ಬ್ರೇಕಿಂಗ್ ನ್ಯೂಸ್
25-07-21 03:57 pm Mangaluru Correspondent ಕರಾವಳಿ
ಮಂಗಳೂರು, ಜುಲೈ 25: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುತ್ತಿರುವ ಭಾರತೀಯ ಕ್ರೀಡಾಳುಗಳಿಗೆ ಶುಭಾಶಯ ಕೋರುವ ಅವಸರದಲ್ಲಿ ರೆಸ್ಲಿಂಗ್ ಚಾಂಪ್ಯನ್ ಶಿಪ್ಪಿನಲ್ಲಿ ಚಿನ್ನದ ಪದಕ ಗೆದ್ದ ಪ್ರಿಯಾ ಮಲ್ಲಿಕ್ ಅವರನ್ನು ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದಿದ್ದಾಗಿ ಶುಭಾಶಯ ಕೋರಿ ಎಡವಟ್ಟು ಮಾಡಿದ್ದಾರೆ.
ಹಂಗೇರಿಯಲ್ಲಿ ನಡೆದ ವಿಶ್ವ ಕೇಡೆಟ್ ರೆಸ್ಲಿಂಗ್ ಚಾಂಪ್ಯನ್ ಶಿಪ್ ಕೂಟದಲ್ಲಿ ಭಾರತದ ಪ್ರಿಯಾ ಮಲಿಕ್ 73 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಫೈನಲ್ ಪಂದ್ಯದಲ್ಲಿ ಬೆಲಾರಸ್ಸಿನ ಎದುರಾಳಿ ಕ್ಸೆನಿಯಾ ಪತಾಪೊವಿಚ್ ಅವರನ್ನು 5-0 ನೇರ ಸೆಟ್ ಗಳಲ್ಲಿ ಮಣಿಸಿ ಚಿನ್ನದ ಬೇಟೆಯಾಡಿದ್ದರು. ಆದರೆ, ಇದನ್ನೇ ಒಲಿಂಪಿಕ್ಸ್ ನಲ್ಲಿ ಭಾರತದ ಮತ್ತೊಬ್ಬ ಕ್ರೀಡಾಳು ಚಿನ್ನ ಗೆದ್ದಿದ್ದಾಗಿ ಬಿಜೆಪಿ ರಾಜ್ಯಾಧ್ಯಕ್ಷರ ಟ್ವಿಟರ್ ನಲ್ಲಿ ಪ್ರಿಯಾ ಮಲಿಕ್ ಫೋಟೋ ಜೊತೆಗೆ ಪೋಸ್ಟ್ ಮಾಡಿದ್ದು, ನೆಟ್ಟಿಗರು ವ್ಯಂಗ್ಯದ ನಗೆ ಬೀರಿದ್ದಾರೆ.
ಹಲವಾರು ಮಂದಿ ನಳಿನ್ ಕುಮಾರ್ ಟ್ವೀಟನ್ನು ಮರು ಟ್ವೀಟ್ ಮಾಡಿ ತಿರುಗೇಟು ನೀಡಿದ್ದಾರೆ. ಕೆಲವರು ತುಳುವಿನಲ್ಲೇ ಟ್ವೀಟ್ ಮಾಡಿದ್ದು ಅದು ಒಲಿಂಪಿಕ್ಸ್ ಅಲ್ಲ ಮಾರ್ರೇ.. ಒಮ್ಮೆ ಡಿಲೀಟ್ ಮಾಡ್ರಿ.. ಅದು ವರ್ಲ್ಡ್ ರೆಸ್ಲಿಂಗ್.. ಎಂದು ಬರೆದುಕೊಂಡಿದ್ದಾರೆ. ಕೆಲವರು ಇವತ್ತು ಈ ಟ್ವಿಟರ್ ಹ್ಯಾಂಡ್ಲರ್ ಗೆ ಕಾದಿದೆ ಎಂದು ಬರೆದಿದ್ದಾರೆ. ಇದಲ್ಲದೆ, ಈ ರೀತಿಯ ಎಡವಟ್ಟಿನ ಟ್ವಿಟರ್ ಫೋಟೋಗಳು, ಕಮೆಂಟುಗಳನ್ನು ಫೋಟೋ ತೆಗೆದು ವಾಟ್ಸಪ್ ನಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಆಡಿಯೋ ಹೊರಬಂದು ತೀವ್ರ ಟ್ರೋಲ್ ಆಗಿರುವ ನಳಿನ್ ಕುಮಾರ್ ಈಗ ಮತ್ತೆ ಟ್ರೋಲ್ ಆಗುವಂತಾಗಿದೆ. ಟ್ವೀಟಿಗರು ಗರಂ ಆಗುತ್ತಿದ್ದಂತೆ ನಳಿನ್ ಕುಮಾರ್ ಎಡವಟ್ಟಿನ ಟ್ವೀಟ್ ಡಿಲೀಟ್ ಆಗಿತ್ತು.
BJP Naleem Kumar Kateel wrongly tweets as Priya Malik wins gold medal in Olympics instead of Cadet World Championship in Budapest, Hungary, on Sunday. Many Twitter handlers asked for the tweet to be deleted.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm