ಬ್ರೇಕಿಂಗ್ ನ್ಯೂಸ್
24-07-21 04:09 pm Mangalore Correspondent ಕರಾವಳಿ
ಮಂಗಳೂರು, ಜುಲೈ 24: ಲಂಕನ್ನರು ಅಕ್ರಮವಾಗಿ ಮಂಗಳೂರಿನಲ್ಲಿ ನೆಲೆಸಿದ್ದ ಪ್ರಕರಣದ ಬಗ್ಗೆ ಎನ್ಐಎ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಬೆಂಗಳೂರಿನ ಎನ್ಐಎ ತಂಡದ ಅಧಿಕಾರಿಗಳು ಶುಕ್ರವಾರ ಮಂಗಳೂರಿಗೆ ಆಗಮಿಸಿದ್ದು, ಒಬ್ಬ ತಮಿಳುನಾಡು ಮೂಲದ ಆರೋಪಿಯನ್ನು ಗುರುತು ಪತ್ತೆಗಾಗಿ ಮಂಗಳೂರಿಗೆ ಕರೆತಂದಿದ್ದರು.
ಒಬ್ಬರು ಡಿವೈಎಸ್ಪಿ , ಇನ್ನೊಬ್ಬರು ಇನ್ಸ್ ಪೆಕ್ಟರ್ ನೇತೃತ್ವದ ತಂಡ ಮಂಗಳೂರಿನ ಹೊಟೇಲ್ ಒಂದರಲ್ಲಿ ಉಳಿದುಕೊಂಡು ಆರೋಪಿಗಳನ್ನು ತನಿಖೆ ನಡೆಸುತ್ತಿದ್ದಾರೆ. ನಾಲ್ಕು ದಿನಗಳ ಹಿಂದಷ್ಟೇ ಕೇಂದ್ರ ಗೃಹ ಸಚಿವಾಲಯ ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾ ದೇಶಿಗರ ಪತ್ತೆ ಮತ್ತು ಮಂಗಳೂರಿನಲ್ಲಿ ಲಂಕನ್ನರು ನೆಲೆಸಿದ್ದ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳದ ತನಿಖೆಗೆ ವಹಿಸಿತ್ತು.
ಇದೀಗ ಎನ್ಐಎ ವಿಭಾಗದ ಎಸ್ಪಿ ಶಿವವಿಕ್ರಮ್ ನೇತೃತ್ವದಲ್ಲಿ ಪ್ರಕರಣದ ತನಿಖೆ ಆರಂಭಗೊಂಡಿದೆ. ಸದ್ಯಕ್ಕೆ ಎಸ್ಪಿ ಮಂಗಳೂರಿಗೆ ಬಂದಿಲ್ಲ. ಎರಡು ದಿನಗಳ ನಂತರ ಅವರು ಬರಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್, ಜೂನ್ ಕೊನೆಯಲ್ಲಿ 38 ಮಂದಿ ಲಂಕನ್ನರು ಅಕ್ರಮವಾಗಿ ನೆಲೆಸಿದ್ದು ಪತ್ತೆಯಾಗಿತ್ತು. ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸಿದ್ದು, ಅವರ ತನಿಖೆಗೆ ಸಹಕರಿಸುವಂತೆ ಮೇಲಧಿಕಾರಿಗಳು ಸೂಚಿಸಿದ್ದಾರೆ. ಪ್ರಕರಣದ ತನಿಖಾಧಿಕಾರಿ ಮತ್ತು ಇತರ ಪೊಲೀಸರು ತನಿಖೆಹೆ ಸಹಕಾರ ನೀಡಲಿದ್ದಾರೆ ಎಂದು ಹೇಳಿದರು.
38 ಮಂದಿ ಅಕ್ರಮವಾಗಿ ಭಾರತಕ್ಕೆ ನುಸುಳಿದ್ದಲ್ಲದೆ ಮೂರು ತಿಂಗಳ ಕಾಲ ತಮಿಳುನಾಡು, ಬೆಂಗಳೂರು ಮತ್ತು ಮಂಗಳೂರಿನಲ್ಲಿ ನೆಲೆಸಿದ್ದು ಆಂತರಿಕ ಭದ್ರತೆಗೆ ಸವಾಲಾಗಿತ್ತು. ಪೊಲೀಸ್ ಇಲಾಖೆಯ ಕಣ್ತಪ್ಪಿಸಿ, ಲಂಕನ್ನರು ಹೇಗೆ ಉಳಿದುಕೊಂಡರು ಎನ್ನುವುದು ಶಂಕೆ ಮತ್ತು ಸಂಶಯಕ್ಕೆ ಕಾರಣವಾಗಿತ್ತು. ಭಾರತಕ್ಕೆ ಅಕ್ರಮವಾಗಿ ನುಸುಳಿದ್ದು ಮತ್ತು ಇಲ್ಲಿ ಉಳಿದುಕೊಳ್ಳಲು ಯಾರು ನೆರವು ನೀಡಿದ್ದರು ಎನ್ನುವುದು ಕೂಡ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇವೆಲ್ಲದರ ಬಗ್ಗೆ ಎನ್ಐಎ ಅಧಿಕಾರಿಗಳು ತನಿಖೆಗೆ ತೊಡಗಿದ್ದು, ಅಗತ್ಯ ಬಿದ್ದರೆ ಹೆಚ್ಚುವರಿ ಎಫ್ಐಆರ್ ದಾಖಲಿಸುವ ಸಾಧ್ಯತೆಯಿದೆ.
ಪಾಸ್ ಪೋರ್ಟ್ ಇಲ್ಲದೆ ಪತ್ತೆಯಾಗಿದ್ದ 38 ಮಂದಿ ಲಂಕನ್ನರ ವಿರುದ್ಧ ಮಾನವ ಕಳ್ಳಸಾಗಾಣಿಕೆ ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಸದ್ಯಕ್ಕೆ ಅವರು ಮಂಗಳೂರಿನ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈಗಾಗ್ಲೇ ತಮಿಳುನಾಡಿನ ಪೊಲೀಸರ ತಂಡ ಮಂಗಳೂರಿಗೆ ಬಂದು ತನಿಖೆ ನಡೆಸಿದ್ದು, ಆನಂತರ ಹಿಂದೆ ತೆರಳಿತ್ತು. ಇದೇ ಪ್ರಕರಣ ಸಂಬಂಧಿಸಿ ತಮಿಳುನಾಡಿನಲ್ಲಿಯೂ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.
ಬಾಂಗ್ಲಾ ಅಕ್ರಮಿಗಳ ಬಗ್ಗೆ ಬೆಂಗಳೂರಿನಲ್ಲಿ ತನಿಖೆ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶದ ನಿವಾಸಿಗಳ ಪ್ರಕರಣದ ಬಗ್ಗೆಯೂ ಎನ್ಐಎ ಅಧಿಕಾರಿಗಳು ಇದೇ ವೇಳೆಗೆ ತನಿಖೆ ಆರಂಭಿಸಿದ್ದಾರೆ. ಅದರ ಬಗ್ಗೆ ಎನ್ಐಎ ಅಧಿಕಾರಿಗಳು ಆರಂಭದಲ್ಲೇ ಹೆಚ್ಚುವರಿ ಎಫ್ಐಆರ್ ದಾಖಲಿಸಿದ್ದು, ಹತ್ತು ಮಂದಿಯನ್ನು ವಿಚಾರಣೆ ನಡೆಸುತ್ತಿದ್ದಾರೆ. ಬಾಂಗ್ಲಾ ಗಡಿಯಿಂದ ಅಕ್ರಮವಾಗಿ ನುಸುಳಿದ ಬಳಿಕ ಭಾರತದಲ್ಲಿ ನಕಲಿ ದಾಖಲೆಗಳನ್ನು ಮಾಡಿಕೊಂಡು ಬೆಂಗಳೂರು, ಹೈದರಾಬಾದ್ ಸೇರಿದಂತೆ ವಿವಿಧ ನಗರಗಳನ್ನು ನೆಲೆಸುತ್ತಿದ್ದಾರೆ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿತ್ತು. ಬೆಂಗಳೂರಿನಲ್ಲಿ ಬಾಂಗ್ಲಾ ಯುವತಿಯರನ್ನು ಮುಂದಿಟ್ಟು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಸಿರುವುದು ತಿಳಿದುಬಂದಿತ್ತು.
ತಿಂಗಳ ಹಿಂದೆ ಬೆಂಗಳೂರಿನಲ್ಲಿ ಬಾಂಗ್ಲಾ ಯುವತಿಯನ್ನು ಸಾಮೂಹಿಕ ಅತ್ಯಾಚಾರ ನಡೆಸಿದ್ದಲ್ಲದೆ, ಅಮಾನುಷವಾಗಿ ನಡೆಸಿಕೊಂಡಿದ್ದರ ಬಗ್ಗೆ ವಿಡಿಯೋ ವೈರಲ್ ಆಗಿತ್ತು. ವಿಡಿಯೋ ಮೊದಲು ಬಾಂಗ್ಲಾದೇಶದಲ್ಲಿ ವೈರಲ್ ಆಗಿ, ಬಳಿಕ ಅದು ಅಲ್ಲಿನ ಯುವತಿಯ ಕುಟುಂಬಸ್ಥರಿಗೆ ಸಿಕ್ಕಿತ್ತು. ಆನಂತರ ಅಲ್ಲಿನ ಪೊಲೀಸರು ಇದು ಎಲ್ಲಿ ನಡೆದಿದೆ ಎನ್ನುವುದನ್ನು ಪತ್ತೆ ಮಾಡಲು ಅಸ್ಸಾಂ ಪೊಲೀಸರಿಗೆ ಮನವಿ ಮಾಡಿದ್ದರು. ಇದೇ ವೇಳೆ, ಅಸ್ಸಾಮ್ ನಲ್ಲಿಯೂ ವಿಡಿಯೋ ವೈರಲ್ ಆಗಿ ಅಲ್ಲಿ ಜನಾಂಗೀಯ ದ್ವೇಷಕ್ಕೂ ಕಾರಣವಾಗಿತ್ತು. ಅಲ್ಲಿನ ರೋಹಿಂಗ್ಯಾ ಮುಸ್ಲಿಮರು ಕೃತ್ಯ ನಡೆಸಿದ್ದಾರೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಕೊನೆಗೆ, ಆ ವಿಡಿಯೋ ಬೆಂಗಳೂರಿನ ರಾಮಮೂರ್ತಿ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದು ತಿಳಿದುಬಂದು ಪೊಲೀಸರು ಕಾರ್ಯಾಚರಣೆ ನಡೆಸಿ, ಆರು ಮಂದಿಯನ್ನು ಬಂಧಿಸಿದ್ದರು. ಘಟನೆ ಬೆಳಕಿಗೆ ಬರುತ್ತಿದ್ದಂತೆ, ಬಾಂಗ್ಲಾ ಮೂಲದ ನಿವಾಸಿಗಳು ಬೆಂಗಳೂರಿನಲ್ಲಿ ನೆಲೆಸಿ ಮಾಡುತ್ತಿರುವ ಅನಾಚಾರಗಳು ಬಯಲಾಗಿದ್ದವು.
ಅಂತಾರಾಷ್ಟ್ರೀಯ ಮಾನವ ಕಳ್ಳಸಾಗಣೆ ಜಾಲ ಪತ್ತೆ ; ಕೆನಡಾಕ್ಕೆ ತೆರಳಲು ಪ್ಲಾನ್ ಹಾಕಿದ್ದ 38 ಲಂಕನ್ನರ ಸೆರೆ !
NIA team from Bangalore arrives at Mangalore to investigate case of Sri Lankan nationals staying illegally in Mangaluru. Thirty-eight Sri Lankan nationals had been arrested for illegally staying in Karnataka’s Mangaluru for over a month now. The arrests were made by the City Crime Branch from private lodges and houses based on a tip-off from the Tamil Nadu police and intelligence agencies, the police said.
16-07-25 09:36 pm
HK News Desk
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
ಕಾವೇರಿ ಆರತಿ ದುಡ್ಡು ಹೊಡೆಯುವ ಸ್ಕೀಮ್, ನೂರು ಕೋಟಿ...
16-07-25 11:47 am
35 IPS Officers Transfer: ರಾಜ್ಯದಲ್ಲಿ 35 ಐಪಿಎಸ...
15-07-25 01:32 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
17-07-25 04:14 pm
Mangalore Correspondent
Minister Priyank Kharge, Drug Trafficking: ಡ್...
17-07-25 01:51 pm
Mangalore Rain, Landslide, Maryhill: ಭಾರೀ ಮಳೆ...
17-07-25 01:34 pm
Wizdom Education, Guruvandana, Mangalore: ಮಂಗ...
17-07-25 01:26 pm
Mangalore Rain, School College Holiday: ಕರಾವಳ...
16-07-25 10:52 pm
17-07-25 02:30 pm
Mangalore Correspondent
Cyber Crime Tumkur, Facebook, Mangalore Polic...
16-07-25 11:04 pm
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm
Sexual Harassment Odisha News; ಪ್ರಾಧ್ಯಾಪಕನಿಂದ...
16-07-25 04:37 pm
Kavoor police constable arrest, Mangalore: ದೂ...
16-07-25 11:42 am