ಬ್ರೇಕಿಂಗ್ ನ್ಯೂಸ್
12-08-21 04:24 pm Mangaluru Correspondent ಕರಾವಳಿ
ಮಂಗಳೂರು, ಆಗಸ್ಟ್ 12: ಎನ್ 95 ಮಾಸ್ಕ್ ಎಷ್ಟು ಬೇಕು, ಗ್ಲೌಸ್ ಎಷ್ಟು ಬೇಕು ಗೊತ್ತಿಲ್ಲವಾ.. ಸಿಲ್ಲಿ ವಿಷ್ಯ ಹಿಡ್ಕೊಂಡು ಬಂದೀರಲ್ಲಾ.. ಏಯ್ ಡಿಎಚ್ ಓ ಎಷ್ಟು ಸರ್ವಿಸ್ ಆಯ್ತಪ್ಪಾ ನಿಂಗೆ.. ಬೋರ್ಡರ್ ಇಶ್ಯು ಇರೋವಾಗ ಹೆಚ್ಚುವರಿ ಮಾಸ್ಕ್, ಪಿಪಿಇ ಕಿಟ್ ಬೇಕು, ನಂಗೆ ಗೊತ್ತಿದೆ. ಅದನ್ನು ತಗೊಳ್ಳೋಕೆ ಆಗಲ್ವಾ.. ಈ ಬಗ್ಗೆ ಡೀಸಿ ಗಮನಕ್ಕೆ ತಂದಿದ್ದೀರಾ.. ಇವ್ರು ಮೀಟಿಂಗಲ್ಲಿ ರೈಸ್ ಮಾಡೋವರ್ಗೂ ಕಾಯಬೇಕಿತ್ತಾ..
ಎಸ್ ಡಿಆರ್ ಎಫ್ ಫಂಡ್ ಇಲ್ವಾ.. ಏಯ್ ಡೀಸಿ ನಿಮಗೆ ಪವರ್ ಇಲ್ವಾ.. ನಿಮ್ಗೆ ಅಗತ್ಯ ಏನಿದೆ ಅದನ್ನು ಖರೀದಿ ಮಾಡ್ಕೋಬಹುದಲ್ಲಾ.. ನೀವು ಬೆಂಗಳೂರಿಂದ ಬರಬೇಕು ಅಂತ ಕಾಯಬೇಕಾ. ಕೂಡಲೇ ಏನೇನು ಬೇಕು ಅದನ್ನು ಇಲ್ಲಿಯೇ ಲೋಕಲ್ ಆಗಿ ಖರೀದಿ ಮಾಡಿ. ಬೆಂಗಳೂರು ಮರೆತುಬಿಡಿ. ಇವತ್ತು ಸಂಜೆ ಒಳಗೆ ಎಷ್ಟು ಬೇಕೋ ಅದನ್ನು ಖರೀದಿಸಿ, ನಂಗೆ ರಿಪೋರ್ಟ್ ಮಾಡಬೇಕು.
ಇದು ಸಿಎಂ ಬಸವರಾಜ್ ಬೊಮ್ಮಾಯಿ ಗರಂ ಆಗಿರುವ ಪರಿ. ಕೊರೊನಾ ನಿರ್ವಹಣೆ ಬಗ್ಗೆ ಮಂಗಳೂರಿನ ಜಿಪಂ ಸಭಾಂಗಣದಲ್ಲಿ ಸಭೆ ನಡೆಸಿದ ವೇಳೆ ಕಾಂಗ್ರೆಸ್ ಶಾಸಕ ಯು.ಟಿ. ಖಾದರ್, ಜಿಲ್ಲೆಯಲ್ಲಿ ಎನ್ 95 ಮಾಸ್ಕ್ ಕೊರತೆಯಾಗಿರುವ ಬಗ್ಗೆ ಸಭೆಯ ಗಮನ ಸೆಳೆದರು. ಈ ವೇಳೆ, ಸಮಜಾಯಿಷಿ ನೀಡಲು ಮುಂದಾದ ಆರೋಗ್ಯ ಸಚಿವ ಡಾ.ಸುಧಾಕರ್, ಅಂಥ ಸ್ಥಿತಿ ಏನೂ ಇಲ್ಲ. ದ.ಕ ಮತ್ತು ಉಡುಪಿಯಲ್ಲಿ ತಲಾ 9700 ಎನ್ 95 ಮಾಸ್ಕ್ ಇದೆ, ಹತ್ತು ಸಾವಿರ ಪಿಪಿಇ ಕಿಟ್ ಇದೆ ಎಂದು ಲೆಕ್ಕ ಕೊಟ್ಟರು. ಅಲ್ಲದೆ, ಜಿಲ್ಲಾ ಆರೋಗ್ಯ ಅಧಿಕಾರಿ ಕಿಶೋರ್ ಕುಮಾರ್ ಬಳಿ ಈ ಬಗ್ಗೆ ಉತ್ತರ ನೀಡುವಂತೆ ಹೇಳಿದರು.
ಸಭೆಯಲ್ಲಿ ಡಿಎಚ್ ಓ ಉತ್ತರ ನೀಡುತ್ತಾ ಕೊರತೆ ಏನೂ ಆಗಿಲ್ಲ. ಆದರೆ ಪೂರೈಕೆಯಲ್ಲಿ ಸ್ವಲ್ಪ ಕಡಿಮೆ ಆಗಿರುವ ಬಗ್ಗೆ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಗಮನಕ್ಕೆ ತಂದಿದ್ದೇವೆ. ಮಾಡ್ತೀವಿ ಎಂದಿದ್ದಾರೆ ಎನ್ನುತ್ತಿದ್ದಾಗಲೇ ಮುಖ್ಯಮಂತ್ರಿ ಗರಂ ಆದ್ರು. ಏನ್ರೀ ನಿಮಗೆ.. ಮಾಸ್ಕ್ ಬಗ್ಗೆ ಕೇಳೋಕೆ ನಾವಿಲ್ಲಿ ಬರಬೇಕಿತ್ತಾ.. ಇಷ್ಟು ಸಿಲ್ಲಿ ವಿಷ್ಯ ಇಟ್ಕೊಂಡು ಸಭೆಯಲ್ಲಿ ಹೇಳ್ತೀರಲ್ಲಾ. ನಿಮ್ಗೇನಾದ್ರೂ ಸೀರಿಯಸ್ ನೆಸ್ ಇದ್ಯಾ.. ಏನ್ರೀ ನಿಮ್ ಜಿಲ್ಲೆಯ ಕತೆ. ಇದಾ ನಿಮ್ದು ಅಡ್ಮಿನಿಸ್ಟ್ರೇಶನ್. ನೀವು ಮಾಸ್ಕ್ , ಗ್ಲೌಸ್ ಇಲ್ಲದೆ ಹೇಗೆ ಕೆಲಸ ಮಾಡ್ತೀರಾ.. ಆರೋಗ್ಯ ಕಾರ್ಯಕರ್ತರನ್ನು ಹೇಗೆ ಕೆಲಸ ಮಾಡಿಸ್ತೀರಾ ಎಂದು ಜಿಲ್ಲಾಧಿಕಾರಿ ಮತ್ತು ಡಿಎಚ್ಓ ಬಗ್ಗೆ ಕೆಂಡಾಮಂಡಲರಾದರು..
ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ., ನಾವು ಅಗತ್ಯ ಸಾಮಗ್ರಿ ತಗೊಳ್ಕೋಕೆ ಅಂತಲೇ 50 ಲಕ್ಷ ಇಟ್ಟಿದ್ದೇವೆ. 50 ಸಾವಿರ ರೂ. ಪ್ರತಿ ತಾಲೂಕಿಗೆ ನೀಡಿದ್ದೇವೆ ಎನ್ನುತ್ತಿದ್ದಾಗಲೇ ನಡುವೆ ತಡೆದು ನಿಲ್ಲಿಸಿದ ಸಿಎಂ ಬೊಮ್ಮಾಯಿ, ನೀವು ಏನೂ ಮಾತಾಡೋದು ಬೇಡ. ಹಣ ಇದೆ ಅನ್ನೋದು ಬೇಕಿಲ್ಲ. ಇದನ್ನು ಮಾಡಬೇಕಿತ್ತಲ್ವಾ.. ಮಾಸ್ಕ್ ಈಸ್ ಎಸನ್ಶಿಯಲ್. ಅದನ್ನೇ ಮಾಡಿಲ್ಲಾಂದ್ರೆ. ಈ ಬಗ್ಗೆ ಎಂಎಲ್ಎಗಳು ಮೀಟಿಂಗಲ್ಲಿ ರೈಸ್ ಮಾಡಬೇಕಿತ್ತಾ ಎಂದು ಪ್ರಶ್ನಿಸಿದರು.
CM Bommai Slams at DHO and DC Mangalore for showing negligence in matter to N95 Mask and PPE kits which is most essential.
28-11-24 10:41 pm
Bangalore Correspondent
Karkala Drowning, Udupi News; ಕಾರ್ಕಳದ ದುರ್ಗಾ...
28-11-24 09:41 pm
ಲಾಕಪ್ ಡೆತ್ ; ನಾಲ್ವರು ಪೊಲೀಸರಿಗೆ ಏಳು ವರ್ಷ ಜೈಲು...
28-11-24 05:04 pm
MLA Gaviyappa, DK Shivakumar: ಯಾವುದೇ ಕಾರಣಕ್ಕೂ...
26-11-24 10:46 pm
Shivamogga, Monkey fever, Dinesh Gundu Rao: ಮ...
26-11-24 10:23 pm
27-11-24 02:00 pm
HK News Desk
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
28-11-24 09:58 pm
Mangalore Correspondent
Mangalore, DFYI protest, Anupam Agarwal: ಪೊಲೀ...
28-11-24 06:05 pm
VHP, Mangalore, Bangladesh: ಬಾಂಗ್ಲಾದೇಶದಲ್ಲಿ ಹ...
28-11-24 03:24 pm
Belthangady suicide, Crime, Mangalore; ನಂಬಿಸಿ...
28-11-24 02:13 pm
Mangalore, Anupam Agarwal, Ramanatha Rai: ರಸ್...
28-11-24 01:56 pm
27-11-24 03:36 pm
HK News Desk
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm