ಬ್ರೇಕಿಂಗ್ ನ್ಯೂಸ್
09-08-21 10:32 pm Mangaluru Correspondent ಕರಾವಳಿ
ಉಳ್ಳಾಲ, ಆ.9: ಪುರಾಣ ಪ್ರಸಿದ್ಧ ತಲಪಾಡಿ ದೇವಿಪುರ ದುರ್ಗಾಪರಮೇಶ್ವರಿ ಜೀರ್ಣೋದ್ಧಾರ ಸಮಿತಿಯ ಬ್ಯಾಂಕ್ ಖಾತೆಯಿಂದ ಸಮಿತಿ ಕಾರ್ಯದರ್ಶಿಯಾಗಿರುವ ವ್ಯಕ್ತಿ ಬ್ರಹ್ಮರಥಕ್ಕೆಂದು ಮೂರು ಲಕ್ಷ ರೂ. ಪಡೆದು ತನ್ನದೇ ಬ್ಯಾಂಕ್ ಖಾತೆಗೆ ವರ್ಗಾಯಿಸಿದ ವಿಚಾರ ವಿವಾದಕ್ಕೆ ತಿರುಗುತ್ತಿದ್ದಂತೆ ಸದ್ರಿ ಹಣವನ್ನು ಇತ್ತೀಚೆಗೆ ನಗದು ರೂಪದಲ್ಲಿ ಹಿಂತಿರುಗಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
ತಲಪಾಡಿಯ ಗ್ರಾಮದೇವತೆ ಇತಿಹಾಸ ಪ್ರಸಿದ್ಧ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನವು ಊರ ಹಾಗೂ ಪರವೂರ ಭಕ್ತಾದಿಗಳ ದೇಣಿಗೆಯಿಂದ 6 ವರುಷಗಳ ಹಿಂದೆ ಸುಮಾರು ಐದು ಕೋಟಿ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿತ್ತು. ಆದರೆ ಕಳೆದ ಮೇ ತಿಂಗಳಲ್ಲಿ ಜೀರ್ಣೋದ್ಧಾರ ಸಮಿತಿಯಲ್ಲಿ ಕಾರ್ಯಾಧ್ಯಕ್ಷರಾಗಿದ್ದ ಕೆ.ಪಿ ಸುರೇಶ್ ಮಾಡೂರು ಅವರು ಜೀರ್ಣೋದ್ದಾರ ಕಾರ್ಯದಲ್ಲಿ ಉಳಿಕೆಯಾಗಿದ್ದ 3 ಲಕ್ಷ ರೂಪಾಯಿ ಅವ್ಯವಹಾರ ಆಗಿರುವುದರ ಬಗ್ಗೆ ಮಾಹಿತಿ ಹೊರಗೆಡವಿದ್ದರು. ಅಲ್ಲದೆ, ಸಮಿತಿ ಕಾರ್ಯದರ್ಶಿಯಾಗಿದ್ದ ಮೋಹನದಾಸ್ ಶೆಟ್ಟಿ ಕಿನ್ಯ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಕ್ಷೇತ್ರ ಬಿಜೆಪಿ ಮಂಡಲದಲ್ಲಿ ಪ್ರತಿನಿಧಿಯೂ ಆಗಿರುವ ಮೋಹನದಾಸ್ ಶೆಟ್ಟಿ ಕಿನ್ಯ ಅವರು ದೇವಸ್ಥಾನದ ಬ್ರಹ್ಮರಥ ನಿರ್ಮಾಣಕ್ಕೆ ಮುಂಗಡ ( ಅಡ್ವಾನ್ಸ್) ಹಣ ಕೊಡಲಿಕ್ಕೆ ಇದೆಯೆಂದು ಹೇಳಿ ಜೀರ್ಣೋದ್ಧಾರ ಸಮಿತಿಯ ಬ್ಯಾಂಕ್ ಖಾತೆಯ ಖಾಲಿ ಚೆಕ್ ಗೆ ಸಹಿ ಹಾಕಿಸಿ ಚೆಕ್ ಮುಖಾಂತರ 3 ಲಕ್ಷ ರೂಪಾಯಿ ಪಡೆದಿದ್ದು ಅದನ್ನು ರಥದ ನಿರ್ಮಾಣಕ್ಕೆ ವ್ಯಯ ಮಾಡಲಾಗಿಲ್ಲ. ಸದ್ರಿ ಹಣದ ವಿಚಾರದಲ್ಲಿ ನನಗೆ ಯಾವುದೇ ಸಂಬಂಧ ಇಲ್ಲ ಎಂದು ಕೆ.ಪಿ ಸುರೇಶ್ ಸ್ಪಷ್ಟೀಕರಣ ನೀಡಿದ್ದು ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಬಗ್ಗೆ 'ಹೆಡ್ ಲೈನ್ ಕರ್ನಾಟಕ' ವೈರಲ್ ಆದ ಸ್ಪಷ್ಟನೆಯನ್ನೇ ಆಧರಿಸಿ ವರದಿಯನ್ನೂ ಮಾಡಿತ್ತು.
ಸುದ್ದಿ ಹೊರಬಂದು ದೇವಸ್ಥಾನ ಪ್ರಮುಖರ ನಡುವೆ ವಿವಾದ ಭುಗಿಲೇಳುತ್ತಿದ್ದಂತೆ ಜೀರ್ಣೋದ್ಧಾರ ಸಮಿತಿಯ ನಿಕಟಪೂರ್ವ ಕಾರ್ಯದರ್ಶಿ ಮೋಹನದಾಸ್ ಶೆಟ್ಟಿ ಆ.1ರಂದು ದೇವಿಪುರ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ತರಾತುರಿ ಸಭೆಯಲ್ಲಿ 3 ಲಕ್ಷ ರೂಪಾಯಿಯನ್ನ ನಗದು ರೂಪದಲ್ಲಿ ಹಿಂದಿರುಗಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ವಿವಾದದ ಬಗ್ಗೆ ಸ್ಥಳೀಯ ಸಂಘ- ಸಂಸ್ಥೆಗಳ ನೇತೃತ್ವದಲ್ಲಿ ಸಭೆ ನಡೆಸಲಾಗುವುದೆಂದು ಹೇಳಲಾಗಿತ್ತಾದರೂ ಸಭೆಯ ವೇದಿಕೆಯಲ್ಲಿ ಜೀರ್ಣೋದ್ಧಾರ ಸಮಿತಿಯ ಸದಸ್ಯರೇ ಹೆಚ್ಚಿದ್ದರು.
ಈ ಬಗ್ಗೆ ಸಭೆಗೆ ತೆರಳಿದ್ದ ತಲಪಾಡಿ ವೀರಾಂಜನೇಯ ವ್ಯಾಯಾಯ ಶಾಲೆಯ ಅಧ್ಯಕ್ಷರಾದ ಅಶೋಕ್ ಅವರಲ್ಲಿ ಕೇಳಿದಾಗ, ಸ್ಥಳೀಯ ಮುಖಂಡ ಗೋಪಾಲಕೃಷ್ಣ ಮೇಲಾಂಟ ಎಂಬವರು ದೇವಸ್ಥಾನದ ಬಗ್ಗೆ ಮಾಧ್ಯಮ, ಜಾಲತಾಣಗಳಲ್ಲಿ ಅಪಪ್ರಚಾರ ನಡೆಸಲಾಗುತ್ತಿದೆ. ಇದರ ಬಗ್ಗೆ ಚರ್ಚಿಸಲು ಸಭೆ ನಡೆಸಬೇಕೆಂದು ಎಲ್ಲರನ್ನೂ ಕರೆಸಿದ್ದರು ಎಂದಿದ್ದಾರೆ. ಆದರೆ ಸಭೆಗೆ ತೆರಳಿದ ಬಳಿಕ ಅವರಿಗೆ ಹಣದ ವಹಿವಾಟಿನ ವಿಚಾರ ತಿಳಿದು ಬಂದಿದೆ.
ಇದಲ್ಲದೆ, ಮೋಹನದಾಸ್ ಶೆಟ್ಟಿ ಅವರು ಜೀರ್ಣೋದ್ಧಾರ ಸಮಿತಿಯ ಬ್ಯಾಂಕ್ ಖಾತೆಯಿಂದ ಪಡೆದ ಮೂರು ಲಕ್ಷ ಹಣವನ್ನು ಕಳೆದ ಜೂನ್ ತಿಂಗಳಲ್ಲಿ ತನ್ನ ಖಾತೆಗೆ ವರ್ಗಾಯಿಸಿದ್ದರು. ಈ ಬಗ್ಗೆ ಬ್ಯಾಂಕ್ ಸ್ಟೇಟ್ ಮೆಂಟ್ ದಾಖಲೆಯೂ ಲಭ್ಯವಾಗಿದ್ದು ಸ್ಥಳೀಯರ ಆಕ್ಷೇಪಕ್ಕೆ ಕಾರಣವಾಗಿತ್ತು. ರಥ ನಿರ್ಮಾಣಕ್ಕೆಂದು ನೀಡಿದ್ದ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದು ಎಷ್ಟು ಸರಿ ಎನ್ನುವ ಪ್ರಶ್ನೆ ಮಾಡಿದ್ದರು. ಆದರೆ ಈ ನಡುವೆ, ದೇವಸ್ಥಾನದ ಆಡಳಿತ ಕಮಿಟಿ ಇಲ್ಲದಿದ್ದರೂ, ತರಾತುರಿಯಲ್ಲಿ ಸಭೆ ಕರೆದು ಮೋಹನದಾಸ್ ಶೆಟ್ಟಿ ತಮ್ಮದೇ ಸಮಿತಿಯ ಮುಖಂಡರ ಸಮ್ಮುಖದಲ್ಲಿ ಹಣವನ್ನು ನಗದು ರೂಪದಲ್ಲಿ ಹಿಂದಿರುಗಿಸಿದ್ದಾರೆ. ಇದು ಹೇಗೆ ಸರಿಯಾಗುತ್ತದೆ ಎಂದು ಸಭೆಯಲ್ಲಿ ಪಾಲ್ಗೊಂಡ ಕೆಲವು ಗ್ರಾಮಸ್ಥರು ತಿಳಿಸಿದ್ದಾರೆ.
ಅಕೌಂಟ್ ಮುಖಾಂತರ ವರ್ಗಾವಣೆಯಾದ ಹಣವನ್ನು ಕ್ಯಾಷ್ ರೂಪದಲ್ಲಿ ಮೋಹನ್ ದಾಸ್ ಅವರು ಯಾಕೆ ಹಿಂದಿರುಗಿಸಿದ್ದಾರೆ. ಅವ್ಯವಹಾರವೇ ಆಗಿಲ್ಲದಿದ್ದರೆ ಹಣವನ್ನ ನಗದು ರೂಪದಲ್ಲಿ ಯಾಕೆ ಹಿಂದಿರುಗಿಸಿದ್ರು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಗ್ರಾಮಸ್ಥ , ನಾಟಕಕಾರ ದಯಾನಂದ ಪಿಲಿಕೂರು ಪ್ರಶ್ನಿಸಿದ್ದಾರೆ.
ಕಳೆದ ವಾರ ದೇವಸ್ಥಾನದಲ್ಲಿ ನಡೆದ ತರಾತುರಿ ಸಭೆಯಲ್ಲಿ ಭಾಗವಹಿಸಿದ್ದ ದಯಾನಂದ ಪಿಲಿಕೂರು ಅವ್ಯವಹಾರದ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದರಂತೆ. ಕೆಲವರ ಆಕ್ಷೇಪದ ಮಧ್ಯೆಯೇ ಮೋಹನದಾಸ್ ಅವರು 3 ಲಕ್ಷ ರೂಪಾಯಿಗಳನ್ನ ಲಕೋಟೆಯಲ್ಲಿ ಹಾಕಿ ಸಮಿತಿ ಅಧ್ಯಕ್ಷರಾದ ಕೆ.ಸಿ. ಆಳ್ವ, ಇನ್ನಿತರ ಪ್ರಮುಖರ ಸಮ್ಮುಖದಲ್ಲಿ ಹಿಂದಿರುಗಿಸಿದ್ದಾರೆ ಎನ್ನಲಾಗಿದೆ. ಸಂಘ - ಸಂಸ್ಥೆಗಳ ಸಭೆ ಎಂದು ಸಭೆ ಕರೆದಿದ್ದರೂ ಅಲ್ಲಿನ ವೇದಿಕೆಯಲ್ಲಿ ಮೋಹನದಾಸ್ ಶೆಟ್ಟಿ ಬೆಂಬಲಿಗರ ಕೂಟದ್ದೇ ದರ್ಬಾರ್ ನಡೆದಿದೆ ಎನ್ನುವ ಮಾಹಿತಿಯನ್ನು ಸಭೆಯಲ್ಲಿ ಪಾಲ್ಗೊಂಡವರು ತಿಳಿಸಿದ್ದಾರೆ.
ಆರೋಪದ ವಿಚಾರ ಮಾಧ್ಯಮಗಳಲ್ಲಿ ಬಂದಿದ್ದ ಮೇಲೆ ಸ್ಪಷ್ಟನೆ ನೀಡುವುದೋ, ಹಾಗೇನೂ ನಡೆದೇ ಇಲ್ಲವೆಂದು ಹೇಳುವುದಿದ್ದರೆ ಮಾಧ್ಯಮ ಪ್ರತಿನಿಧಿಗಳನ್ನೇ ಸಭೆಗೆ ಕರೆಯಬಹುದಿತ್ತು. ಆದರೆ ತರಾತುರಿಯಲ್ಲಿ ಸಭೆ ನಡೆಸಿದ್ದಲ್ಲದೆ, ಅದರಿಂದ ಮಾಧ್ಯಮ ಪ್ರತಿನಿಧಿಗಳನ್ನು ದೂರ ಇಡಲಾಗಿತ್ತು. ಇದು ಏನನ್ನು ಸೂಚಿಸುತ್ತದೆ ಎಂದು ದಯಾನಂದ ಪಿಲಿಕೂರು ಪ್ರಶ್ನಿಸಿದ್ದಾರೆ.
ತಲಪಾಡಿ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರದಲ್ಲಿ 3 ಲಕ್ಷ ಗುಳುಂ ! ಜಾಲತಾಣಗಳಲ್ಲಿ ಆಕ್ರೋಶ
Mangalore, Talapady Durgaparameshwari Temple misuse of funds by Secretary news turns impact after Headline Karnataka reported the news. It is said that the Secretary has returned the misused money to the temple authorities.
02-04-25 10:48 pm
HK News Desk
Accident in Chitradurga: ಚಿತ್ರದುರ್ಗ ; 15ಕ್ಕೂ...
02-04-25 09:54 pm
CM Siddaramaiah, Police Medal 2025: ರಾಜ್ಯದ ಅಭ...
02-04-25 07:14 pm
Lokayukta Raid, Police Inspector Kumar, Annap...
02-04-25 03:07 pm
Cobra Shocks, Chikkamagaluru: ಹೊಟೇಲ್ಗೆ ನುಗ್ಗ...
01-04-25 10:45 pm
02-04-25 07:35 pm
HK News Desk
ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನ...
31-03-25 09:34 pm
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
BR Ambedkar birth anniversary, Holiday: ಏ.14ರ...
29-03-25 04:40 pm
ಥೈಲ್ಯಾಂಡ್ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲೂ ಭಾರೀ ಭ...
29-03-25 01:27 pm
02-04-25 11:02 pm
Mangalore Correspondent
Kora Kannada Movie, Release, P Murthy, Sunami...
02-04-25 04:11 pm
Nandi Rath Yatra, Mangalore: 95 ದಿನಗಳ ನಂದಿ ರಥ...
01-04-25 09:38 pm
Mangalore, MLA Vedavyas Kamath: ಜೈಲಿನ ಅಧಿಕಾರಿ...
01-04-25 09:12 pm
ರಾಜ್ಯದಲ್ಲಿ ಬೆಲೆ ಏರಿಕೆ ಗಗನಕ್ಕೆ ; ರೇಷನ್ ಅಂಗಡಿಗಳ...
01-04-25 07:12 pm
02-04-25 05:49 pm
Mangalore Correspondent
Chikkamagaluru murder, Three Killed: ಪತ್ನಿ ಬಿ...
02-04-25 01:11 pm
Bajpe Robbery, Mangalore crime, Mangalore: ಮನ...
01-04-25 11:07 pm
Bangalore Honeytrap, Businessman, Sridevi: ಒಂ...
01-04-25 10:42 pm
Davangere Bank Robbery, Police; ಉದ್ಯಮ ವಿಸ್ತರಣ...
01-04-25 05:32 pm