜೂರಲ್ಲಿ ವಾಸವಿದ್ದು ಪತ್ನಿ, ಎರಡು ಹೆಣ್ಮಕ್ಕಳನ್ನ ಅಗಲಿದ್ದಾರೆ. ಶಿವಪ್ಪ ಅವರ ಅಕಾಲಿಕ ಅಗಲಿಕೆಗೆ ಶಾಸಕರಾದ ಯು.ಟಿ.ಖಾದರ್, ನಗರಸಭೆ ಅಧ್ಯಕ್ಷರಾದ ಚಿತ್ರಕಲಾ ಚಂದ್ರಕಾಂತ್, ಉಪಾಧ್ಯಕ್ಷರಾದ ಆಯುಬ್ ಮಂಚಿಲ, ಪೌರಾಯುಕ್ತರಾದ ರಾಯಪ್ಪ, ಮಾಜಿ ನಗರ ಸದಸ್ಯ ಫಾರೂಕ್ ಉಳ್ಳಾಲ್ ಸೇರಿದಂತೆ ಅನೇಕರು ಸಂತಾಪ ವ್ಯಕ್ತ ಪಡಿಸಿದ್ದಾರೆ. ಇಂದು ನಗರಸಭೆ ಆವರಣದಲ್ಲಿ ಅಟ್ಟೋಲೆಯವರ ಪಾರ್ಥಿವ ಶರೀರರಕ್ಕೆ ಅಂತಿಮ ನಮನ ಸಲ್ಲಿಸಲಾಗುವುದು. ಪಾರ್ಥಿವ ಶರೀರದ ಅಂತ್ಯಕ್ರಿಯೆ ಪುತ್ತೂರಿನಲ್ಲಿ ನಡೆಯಲಿದೆ.
ಪೌರಾಯುಕ್ತರನ್ನೇ ಮೀರಿಸಿ ಅಧಿಕಾರಿಯಾಗಿದ್ದರು !
ಈ ಹಿಂದೆ ಉಳ್ಳಾಲ ಪುರಸಭೆ ಆಗಿದ್ದಾಗ ಆಗಿನ ಪೌರಾಯುಕ್ತರು ತೊಕ್ಕೊಟ್ಟಿನ ಮಳಿಗೆಯೊಂದರಲ್ಲಿ ಶೂ ಖರೀದಿಸಲು ಹೋದಾಗ ಅಲ್ಲಿನ ಸಿಬ್ಬಂದಿ ಶೂ ಒಂದನ್ನು ತೋರಿಸಿ, ಸರ್ ನಿಮ್ಮ ಮೇಲಧಿಕಾರಿ ಶಿವಪ್ಪ ಅವರೇ ಈ ಶೂ ಅನ್ನು ಇಷ್ಟ ಪಟ್ಟು ಖರೀದಿಸಿದ್ದಾರೆ. ನೀವೂ ಇದನ್ನೆ ಖರೀದಿಸಿ ಎಂದಿದ್ದರಂತೆ. ಅಷ್ಟರ ಮಟ್ಟಿಗೆ ಶಿವಪ್ಪ ಅವರು ಉಳ್ಳಾಲ ನಗರದಾದ್ಯಂತ ಅಧಿಕಾರಿಯೆಂದೇ ಹೆಸರಾಗಿದ್ದರು.
ಮಲೇಷಿಯಾಕ್ಕು ತೆರಳಿ ಖ್ಯಾತಿ
ಶಿವಪ್ಪ ಅವರು ಬಹಳ ಕ್ರಿಯಾಶೀಲ ಪೃವೃತ್ತಿಯವರಾಗಿದ್ದು ಪರಿಸರ ಸ್ವಚ್ಚತಾ ಅಭಿಯಾನ ಅಧ್ಯಯನಕ್ಕಾಗಿ ರಾಜ್ಯದಿಂದ ಆಯ್ಕೆಯಾಗಿ ಮಲೇಷಿಯಾಕ್ಕೆ ಹೋಗಿದ್ದರು. ಇದರಿಂದ ಶಿವಪ್ಪ ಅವರು ಬಹಳ ಖ್ಯಾತಿಯನ್ನೂ ಗಳಿಸಿದ್ದರು.
Ullal town municipal civic worker Shivappa dies of Cancer. It is said Shivappa was had worked for 17 long years. He was hailing from Puttur.
28-11-24 10:41 pm
Bangalore Correspondent
Karkala Drowning, Udupi News; ಕಾರ್ಕಳದ ದುರ್ಗಾ...
28-11-24 09:41 pm
ಲಾಕಪ್ ಡೆತ್ ; ನಾಲ್ವರು ಪೊಲೀಸರಿಗೆ ಏಳು ವರ್ಷ ಜೈಲು...
28-11-24 05:04 pm
MLA Gaviyappa, DK Shivakumar: ಯಾವುದೇ ಕಾರಣಕ್ಕೂ...
26-11-24 10:46 pm
Shivamogga, Monkey fever, Dinesh Gundu Rao: ಮ...
26-11-24 10:23 pm
27-11-24 02:00 pm
HK News Desk
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
28-11-24 09:58 pm
Mangalore Correspondent
Mangalore, DFYI protest, Anupam Agarwal: ಪೊಲೀ...
28-11-24 06:05 pm
VHP, Mangalore, Bangladesh: ಬಾಂಗ್ಲಾದೇಶದಲ್ಲಿ ಹ...
28-11-24 03:24 pm
Belthangady suicide, Crime, Mangalore; ನಂಬಿಸಿ...
28-11-24 02:13 pm
Mangalore, Anupam Agarwal, Ramanatha Rai: ರಸ್...
28-11-24 01:56 pm
27-11-24 03:36 pm
HK News Desk
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm