ಬ್ರೇಕಿಂಗ್ ನ್ಯೂಸ್
30-07-21 10:29 pm Mangaluru Correspondent ಕರಾವಳಿ
ಮಂಗಳೂರು, ಜುಲೈ 30: ಕೇರಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಸಿಎಂ ಬಸವರಾಜ್ ಬೊಮ್ಮಾಯಿ ಗಡಿಭಾಗದಲ್ಲಿ ತಪಾಸಣೆ ಹೆಚ್ಚಿಸುವಂತೆ ಸೂಚನೆ ನೀಡಿದ್ದಾರೆ. ಇದರಂತೆ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಮತ್ತು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಇಂದು ಕೇರಳ ಗಡಿಭಾಗ ತಲಪಾಡಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಗಡಿಭಾಗದಲ್ಲಿ ಕೇರಳ ಕಡೆಯಿಂದ ಬರುವ ಮಂದಿ ಬಗ್ಗೆ ತಪಾಸಣೆ ತೀವ್ರಗೊಳಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ಈ ವೇಳೆ, ಮಾಧ್ಯಮಕ್ಕೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ., ಕೇರಳದಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿದೆ. ಕೇರಳ ಕಡೆಯಿಂದ ವಿದ್ಯಾರ್ಥಿಗಳು ಮತ್ತು ಉದ್ಯೋಗಕ್ಕಾಗಿ ದಿನಂಪ್ರತಿ ಜನರು ಬರುತ್ತಾರೆ. ಈ ನಿಟ್ಟಿನಲ್ಲಿ ಅವರನ್ನು ಗಡಿಭಾಗದಲ್ಲಿ ತಪಾಸಣೆ ನಡೆಸಲು ಆರೋಗ್ಯ ಕಾರ್ಯಕರ್ತರನ್ನು ಗಡಿಯಲ್ಲಿ ನೇಮಕ ಮಾಡಲಾಗಿದೆ. ಅದರ ಜೊತೆಗೆ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಕಡ್ಡಾಯ ಮಾಡಲಾಗಿದೆ.
ಆದರೂ ಕೋವಿಡ್ ಲಸಿಕೆ ಒಂದು ಡೋಸ್ ಪಡೆದವರನ್ನು ಗಡಿಯಲ್ಲಿ ತಪಾಸಣೆ ನಡೆಸದೆ ಬಿಡಲಾಗುತ್ತಿದೆ. ಒಂದು ಡೋಸ್ ಪಡೆದವರಿಗೂ ಸೋಂಕು ಇರುವ ಸಾಧ್ಯತೆ ಇರುತ್ತದೆ. ಹೀಗಾಗಿ ಈ ಬಗ್ಗೆ ಹೊಸತಾಗಿ ಮಾರ್ಗಸೂಚಿ ಹೊರಡಿಸುವ ಅಗತ್ಯವಿದೆ. ಅಲ್ಲದೆ, ಸದ್ಯಕ್ಕೆ ಗಡಿಭಾಗದಲ್ಲಿ ಕೋವಿಡ್ ತಪಾಸಣೆ ನಡೆಸಿ ಒಳಬಿಡಲು ಅನುಮತಿ ನೀಡಲಾಗಿದೆ. ಈ ವಿಚಾರದ ಬಗ್ಗೆಯೂ ಪುನರ್ ವಿಮರ್ಶೆ ಮಾಡುವ ಅಗತ್ಯವಿದೆ. ಈ ಬಗ್ಗೆ ಯಾವ ರೀತಿಯ ನಿರ್ಧಾರ ಕೈಗೊಳ್ಳಬೇಕು ಎಂಬ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ. ಶನಿವಾರ ಜನಪ್ರತಿನಿಧಿಗಳ ಜೊತೆ ಸಭೆ ಇದ್ದು ಆನಂತರ ನಿರ್ಧಾರ ಪ್ರಕಟಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೇರಳದ ನಡುವೆ 16 ಕಡೆಗಳಲ್ಲಿ ಒಳದಾರಿ ಸೇರಿದಂತೆ ಚೆಕ್ ಪೋಸ್ಟ್ ಹಾಕಿದ್ದು ಎಲ್ಲ ಕಡೆಯೂ ಪೊಲೀಸರು ಮತ್ತು ಆರೋಗ್ಯ ಇಲಾಖೆ ಕಾರ್ಯಕರ್ತರು ಇರಲಿದ್ದಾರೆ. ಕೋವಿಡ್ ಹರಡದಂತೆ, ಮುಂಜಾಗ್ರತೆ ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ. ಕೇರಳದ ಗಡಿಭಾಗವನ್ನು ಮಂಗಳೂರು ಹಂಚಿಕೊಂಡಿರುವುದರಿಂದ ಜನರು ಕೂಡ ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯ ಪಾಲನೆ ಮಾಡಬೇಕಿದೆ ಎಂದು ಇದೇ ವೇಳೆ ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
As the districts in the state along Kerala border are witnessing a steady increase in the number of Covid-19 cases, Dakshina Kannada deputy commissioner (DC) Dr Rajendra K V and police commissioner N Shashi Kumar visited Talapady check post to review the Covid situation on Friday July 30.
17-07-25 07:45 pm
Bangalore Correspondent
Dharmasthala News, SIT: ಧರ್ಮಸ್ಥಳ ಪ್ರಕರಣದಲ್ಲಿ...
17-07-25 04:50 pm
CM Siddaramaiah, Janardhan Reddy; ನವೆಂಬರ್ ಒಳಗ...
16-07-25 09:36 pm
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
17-07-25 06:30 pm
Mangalore Correspondent
Wild Elephant Attack, Dharmasthala: ಧರ್ಮಸ್ಥಳ...
17-07-25 04:14 pm
Minister Priyank Kharge, Drug Trafficking: ಡ್...
17-07-25 01:51 pm
Mangalore Rain, Landslide, Maryhill: ಭಾರೀ ಮಳೆ...
17-07-25 01:34 pm
Wizdom Education, Guruvandana, Mangalore: ಮಂಗ...
17-07-25 01:26 pm
17-07-25 10:42 pm
Mangalore Correspondent
Uppinangady Murder: ಕೌಟುಂಬಿಕ ಕಲಹ ; ಮಾತಿಗೆ ಮಾತ...
17-07-25 02:30 pm
Cyber Crime Tumkur, Facebook, Mangalore Polic...
16-07-25 11:04 pm
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm
Sexual Harassment Odisha News; ಪ್ರಾಧ್ಯಾಪಕನಿಂದ...
16-07-25 04:37 pm