ಬ್ರೇಕಿಂಗ್ ನ್ಯೂಸ್
07-08-21 09:56 pm Mangaluru Correspondent ಕರಾವಳಿ
ಮಂಗಳೂರು, ಆಗಸ್ಟ್ 7: ದೈಹಿಕವಾಗಿ ಮತ್ತು ಬುದ್ಧಿವಂತಿಕೆಯಲ್ಲಿ ಇತರ ಜಿಲ್ಲೆಯ ಜನರಿಗೆ ಹೋಲಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯವರು ಒಂದು ಹೆಜ್ಜೆ ಮುಂದಿದ್ದಾರೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಮಂದಿ ಪೊಲೀಸ್ ಸೇವೆಗೆ ಬರುವುದು ಮಾತ್ರ ಅತ್ಯಂತ ಕಡಿಮೆ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಹೊಸ ಆಫರ್ ನೀಡಿದ್ದಾರೆ. ಪೊಲೀಸ್, ಇನ್ ಸ್ಪೆಕ್ಟರ್ ಆಗಲು ಬಯಸುವ ಮಂದಿಗೆ ಉಚಿತವಾಗಿ ಒಂದು ತಿಂಗಳ ಕಾರ್ಯಾಗಾರ ನಡೆಸಲು ಮುಂದಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ನೂರು ಮಂದಿಗೆ ನುರಿತ ಅಧಿಕಾರಿಗಳಿಂದ ಕಾರ್ಯಾಗಾರ ಏರ್ಪಡಿಸಿದ್ದಾರೆ. ಅಭ್ಯರ್ಥಿಗಳು ಪಿಎಸ್ಐ, ಪೊಲೀಸ್ ಸೇರಲು ಬಯಸಿ ದೈಹಿಕ ಪರೀಕ್ಷೆಯಲ್ಲಿ ಪಾಸಾಗಿರಬೇಕು. ಅಲ್ಲದೆ, ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿಗಳೇ ಆಗಿರಬೇಕು. ಈ ಬಗ್ಗೆ ಮಂಗಳೂರು ಕಮಿಷನರೇಟ್ ಕಚೇರಿಯಲ್ಲಿ ಆಗಸ್ಟ್ 9ರಂದು ನೋಂದಣಿಗೆ ಅವಕಾಶ ಮಾಡಿದ್ದು ಸ್ವತಃ ಬಂದು ಕಾರ್ಯಾಗಾರಕ್ಕೆ ಸೇರುವ ಬಗ್ಗೆ ನೋಂದಣಿ ಮಾಡಿಸಿಕೊಳ್ಳಬಹುದು. ಸೇರಲು ಬಯಸುವ ಮಂದಿ ತಮ್ಮ ಐಡಿ ಕಾರ್ಡ್ ಮತ್ತು ಪಿಎಸ್ಐ, ಪೊಲೀಸ್ ಅರ್ಹತಾ ಪರೀಕ್ಷೆಯಲ್ಲಿ ಪಾಸ್ ಆಗಿರುವ ಬಗ್ಗೆ ಸರ್ಟಿಫಿಕೇಟ್ ಹೊಂದಿರಬೇಕು.
ಆಯ್ಕೆಯಾದವರು ಕಾರ್ಯಾಗಾರಕ್ಕೆ ಸೇರಲು ಬರುವಾಗ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಮಾಡಿಸಬೇಕು. ಒಂದು ತಿಂಗಳ ಕಾರ್ಯಾಗಾರ ಸಂಪೂರ್ಣ ಉಚಿತವಾಗಿದ್ದು, ವಸತಿ, ಊಟದ ವ್ಯವಸ್ಥೆ ಇರಲಿದೆ. ಒಂದು ತಿಂಗಳ ಕಾಲ ಮಂಗಳೂರಿನಲ್ಲೇ ಇರಬೇಕಾಗುತ್ತದೆ. ಇದಕ್ಕಾಗಿ ನಗರದ ಅಲೋಶಿಯಸ್ ಕಾಲೇಜಿನಲ್ಲಿ ವ್ಯವಸ್ಥೆ ಮಾಡಲಾಗಿದೆ. ತರಗತಿ, ತರಬೇತಿ, ಓದುವುದು ಹೀಗೆ ಪ್ರತ್ಯೇಕವಾಗಿ ಕೋಚಿಂಗ್ ಇರಲಿದ್ದು, ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆ ಕವರೆಗೆ ಕ್ಲಾಸ್ ಇರಲಿದೆ. ಹೆಚ್ಚುವರಿ ಅಧ್ಯಯನ ಸಾಮಗ್ರಿಗಳು ಅಗತ್ಯವಾದರೆ, ಅದನ್ನು ಅಭ್ಯರ್ಥಿಗಳೇ ಮಾಡಿಕೊಳ್ಳಬೇಕು.
ದಕ್ಷಿಣ ಕನ್ನಡ ಜಿಲ್ಲೆಯವರಿಗೆ ಮೊದಲ ಆದ್ಯತೆ. ಭರ್ತಿಯಾಗದೇ ಇದ್ದಲ್ಲಿ ಉಡುಪಿ, ಚಿಕ್ಕಮಗಳೂರು, ಕಾರವಾರದ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುವುದು. ಅಲೋಶಿಯಸ್ ಕಾಲೇಜಿನವರು ವಾಸ್ತವ್ಯ, ಕ್ಲಾಸ್ ರೂಂ, ಲೈಬ್ರರಿ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ. ಆಸಕ್ತರು ಅವಕಾಶ ಬಳಸಿಕೊಳ್ಳಬಹುದು ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಜನರು ಪೊಲೀಸ್ ಸೇವೆಗೆ ಬರದೇ ಇರುವುದರಿಂದ ಇಲಾಖೆಯ ಒಳಗೆ ಉತ್ತರ ಕರ್ನಾಟಕದ ಮಂದಿಯನ್ನೇ ತುಂಬುವಂಥ ಸ್ಥಿತಿ ಬಂದಿದೆ. ಇದರಿಂದಾಗಿ ಭಾಷೆ ತಿಳಿಯದೇ, ಇಲ್ಲಿನ ಸಂಸ್ಕೃತಿ, ವಿಚಾರ ತಿಳಿಯದೇ ಜನರನ್ನು ಸಂಭಾಳಿಸುವುದು ಕಷ್ಟವಾಗುತ್ತಿದೆ. ಹೀಗಾಗಿ ಉತ್ತರ ಕರ್ನಾಟಕದ ಪೊಲೀಸರಿಗೆ ತುಳು ಭಾಷೆ ಕಲಿಸುವ ಕೆಲಸವನ್ನೂ ಮಂಗಳೂರು ಕಮಿಷನರ್ ಶಶಿಕುಮಾರ್ ಮಾಡುತ್ತಿದ್ದಾರೆ. ಕೋಮು ಸಂಘರ್ಷ, ಇನ್ನಿತರ ಗಲಭೆ ಸಂದರ್ಭಗಳಲ್ಲಿ ಈ ಊರಿನದ್ದೇ ಪೊಲೀಸರಾದರೆ, ನಿಯಂತ್ರಣ ಸುಲಭವಾಗುತ್ತದೆ. ಇತರೇ ಜಿಲ್ಲೆಗಳ ಸಿಬಂದಿಯಾದರೆ ಪರಿಸ್ಥಿತಿ ಹತೋಟಿಗೆ ತರುವುದು ಕಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ಆದಷ್ಟು ಆಯಾ ಜಿಲ್ಲೆಯವರನ್ನೇ ಪೊಲೀಸ್ ಸೇವೆಗೆ ನೇಮಕಾತಿ ಮಾಡಲು ಅಧಿಕಾರಿಗಳು ಮುಂದಾಗುತ್ತಿದ್ದಾರೆ.
ಇದೇ ರೀತಿಯ ದೂರಾಲೋಚನೆ ಮುಂದಿಟ್ಟುಕೊಂಡು ಪೊಲೀಸ್ ಕಮಿಷನರ್ ಶಶಿಕುಮಾರ್ ಕಾರ್ಯಾಗಾರ ನಡೆಸಲು ಮುಂದಾಗಿದ್ದಾರೆ. ಹತ್ತು ಸಾವಿರ ಸಿಕ್ಕರೂ, ಇತರೇ ಕೆಲಸಕ್ಕೆ ಹೋಗುವ ಮಂದಿ ಆರಂಭದಲ್ಲೇ 32 ಸಾವಿರ ರೂಪಾಯಿ ವೇತನ ಇರುವ ಸರಕಾರಿ ಸೇವೆಯತ್ತ ಮುಖ ಮಾಡಬೇಕಿದೆ. ಆಸಕ್ತರು ತಾವು ಫಿಟ್ ಎಂದೆಣಿಸಿದರೆ, ನೇರವಾಗಿ ಕಮಿಷನರ್ ಕಚೇರಿಗೆ ಬರಲಿ ಎಂಬ ಆಹ್ವಾನವನ್ನೂ ಕಮಿಷನರ್ ನೀಡಿದ್ದಾರೆ.
Mangalore Police Commissioner Shashi Kumar urges Dakshina Kannada youths to join Police force
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm