ಮಲ್ಲೂರು ; ಗುಡ್ಡ ಕುಸಿದು ಮನೆಗೆ ಹಾನಿ, ತಪ್ಪಿದ ಅನಾಹುತ

26-07-21 11:50 am       Mangalore Correspondent   ಕರಾವಳಿ

ಮಂಗಳೂರು ತಾಲೂಕಿ‌ನ ಪೊಳಲಿ ಸಮೀಪದ ಮಲ್ಲೂರಿನಲ್ಲಿ ಗುಡ್ಡ ಕುಸಿದು ಮನೆಯೊಂದಕ್ಕೆ ಹಾನಿಯಾಗಿದೆ‌‌. 

ಮಂಗಳೂರು, ಜುಲೈ 26: ಮಂಗಳೂರು ತಾಲೂಕಿ‌ನ ಪೊಳಲಿ ಸಮೀಪದ ಮಲ್ಲೂರಿನಲ್ಲಿ ಗುಡ್ಡ ಕುಸಿದು ಮನೆಯೊಂದಕ್ಕೆ ಹಾನಿಯಾಗಿದೆ‌‌. ಜುಬೇರ್ ಎಂಬವರ ಮನೆಗೆ ಗುಡ್ಡ ಕುಸಿದು ಬಿದ್ದಿದ್ದು  ಘಟನೆಯಿಂದ ಮಹಿಳೆಯೊಬ್ಬರಿಗೆ ಗಾಯವಾಗಿದೆ.

ಗಾಯಗೊಂಡ ಮಹಿಳೆಯನ್ನು ಬೀಪಾತುಮ್ಮ (72) ಎಂದು ಗುರುತಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಭಾನುವಾರ ರಾತ್ರಿ ಕೂಡ ಮಳೆಯಾಗಿತ್ತು. ಇದರಿಂದ ಇಂದು ಬೆಳಗ್ಗೆ 5.30ರ ವೇಳೆಗೆ ಮಲ್ಲೂರು ಜಂಕ್ಷನ್ ಸಮೀಪ ಝುಬೇರ್ ಎಂಬವರ ಮನೆಯ ಹಿಂಭಾಗವಿದ್ದ ಗುಡ್ಡ ಕುಸಿದು ಬಿದ್ದಿದೆ.

ಇದರಿಂದ ಮನೆಯ ಒಂದು ಪಾರ್ಶ್ವದ ಗೋಡೆ ಕುಸಿದು ಬಿದ್ದು ಆ ಭಾಗದಲ್ಲಿದ್ದ ಮಹಿಳೆಯ ಕಣ್ಣಿನ ಭಾಗಕ್ಕೆ ಗಾಯವಾಗಿದೆ. ಮನೆಯಲ್ಲಿ ಒಬ್ಬರೇ ಇದ್ದ ಕಾರಣ ಹೆಚ್ಚಿನ ಆಘಾತ ಸಂಭವಿಸಿಲ್ಲ. ಝುಬೇರ್ ಕುಟುಂಬ ಇದೇ ಮನೆಯಲ್ಲಿ ವಾಸವಿದ್ದರು. ಭಾನುವಾರ ಅವರ ಕುಟುಂಬ ಪತ್ನಿ ಮನೆಗೆ ತೆರಳಿತ್ತು. ಇಲ್ಲದಿದ್ದರೆ ಗೋಡೆ ಕುಸಿತದಿಂದ ಭಾರೀ ಅನಾಹುತ ಸಂಭವಿಸುತ್ತಿತ್ತು ಎಂದು ಸ್ಥಳೀಯ ನಿವಾಸಿ ಎನ್.ಇ. ಮಹಮ್ಮದ್ ತಿಳಿಸಿದ್ದಾರೆ.

Mangalore House collapses after a landslide at Polali in Malluru due to heavy rains. No causality has been reported.