ಮುಳುಗಿದ ಹಡಗಿಗೆ ಬೋಟ್ ಡಿಕ್ಕಿಯಾಗಿ ದುರಂತ ; 11 ಜನರ ರಕ್ಷಣೆ, ಒಬ್ಬ ನೀರುಪಾಲು

05-08-21 03:27 pm       Mangaluru Correspondent   ಕರಾವಳಿ

ಉಳ್ಳಾಲ ಬಳಿಯ ಸಮುದ್ರ ಮಧ್ಯೆ ಆಳಸಮುದ್ರ ಮೀನುಗಾರಿಕೆಗೆ ತೆರಳುತ್ತಿದ್ದ ಬೋಟ್ ಮಗುಚಿ ಬಿದ್ದ ಘಟನೆ ನಡೆದಿದ್ದು, ಒಬ್ಬ ಕಾರ್ಮಿಕ ನಾಪತ್ತೆಯಾಗಿದ್ದಾರೆ.

Photo credits : Representational

ಮಂಗಳೂರು, ಆಗಸ್ಟ್ 5: ಉಳ್ಳಾಲ ಬಳಿಯ ಸಮುದ್ರ ಮಧ್ಯೆ ಆಳಸಮುದ್ರ ಮೀನುಗಾರಿಕೆಗೆ ತೆರಳುತ್ತಿದ್ದ ಬೋಟ್ ಮಗುಚಿ ಬಿದ್ದ ಘಟನೆ ನಡೆದಿದ್ದು, ಒಬ್ಬ ಕಾರ್ಮಿಕ ನಾಪತ್ತೆಯಾಗಿದ್ದಾರೆ.

ಬೆಳಗ್ಗೆ 11 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಉಳ್ಳಾಲ ಬಳಿಯ ಸಮುದ್ರ ಮಧ್ಯೆ ನಾಲ್ಕು ವರ್ಷಗಳ ಹಿಂದೆ ಮುಳುಗಿರುವ ಹಡಗು ಡಿಕ್ಕಿಯಾಗಿ ಬೋಟ್ ಮಗುಚಿ ಬಿದ್ದಿದೆ ಎನ್ನಲಾಗುತ್ತಿದೆ. ಬೋಟಿನಲ್ಲಿ 12 ಜನ ಕಾರ್ಮಿಕರಿದ್ದು ಕೂಡಲೇ ಅವರನ್ನು ಹಿಂದಿನಲ್ದಿದ್ದ ಬೋಟಿನವರು ರಕ್ಷಣೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಹನ್ನೊಂದು ಮಂದಿ ಈಜುತ್ತಾ ಬಂದು ಇನ್ನೊಂದು ಬೋಟಿನ ಮೂಲಕ ಜೀವ ಉಳಿಸಿಕೊಂಡಿದ್ದಾರೆ. ಆದರೆ ಒಬ್ಬಾತ ನೀರಿನಲ್ಲಿ ಕಾಣೆಯಾಗಿದ್ದಾನೆ.

ತಮಿಳುನಾಡು ಮೂಲದ ಒಬ್ಬ ಕಾರ್ಮಿಕ ನಾಪತ್ತೆಯಾಗಿದ್ದಾನೆ ಎನ್ನಲಾಗುತ್ತಿದೆ. ಆದ್ಯ ಹೆಸರಿನ ಬೋಟ್ ಆಗಿದ್ದು, ಅದರ ಮಾಲಕ ಉಳ್ಳಾಲ ಮೊಗವೀರಪಟ್ಣದ ಭಾನುಪ್ರಕಾಶ್ ಎಂಬವರಾಗಿದ್ದಾರೆ. ಮುಳುಗಿದ್ದ ಬಾರ್ಜ್ ಹಡಗನ್ನು ತೆರವುಗೊಳಿಸಿಲ್ಲ. ಅಲ್ಲದೆ, ಹಡಗು ಇರುವ ಬಗ್ಗೆ ಯಾವುದೇ ಗುರುತನ್ನೂ ಹಾಕಿಲ್ಲ. ಇದರಿಂದಾಗಿ ಮೀನುಗಾರಿಕಾ ಬೋಟ್ ಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ಮೀನುಗಾರರು ತಿಳಿಸಿದ್ದಾರೆ. 

Boat capsizes at Ullal in Mangalore 11 fishermen rescued one goes missing. It is said that the boat rammed a Submerged ship. The missing fishermen is said to be native of Tamilnadu.