ಉಳ್ಳಾಲ ಐಸಿಸ್ ನಂಟು ; ಮಾಜಿ ಶಾಸಕ ಇದಿನಬ್ಬ ಪುತ್ರನ ಮನೆಗೆ ಬಜರಂಗದಳ ಕಾರ್ಯಕರ್ತರ ಮುತ್ತಿಗೆ 

11-08-21 10:02 am       Mangaluru Correspondent   ಕರಾವಳಿ

ವಿಶ್ವ ಹಿಂದು ಪರಿಷತ್ ಜಿಲ್ಲಾ ಮುಖಂಡ ಶರಣ್ ಪಂಪ್ವೆಲ್ ನೇತೃತ್ವದಲ್ಲಿ ಇಂದು ಬಿ.ಎಂ. ಇದಿನಬ್ಬ ಅವರ ಪುತ್ರ ಅಬ್ದುರ್ರಹ್ಮಾನ್ ಬಾಷಾ ಅವರ ಮನೆಗೆ ಮುತ್ತಿಗೆ ಹಾಕಲಾಗಿದೆ.

ಉಳ್ಳಾಲ, ಆ.11: ಉಳ್ಳಾಲದ ಮಾಜಿ ಶಾಸಕ ಬಿ.ಎಂ. ಇದಿನಬ್ಬ ಅವರ ಪುತ್ರನ ಮನೆಗೆ ಐಸಿಸ್ ನಂಟು ಆರೋಪದಡಿ ಇತ್ತೀಚಿಗೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನ ವಶಕ್ಕೆ ಪಡೆದಿದ್ದರು. ಇಂದು ಬೆಳಗ್ಗೆ ಬಜರಂಗದಳದ ಕಾರ್ಯಕರ್ತರು ಆರೋಪಿತರ ಮನೆಗೆ ಮುತ್ತಿಗೆ ಹಾಕಿದ್ದು ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ. 

ವಿಶ್ವ ಹಿಂದು ಪರಿಷತ್ ಜಿಲ್ಲಾ ಮುಖಂಡ ಶರಣ್ ಪಂಪ್ವೆಲ್ ನೇತೃತ್ವದಲ್ಲಿ ಇಂದು ಬಿ.ಎಂ. ಇದಿನಬ್ಬ ಅವರ ಪುತ್ರ ಅಬ್ದುರ್ರಹ್ಮಾನ್ ಬಾಷಾ ಅವರ ಮನೆಗೆ ಮುತ್ತಿಗೆ ಹಾಕಲಾಗಿದೆ. ಮನೆಯ ಗೇಟ್ ವರೆಗೆ ತೆರಳಿದ ಬಜರಂಗದಳದ  50 ಕ್ಕೂ ಹೆಚ್ಚು ಕಾರ್ಯಕರ್ತರನ್ನ ಪೊಲೀಸರು ಬಂಧಿಸಿದ್ದಾರೆ.

ಉಳ್ಳಾಲದಲ್ಲಿ ನಡೆದ NIA ದಾಳಿಯ ಬಗ್ಗೆ ಜನಜಾಗೃತಿ ಮೂಡಿಸುವ ದೃಷ್ಟಿಯಲ್ಲಿ ಉಳ್ಳಾಲ ತಾಲೂಕಿನ ಸುಮಾರು 26 ಪ್ರಮುಖ ಸ್ಥಳಗಳಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳದಿಂದ ಇಂದು ಏಕ ಕಾಲದಲ್ಲಿ ದೇಶದ್ರೋಹಿ ಜಿಹಾದಿ ಉಗ್ರರ ವಿರುದ್ಧ ಮಾನವ ಸರಪಳಿ ನಿರ್ಮಿಸಿ ಅಭಿಯಾನ ನಡೆಸಲಾಗಿತ್ತು. ಇದೇ ವೇಳೆ ಎನ್ಐಎ ದಾಳಿ ನಡೆಸಿದ್ದ ಮನೆಗೆ ಬಜರಂಗದಳ ಕಾರ್ಯಕರ್ತರು ಧಿಕ್ಕಾರ ಕೂಗುತ್ತಾ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.

NIA raid on MLA B M Idinabba house in Ullal VHP protests outside residence attempt to enter their house. NIA raid on MLA B M Idinabba house in Ullal VHP protests outside residence attempt to enter the house. The National Investigation Agency (NIA) sleuths had raided the house of a former MLA at Ullal near Mangaluru in connection with the alleged link of one of his family members with the terror organisation ISIS. His son and daughter in law Deepthi marla were taken into custody by NIA.