ಸೋಮೇಶ್ವರ ; ರೈಲು ಹಳಿ ಬಳಿ  ನವಿಲು ಸಾವು, ಪುರಸಭೆಯಿಂದ ಗೌರವದ ಅಂತ್ಯಕ್ರಿಯೆ 

30-07-21 10:35 pm       Mangaluru Correspondent   ಕರಾವಳಿ

ರೈಲ್ವೇ ಹಳಿ ಬದಿಯಲ್ಲಿ ರಾಷ್ಟ್ರ ಪಕ್ಷಿ ನವಿಲು ಸತ್ತು ಬಿದ್ದಿದ್ದು ಅರಣ್ಯಾಧಿಕಾರಿ ಸಮಕ್ಷಮದಲ್ಲಿ  ಗೌರವದೊಂದಿಗೆ ನವಿಲಿನ ಅಂತ್ಯಕ್ರಿಯೆ ನಡೆಸಲಾಗಿದೆ. 

ಉಳ್ಳಾಲ, ಜು.30: ಸೋಮೇಶ್ವರ ಪುರಸಭಾ ವ್ಯಾಪ್ತಿಯ ಕೋಟೆಕಾರು ಸ್ಟೆಲ್ಲಾ ಮೇರೀಸ್ ಶಾಲಾ ಹಿಂಭಾಗದ ರೈಲ್ವೇ ಹಳಿ ಬದಿಯಲ್ಲಿ ರಾಷ್ಟ್ರ ಪಕ್ಷಿ ನವಿಲು ಸತ್ತು ಬಿದ್ದಿದ್ದು ಅರಣ್ಯಾಧಿಕಾರಿ ಸಮಕ್ಷಮದಲ್ಲಿ  ಗೌರವದೊಂದಿಗೆ ನವಿಲಿನ ಅಂತ್ಯಕ್ರಿಯೆ ನಡೆಸಲಾಗಿದೆ. 

ರೈಲ್ವೇ ಹಳಿ ಬದಿಯಲ್ಲಿ ಹೆಣ್ಣು ನವಿಲೊಂದು ಸತ್ತು ಬಿದ್ದಿರುವ ವಿಚಾರ ಮಾಜಿ ತಾ.ಪಂ ಸದಸ್ಯ ರವಿಶಂಕರ್ ಸೋಮೇಶ್ವರ ಗಮನಕ್ಕೆ ಬಂದಿದ್ದು ತಕ್ಷಣ ಅವರು ಸೋಮೇಶ್ವರ ಪುರಸಭಾ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಪುರಸಭಾ ಮುಖ್ಯಾಧಿಕಾರಿ ವಾಣಿ ಆಳ್ವ ಅವರು ಅರಣ್ಯ ಇಲಾಖಾಧಿಕಾರಿಗಳಿಗೆ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ರಕ್ಷಕಿ ಸೌಮ್ಯ ಅವರು ಪರಿಶೀಲನೆ ನಡೆಸಿದ್ದು ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದಾರೆ. ರೈಲು ಬಡಿದು ಅಥವಾ ಇಲೆಕ್ಟ್ರಿಕ್ ಟ್ರೈನ್ ನ ಹೈ ಟೆನ್ಷನ್ ತಂತಿ ಸ್ಫರ್ಶಿಸಿ ನವಿಲು ಸಾವನ್ನಪ್ಪಿರುವುದಾಗಿ ಶಂಕಿಸಲಾಗಿದೆ. 

ರವಿಶಂಕರ್ ಸೋಮೇಶ್ವರ ಅವರ ನೇತೃತ್ವದಲ್ಲಿ ಮೃತ ನವಿಲಿನ ಕಳೇಬರವನ್ನ ಸೋಮೇಶ್ವರ ರುದ್ರಭೂಮಿಗೆ ಒಯ್ದು, ಅಧಿಕಾರಿಗಳು, ಗ್ರಾಮಸ್ಥರು ಸೇರಿ ಅಂತಿಮ ಗೌರವ ಸಲ್ಲಿಸಿದ ಬಳಿಕ ಅಂತ್ಯ ಕ್ರಿಯೆ ನಡೆಸಲಾಗಿದೆ.

Mangalore, Peacock killed by electrocution at someshwara in Ullal.