ಬ್ರೇಕಿಂಗ್ ನ್ಯೂಸ್
12-08-21 06:08 pm Mangaluru Correspondent ಕರಾವಳಿ
ಮಂಗಳೂರು, ಆಗಸ್ಟ್ 12: ಮಂಗಳೂರು ಸೆಂಟ್ರಲ್ ವಿಭಾಗದ ಎಸಿಪಿ ಆಗಿರುವ ಪಿ.ಎ. ಹೆಗಡೆ ಸೇರಿದಂತೆ ಕರ್ನಾಟಕದ ಆರು ಮಂದಿ ಪೊಲೀಸ್ ಅಧಿಕಾರಿಗಳನ್ನು ಕೇಂದ್ರ ಗೃಹ ಇಲಾಖೆಯಿಂದ ಅತ್ಯುತ್ತಮ ಅಪರಾಧ ಪತ್ತೆ ತನಿಖಾಧಿಕಾರಿಗಳಿಗೆ ಕೊಡಮಾಡುವ ಎಕ್ಸಲೆನ್ಸಿ ಇನ್ವೆಸ್ಟಿಗೇಶನ್ ಅವಾರ್ಡ್ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ಮಂಗಳೂರು ಸೆಂಟ್ರಲ್ ಎಸಿಪಿ ಪರಮೇಶ್ವರ ಅನಂತ ಹೆಗಡೆ, ಬೆಂಗಳೂರು ಸಿಸಿಬಿ ಎಸಿಪಿ ಎಚ್.ಎಂ. ಧರ್ಮೇಂದ್ರ, ಎಸ್ ಟಿ ಎಫ್ ಡಿವೈಎಸ್ಪಿ ಬಾಲಕೃಷ್ಣ , ಎಸ್ಐಟಿ ಇನ್ ಸ್ಪೆಕ್ಟರ್ ಮನೋಜ್ ಎನ್. ಹೊನವಾಳೆ, ದಾವಣಗೆರೆ ಹೊನ್ನಾಳಿ ಸರ್ಕಲ್ ಇನ್ ಸ್ಪೆಕ್ಟರ್ ದೇವರಾಜು, ಹುಬ್ಬಳ್ಳಿಯ ಇನ್ ಸ್ಪೆಕ್ಟರ್ ಶಿವಪ್ಪ ಕಮಟಗಿ ಈ ಮಹತ್ವದ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಮಂಗಳೂರಿನ ಬಂದರು ಠಾಣೆಯಲ್ಲಿ ಎಸ್ ಐ ಆಗಿ ಸೇವೆಗೆ ಸೇರಿದ್ದ ಪಿ.ಎ. ಹೆಗಡೆ ಆಬಳಿಕ ಬಂಟ್ವಾಳದಲ್ಲಿ ಸೇವೆಗೈದು ಭಡ್ತಿ ಪಡೆದು ಮೂಲ್ಕಿ ಠಾಣೆಯಲ್ಲಿ ಸರ್ಕಲ್ ಇನ್ ಸ್ಪೆಕ್ಟರ್ ಆಗಿದ್ದರು. 2008ರಲ್ಲಿ ಮೂಲ್ಕಿ ಠಾಣೆಯಲ್ಲಿ ಇನ್ ಸ್ಪೆಕ್ಟರ್ ಆಗಿದ್ದ ಪಿ.ಎ. ಹೆಗಡೆ ಯಾವುದೇ ಸುಳಿವು ಇಲ್ಲದ ಪ್ರಕರಣ ಒಂದನ್ನು ಪತ್ತೆ ಮಾಡಿ ಗಮನ ಸೆಳೆದಿದ್ದರು.

ಚಾಲಕನ ಕೊಲೆಗೈದು ಕಾರು ಅಪಹರಿಸಿದ್ದ ದರೋಡೆ ತಂಡ
2008ರ ನವೆಂಬರ್ ತಿಂಗಳಲ್ಲಿ ಹಳೆಯಂಗಡಿಯಲ್ಲಿ ಇನ್ನೋವಾ ಕಾರು, ಚಾಲಕನ ಸಹಿತ ಕಾಣೆಯಾಗಿತ್ತು. ಈ ಬಗ್ಗೆ ಮೂಲ್ಕಿ ಠಾಣೆಯಲ್ಲಿ ಕಾರಿನ ಮಾಲಕರು ಪ್ರಕರಣ ದಾಖಲಿಸಿದ್ದರು. ಚಾಲಕನೇ ಕಾರನ್ನು ತೆಗೆದುಕೊಂಡು ಹೋಗಿ ನಾಪತ್ತೆಯಾಗಿದ್ದಾನೆ ಎಂದು ಹೇಳಲಾಗಿತ್ತು. ಆದರೆ, ಎರಡು ದಿನ ಕಳೆಯುವಷ್ಟರಲ್ಲಿ ಸುರತ್ಕಲ್ ಸಮೀಪದ ಕಳವಾರಿನಲ್ಲಿ ಕಲ್ಲು ಕೋರೆಯಲ್ಲಿ ಚಾಲಕ, ಚಿಕ್ಕಮಗಳೂರು ಮೂಲದ ಪ್ರವೀಣ್ ಎಂಬಾತನ ಶವ ಪತ್ತೆಯಾಗಿತ್ತು. ಕಾರು ನಾಪತ್ತೆಯಾಗಿತ್ತು. ಆದರೆ, ಕಾರನ್ನು ಯಾರು ಅಪಹರಿಸಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇರಲಿಲ್ಲ.
ಸಾಂದರ್ಭಿಕ ಸಾಕ್ಷ್ಯಗಳನ್ನು ಆಧರಿಸಿ ತನಿಖೆ ಮುಂದುವರಿಸಿರುವಾಗಲೇ ಬೆಳ್ತಂಗಡಿಯಲ್ಲಿ ಅನುಮಾನಾಸ್ಪದ ನೆಲೆಯಲ್ಲಿ ತಿರುಗಾಡುತ್ತಿದ್ದ ಕಾರನ್ನು ಪೊಲೀಸರು ಅಟ್ಟಿಸಿಕೊಂಡು ಹೋದಾಗ, ಕಾರನ್ನು ಬಿಟ್ಟು ಆಗಂತುಕರು ಪರಾರಿಯಾಗಿದ್ದರು. ಬಳಿಕ ತಪಾಸಣೆ ನಡೆಸಿದಾಗ, ಹಳೆಯಂಗಡಿಯಲ್ಲಿ ನಾಪತ್ತೆಯಾದ ಕಾರು ಅದಾಗಿತ್ತು. ಕಾರನ್ನು ದರೋಡೆ ತಂಡ ಅಪಹಹರಿಸಿದ್ದು ಮತ್ತು ತಂಡ ದರೋಡೆ ಕೃತ್ಯಕ್ಕೆ ಬಳಸಿಕೊಂಡಿದ್ದು ಪತ್ತೆಯಾಗಿತ್ತು. ಆನಂತರ ವಿವಿಧ ಕಡೆ ರಾಬರಿ ನಡೆಸಿದ್ದ ತಂಡವನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದರು. ಸಫ್ವಾನ್ ಮತ್ತು ಆತನ ಸ್ನೇಹಿತರು ಸೇರಿ ಬಂಧಿತರಾಗಿದ್ದರು. ಆದರೆ, ನೇರ ಸಾಕ್ಷ್ಯಗಳು ಇಲ್ಲದಿದ್ದರೂ, ಸಾಂದರ್ಭಿಕ ಮತ್ತು ತಾಂತ್ರಿಕ ಸಾಕ್ಷ್ಯಗಳಷ್ಟೇ ಪೊಲೀಸರಲ್ಲಿತ್ತು. ತಾಂತ್ರಿಕ ಸಾಕ್ಷ್ಯಗಳಿಂದಲೇ ಆರೋಪವನ್ನು ಪೊಲೀಸರು ಸಾಬೀತು ಮಾಡಿದ್ದರು.
ಆದರೆ, ಮಂಗಳೂರಿನ ಕೋರ್ಟಿನಲ್ಲಿ ಕೇವಲ ಸಾಂದರ್ಭಿಕ ಸಾಕ್ಷ್ಯಗಳ ಕಾರಣದಿಂದ ಪ್ರಕರಣದಲ್ಲಿ ಆರೋಪಿಗಳನ್ನು ಖುಲಾಸೆ ಮಾಡಲಾಗಿತ್ತು. ಸರಕಾರಿ ಅಭಿಯೋಜಕರ ಮೂಲಕ ಪ್ರಕರಣವನ್ನು ಹೈಕೋರ್ಟಿನಲ್ಲಿ ಪ್ರಶ್ನೆ ಮಾಡಲಾಗಿತ್ತು. ತನಿಖಾಧಿಕಾರಿ ಆಗಿದ್ದ ಪಿಎ ಹೆಗಡೆಯವರು ಸಾಕ್ಷ್ಯವನ್ನು ನಿರೂಪಿಸಿದ್ದನ್ನು ಪರಿಗಣಿಸಿ, ಹೈಕೋರ್ಟ್ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಿತ್ತು. ಕಳೆದ 2020ರ ಫೆಬ್ರವರಿ ತಿಂಗಳಲ್ಲಿ ಆರೋಪಿಗಳಿಗೆ ಹೈಕೋರ್ಟ್ ಶಿಕ್ಷೆ ಪ್ರಕಟ ಮಾಡಿತ್ತು. ಸುಳಿವೇ ಇಲ್ಲದ ಪ್ರಕರಣದಲ್ಲಿ ತನಿಖಾಧಿಕಾರಿ ಪಿ.ಎ. ಹೆಗಡೆ ಮಾಡಿದ್ದ ಕೆಲಸಕ್ಕಾಗಿ ಕೇಂದ್ರ ಗೃಹ ಇಲಾಖೆಯಿಂದ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
As many as six officers from Karnataka are selected for union home minister's ‘Medal for Excellence in Investigation’ 2021. Assistant commissioner of police (ACP) central under Mangaluru police commissionerate Parameshwar Ananth Hegde is one among the six, who has been selected for the award. The other five recipients are HM Dharmendra, ACP CCB Bengaluru; Balakrishna C, DySP STF, BDA Bengaluru; Manoj N Hovale, inspector SIT, KLA Bengaluru; Devaraj TV, inspector, Honnali Circle Davangere; and Shivappa Satteppa Kamatagi, inspector, old Hubli police station, Hubballi.
18-12-25 12:37 pm
HK News Desk
ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು ; ಸದನಕ್ಕ...
17-12-25 10:30 pm
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
18-12-25 10:52 am
Mangalore Correspondent
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm